ಸಿನಿಮ ವಿಮರ್ಶೆ

  • ಎಂ ಅಶೀರುದ್ದೀನ್ ಮಂಜನಾಡಿ

ಸೂಫಿಯುಂ ಸುಜಾತಯುಂ ಕೊರೊನ ಕಾಲದಲ್ಲಿ ಟ್ರೆಂಡಿಂಗ್ ಆಗಿರುವ ಮಲಯಾಳದ ಹೊಸ ಸಿನಿಮಾ. ಸುಮಾರು ಮೂರು ನಾಲ್ಕು ತಿಂಗಳಿಂದ ಥಿಯೇಟರ್ಗಳು ತೆರೆಯದ ಕಾರಣ ಇನ್ನು ಯಾವಾಗ ತೆರೆಯಬಹುದು ಎಂಬ ಗೊತ್ತು ಇಲ್ಲದಿರುವುದರಿಂದ ನಿರ್ಮಾಪಕ ವಿಜಯ್ ಬಾಬು ಚಿತ್ರೀಕರಣ ಮುಗಿದಿದ್ದ ತನ್ನ ಸೂಫಿಯುಂ ಸುಜಾತಯುಂ ಸಿನಿಮಾವನ್ನು ಒಟಿಟಿ (OTT) ಪ್ಲಾಟ್ ಫಾರಂ ನಲ್ಲಿ ಬಿಡುಗಡೆ ಗೊಳಿಸಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಗೊಂಡ ನಂತರ ಸಿನಿ ಪ್ರಿಯರಲ್ಲಿ ಹೊಸದೊಂದು ಸಂಚಲನ ಮೂಡಿಸಿತು. ಇದೀಗ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡು ಟ್ರೆಂಡಿಂಗ್ ಆಗಿದೆ.

ಕರ್ನಾಟಕ ಮತ್ತು ಕೇರಳ ಗಡಿ ಪ್ರದೇಶದಲ್ಲಿರುವ ಒಂದು ಸಣ್ಣ ಗ್ರಾಮದಲ್ಲಿ ಕಥೆ ಸಂಚರಿಸುತ್ತದೆ. ಊರಿನ ಹಳೆಯ ಜಿನ್ ಮಸೀದಿಗೆ ಮುಅದ್ದಿನ್ (ಆಝನ್ ಕೊಡುವವ) ಆಗಿ ಬರುವ ಸೂಫಿ ಮತ್ತು ಅದೇ ಊರಿನ ನಾಯರ್ ಕುಟುಂಬದ ಮಾತು ಬಾರದ ಕಥಕ್ ನೃತ್ಯಗಾರ್ತಿ ಸುಜಾತಳ ನಡುವೆ ನಡೆಯುವ ಪ್ರೇಮ ಪ್ರಸಂಗವಾಗಿದೆ ಸಿನಿಮಾದ ಕಥಾಹಂದರ. ಕಥೆಯಲ್ಲಿ ವಿಶೇಷತೆಯಿಲ್ಲದಿದ್ದರು ಸಿನಿಮ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ.

ಸಿನಿಮಾದ ಪ್ರಾರಂಭದಲ್ಲಿ ಸೂಫಿ ಬಸ್ಸಿನಲ್ಲಿ ತಾನು ಬಿಟ್ಟು ಬಂದಿದ್ದ ತಾಯಿ ಕೊಟ್ಟಿದ್ದ ಮಣಿಯೊಂದು ಸುಜಾತಾಳ ಕೈ ಸೇರುತ್ತದೆ. ಅದನ್ನು ಅವಳು ಮಸೀದಿಗೆ ಹಿಂದಿರುಗಿಸಲು ಬಂದಾಗ ಸೂಫಿಯ ಪರಿಚಯವಾಗುತ್ತದೆ. ಸೂಫಿ, ಉಸ್ತಾದ್ ಅಬೂಬ್ ರ ಶಿಷ್ಯ ಸುಂದರ ಕಂಠದಿಂದ ಆಝನ್ ಕೊಡುವವ. ಅವನ ಇಂಪಾದ ಆಝನ್ ಕರೆಯಿಂದಾಗಿ ಸುಜಾತಾಳಿಗೆ ಅವನಲ್ಲಿ ಪ್ರೀತಿ ಮೂಡುತ್ತದೆ. ಸುಜಾತಾಳ ತಂದೆ ತನ್ನ ಮಗಳನ್ನು ಮೆಚ್ಚಿದ ಎನ್ ಆರ್ ಐ (NRI) ರಾಜೀವನೊಂದಿಗೆ ಸಂಬಂಧ ಬೆಳೆಸಲು ಒಪ್ಪಿರುತ್ತಾರೆ. ಇವರ ಪ್ರೀತಿಯನ್ನು ತಿಳಿದ ಉಸ್ತಾದ್ ತನ್ನ ಶಿಷ್ಯನನ್ನು ವಿರೋಧಿಸುತ್ತಾನೆ. ಕೌಟುಂಬಿಕ ಜೀವನ ನಡೆಸಲು ಸರಿಯಾದ ದಾರಿಗಳಿವೆ ಎಂದು ಬೋಧಿಸುತ್ತಾನೆ. ಊರು ಬಿಟ್ಟು ಹೋಗುವ ಸೂಫಿಯನ್ನು ಹಿಂಬಾಲಿಸಿದ ಸುಜಾತಾಳ ಕೈಗೆ ತನ್ನ ತಾಯಿ ಕೊಟ್ಟಿದ್ದ ಮಣಿ ಮಾಲೆಯನ್ನು ಮಹರ್ (ವಧು ದನ ) ನೀಡಿ, ಅದನ್ನು ಸ್ವೀಕರಿಸಿ ತನ್ನೊಂದಿಗೆ ಬರಲು ಕರೆಯುತ್ತಾನೆ. ಇಲ್ಲದಿದ್ದರೆ ಅದನ್ನು ನನಗೆ ಹಿಂದಿರುಗಿಸಬೇಕು ಸಾಯುವಾಗ ಅದು ಗೋರಿಯಲ್ಲಿ ನನ್ನೊಂದಿಗೆ ಸೇರಬೇಕು ಎಂದು ಹೇಳಿರುತ್ತಾನೆ. ಮಗಳು ಮನೆ ಬಿಟ್ಟು ಹೋಗುವಾಗ ತಂದೆ ಅನುಭವಿಸುವ ಯಾತನೆ ಇತ್ಯಾದಿ ವಿಷಯಗಳು ಸಿನಿಮ ಚರ್ಚಿಸುತ್ತದೆ. ಒಂದಿಷ್ಟು ಗ್ರಾಮೀಣ ಚಿತ್ರಣ, ಸಾಮರಸ್ಯ, ಧರ್ಮ-ಜಿಹಾದ್ ನ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತಿದ್ದುತ್ತಾ ಸಿನಿಮಾ ಸಂಚರಿಸುತ್ತದೆ. ಸೂಫಿ ನೃತ್ಯ ಕಲೆಗೆ ಇಲ್ಲಿ ಸಣ್ಣ ಪ್ರಾಮುಖ್ಯತೆಯನ್ನು ಸಹ ನೀಡಿದೆ.

ಗುಡ್ಡೆ ಜರಿದು ಮಸೀದಿಗಳನ್ನು ಕಾಂಕ್ರೀಟಿಕರಣಗೊಳಿಸುವುದನ್ನು , ಹಿಂದೂಗಳ ಸಂಸ್ಕಾರಕ್ಕಾಗಿ ಮರವನ್ನು ಕಡಿಯುವುದನ್ನು ಪ್ರಶ್ನಿಸಿ ಆ ಕಾರಣಕ್ಕೆ ಸತ್ತು ಬೀಳುವ ಹಕ್ಕಿಗಳ ಬಗ್ಗೆ ನೆನಪಿಸುತ್ತಾ ಸಣ್ಣ ಮಟ್ಟಿನ ಪ್ರಕೃತಿ ಪ್ರೀತಿಯು ಸಿನಿಮಾದಲ್ಲಿ ಇದೆ.

ಕಥೆಯ ಪ್ರಾರಂಭದಲ್ಲಿ, ಸುಮಾರು ಹತ್ತು ವರ್ಷಗಳ ನಂತರ ಆ ಊರಿಗೆ ಮರಳುವ ಸೂಫಿ ಅಂದಿನ ಆಝನ್ ಕರೆ ಕೊಡುತ್ತಾನೆ. ಮದುವೆಯಾಯಾಗಿ ರಾಜೀವನೊಂದಿಗೆ ಇರುವ ಸುಜಾತಾಳಿಗೆ ನಿದ್ದೆಯಲ್ಲಿ ಅವನ ಕರೆ ಕೇಳಿಸುತ್ತದೆ. ನಮಾಜ್ ಸಮಯದಲ್ಲಿ ಸೂಫಿಗೆ ಹೃದಯಾಘಾತವಾಗಿ ಮರಣ ಹೊಂದಿರುವುದು ರಾಜೀವನಿಗೆ ತಿಳಿಯುತ್ತದೆ. ಸುಜಾತಾಳೊಂದಿಗೆ ಊರಿಗೆ ಬರುತ್ತಾನೆ. ಕಥೆಯ ಕೊನೆಗೆ ಸುಜಾತ ತನ್ನ ಕಯ್ಯಲ್ಲಿರುವ ಸೂಫಿಯ ಮಣಿ ಮಾಲೆಯನ್ನು ಅವನ ಗೋರಿಗೆ ಹಾಕುತ್ತಾಳೆ.

ಅದಿತಿ ರಾವು ಹೈದರಿ ಉತ್ತಮವಾಗಿ ನಟಿಸಿದ್ದಾರೆ ಸುಫಿಯಾಗಿ ಹೊಸ ನಾಯಕ ದೇವು ಮೋಹನ್ ರಾಜೀವನ ಪಾತ್ರದಲ್ಲಿ ಜಯಸೂರ್ಯ ತಂದೆಯ ಪಾತ್ರದಲ್ಲಿ ಸಿದ್ದಿಕ್ ತಾಯಿ ಪಾತ್ರದಲ್ಲಿ ಕಲಾ ರಂಜಿನಿ, ಮಣಿಕಂಠನ್ ಪಟ್ಟಂಬಿ, ಮಾಮುಕ್ಕೋಯ ಇತ್ಯಾದಿ ಸಣ್ಣ ತಾರಾಬಳಗವಿದೆ. ಎಂ ಜಯಚಂದ್ರನ್ ಸಂಗೀತ ನೀಡಿದ್ದಾರೆ, ನಿಯಟಿಂಕರೆ ಶಾನವಾಜ್ ಚಿತ್ರ ಕತೆ ಬರೆದು ನಿರ್ದೇಶಿದ್ದಾರೆ ‘ವಾತಿಳ್ಕಲ್ ವೆಳ್ಳರಿಪ್ರವೂ’ ಮತ್ತು ‘ಅಲ್ ಹಮ್ದುಲಿಲ್ಲಾಹ್’ ಹಾಡು ಉತ್ತಮವಾಗಿದೆ ಈ ಸಿನಿಮದಲ್ಲಿ ಬರುವ ಆಝನ್ ಕೂಡ ಸಕತ್ ವೈರೆಲ್ ಆಗಿದೆ. ಡಿಜಿಟಲ್ ನಲ್ಲಿ ಬಿಡುಗಡೆ ಗೊಂಡ ಮಲಯಾಳದ ಮೋಡಲ್ ಸಿನಿಮಾ ಎಂಬ ಹೆಗ್ಗಳಿಕೆ ಕೂಡ ಇದೆ

LEAVE A REPLY

Please enter your comment!
Please enter your name here