ಪುಸ್ತಕ ವಿಮರ್ಶೆ : ಲಾಬೀದ್ ಆಲಿಯಾ

ಯುವ ಕವಿ ಉಮರ್ ದೇವರಮನಿಯವರ “ರಾಗವಿಲ್ಲದಿದ್ದರೂ ಸರಿ” ಚೊಚ್ಚಲ ಕೃತಿ ಕೈ ಸೇರಿದೆ. ಉರ್ದು ಮತ್ತು ಅರಬಿ ಗಝಲ್ ಗಳಲ್ಲಿರುವ ಭಾವ ತೀವ್ರತೆ ಕನ್ನಡದ ಇವರ ಈ ಗಝಲ್ ಗಳಲ್ಲೂ ಕಾಣಸಿಗುತ್ತದೆ. ಗಾಲಿಬ್ ಮತ್ತು ಇಕ್ಬಾಲ್ ರ ಗಝಲ್ಲಲಿರುವ ಮಜಾಝಿ ಪ್ರಯೋಗವನ್ನು ಕನ್ನಡದಲ್ಲಿ ಬಹಳ ಅಧ್ಬುತವಾಗಿ ಬರೆದಿದ್ದಾರೆ. ಮೈಖಾನೆ, ಸಾಕಿ ಇತ್ಯಾದಿ ಪದ ಪ್ರಯೋಗ ನಿಮ್ಮನ್ನು ಪ್ರೀತಿ ಪ್ರೇಮ ಮತ್ತು ಮಾನವೀಯತೆಯ ಹೊಸ ಲೋಕಕ್ಕೆ ಕೊಂಡು ಹೋಗುವುದು. ಅಲಾಮತ್ ಗಳು ಇಸ್ ತಿಲಾಹ್ ಹಾಗೂ ಇಷ್ಕೇ ಹಕೀಕೀ ಮತ್ತು ಮಜಾಝೀ ಪ್ರಯೋಗದಿಂದ ಈ ಗಝಲ್ ಬಹು ಸಂಪನ್ನವಾಗಿದೆ. ನಿತ್ಯೂ ನೂತನ ರೂಪಕಗಳಿಂದ ಹಾಗೂ ಪ್ರತಿಮೆಗಳಿಂದ ಓದುಗನ ಆಸಕ್ತಿ ಮತ್ತು ತುಡಿತವನ್ನು ಕೆರಳಿಸುವ ಅಧ್ಬುತ ಶಬ್ದ ಬಂಡಾರ.

ಪ್ರೀತಿ ಪ್ರೇಮದ ಮೈಖಾನೆಯಲ್ಲಿ ಅಪರಿಚಿತರು ಇರುವುದಿಲ್ಲ
ಇದು ಎಲ್ಲರಿಗೂ ತೆರೆದಿದೆ ಇಲ್ಲಿ ಬೀಗಗಳು ಇರುವುದಿಲ್ಲ.

ಹೊಸ ವರುಷಕ್ಕೆ ಸ್ವಾಗತ ಅಷ್ಟೊಂದು ಸುಲಭವಲ್ಲ ಉಮರ್
ಹಿಂದಿನ ದಿನಗಳನು ತರಲು ಸಾಧ್ಯವೇ ಇಂದಿನ ದಿನಗಳ ಸುಟ್ಟು

ನಿನ್ನದೆಷ್ಟು ಈ ಮನೆಯೂ ನನ್ನದೂ ಅಷ್ಟೇ
ಮುಖವಾಡಗಳ ಧರಿಸಿ ಸ್ವಾಗತಿಸಿದಿರು ಸಾಕಿ

ಕತ್ತಲೆಗೆ ಕೊನೆಯಿರುವ ಬಾಗಿಲು ಗಳಿವೆ
ಬೀಗದ ಕೈಗಳು ಬೀಗಗಳ ನಿದ್ದೆಗೆಡಸಿವೆ

ಆಯತುಗಳನು ಪಠಿಸುವುದರಲ್ಲೇ ಸಂತೋಷ ಪಡುತ್ತಿದ್ದೆ
ಮೂಮಿನ್ ಸೂರದ ಸಾರವನ್ನು ತಿಳಿಯಲೇ ಇಲ್ಲ

ಬಂಡೆಕಲ್ಲಿನಂತೆ ಏಕೆ ನಿಮಿರಿ ನಿಲ್ಲುವೆ
ಹನಿಯಿಂದಲೇ ಕಲ್ಲು ಮಣ್ಣಾಗಳಿಲ್ಲವೇ

ಹೀಗೆ ಮನುಷ್ಯ ಬದುಕಿನ ವಿವಿಧ ಆಯಾಮಗಳನ್ನು ಸರಳವಾಗಿ ಬಿಡಿಸುತ್ತಾ ಇಲಾಹಿ ಜತೆ ನಿಮ್ಮನ್ನು ಜೊಡಿಸುತ್ತದೆ. ಇಂತಹ ಉತ್ತಮ ಸಂಕಲನವನ್ನು ನೀಡಿ ಕನ್ನಡವನ್ನು ಮತ್ತಷ್ಟು ಸಂಪನ್ನಗೊಳಿಸಿ ಎಂಬ ಶುಭಹಾರೈಕೆಯೊಂದಿಗೆ

LEAVE A REPLY

Please enter your comment!
Please enter your name here