ಪುಸ್ತಕ: ಬಹುಸಂಖ್ಯಾತವಾದ ಚಿಂತಕರು ಕಂಡಂತೆ

ರಚನೆಕಾರರು: ಬಿ. ಶೀಪಾದ್

 ಬಿ. ಶೀಪಾದ್ರವರು ಬರೆದಿರುವಬಹುಸಂಖ್ಯಾತವಾದ ಚಿಂತಕರು ಕಂಡಂತೆಎಂಬ ಕಿರು ಪುಸ್ತಕವು ಬಹುಸಖ್ಯಾತವಾದದ ಕುರಿತು ಕೆಲವು ಪ್ರಮುಖ ವಿಚಾರಗಳನ್ನು ಕನ್ನಡಿಗರ ಮುಂದೆ ತೆರೆದಿಡುತ್ತದೆ.

ಪುಸ್ತಕದಲ್ಲಿರಾಜ್ಯದ ಮುಖ್ಯಮಂತ್ರಿಗಳಿಗೆ ದೇಶದ ಪ್ರಥಮ ಪ್ರಧಾನ ಮಂತ್ರಿ ನೆಹರೂ ಬರೆದ ಕೆಲವು ಪತ್ರಗಳು(1047-1953)” ಇಂದಿಗೂ ಪ್ರಸ್ತುತ ಎಂದು ಭಾಸವಾಗುತ್ತದೆ. ಅಂದಿನ ಸಮಸ್ಯೆ ಅಂದಿಗೆ ದೊಡ್ಡದಾಗಿದ್ದರೂ ಇಂದು ಅಂದಿನ ಕೆಲವು ನಿರ್ಲಕ್ಷ್ಯದಿಂದಾಗಿ ಬಹುಸಂಖ್ಯಾತವಾದಿಗಳು ಗಲಭೆಕೋರರಾಗಿ ಪರಿವರ್ತನೆಗೊಂಡು ಇಡೀ ದೇಶ ಮೇಲೆ ಅಧಿಪತ್ಯವನ್ನು ಸಾಧಿಸಲು ನಿರಂತರ ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ.

ಇಂದು ಅದೇ ಸೀಟಿನಲ್ಲಿರುವ ಇಂದಿನ ಪ್ರಧಾನ ಮಂತ್ರಿಯು ತಮ್ಮ ಮುಖ್ಯ ಮಂತ್ರಿಗಳಿಗೆ ತನ್ನ ಬಹುಸಂಖ್ಯಾತವಾದವನ್ನು ಬೆಳೆಸಲು ಕೇವಲ ಪತ್ರಗಳು ಮಾತ್ರವಲ್ಲ ಬದಲಾಗಿ ಮಂತ್ರಿಗಳನ್ನು ಮತ್ತು ದೇಶದ ಹಣವನ್ನು ಖರ್ಚುಮಾಡುತ್ತಿರುವ ಕುರಿತು ಅಧ್ಯಾಯನ ನಡೆಸಬೇಕಿದೆ. ಅವರು ರಾಷ್ಟ್ರಪಿತರ ಕೈಯಲ್ಲಿ ಪೊರಕೆ ನೀಡಿ ಗುಡಿಸುವ ಕೆಲಸಕ್ಕಷ್ಟೆ ಅವರನ್ನು ಸೀಮಿತಗೊಳಿಸಿ ಅದೇ ಸಮಯದಲ್ಲಿ ಪ್ರಧಾನ ಮಂತ್ರಿಯ ಕೈಕೆಳಗೆ ಭಾರತದ ಎಲ್ಲಾ ರೀತಿಯ ವೈವಿಧ್ಯತೆಗಳನ್ನು ನಾಶಪಡಿಸಲಾಗುತ್ತಿದೆ. ಮಧುಲಿಮಯೆ ಯವರ ಆರೆಸ್ಸೆಸ್! ಅಂದರೇನು ಎಂಬ ಸುಮಾರು 37 ವರ್ಷ ಹಳೇಯ ಲೇಖನವು ಆರೆಸ್ಸೆಸ್ ಅಜೆಂಡಾ ಮತ್ತು ಅದರ ಕಾರ್ಯವೈಖರಿಯ ಕುರಿತು ಬಹಳಷ್ಟು ಮಾಹಿತಿಯನ್ನು ನೀಡುತ್ತದೆ. ನಂತರದಮರೆತು ಹೋದ 1949 ವಾಗ್ದಾನಎಂಬ ಲೇಖನವು ನೆಹರೂ ಆಡಳಿತದಲ್ಲಿದ್ದ ಆಗಿನ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮೇರೆಗೆ 1949ರಲ್ಲಿ ಆರೆಸ್ಸೆಸ್ ನಾವು ರಾಜಕೀಯಕ್ಕೆ ಬರುವುದಿಲ್ಲವೆಂದಿದ್ದರು ಅದು ನನಗೆ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ಕಂಡಿತು. “ಸೋಲುತ್ತಿರುವ ಮೌಲ್ಯಾಧಾರಿತ ಶಿಕ್ಷಣ ಮತ್ತು ದಾಪುಗಾಲಿಡುತ್ತಿರುವ ಕೇಸರೀಕರಣಎಂಬ ಪ್ರೋ. ಪ್ರಭಾತ್ ಪಟ್ನಾಯಕ್ ಜತೆ ಸಂದರ್ಶನ ಒಂದು ಅತೀ ಪ್ರಮುಖ ಎಲ್ಲರೂ ಚಿಂತಿಸಬೇಕಾದ ವಿಚಾರ. ಕೇಸರೀಕರಣ ಎಂಬುವುದು ನನಗೆ ಸೂಕ್ತವಾಗಿ ಕಾಣುವುದಿಲ್ಲ ಅದನ್ನು ಕೋಮುವಾದೀಕರಣವೆಂದೇ ಕರೆಯಬೇಕು ಎಂಬುವುದು ನನ್ನ ಭಾವನೆ. ಈಗ ಅದು ಬೇರೆಯೇ ರೂಪ ಪಡೆದಿರಬಹುದು. “ಧರ್ಮಾಧಾರಿತ ರಾಜಕಾರಣವು ಪ್ರಜಾಪ್ರಭುತ್ವಕ್ಕೆ ಒಂದು ಕಂಟಕಎಂಬ ತಲೆ ಬರಹವನ್ನು ಜಮಾಅತೆ ಇಸ್ಲಾಮೀ ಸ್ಥಾಪಕನ ಮಗನಾದ ಸೈಯದ್ ಹೈದರ್ ಸಿದ್ದೀಕಿ, ಜುಲ್ಫೀಕರ್ ಅಲೀ ಮನಿಕ್, ಮಕ್ತಾಶ್ರೀ ಚಕ್ಮಾಸಾಥಿಯವರು ನಡೆಸಿದ ಬಾಂಗ್ಲಾದೇಶದ ಯುದ್ಧ ಕಾಲದ ಅಪರಾಧಗಳ ಕುರಿತಾದ ಟ್ರಿಬ್ಯೂನಲ್ಡಾಕಾ ಟ್ರಿಬ್ಯೂನಲ್ನಲ್ಲಿ ಪ್ರಕಟಿಸಲಾದ ಸಂದರ್ಶನವನ್ನು ಇಲ್ಲಿ ಪುಸ್ತಕದಲ್ಲಿ ಪ್ರಕಟಿಸಿದ್ದಾರೂ ಏಕೆ? ಭಾರತದ ಅತಿಕ್ರಮಣಕಾರಿ ಚಿಂತನೆಯನ್ನು ಚರ್ಚಿಸುವಾಗ ಒಮ್ಮೆಲೆ ಪಾಕಿಸ್ತಾನದ ಅಥವ ಬಾಂಗ್ಲಾದೇಶದ ಜಮಾಅತೆ ಇಸ್ಲಾಮೀ ಬಗ್ಗೆ ಅಸಮಂಜಸವಾದ ಅನಗತ್ಯ ಚರ್ಚೆಯೆಂದೆ ತೋರುತ್ತದೆ. ಹಾಗೆ ನೋಡುವುದಾದರೆ ಬಿ. ಶ್ರೀಪಾದರವರಿಗೆ ಪಾಕಿಸ್ತಾನದಲ್ಲಿ ಮತ್ತು ಬಾಂಗ್ಲಾದಲ್ಲಿ ಬಹಳಷ್ಟು ಅತಿಕ್ರಮಣಕಾರಿ ಚಿಂತನೆಯುಳ್ಳ ಸಂಘಗಳಿವೆ ಅದನ್ನು ಬಿಟ್ಟು ಜಮಾಅತೆ ಇಸ್ಲಾಮೀಯನ್ನೇ ಚರ್ಚಿಸಲು ಕಾರಣವಾದರೂ ಏನೂ? ಭಾರತದಲ್ಲಿಯೂ ಇದೇ ಹೆಸರಿನಲ್ಲಿ ಕೆಲಸ ಮಾಡುವ ಸಂಘವಿದೆ ಎಂದಾಗಿಯೇ ಚರ್ಚೆ? ಇನ್ನೊಂದು ವಿಷಯ ಜಮಾಅತೆ ಇಸ್ಲಾಮೀಯ ಹೆಸರಿನಲ್ಲಿ ಕೆಲಸ ಮಾಡುವ ಬಹಳಷ್ಟು ಸಂಘಗಳು ವಿಶ್ವದಲ್ಲಿದೆ ಅವೆಲ್ಲದರ ಕಾರ್ಯವೈಖರಿ ಬೇರೆ ಬೇರೆ ಇದೆ ಎಂಬುವುದು ಸತ್ಯ. ಇಲ್ಲಿ ಜಮಾಅತೆ ಇಸ್ಲಾಮೀ ಕಾರ್ಯಕ್ರಮ ಮತ್ತು ಧೋರಣೆಯಲ್ಲಿ ಅಜಗಜಾಂತರವಿದೆ. ಹಾಗಾಗಿ ಬಿ.ಶ್ರೀಪಾದರು ಭಾರತದ ಜಮಾಅತೆ ಇಸ್ಲಾಮೀಯ ಅಧ್ಯಯನ ಮಾಡಬೇಕಾಗಿದೆ ಎಂದು ನನಗೆ ತೋಚುತ್ತದೆ.

ಹುಷಾರ್ ನಾನು ಹಿಂದೂ ಆಗಿ ಮತಾಂತರಗೊಳ್ಳುತ್ತೇನೆಎಂಬ ಹಸನ್ ಸುರೂರ್ರವರ ಲೇಖನ, “ಹಿಂದುತ್ವ ಮಾದರಿಯ ನವ ಉದಾರೀಕರಣವರ್ಗೀಸ್ ಕೆ.ಜಾರ್ಜ್ ಹಾಗು ಬಹುಸಂಖ್ಯಾತವಾದ ಎಂಬ ಸಾಬಾ ಸಕ್ವಿಯವರ ಲೇಖನವನ್ನು ಎಲ್ಲರೂ ಓದಲೇ ಬೇಕಾಗಿದೆ ಎಂದು ನಾನು ಭಾವಿಸುತ್ತೇನೆ.

 

ತಲ್ಹಾ ಇಸ್ಮಾಯಿಲ್ ಕೆ.ಪಿ

ಕಾನೂನು ವಿದ್ಯಾರ್ಥಿ, ಎಸ್.ಡಿ.ಎಂ ಕಾಲೇಜು ಮಂಗಳೂರು

 

LEAVE A REPLY

Please enter your comment!
Please enter your name here