ಚುನಾವಣಾ ವಿಶ್ಲೇಷಣೆ

ರಾಜ್ಯ ರಾಜಕೀಯದ ಚದುರಂಗಾಟದಲ್ಲಿ, ಉಪ ಚುನಾವಣೆ ವಿಮರ್ಶಾತ್ಮಕ ವಿಶ್ಲೇಷಣೆ.

  • ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ
    (ಸದಸ್ಯರು, ಸಂವೇದನಾ ಬೆಂಗಳೂರು)

ದೇಶದ ಆಂತರಿಕ ಪರಿಸ್ಥಿತಿಯನ್ನು ಇನ್ನಷ್ಟು ಹದೆಗೆಟ್ಟ ದಾರುಣ ಸ್ಥಿತಿಗೆ ನೂಕುವುದರಲ್ಲಿ ಮತದಾರರಾದ ಪ್ರಜೆಗಳು ಶ್ರಮವಹಿಸಿ ದುಡಿಯುತ್ತಿದ್ದಾರೆ ಎಂಬ ನೋವು ಪ್ರಜ್ಞಾವಂತ ಭಾರತೀಯರ ಕಣ್ಣಲ್ಲಿ ಮೂಡದಿರಲಿಕ್ಕಿಲ್ಲ. ಕಳೆದ ಚುನಾವಣೆಗಳು, ಮತ್ತು ಉಪಚುನಾವಣೆಗಳು ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಗೋಚರಿಸುತ್ತಲೂ ಇದೆ. ಸರಕಾರಿ ಸಂಸ್ಥೆಗಳು ಖಾಸಗಿಕರಣಗೊಳ್ಳುತ್ತಲೂ, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಲೂ, ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಕ್ಕೆರುತ್ತಲೂ, ಇರುವಾಗಲೂ ಪೌರತ್ವ (ತಿದ್ದುಪಡಿ)ಮಸೂದೆ NRC,ಯಂತಹ ಕಾಯಿದೆ ಜಾರಿಯಾಗಿ ಸಂವಿಧಾನದ ಮೂಲ ಸಿದ್ದಾಂತಕ್ಕೆ ಹೊಡೆತ ಬಿದ್ದಾಗಲೂ, ಗುಂಪು ಹತ್ಯೆ, ಅತ್ಯಾಚಾರಗಳಂತಹ ಸಾಮೂಹಿಕ ತೊಂದರೆಗಳು ದೇಶದೊಳಗೆ ವ್ಯಾಪಿಸಿರುವಾಗಲೂ ಜನತಾ ನ್ಯಾಯಾಲಯ ದೇಶದ ಅಧಿಕಾರವನ್ನು ಮತ್ತೆ ಮತ್ತೆ ಅನರ್ಹರ ಕೈಗೆ ಒಪ್ಪಿಸುವುದು ಪ್ರಜಾಪ್ರಭುತ್ವದ ಮಹಾ ದುರಂತ.

2018 ರ ವರೆಗಿನ ಸಿದ್ದರಾಮಯ್ಯನವರ ಸರ್ಕಾರ ನೀಡಿದ ಎಲ್ಲಾ ಅಭಿವೃದ್ಧಿಯ, ಸವಲತ್ತುಗಳ ಸುಖನುಭವಿಸಿದ ಮತದಾರ, ಚುನಾಯಿಸಿದ್ದು ಮಾತ್ರ ಬಿಜೆಪಿಯನ್ನು. ಭ್ರಷ್ಟಾಚಾರದಲ್ಲಿ ಜೈಲು ಸೇರಿದ್ದ, ಹಲವಾರು ಹಗರಣದಲ್ಲಿ ಸಿಲುಕಿದ್ದ, ಹಲವು ನಕಾರಾತ್ಮಕ ಆರೋಪಗಳನ್ನು ಎದುರಿಸುತ್ತಿದ್ದ ಆರೋಪಿಗಳ ಕೈಗಳಿಗೆ ಅಧಿಕಾರ ನೀಡುವುದರಲ್ಲಿ ತೃಪ್ತಿಪಟ್ಟಿತು.

2018 ರಲ್ಲಿ ಅತೀ ಹೆಚ್ಚು ಶಾಸಕ ಬಲ ಹೊಂದಿದ್ದ ಬಿಜೆಪಿ ಅಧಿಕಾರಕ್ಕೆ ಏರಲಾಗಲಿಲ್ಲ ಎಂಬ ನೋವು, ಸೇಡು, ಹಗೆಯ ನಡುವೆ ರೆಸಾರ್ಟ್ ರಾಜಕೀಯದೊಂದಿಗೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿತ್ತಾದರೂ ಸುಖವಾಗಿ ಆಡಳಿತ ನಡೆಸಲು ಅಧಿಕಾರ ಮೋಹಿ ಜನಪ್ರತಿನಿಧಿಗಳು ಸಮ್ಮತಿಸಲಿಲ್ಲ. ಅದೊಂದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
ಸಮ್ಮಿಶ್ರ ಸರ್ಕಾರ ಹಲವು ಕರಸರತ್ತುಗಳ ಪ್ರದರ್ಶನದೊಂದಿಗೆ ರಾಜಕಾರಣಿಗಳು ಹೊಡೆಯುವುದು ಬಯ್ಯುವುದು ಬಡಿಯುವುದನ್ನು ಸುಧಾರಿಸುತ್ತಾ ಸಾಕು ಬೇಕಾಗಿ ಒಂದು ವರ್ಷ ಪೂರ್ತಿಯಾಗುವುದರಲ್ಲಿ ಸುಮಾರು 17 ಅತೃಪ್ತ ಶಾಸಕರು ಹಣ ಅಧಿಕಾರದ ಆಮಿಷಗಳ ಜೊತೆಗೆ ಬೆದರಿಕೆ, ದಬ್ಬಾಳಿಕೆ, ಹೆದರಿ ಬಲಿಯಾಗಿ ಪಕ್ಷಾಂತರರಾಗಿ ಸರಕಾರ ಉರುಳಿ ಬಿತ್ತು.

ಸರಕಾರ ಉರುಳಿಸಲು ಕಾರಣ ಕರ್ತರನ್ನು ಸಭಾಪತಿಗಳು ಪಕ್ಷಾಂತರ ಕಾಯಿದೆ ಅಡಿಯಲ್ಲಿ ಅನಾರ್ಹರಾಗಿ ಘೋಷಿಸಿದರು. ತಲೆಹಿಡುಕ ಸರ್ಕಾರ ಎನಿಸಿಕೊಂಡ ಬಿಜೆಪಿಯ ಎಡಿಯೂರಪ್ಪ ನೇತೃತ್ವ ಅಧಿಕಾರಕ್ಕೆ ಎರಿತ್ತಾದರೂ ಸಂಖ್ಯಾ ಬಲದಲ್ಲಿ ಕಡಿಮೆ ಇದ್ದು ಆಡಳಿತದ ಕಸಾಲೆ ಅಲುಗಾಡುತಿತ್ತು.

ಇದರ ನಡುವೆ ಲೋಕಸಭಾ ಚುನಾವಣೆಯನ್ನು ಜಂಟಿಯಾಗಿ ಎದುರಿಸಿ ಬಂಡಾಯಗಾರರ ಬೆಂಬಲದೊಂದಿಗೆ ತಲಾ ಒಂದೊಂದು ಅಭ್ಯರ್ಥಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ತೃಪ್ತಿಗೊಂಡದ್ದು ತಿಳಿದದ್ದೇ.

ತದನಂತರ ಪಕ್ಷಾಂತರಿಗಳ ಅನಾರ್ಹತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವುದರೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದು ವಿಪರ್ಯಾಸ ಮತ್ತು ಪ್ರಶ್ನಿಸಲ್ಪಡುವಂತದ್ದು?. ( ಪ್ರಶ್ನೆಗೆ ಇಲ್ಲಿ ಅವಕಾಶವಿಲ್ಲ ಅಜ್ಞಾ ಪಾಲನೆ ಮಾತ್ರ ಪ್ರಜಾವಕಾಶ) ಪಕ್ಷಾಂತರಿಗಳು ಪ್ರಜಾಪ್ರಭುತ್ವ ಉಲ್ಲಂಘಿಸಿದವರು ಸಂವಿಧಾನ ಬದ್ಧವಾದ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅರ್ಹರೋ ಅನರ್ಹರೋ ಎಂಬ ತೀರ್ಮಾನ ಮತದಾರರ ಕೈಯಲ್ಲಿತ್ತು ಆದರೆ, ಮತದಾರ ಪ್ರಭುಗಳ ತೀರ್ಮಾನ ಹಣ ಹೆಂಡದ ಮೇಲೆ ನಿಂತಿತ್ತು ಎಂಬುವುದು ಪ್ರಜಾವಂತ ಪ್ರಜೆಗಳಿಗೆ ತಿಳಿಯದಾಯಿತು.

ಇಲ್ಲಿ ಯಾರು ಅರ್ಹರು ? ಯಾರು ಅನರ್ಹರು ? ಎಂಬ ಪ್ರಶ್ನೆ ಸಂವಿಧಾನದ ಮೇಲೆ ವಿಶ್ವಾಸ ತಾಳಿದ ಭಾರತೀಯರಲ್ಲಿ ಇರದಿರಲಿಕ್ಕೆ ಸಾಧ್ಯವಿಲ್ಲ. ಪಕ್ಷಾಂತರಿಗಳು ಪಕ್ಷಕ್ಕೆ ದ್ರೋಹ ಬಗೆದದಲ್ಲದೆ ಅವರನ್ನು ನಂಬಿ ಆಯ್ಕೆ ಮಾಡಿ ಕಳುಹಿಸಿದ ಬಹುಸಂಖ್ಯಾತ ಮತದಾರರಿಗೂ ಮೋಸ ಮಾಡಿದ್ದಾರೆ. ಅನರ್ಹರನ್ನೇ ಅರ್ಹರನ್ನಾಗಿಸಿದ ಮತದಾರರೆ ಅನರ್ಹರು ಎನ್ನುವುದರಲ್ಲಿಯೂ ಅರ್ಥವಿಲ್ಲ ಏಕೆಂದರೆ ಭಾರತದಲ್ಲಿ ಯಾವುದು ಅರ್ಹತೆಯಿಂದ ನಡೆಯುತ್ತಿದೆ ?. ಸುಪ್ರೀಂ ಕೋರ್ಟ್, ರಾಜ್ಯ ಪೊಲೀಸ್ ವ್ಯವಸ್ಥೆ, ಚುನಾವಣಾ ಅಧಿಕಾರಿಗಳು, ಹಾಗೂ ಇತ್ಯಾದಿ ಸರಕಾರಿ ವಿಭಾಗಗಳು, ಕಾನೂನುಗಳು ಹಣದ ಉರುಳಿಗೆ ಬೆದರಿಕೆ ಹೆದರಿಕೆಗೆ ಬಿದ್ದು ಕೆಲಸ ಮಾಡುತ್ತಿದೆ ಅಷ್ಟೇ. ಪ್ರಜೆಗಳೂ ಅದನ್ನೇ ಮಾಡಿದ್ದಾರೆ. ಅವರಿಗೆ ಸಂವಿಧಾನದ ಬಗ್ಗೆಯಾಗಲಿ ಕಾನೂನಿನ ಬಗೆಯಾಗಲಿ ತಿಳಿಸುವ ವಿವರಿಸುವ ಗೋಜಿಗೂ ಯಾರು ಹೋಗಲಿಲ್ಲ. ಅವರು ಚುನಾವಣೆ ಮತ್ತು ರಾಜಕೀಯವನ್ನು ಒಂದು ಪ್ರತಿಷ್ಠೆ, ಸೇಡು, ಮತ್ತು ವಿನೋಧವಾಗಿ ಕಂಡಿದ್ದಾರೆ ಎಂಬುವುದು ನನ್ನ ಅನಿಸಿಕೆ.

ಜನರು 80% ಅನಕ್ಷರಸ್ಥರಾಗಿದ್ದಾಗ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಎಷ್ಟು ಆಲೋಚನೆ ಮಾಡುತಲಿದ್ದರು ವಿದ್ಯಾವಂತ, ಸಮಾಜ ಸೇವಕ, ಸಾಮಾಜಿಕ ಬದ್ಧತೆ,ಕಳಕಳಿ ಇರುವವರನ್ನೆ ಆಯ್ಕೆ ಮಾಡುತಿದ್ದರು ಆದರೆ, ದೇಶ ಸಂಪೂರ್ಣ ಸಾಕ್ಷರತೆಯೆಡೆಗೆ ಸಾಗುವಾಗ ವಿದ್ಯಾವಂತರೆನಿಸಿಕೊಂಡ ಪ್ರಜೆಗಳು ಜಾತಿ, ಪಂಗಡ, ವರ್ಗಕ್ಕೆ ಹೆಚ್ಚು ಒತ್ತು ಕೊಟ್ಟು ಬ್ರಷ್ಟಾಚಾರಿ, ಅತ್ಯಾಚಾರಿ, ಭಯೋತ್ಪಾದನೆಗಳಂತಹ ಆರೋಪಗಳನ್ನು ಹೊತ್ತು ಕೊಂಡ ಅಲ್ಪ ಬುದ್ಧಿ ಇರುವ ಅನಕ್ಷಸ್ಥರನ್ನೇ ಆರಿಸುವುದು ಅಲ್ಲದೆ ಅವರೇ ಆಡಳಿತದ ಚುಕ್ಕಾಣಿ ಹಿಡಿಯುವಾಗ ಸಾಕ್ಷರತೆಯಿಂದ ದೇಶ ಬದಲಾಗುತ್ತದೆ ಎಂಬ ಕನಸು ಹುಸಿಯಾಗಿದೆ.

ಉಪಚುನಾವಣೆಯ ಈ ಫಲಿತಾಂಶ ಹಾವು ಮುಂಗುಸಿ ಆಟಕ್ಕೆ ವಿರಾಮ ನೀಡಿದೆ. ಇನ್ನು ಮೂರು ವರ್ಷ ಒಂದೇ ಸರಕಾದ ಅಡಿಯಲ್ಲಿ ರಾಜ್ಯ ಮುಂದುವರಿಯಬಹುದಾದರೂ ಪಕ್ಷಾಂತರ ಇನ್ನೂ ಹೆಚ್ಚಾಗಿ ನಡೆಯಲಿಕ್ಕಿದೆ ಎಂಬುದರಲ್ಲಿ ಸಂದೇಹವಿಲ್ಲ. ಇಂದು ಪಕ್ಷದ ಆದರ್ಶ ಯಾವ ರಾಜಕಾರನಿಗೂ ಮುಖ್ಯವಾಗಿಲ್ಲ ಹಣ ಮತ್ತು ಅಧಿಕಾರಕ್ಕಿಂತ ಅದಾವುದೂ ದೊಡ್ಡದಲ್ಲ.

ದುರಹಂಕಾರ, ಸ್ವಾರ್ಥಗಳ ಬೆನ್ನು ಹತ್ತಿದ ಕಾಂಗ್ರೆಸ್ ಇನ್ನದಾದರೂ ಪಾಠ ಕಳಿಯುವಂತಾಗಲಿ. ಒಳ್ಳೆಯ ನಾಯಕತ್ವ ಬರಲಿ. ಜೆ.ಡಿ.ಎಸ್ ಕುಟುಂಬ ರಾಜಕಾರಣದಿಂದ ಹೊರ ಬಂದು ಜನರೊಂದಿಗೆ ಬೆರೆಯಲಿ ಮತದಾರರು ಇನ್ನು ಮುಂದೆಯಾದರು ಆಯ್ಕೆ ಮಾಡುವಾಗ ತನ್ನನ್ನು ತಾನು ಒಮ್ಮೆ ಅವಲೋಕನ ಮಾಡಿಕೊಳ್ಳಲಿ. ಅಧಿಕಾರ ಹಿಡಿದವರು ತಂತಿ ಮೇಲೆ ನಿಂತಿದ್ದ ಮುಖ್ಯ ಮಂತ್ರಿಗಳು ಭೂಮಿಗಿಳಿದು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿ ಎಂಬ ಹಾರೈಕೆ ಮಾತ್ರ.

LEAVE A REPLY

Please enter your comment!
Please enter your name here