ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು…

ಸಂದೇಶ : ಲಬೀದ್ ಆಲಿಯಾ

ಭಾರತವು ವಿವಿಧ ರಾಜ್ಯಗಳ ಒಕ್ಕೂಟವಾಗಿದೆ. ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ಭಿನ್ನತೆಯೇ ಈ ದೇಶದ ನಿಜವಾದ ಸೌಂಧರ್ಯ. ಕರುನಾಡನನ್ನು ಈ ದೇಶದ ಮತ್ತೊಂದು ಪುಟ್ಟ ದೇಶವೆಂದೇ ಕರೆಯಬಹುದು. ಕರುನಾಡು ಎಂದರೆ ಮಹಾ +ರಾಷ್ಟ್ರ. ಕರು + ನಾಡು ಕರ್ + ನಾಡು ಕರ್ನಾಡು (=ದೊಡ್ಡ ದೇಶ). ನಾವೆಲ್ಲರೂ ಕನ್ನಡಿಗರಾದರೂ ನಮ್ಮಲ್ಲಿ ಎಷೊಂದು ಭಿನ್ನತೆಯಲ್ಲವೇ. ತುಳು, ಕೊಡವ, ಬ್ಯಾರಿ, ಕೊಂಕಣಿ, ಊರ್ದು ಮುಂತಾದ ಪ್ರಾದೇಶಿಕ ಭಾಷೆಯ ಜತೆ ಗೂಡಿ ನಮ್ಮ ಕನ್ನಡ ಭಾಷೆ ಎಷೊಂದು ಅಂದವಾಗಿ ಅರಳಿದೆ.
“ಜಲ್ದಿ ಹೇಳ್, ಯಾಕ, ಯವ್ವ, ಹಂಗ್ಯಕ” ಹೀಗೆ ಗ್ರಾಮೀನ ಕನ್ನಡದ ಸೊಗಸು, “ಎಂಥದ್ದು, ತೋರ, ಉಂಟು, ಸಪೂರ” ಮುಂತಾದ ತುಳು ಮತ್ತು ಬ್ಯಾರಿ ಮಿಶ್ರಿತ ಮಂಗಳೂರು ಕನ್ನಡದ ಸೌಂದರ್ಯ ಹೀಗೆ ಪ್ರತಿ ಜಿಲ್ಲೆಯಲ್ಲೂ ಕನ್ನಡವು ವೈವಿಧ್ಯಮಯ ಶೈಲಿಯಲ್ಲಿ ತನ್ನ ಕಂಪನ್ನು ಬೀರುತ್ತಿದೆ. ದೇಶದಾಧ್ಯಂತ ಕೋಮುವಾದಿಗಳು ಸಾಂಸ್ಕೃತಿಕ ಮತ್ತು ಭಾಷಾ ಬಿನ್ನತೆಗಳನ್ನು ನಾಮಾವಶೇಷಮಾಡುತ್ತಿರುವ ಇಂದಿನ ಕಾಲದಲ್ಲಿ ಈ ಸಲದ ನಮ್ಮ ಕನ್ನಡ ರಾಜ್ಯೋತ್ಸವವು ಬಹುತ್ವವನ್ನು ಪ್ರಚುರಪಡಿಸುವ ವೇದಿಕೆಯಾಗಲಿ. ಕುರುಡು ದೇಶೀಯತೆಯ ಮುಖವಾಡವನ್ನು ಕಳಚಿ, ವಿವಿಧತೆಯಲ್ಲಿ ಏಕತೆ ಎಂಬ ಸಂವಿಧಾನದ ತತ್ವವನ್ನು ಎತ್ತಿ ಹಿಡಿಯಲು ಪ್ರೇರಕವಾಗಲಿ.

ಈ ದೇಶ ಹಲವು ಧರ್ಮ, ಹಲವು ಭಾಷೆ, ಹಲವು ಸಂಸ್ಕೃತಿ, ಹಲವು ಜಾತಿ, ಹಲವು ರಾಜ್ಯಗಳ ಮಿಶ್ರಣವಾಗಿದೆ. ಹೌದು ಗೆಳೆಯರೇ ಇಂದು ಈ “ಹಲವು” ವನ್ನು ಕಾಪಾಡುವ ಅಗತ್ಯತೆ ಇದೆ. ನಾನು ಬಾರತೀಯ ನಾನು ಹಿಂದು,
ನಾನು ಬಾರತೀಯ ನಾನು ಮುಸ್ಲಿಮ್,
ನಾನು ಭಾರತೀಯ ನಾನು ಕನ್ನಡಿಗ,
ನಾನು ಭಾರತೀಯ ನಾನು ತಮಿಳಿಗ,
ನಾನು ಭಾರತೀಯ ನಾನು ಕೊಡವ, ಬ್ಯಾರಿ, ….ಹೀಗೆ ಈ ಎಲ್ಲ ಭಿನ್ನತೆಯನ್ನು ಸವಿಯಲು ನಮ್ಮ ಈ ಕನ್ನಡ ರಾಜ್ಯೋತ್ಸವವು ನಮಗೆ ಸ್ಪೂರ್ತಿ ನೀಡಲಿ. ಒಂದೇ ಮಾತಿನಲ್ಲಿ ಹೇಳುವುದಾದರೆ ಕವಿ ನಿಸಾರ್ ರವರ “ನಿತ್ಯೋತ್ಸವ”. ಮತ್ತೊಮ್ಮೆ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

LEAVE A REPLY

Please enter your comment!
Please enter your name here