ಲೇಖಕರು: ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.

ಮರೆತು ಹೋದ ಉಡ್ಡಯನಶಾಸ್ತ್ರಜ್ಞ : ಅಬ್ಬಾಸ್ ಇಬ್ನ್ ಫಿರ್ನಾಸ್! (ಒಂದು ಸಂಕ್ಷೀಪ್ತ ಅವಲೋಕನ)

“What man-made machine will ever achieve the complete perfection of even the goose’s wing?”
– Abbas Ibn Firnas, Inventor of Aeroplane.

ರೈಟ್ ಸಹೋದರರಾದ ವಿಲ್ಬರ್ ಮತ್ತು ಒರ್ವಿಲ್ಲೆ – ಡಿ 17, 1903 ರಂದು ಪ್ರಾಯೋಗಿಕ ಯಂತ್ರನಿಯಂತ್ರಿತ ‘Wright Flyer III’ ಹೆಸರಿನ glider ಒಂದನ್ನು ಶೋಧಿಸಿದ್ದು ನಮಗೆಲ್ಲರಿಗೂ ತಿಳಿದಿರುವ ಸಾಮಾನ್ಯಜ್ಞಾನ. ಆದರೆ, ರೈಟ್ ಸಹೋದರರಿಗಿಂತ ಒಂದು ಸಾವಿರ ವರುಷಗಳ ಹಿಂದೆ, ಸರಿಸುಮಾರು 885 A.Dಯಲ್ಲಿ ‘Father of Aviation’ ಖ್ಯಾತಿಯ ‘ಅಬ್ಬಾಸ್ ಇಬ್ನ್ ಫಿರ್ನಾಸ್’ ಎಂಬವರು ವಿಮಾನವನ್ನು ಶೋಧಿಸಿದ್ದು ಇತಿಹಾಸದ ಪುಟಗಳು ಹಾಡಿ ಹೊಗಳುತ್ತಿವೆ!

ಅಬು ಅಲ್-ಕಾಸಿಂ ಅಬ್ಬಾಸ್ ಇಬ್ನ್ ಫಿರ್ನಾಸ್ ಅಲ್-ತಾಕುರಿನಿ (810-887 A.D) ಎಂಬ ಇಸ್ಲಾಮಿ ಸ್ಪೇನ್ [Emirates of Córdoba] ದೇಶದ ಬಹುಮುಖ ಪ್ರತಿಭೆ: ಶೋಧಕರು, ಯಂತ್ರಶಿಲ್ಪಿ, ಉಡ್ಡಯನಶಾಸ್ತ್ರಜ್ಞರು, ವೈದ್ಯರು, ರಸಾಯನಶಾಸ್ತ್ರಜ್ಞರು, ಅರಬ್ಬೀ ಕವಿಗಳು ಮತ್ತು ಸಂಗೀತಶಾಸ್ತ್ರಜ್ಞರು! ಇಬ್ನ್ ಫಿರ್ನಾಸ್ ಅವರು – ಪಕ್ಷಿವಿಜ್ಞಾನ [Ornithology] ದಲ್ಲೂ ಪಾಂಡಿತ್ಯ ಹೊಂದಿರುವುದರಿಂದ – ತಮ್ಮ ಸಫಲ ಹಾರಾಟದ ಇಪ್ಪತ್ತು ವರ್ಷಗಳ ಪೂರ್ವ (ಸರಿಸುಮಾರು 860sರ ಸುತ್ತ), ಸಡಿಲವಾದ ಮೇಲಂಗಿಯನ್ನು ಬೆತ್ತಗಳ ಸುತ್ತ ಹಕ್ಕಿಯ ರೆಕ್ಕೆಗಳಂತೆ ಸುತ್ತಿಕೊಂಡು ಕಾರ್ಡೋಬಾದ ಗೋಪುರದಿಂದ ಜಿಗಿಯಲು ವಿಫಲ ಯತ್ನ ಪಟ್ಟರು; ಹಾರಾಟದ ಯತ್ನವು ವಿಫಲಗೊಂಡರೂ, ಅವರು ಶೋಧಿಸಿದ ಉಡುಪಿನ ರೆಕ್ಕೆಗಳು ಅವರ ಪತನವನ್ನು ನಾಟಕೀಯವಾಗಿ ನಿಧಾನಗೊಳಿಸಿ, ಅವರಿಗೆ ಸಣ್ಣಪುಟ್ಟ ಗಾಯಗೊಳಿಸಿತು. ಇದರಿಂದ ಪ್ರೇರಿತಗೊಂಡ ಇಬ್ನ್ ಫಿರ್ನಾಸ್ ಅವರು ಮುಂದೆ ‘Ornithopter’ ಒಂದನ್ನು ಶೋಧಿಸಿ ಹಾರಾಟದ ಮತ್ತೊಂದು ವಿಫಲಯತ್ನ ಪಟ್ಟರು! 886 A.Dಯಲ್ಲಿ ಇಬ್ನ್ ಫಿರ್ನಾಸ್ ಅವರು ತಾವು ಶೋಧಿಸಿದ gliderನಲ್ಲಿ ಸಫಲವಾಗಿ ಹಾರಾಡಿ ಪ್ರಪ್ರಥಮವಾಗಿ ಯಶಸ್ವಿ ‘ವಿಮಾನದ ಶೋಧಕ’ ಮತ್ತು ‘ಉಡ್ಡಯನಶಾಸ್ತ್ರದ ಪಿತಾಮಹ’ ಎಂಬ ಬಿರುದಿಗೆ ಕೀರ್ತಿಪಾತ್ರರಾದರು!

ತಮ್ಮ ಯಶಸ್ವಿ ಹಾರಾಟದ ಸಫಲತೆಯಿಂದ ಉತ್ಸಾಹದ ಪುಟಿ ಚೆಂಡಾದ ಇಬ್ನ್ ಫಿರ್ನಾಸ್ ಅವರು ಬಹಳಷ್ಟು ಯಶಸ್ವಿ ಪ್ರಾಯೋಗಿಕ ಹಾರಾಟ ನಡೆಸಿ ತಮ್ಮ ಹಾರುವ ಯಂತ್ರವನ್ನು ಪರೀಕ್ಷಿಸತೊಡಗಿದರು; ಹಾಗೆಯೇ, ಒಂದು ಪ್ರಾಯೋಗಿಕ ಉಡ್ವಾಣದಲ್ಲಿ ಇಬ್ನ್ ಫಿರ್ನಾಸ್ ಅವರು ಆಯತಪ್ಪಿ ಸಾವಿರಾರು ಮೈಲಿ ಮೇಲಿನಿಂದ ಬಿದ್ದು ತಮ್ಮ ಬೆನ್ನೆಲುಬು ಮುರಿದುಕೊಂಡು ಹಾಸಿಗೆ ಹಿಡಿದರು; ಹಾಗೆಯೇ, ಕೊನೆಯುಸಿರೆಳೆದರು! ಅವರು ರಚಿಸಿದ ವಿಮಾನದ ನೀಲಿನಕ್ಷೆಯಿಂದ ಪ್ರೇರಿತಗೊಂಡ ಲಿಯೋನಾರ್ಡೊ ಡಾ. ವಿನ್ಸಿ ಅವರು 1488ರಲ್ಲಿ ‘The Flying Machine’ ಮತ್ತು 1489ರಲ್ಲಿ ‘An Aerial Screw’ ಎಂಬ ಎರಡು Abstract Artಗಳನ್ನು ರಚಿಸಿದರು. ಆದರೆ ದುರದೃಷ್ಠವಾತ್, ಡಾ ವಿನ್ಸಿ ಆಗಲಿ ಅಥವಾ ಇತರ ಶೋಧಕರಾಗಲಿ ತಮ್ಮ ಬದುಕಿನುದ್ದಕ್ಕೂ ಯಾವುದೇ ಹಾರುವ ಯಂತ್ರ ವಿನ್ಯಾಸಗೊಳ್ಳುವುದರಲ್ಲಿ ಸಫಲತೆ ಕಾಣಲಿಲ್ಲ!! ಇಬ್ನ್ ಫಿರ್ನಾಸ್ ಅವರ ಗ್ಲೈಡರ್ ಹಾರಾಟದ ಸಫಲ ಯತ್ನವು ಇಂಗ್ಲೆಂಡ್‌ನಲ್ಲಿ CE 1000 ಮತ್ತು 1010ರ ನಡುವೆ ಮಾಲ್ಮೆಸ್‌ಬರಿಯ ಈಲ್ಮರ್ ಅವರ ಪ್ರಯತ್ನಕ್ಕೆ ಸ್ಫೂರ್ತಿ ನೀಡಿರಬಹುದು ಎಂದು ಅಂದಾಜಿಸಲಾಗಿದೆ. ಲಿಯೋನಾರ್ಡೊ ಡಾ. ವಿನ್ಸಿ ಅವರ ರೇಖಾಚಿತ್ರದಿಂದ ಪ್ರೇರಿತಗೊಂಡ ರೈಟ್ ಸಹೋದರರು, ಅದೇ ನೀಲಿನಕ್ಷೆಯನ್ನು ತಿದ್ದುಪಡಿಸಿ ತಮ್ಮ ವಿಮಾನವಾದ ‘Wright Flyer III’ನ್ನು 1903ರಲ್ಲಿ ಹಾರಾಡಿ ಯಶಸ್ವಿಗೊಂಡರು. ಆಧುನಿಕ ವಿಮಾನದ ಇಳಿದಾಣ-ಭೂಸ್ಪರ್ಶದಲ್ಲಿ ವಿಮಾನದ ಸ್ಥಿರತೆಗೆ ಪ್ರಮುಖ ಅಂಶವಾಗಿರುವ ‘ಆರ್ನಿಥಾಪ್ಟರ್‌’ನ ರಚನೆಯ ಸಿದ್ಧಾಂತವನ್ನು ಇಬ್ನ್ ಫಿರ್ನಾಸ್ ಅವರೇ ಯಶಸ್ವಿಯಾಗಿ ಪ್ರವರ್ತಿಸಿದ್ದರು. ಹಾಗಾಗಿ, ಇಬ್ನ್ ಫಿರ್ನಾಸ್ ಅವರನ್ನು ‘ವಿಮಾನ ಶೋಧಿಸಿದ ಯಂತ್ರಶಿಲ್ಪಿ’ ಎಂದು ಗುರುತಿಸಲಾಗುತ್ತಿದೆ ಹಾಗೂ `ಉಡ್ಡಯನಶಾಸ್ತ್ರದ ಪಿತಾಮಹ´ ಎಂಬ ಬಿರುದಿಗೆ ಕೀರ್ತಿಪಾತ್ರರಾಗಿದ್ದಾರೆ. ಮುಹಮ್ಮದ್ I (886) ಅವರ ಕಾರ್ಡೋಬಾದ ಆಸ್ಥಾನದ ರಾಜಕವಿ ಮುಮಿನ್ ಇಬ್ನ್ ಸೈದ್ ಅವರು ಫಿರ್ನಾಸ್ ಅವರ ಕುರಿತು ಕವಿತೆಯೊಂದನ್ನು ಬರೆಯುತ್ತ ಕಾವ್ಯಾತ್ಮಕವಾಗಿ ಹೇಳುತ್ತಾರೆ :
“He flew faster than the phoenix in his flight;
when he dressed his body in the feathers of a vulture.”

ಹಾಗೆಯೇ, ಇಬ್ನ್ ಫಿರ್ನಾಸ್‌ ಅವರು ಇಹಲೋಕ ತ್ಯಜಿಸಿ ಸುಮಾರು ಏಳು ಶತಮಾನಗಳ ನಂತರ, ಅಲ್ಜೀರಿಯನ್ ಇತಿಹಾಸಕಾರರು ಅಹ್ಮದ್ ಮೊಹಮ್ಮದ್ ಅಲ್-ಮಕ್ಕಾರಿ (1632) ಅವರು ಫಿರ್ನಾಸ್ ಅವರ ವಿವರಣೆಯನ್ನು ಬರೆಯುತ್ತ ಈಗೆ ನುಡಿಯುತ್ತಾರೆ :
Among other very curious experiments which he made, one is his trying to fly. He covered himself with feathers for the purpose, attached a couple of wings to his body, and, getting on an eminence, flung himself down into the air, when according to the testimony of several trustworthy writers who witnessed the performance, he flew a considerable distance, as if he had been a bird, but, in alighting again on the place whence he had started, his back was very much hurt, for not knowing that birds when they alight come down upon their tails, he forgot to provide himself with one.

ಇಬ್ನ್ ಫಿರ್ನಾಸ್ ಅವರ ಇತರ ವೈಜ್ಞಾನಿಕ ಕಲಿಕೊಡುಗೆಗಳು:

  • ಇಬ್ನ್ ಫಿರ್ನಾಸ್ ಅವರು ವಿಮಾನದ ಶೋಧಕರಲ್ಲದೆ, ಹಲವಾರು ವೈಜ್ಞಾನಿಕ ಕಲಿಕೊಡುಗೆಗಳನ್ನು ಒದಗಿಸಿದ್ದು ಶ್ಲಾಘನೀಯ. ಅವರು ಬ್ರಹ್ಮಾಂಡದಲ್ಲಿ ಗ್ರಹಗಳ ಮತ್ತು ನಕ್ಷತ್ರಗಳ ಚಲನೆಯನ್ನು ತೋರಿಸಿಕೊಡುವ ಸಾಧನವನ್ನು ನಿರ್ಮಿಸಿದ್ದರು.
  • ಅವರು ‘ಝಿಜ್ ಅಲ್-ಸಿಂಧ್ಹಿಂದ್’ ಅನ್ನು ಕಂಡುಹಿಡಿದರು, ಇದು ಯುರೋಪ್ನಲ್ಲಿ ಖಗೋಳಶಾಸ್ತ್ರದ ಮೇಲೆ ಪ್ರಮುಖ ಪ್ರಭಾವ ಬೀರಿತು. ‘ಝಿಜ್ ಅಲ್-ಸಿಂಧ್ಹಿಂದ್’: ಒಂದು ಬಗೆಯ ಖಗೋಳ-ಕೋಷ್ಟಕ.
  • ಇಬ್ನ್ ಫಿರ್ನಾಸ್ ಅವರು ವರ್ಣರಹಿತ ಗಾಜಿನನ್ನು ತಯಾರಿಸುವ ಕಾರ್ಯವಿಧಾನದೊಂದಿಗೆ ಬಂದರು ಮತ್ತು ‘ಓದುವ ಕಲ್ಲು’ಗಳು ಎಂದು ಕರೆಯಲ್ಪಡುವ ಓದುವಿಕೆಗಾಗಿ ಬಳಸುವ ಭೂತಗನ್ನಡಿಯನ್ನು ಶೋಧಿಸಿದರು.
  • ಅವರು ಶೀಲಾಸ್ಫಟಿಕವನ್ನು ಕೆತ್ತುವ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದರು.
  • ಅವರು ಕೃತಕ ಹವಾಮಾನ ಪ್ರತ್ಯನುಕರಣೆ ಕೊಠಡಿಯನ್ನು ವಾಸ್ತುಶಿಲ್ಪಿಸಿದರು. ಅದರಲ್ಲಿ ಪ್ರೇಕ್ಷಕರು ಸೂರ್ಯ, ಚಂದ್ರ ಮತ್ತು ನಕ್ಷತ್ರಗಳೊಂದಿಗೆ ಬ್ರಹ್ಮಾಂಡದ ದರ್ಶನವನ್ನು ಮಾಡಿದರು. ಆ ಕೊಠಡಿಯಲ್ಲಿ ಪ್ರೇಕ್ಷಕರು ಮೇಘಗಳು ವರ್ಷಿಸುವುದು, ಗುಡುಗು-ಸಿಡಿಲು ಮಿಂಚುವುದೂ ನೋಡಿದರು. ಅದೆಲ್ಲವೂ, ನೆಲಮಾಳಿಗೆಯಲ್ಲಿ ಅಡಗಿರುವ ಯಾಂತ್ರಿಕತೆಯಿಂದಾಗಿ ಸಾಧ್ಯವಾಯಿತು. ಹಾಗಾಗಿ, ಜಗತ್ತಿನ ಪ್ರಪ್ರಥಮ ತಾರಾಲಯ-ಗ್ರ್ರಹವ್ಯೂಹ ಮಾದರಿಯನ್ನು [Planetarium] ಕಂಡುಹಿಡಿದ ಕೀರ್ತಿಗೆ ಪಾತ್ರರಾದರು!
  • ಮುಸಲ್ಮಾನರಿಗೆ ನಮಾಜಿಗೆ ಅನುಕೂಲವಾಗಲು ಅವರು “ಅಲ್-ಮಕತಾ” ಎಂಬ ಜಲ-ಗಡಿಯಾರವನ್ನು ವಿನ್ಯಾಸಗೊಳಿಸಿದರು.

ಇಬ್ನ್ ಫಿರ್ನಾಸ್ ಅವರಿಗೆ ಒಲಿದು ಬಂದ ಕೀರ್ತಿ-ಗೌರವಾರ್ಥಗಳು :

  • 1973ರಲ್ಲಿ, ಇರಾಕ್‌ನ ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಾಂಗಣಲ್ಲಿ ಶಿಲ್ಪಿ ಬದ್ರಿ ಅಲ್-ಸಮರ್ರೈ ಅವರಿಂದ ಇಬ್ನ್ ಫಿರ್ನಾಸ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಯಿತು.
  • ಚಂದ್ರನ ಮೇಲ್ಮೈಯಲ್ಲಿ ಇರುವ ಒಂದು ಬೃಹತ್ ಬಾಂಬುಕುಳಿ [Lunar Crater]ಯನ್ನು 1976ರಲ್ಲಿ ‘International Astronomical Union’ (I.A.U) ಇಬ್ನ್ ಫಿರ್ನಾಸ್ ಅವರ ಶುಭನಾಮದಿಂದ ನಾಮಕರಣಗೊಳಿಸಿತು.
  • 2011ರಲ್ಲಿ, ಸ್ಪೇನ್‌ನ ಕಾರ್ಡೋಬಾದಲ್ಲಿ ಗ್ವಾಡಲ್‌ಕ್ವಿವಿರ್ ನದಿಯ ಮೇಲೆ ಹೋಗುವ ಸೇತುವೆಗಳಲ್ಲಿ ಒಂದನ್ನು “ಅಬ್ಬಾಸ್ ಇಬ್ನ್ ಫಿರ್ನಾಸ್ ಸೇತುವೆ” ಎಂದು ಹೆಸರಿಸಲಾಯಿತು.
  • ಬ್ರಿಟೆನ್ ದೇಶದಲ್ಲಿ ‘ಒನ್-ಪ್ಲೇನ್ ಏರ್‌ಲೈನ್ಸ್’ಅನ್ನು, ಫಿರ್ನಾಸ್ ಏರ್‌ವೇಸ್‌ ಎಂದು ಅವರ ಶುಭನಾಮದಿಂದ ಹೆಸರಿಸಲಾಯಿತು.
  • ಕಿಂಗ್ ಅಬ್ದುಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಏರೋಸ್ಪೇಸ್ ಕಂಪನಿಗೆ ‘Firnas Aero’ ಎಂದು ಹೆಸರಿಡಲಾಗಿದೆ.

ಗ್ರಂಥಋಣ:

“Ibn Firnas (‘Abbâs)”. Ahmed Djebbar,
Dictionnaire culturel des science, Du Regard Editions, 2003,
ISBN 2-84105-128-5.

Abbas Ibn Firnas. Vernet, J.
Dictionary of Scientific Biography (C.C. Gilespie, ed.) Vol. I, New York: Charles Scribner’s Sons, 1970–1980. pg. 5.

LEAVE A REPLY

Please enter your comment!
Please enter your name here