– ಶಾರೂಕ್ ತೀರ್ಥಹಳ್ಳಿ

ಸಂವಿಧಾನದ ಪೀಠಿಕೆಯಲ್ಲಿ ತಿಳಿಸಿರುವಂತೆ ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ ನಂಬಿಕೆ, ಶ್ರದ್ಧೆ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ದೊರೆಯುವಂತೆ ಮಾಡುವುದಕ್ಕಾಗಿ ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢಸಂಕಲ್ಪ ಮಾಡಿ. ಸಂವಿಧಾನವನ್ನು ರಚಿಸಲಾಗಿದೆ ಎಂದು ಸಂವಿಧಾನದ ಪೀಠಿಕೆಯಲ್ಲಿಯೇ ತಿಳಿಸಿದ್ದು ಈ ಪೀಠಿಕೆಯನ್ನು ಜನವರಿ 26ರ ಗಣರಾಜ್ಯೋತ್ಸವದಂದು ಮತ್ತೊಮ್ಮೆ ನೆನಪಿಸಿಕೊಂಡೆವು. ಭಾರತ ದೇಶ ಗಣರಾಜ್ಯಗೊಂಡು 71 ವರ್ಷಗಳೇ ಕಳೆದು ಹೋದರು. ಇಂದಿಗೂ ಸಂವಿಧಾನದ ಮೂಲ ಆಶಯದಡಿಯಲ್ಲಿ ಬದುಕಲು ಸಾಧ್ಯವಾಗದೀರುವುದು ದುರಾದೃಷ್ಟಕರ ವಿಚಾರ ಎಂದೇ ಹೇಳಬಹುದು.

ಭಾರತ ದೇಶದಲ್ಲಿ ವಿವಿಧ ಜಾತಿ, ಧರ್ಮ, ಜನಾಂಗ, ಭಾಷೆ, ಆಚಾರ ವಿಚಾರ, ಸಂಸ್ಕೃತಿ ಇತ್ಯಾದಿಗಳ ವೈವಿದ್ಯಗಳು ಇದ್ದುರೂ, ಇಂದಿಗೂ ಕೂಡ ಭಾರತ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿಕೊಂಡು ಬಂದಂತಹ ಜಗತ್ತಿನ ಏಕೈಕ ದೇಶ, ಜಾತ್ಯಾತೀತ ತತ್ವಗಳ ಅಡಿಯಲ್ಲಿ ರೂಪಿತವಾದ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂಬ ಭಾವನೆ ನಮ್ಮೆಲ್ಲರಲ್ಲಿ ಅಡಕವಾಗಿದೆ. ಆದರೂ ಕೆಲವೊಂದು ಕೋಮುವಾದಿ ಶಕ್ತಿಗಳು ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತಿ ಜಾತ್ಯಾತೀತ ತತ್ವವನ್ನು ಒಡೆದುಹಾಕಲು ಪ್ರಯತ್ನಿಸುತ್ತಿರುವುದು ಇಂದಿನ ದುರಂತವಾಗಿದೆ. 

ಮಸೀದಿಯ ಅಂಗಳದಲ್ಲಿ ನಡೆದ ಹಿಂದೂ ಸಹೋದರಿಯ ಮದುವೆ

ದೇಶದ ಜಾತ್ಯತೀತ ಸ್ವರೂಪವು ಶಿಥಿಲಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಕೇರಳದಲ್ಲಿ ಜನವರಿ 19ರಂದು ಚೇರವಲ್ಲಿ ಮುಸ್ಲಿಮ್ ಜಮಾಅತ್ ನ ಸದಸ್ಯರು ತಮ್ಮ ಮಸೀದಿಯ ಆವರಣದಲ್ಲಿ ಹಿಂದೂ ಯುವತಿಯ ಮದುವೆಯನ್ನು ನಡೆಸಿರುವ ವಿಷಯ ಹೆಚ್ಚಿನ ಜನರಿಗೆ ತಿಳಿದಿರಲಿಕ್ಕಿಲ್ಲ, ಏಕೆಂದರೆ ಎಲ್ಲರೂ ಪೌರತ್ವ ಕಾಯ್ದೆಯ ತಿದ್ದುಪಡಿಯ ಪರ ಮತ್ತು ವಿರೋಧದ ವಿಷಯದಲ್ಲೆ ತುಂಬಾ ಬ್ಯುಸಿಯಾಗಿದ್ದರಿಂದ ಪತ್ರಿಕೆಗಳಿಗೆ ಮತ್ತು ದೃಶ್ಯ ಮಾದ್ಯಮಗಳಿಗೆ ಈ ವಿಷಯ ತಿಳಿಸಲು ಪುರುಸೊತ್ತು ಸಹ ಇರಲಿಲ್ಲ .ಕಾಯಂಕುಳಂ ನಿವಾಸಿ, ದಿ.ಅಶೋಕನ್ ಎನ್ನುವವರ ಪತ್ನಿ ಬಿಂದು ತನ್ನ ಪುತ್ರಿಯ ಮದುವೆಗೆ ನೆರವು ಕೋರಿ ಮಸೀದಿಯೊಂದಕ್ಕೆ ಮನವಿಯನ್ನು ಸಲ್ಲಿಸಿದ್ದರು. ಈ ವಿಷಯವನ್ನು ಜಮಾಅತ್ ನ ಸದಸ್ಯರೊಂದಿಗೆ ಚರ್ಚಿಸಿದಾಗ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯಹಸ್ತ ಚಾಚಲು ಮಸೀದಿಯ ಆಡಳಿತ ಮಂಡಳಿಯ ಸದಸ್ಯರು ಒಮ್ಮನಸ್ಸಿನಿಂದ ಒಪ್ಪಿದ್ದರು. ಬಿಂದು ತನ್ನ ಮೂವರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರು, ಅವರ ಪತಿ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಬಿಂದು ಪುತ್ರಿ ಅಂಜುವಿನ ಮದುವೆಗಾಗಿ ಜಮಾಅತ್ ಸದಸ್ಯರು ಭರದ ಸಿದ್ಧತೆಯಲ್ಲಿ ತೊಡಗಿದ್ದಲ್ಲದೆ ಕಳೆದ ಜನವರಿ 19ರಂದು ಮಸೀದಿಯ ಆವರಣದಲ್ಲಿಯೇ, ಹಿಂದು ಸಂಪ್ರದಾಯದಂತೆ ವಿವಾಹ ಮಹೋತ್ಸವ ನಡೆಸುವುದರೊಂದಿಗೆ ಕಾಯಂಕುಳಂ ನಿವಾಸಿ ಶರತ್ ಶಶಿ ಅವರು ಸಪ್ತಪದಿಯನ್ನು ತುಳಿದರು. ವಿವಾಹದ ಎಲ್ಲ ವೆಚ್ಚವನ್ನೂ ಮಸೀದಿಯ ಆಡಳಿತ ಮಂಡಳಿಯವರೇ ಭರಿಸಿದಲ್ಲದೇ ಮದುಮಗಳಿಗೆ 10 ಪವನ್ ಚಿನ್ನ ಮತ್ತು ಎರಡು ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ನೀಡಿದರು.

ಇಂದೊಂದು ಘಟನೆಯಾದರೆ ಇಂತಹದೇ ಇನ್ನೊಂದು ಘಟನೆ ಜನವರಿ 23 ರಂದು ಕೋಲ್ಕತ್ತಾ ದಲ್ಲಿ ನಡೆಯಿತು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮುಸ್ಲಿಂ ಮಹಿಳೆ ಸಹಾನಾ ಖತುನ್ ಅವರಿಗೆ, ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಕಲ್ಯಾಣ್ ಕುಮಾರ್ ರಾಯ್ ಚೌಧರಿರವರ ಯಕೃತ್ತನ್ನು ದಾನ ಮಾಡುವ ಮೂಲಕ ಜೀವದಾನ ಮಾಡಿದ ಘಟನೆಯು ನಮ್ಮಿಂದ ಮರೆಯಾಗಿದೆ. ಇಂತಹ ಎಷ್ಟೋ ಘಟನೆಗಳು ದಿನನಿತ್ಯ ನಡೆಯುತ್ತಿರುತ್ತದೆ. ಕೆಲವೊಂದು ಘಟನೆಗಳು ನಮ್ಮ ಕಣ್ಣ ಮುಂದೆ ಬರುತ್ತವೆ ಹೆಚ್ಚಿನವುಗಳೆಲ್ಲ ಮರೆಯಾಗಿ ಹೋಗುತ್ತದೆ. ಕೋಮು ಶಕ್ತಿಗಳು ಎಷ್ಟೇ ಧರ್ಮಗಳ ಮದ್ಯೆ ದ್ವೇಷ, ಅಸೂಯೆ, ಅಪನಂಬಿಕೆ ತರಲು ಪ್ರಯತ್ನಿಸಿದರು. ಧರ್ಮಗಳ ನಡುವೆ ಪರಸ್ಪರ ಸೌಹಾರ್ದತೆಯನ್ನು ನಡೆಸೂವುದರ ಜೊತೆಗೆ ಧರ್ಮಗ್ರಂಥಗಳ ಸರಿಯಾದ ಅಧ್ಯಾಯನವನ್ನು ನಡೆಸಿ ಪರಸ್ಪರ ಅರಿತಿ ಸೌಹಾರ್ದತೆಯಿಂದ ಬದುಕಬೇಕಾಗಿದೆ. 

LEAVE A REPLY

Please enter your comment!
Please enter your name here