ನಿಹಾಲ್ ಮೊಹಮ್ಮದ್
ಕಾನೂನು ವಿದ್ಯಾರ್ಥಿ
(ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯ ಕೇಂದ್ರ, ಮಲಪ್ಪುರಂ)

ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂರವರ ಚಿತ್ರಣವಿಂದು ಬಹಳ ಕೆಟ್ಟದಾಗಿ ತಿರುಚಲ್ಪಡುತ್ತಿದೆ. ಅವರ ಚಾರಿತ್ರ್ಯಕ್ಕೆ ಮಸಿ ಬಳಿದು ನೆಹರೂ v/s ಪಟೇಲ್ ಎಂಬಂತಹ ಇಮೇಜ್ ಕ್ರಿಯೆಟ್ ಮಾಡುವ ಹುನ್ನಾರ ನಮ್ಮ ದೇಶದಲ್ಲಿಂದು ಪ್ರಚಲಿತವಾಗಿದೆ. ಈ ನಿಟ್ಟಿನಲ್ಲಿ ಅವರ ನೈಜ್ಯ ಚಿತ್ರಣವನ್ನು ಅವಲೋಕಿಸುವುದು ಅನಿವಾರ್ಯವಾಗಿದೆ.

ನವಂಬರ್ 14, 1889 ರಲ್ಲಿ ಮಕ್ಕಳ ಪ್ರೀತಿಯ ಚಾಚಾ ನೆಹರೂ ರವರ ಜನನವಾಗುತ್ತದೆ. ಅವರ ತಂದೆ ಮೋತಿಲಾಲ್ ನೆಹರು ಓರ್ವ ಸುಪ್ರಸಿದ್ಧ ವಕೀಲರಾಗಿದ್ದರು. ಒಂದು ಸುಸಂಸ್ಕೃತ ಶ್ರೀಮಂತ ಮನೆತನವಾಗಿತ್ತು ಅವರದು. ಅವರು ತನ್ನ ಮಗನಿಗೆ ಅತ್ಯುತ್ತಮ ಸಂಸ್ಥೆಗಳಲ್ಲಿ ಶಿಕ್ಷಣ ನೀಡುತ್ತಾರೆ. ನೆಹರೂರವರು ಪ್ರತಿಷ್ಠಿತ ಕ್ಯಾಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿಯನ್ನು ಪಡೆದು ಭಾರತಕ್ಕೆ ಹಿಂತಿರುಗುತ್ತಾರೆ. ನ್ಯಾಷನಲೀಸಮ್, ಸೋಶಿಯಲೀಸಮ್ ನಂತಹ ತತ್ವಗಳನ್ನು ಅವರು ಭಾರತಕ್ಕೆ ಪರಿಚಯಿಸುತ್ತಾರೆ. ಭಾರತದಲ್ಲಿ ಕಾನೂನು ಅಭ್ಯಸಿಸಿ ಅವರೋರ್ವ ಉತ್ತಮ ವಕೀಲರಾಗುತ್ತಾರೆ.
ಮಹಾತ್ಮ ಗಾಂಧೀಜಿಯವರಿಂದ ಬಹಳ ಪ್ರಭಾವಿತರಾದ ನೆಹರೂರವರು 1920ರಲ್ಲಿ ಅಸಹಕಾರ ಚಳವಳಿಗೆ ಸಾಥ್ ನೀಡುತ್ತಾರೆ. ಅಹಿಂಸಾ ಪ್ರತಿಭಟನೆಗಳಲ್ಲಿ ಗಾಂಧೀಜಿಯವರೊಂದಿಗೆ ತುಂಬಾ ಉತ್ಸಾಹದಿಂದ ಪಾಲ್ಗೊಂಂಡಿದ್ದರು. ತಂದೆ ಮೋತಿಲಾಲ್ ನೆಹರೂರೊಂದಿಗೆ ತನ್ನ ಜೀವನ ಶೈಲಿಯಾಗಿದ್ದ ಪಾಶ್ಚಾತ್ಯ ಸಂಸ್ಕೃತಿಯನ್ನು ತೊರೆದು ಖಾದಿಯನ್ನುಡಲು ಪ್ರಾರಂಭಿಸುತ್ತಾರೆ. ಅದು ಅವರಿಗೆ ಕಷ್ಟವೆನಿಸಿದರೂ ಅವರು ಗಾಂಧೀಜಿಯ ಖಾದಿ ಅಭಿಯಾನಕ್ಕೆ ಸಾಥ್ ನೀಡಲು ತಯಾರಾಗುತ್ತಾರೆ. ಅಸಹಕಾರ ಚಳವಳಿಯ ಸಮಯದಲ್ಲಿ ಮೊದಲ ಬಾರಿಗೆ ಅವರು ಜೈಲು ಸೇರುತ್ತಾರೆ. ಕೆಲವು ದಿನಗಳ ನಂತರ ಇತರ ಪ್ರಮುಖ ನಾಯಕರೊಂದಿಗೆ ಅವರನ್ನು ಬಿಡುಗಡೆಗೊಳಿಸಲಾಗುತ್ತದೆ. ನಂತರ 1929 ರಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾಗುತ್ತಾರೆ. ಆ ಸಮಯದಲ್ಲಿ ಇಡೀ ದೇಶದಲ್ಲಿ ಪೂರ್ಣ ಸ್ವರಾಜ್ ಘೋಷಣೆ ಮೊಳಗುತಿತ್ತು. ನೆಹರೂರವರು 1930ರ ಜನವರಿ 26 ರಂದು ರವಿ ನದಿಯ ದಡದಲ್ಲಿ ಪ್ರಪ್ರಥಮ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ. ಅ ದಿನವನ್ನು ಪೂರ್ಣ ಸ್ವರಾಜ್ ದಿನವೆಂದು ಕರೆಯಲಾಯಿತು. ಅನಂತರ ಆ ದಿನದ ನೆನಪಿಗಾಗಿ ಜನವರಿ 26 ರಂದು ದೇಶದೆಲ್ಲೆಡೆ ಗಣರಾಜ್ಯೋತ್ಸವವನ್ನು ನಾವೆಲ್ಲರೂ ಆಚರಿಸುತ್ತೇವೆ. 1948 ರಲ್ಲಿ ಗಾಂಧೀಜಿಯ ಜೊತೆ ಕ್ವಿಟ್ ಇಂಡಿಯಾ ಚಳವಳಿಗೆ ಅವರು ಕರೆಕೊಡುತ್ತಾರೆ. ಇತರ ಪ್ರಮುಖ ನಾಯಕರೊಂದಿಗೆ ನೆಹರೂರವರನ್ನು ಬಂಧಿಸಲಾಗುತ್ತದೆ.
1947 ರಲ್ಲಿ ಹಲವಾರು ನಾಯಕರ ತ್ಯಾಗಮಯ ಹೋರಾಟದಿಂದ ಭಾರತವು ಸ್ವತಂತ್ರವಾಗುತ್ತದೆ. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಪಂಡಿತ್ ನೆಹರೂರವರು ಆಯ್ಕೆಯಾಗುತ್ತಾರೆ.

ನೆಹರೂರವರು ಭಾರತಕ್ಕೆ ನೀಡಿದ ಕೊಡುಗೆ ಅನನ್ಯ. ಆಧುನಿಕ ಭಾರತದ ಪಿತಾಮಹ, ಶಿಲ್ಪಿ ಎಂದೂ ಅವರನ್ನು ಕರೆಯಲಾಗುತ್ತದೆ. ಹಲವು ಹೊರ ರಾಷ್ಟ್ರಗಳೊಂದಿಗೆ ಅವರು ಉತ್ತಮ ಸಂಬಂಧವನ್ನು ಬೆಳೆಸಿದ್ದರು. ಅದೇ ರೀತಿ ಐಐಟಿ , ವೈದ್ಯಕೀಯ ಕಾಲೇಜುಗಳಂತಹ ಭಾರತವಿಂದು ಹೆಮ್ಮೆ ಪಡುವಂತಹ ಅನೇಕ ಸ್ಥಾಪನೆಗಳನ್ನು ನಿರ್ಮಿಸಿದ ಕೀರ್ತಿ ನೆಹರೂರವರಿಗೆ ಸಲ್ಲುತ್ತದೆ.
ಭಾರತಕ್ಕೆ ಅವರು ನೀಡಿದ ಶ್ರೇಷ್ಠ ಕೊಡುಗೆ ಭಾರತಕ್ಕೆ ಅವರು ನೀಡಿದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ.

1937 ರಲ್ಲಿ ಪ್ರಮುಖ ಪತ್ರಿಕೆಯೊಂದರಲ್ಲಿ ಒಂದು ಲೇಖನವು ಮುದ್ರಿತಗೊಂಡಿತ್ತು. ಆ ಲೇಖನವು ನೆಹರೂರವರ ಮೇಲೆ ಒಂದು ಡೈರೆಕ್ಟ್ ಅಟ್ಯಾಕ್ ಆಗಿತ್ತು. “ನೆಹರೂರವರಿಗೆ ನೀವಿಷ್ಟು ಪ್ರಾಮುಖ್ಯತೆ ನೀಡಬೇಡಿ. ಭಾರತಕ್ಕೆ ಇನ್ನೊಂದು ಸೀಝರ್ ನ ಅಗತ್ಯವಿಲ್ಲ” ವೆಂಬಂತಹ ವಿಷಯವನ್ನೊಳಗೊಂಡ ಲೇಖನವಾಗಿತ್ತದು.
ಕೆಲವು ವರ್ಷಗಳ ನಂತರ ಆ ಲೇಖನವನ್ನು ಸ್ವತಃ ನೆಹರೂರವರು ತಾನಾಗಿಯೇ ಬರೆದಿದ್ದರೆಂದು ತಿಳಿಯುತ್ತದೆ. ಭಾರತವು ಪ್ರಜಾಪ್ರಭುತ್ವ ದೇಶ, ಇಲ್ಲಿ ದೇಶಕ್ಕೆ ಮತ್ತು ದೇಶದ ಸ್ಥಾಪನೆಗಳಿಗಾಗಿದೆ ಬೆಲೆ ಬದಲಾಗಿ ದೇಶದ ನಾಯಕರಿಗಲ್ಲವೆಂಬುದು ಜನರಿಗೆ ಮನವರಿಕೆಯಾಗಬೇಕೆಂಬುದಾಗಿತ್ತು ಅವರ ಇಂಗಿತ.

ಓರ್ವ ಅಮೇರಿಕನ್ ಜರ್ನಲಿಸ್ಟ್ ನೆಹರೂರೊಂದಿಗೆ ಈ ದೇಶಕ್ಕೆ ತಮ್ಮ ಲೆಗೆಸಿ ಏನೆಂದು ಪ್ರಶ್ನಿಸುತ್ತಾರೆ. ಆಗ ನೆಹರೂರವರು ಪ್ರಜಾಪ್ರಭುತ್ವ ದೇಶದಲ್ಲಿರುವ 330 ಮಿಲಿಯನ್ ಭಾರತೀಯರು 330 ಮಿಲಿಯನ್ ಜನರನ್ನು ಆಳಲು ಸಮರ್ಥರಾಗಿದ್ದಾರೆ. ಇದುವೇ ನಾನು ದೇಶಕ್ಕಾಗಿ ನೀಡಲು ಬಯಸಿದ ಶ್ರೇಷ್ಠ ಕೊಡುಗೆಯೆಂದು ಬಹಳ ಸರಳವಾಗಿ ಉತ್ತರಿಸುತ್ತಾರೆ.
ಇಂತಹ ಮಹಾನ್ ನಾಯಕರ ಚಾರಿತ್ರ್ಯವನ್ನು ತಿರುಚುವ ಪ್ರಯತ್ನವು ಬಹಳ ಖೇದಕರ ಸಂಗತಿಯಾಗಿದೆ.
ದ್ವೇಷ , ಅನೀತಿ, ಅನ್ಯಾಯವನ್ನು ದಮನಿಸಿ ನಾವೆಲ್ಲರೂ ಒಂದಾಗಿ ನೆಹರೂರವರು ಕಂಡ ಕನಸಿನ ಭಾರತವನ್ನು ಕಟ್ಟೋಣ. ಅವರ ಹುಟ್ಟುಹಬ್ಬದ ಪ್ರಯುಕ್ತ ಮಕ್ಕಳ ದಿನಾಚರಣೆಯಾಗಿ ದೇಶಾದ್ಯಂತ ಆಚರಿಸಲಾಗುತ್ತದೆ.

LEAVE A REPLY

Please enter your comment!
Please enter your name here