– ಶಾರೂಕ್ ತೀರ್ಥಹಳ್ಳಿ

ಜಗತ್ತಿನ ಅತಿ ಎತ್ತರದ ಗೋಡೆ ಭಾರತದ ನೆರ ರಾಷ್ಟ್ರವಾದ ಚೀನಾದಲ್ಲಿದೆ ಅದುವೇ ಗ್ರೇಟ್ ವಾಲ್ ಆಫ್ ಚೀನಾ. ಚೀನಾದಲ್ಲಿರುವ ಗ್ರೇಟ್ ವಾಲ್ ಗಿಂತಲೂ ಎತ್ತರದ ಗೋಡೆ ನಮ್ಮ ಭಾರತ ದೇಶದಲ್ಲಿದೆ ಅಂದರೆ ಯಾರೂ ಕೂಡ ನಂಬುವುದಿಲ್ಲ.  ಹೌದು, ಬ್ರೀಟಿಷರು ಈ ದೇಶ ಬಿಟ್ಟು ಹೋಗುವಾಗ ನಮಗೆ ಸ್ವಾತಂತ್ರ್ಯ ಕೊಡುವ ಜೊತೆಯಲ್ಲೆ ಈ ದೇಶದಲ್ಲಿ ಒಡೆದು ಆಳುವ ನೀತಿಯನ್ನು ಸ್ಥಾಪಿಸಿ ಹೋದರು. ಹಿಂದು ಮುಸ್ಲೀಮರ ನಡುವೆ ದೊಡ್ಡದಾದ ಗೋಡೆಯನ್ನು ಸಹ ಕಟ್ಟಿ ಹೋಗಿದ್ದಾರೆ. ಇದು ಮನಸ್ಸಿಗೆ ಕಟ್ಟಿದ ಗೋಡೆ ಹಾಗಾಗಿ ಯಾರಿಗೂ ಗೋಚರಿಸುವುದಿಲ್ಲ. ಮನುಷ್ಯ ಮನುಷ್ಯ ನಡೆವೆ ವಿಷ ಬಿಜವನ್ನು ಬಿತ್ತಿ ಹೋದರು. ಅದರ ಪರಿಣಾಮ ಸ್ವಾತಂತ್ರ ಸಿಕ್ಕಿ 72 ವರ್ಷ ಕಳೆದರೂ ಇಂದಿಗೂ ಸಹ ಅನುಭವಿಸುತ್ತಿದ್ದೇವೆ. ಬಡತನ, ನಿರೋದ್ಯೋಗ, ವಸತಿ ಸೌಲಭ‍್ಯ ಇನ್ನೀತರ ಹಲವು ಬಗೆಗ ಮಾನವನಿಗೆ ಬೇಕಾದ ಮೂಲ ಸೌಕರ್ಯದ ಕೊರತೆ ಇಂದಿಗೂ ಸಹ ಹೊಂದಿಸುವಲ್ಲಿ ವಿಫಲರಾಗಿದ್ದೇವೆ. ಸರ್ಕಾರಗಳು ಕೇವಲ ಅವರ ಅಭಿವೃದ್ದಿಯ ಕಡೆಗೆ ಗಮನ ಹರಿಸುತ್ತಿದೆಯೇ ಹೊರತು ಈ ದೇಶದಲ್ಲಿನ ಪ್ರಜೆಗಳ ಅಭಿವೃದ್ದಿಯ ಬಗ್ಗೆ ಮಾತನಾಡಲು ಸಮಯ ಸಿಗುತ್ತಲೇ ಇಲ್ಲ. ಭಾರತ ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿದೆ ಎಂದು ನಾವು ಹಲವು ಬಾರಿ ಹೇಳಿಕೊಂಡಿದ್ದೇವೆ, ಅಭಿವೃದ್ದಿ ಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಹೆಸರು ಕೂಡ ಬರಲಿ ಎಂಬುದು ಇಲ್ಲಿರುವ ಪ್ರತಿಯೊಬ್ಬ ನಾಗರೀಕನ ಬಯಕೆಯಾಗಿ. ಆದರೆ ನಮ್ಮ ದೇಶದಲ್ಲಿ ಅಭಿವೃದ್ದಿಗೆ ತನ್ನದೆ ಆದ ವ್ಯಾಖ್ಯಾನವನ್ನು ನೀಡುವಲ್ಲಿ ಇಲ್ಲಿನ ಆಡಳಿತ ನಡೆಸುವ ಸರ್ಕಾರಗಳು ತಮ್ಮನ್ನು ತೊಡಗಿಸಿಕೊಂಡಿದೆ.ತನ್ನ ಎಲ್ಲಾ ನಾಗರಿಕರಿಗೆ ಸುರಕ್ಷಿತವಾದ ಪರಿಸರದಲ್ಲಿ ಮುಕ್ತ ಮತ್ತು ಆರೋಗ್ಯಪೂರ್ಣ ಜೀವನವನ್ನು ಆನಂದಿಸಲು ಅನುವು ಮಾಡಿಕೊಡುವ ರಾಷ್ಟ್ರವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿದೆ ಎಂದು ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಕೋಫಿ ಹನ್ನಾನ್ ವ್ಯಾಖ್ಯಾನಿಸಿದ್ದಾರೆ.

ಅಭಿವೃದ್ದಿ ಎಂದಾಗ ನಮಗೆ ಗೋಚರವಾಗುವಂತಹದು ದೊಡ್ಡ ದೊಡ್ಡ ಕಟ್ಟಡಗಳು, ಉತ್ತಮವಾದ ಸಾರಿಗೆ ವ್ಯವಸ್ಥೆ, ಮಲ್ಟಿ ಸ್ಪಷಾಲಿಟಿ ಆಸ್ಪತ್ರೆ, ಇನ್ನೂ ಇತ್ಯಾದಿ ಆದರೆ ಈ ದೇಶದಲ್ಲಿನ ಕಟ್ಟ ಕಡೆಯ ವ್ಯಕ್ತಿಯು ಹಸಿವಿನಿಂದ ಬಳಲಬಾರದು ಆ ವ್ಯಕ್ತಿಯ ಅಭಿವೃದ್ದಿಯ ಬಗ್ಗೆ ಒಂದು ವೇಳೆ ನಮ್ಮ ಸರ್ಕಾರಗಳು ಗಮನ ಹರಿಸಿದರೆ ಖಂಡಿತ ಈ ದೇಶ ಅಭಿವೃದ್ದಿ ಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಬಹುದು. ನಮ್ಮ ದೇಶದ ಇತ್ತೀಚಿನ ಪರಿಸ್ಥಿತಿಯನ್ನು ಗಮನಿಸಿದರೆ, ಬಡತನ ಮೊದಲಿನಂತೆಯೇ ಮುಂದುವರೆದಿದೆ, ನಿರೋದ್ಯೋಗ ದೇಶಾದ್ಯಂತ ತಾಂಡವವಾಡುತ್ತಿದೆ. ಮದ್ಯಮ ವರ್ಗದ ಜನರಿಗಂತು ದಿನದೂಡೂವುದೇ ಕಷ್ಟಕರವಾಗಿದೆ. ಸರಿಯಾದ ಸಮಯಕ್ಕೆ ಮಳೆ ಬರೆದೆ ನೀರಿಕ್ಷಿಸಿದಷ್ಟು ಫಸಲು ಸಿಗದೆ ಸಾಲ ಮಾಡಿದ ರೈತರು  ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪಟ್ಟಿ ಮಾಡುತ್ತ ಹೋದರೆ ಇನ್ನೂ ಹೆಚ್ಚಿನ ಸಮಸ್ಯೆಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಇದರ ನಡೆವೆ ನಮ್ಮ ಸರ್ಕಾರಗಳು ವಿದೇಶದಿಂದ ಬರುವ ಅಧ್ಯಕ್ಷರಿಗೆ ಸ್ವಾಗತ ಮಾಡಲು ನೂರು ಕೋಟಿಗೂ ಹೆಚ್ಚು ಹಣವನ್ನು ಈ ದೇಶದಲ್ಲಿ ಖರ್ಚು ಮಾಡಲಾಗುತ್ತದೆ ಎಂದರೆ ಒಮ್ಮೆಲೆ ಆಶ್ಚರ್ಯಾವಾಗಬಹುದು.ನಮ್ಮ ದೇಶಕ್ಕೆ ಗಣ್ಯ ವ್ಯಕ್ತಿಗಳು ಭೇಟಿ ನೀಡುತ್ತಾರೆ ಎಂದು ಗೊತ್ತಾದ ಕೂಡಲೇ ನಗರದ ರಸ್ತೆಗಳನ್ನು ದುರಸ್ತಿಪಡಿಸುವುದು, ಹಳೆಯ ಕಟ್ಟಡಗಳಿಗೆ ಸುಣ್ಣ ಬಣ್ಣ ಹೊಡೆಸುವುದು ಸಾಮಾನ್ಯ, ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಫೆಬ್ರವರಿ 24ರಂದು ಗುಜರಾತ್ ಗೆ ಭೇಟಿ ನೀಡುವ ಹಿನ್ನಲೆಯಲ್ಲಿ ಅಹಮಬಾದ್ ನಗರ ಪಾಲಿಕೆ ಅರ್ಧ ಕಿ. ಮೀ ಉದ್ದದ ಗೋಡೆಯೊಂದನ್ನು ಕಟ್ಟುವ ಮೂಲಕ ಹೊಸ ಸಾಹಸ ಮಾಡಿದ್ದಾರೆ. ಈ ಗೋಡೆ ಕಟ್ಟುವುದಕ್ಕು ಒಂದು ಉದ್ದೇಶವಿದೆ ಅದೇನೆಂದರೆ ಅಹಮದಾಬಾದ್ ಗೆ ಬರಲಿರುವ ಟ್ರಂಪ್ ‘ಕೇಮ್ ಛೋ ಟ್ರಂಪ್” ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದಿರಾ ಸೇತುವೆವರೆಗೂ ರೋಡ್ ಶೋ ನಡೆಸುವಾಗ ಈ ಭಾಗದಲ್ಲಿ ದೇವ್ ಸರನ್ ಅಥವಾ ಸರನಿಯವಾಸ್ ಎಂಬ ಕೊಳಗೇರಿ ಪ್ರದೇಶವನ್ನು ಆದು ಹೋಗಬೇಕಾಗಿದೆ. ಸುಮಾರು 500 ಕಚ್ಚಾ ಮನೆಗಳಲ್ಲಿ 2500ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಈ ಬಡಜನರು, ಟ್ರಂಪ್ ಹಾಗೂ ಮೋದಿ ಅವರಿಗೆ ಕಾಣಬಾರದು ಎಂಬ ಕಾರಣಕ್ಕೆ, ಮೆರವಣಿಗೆ ಸಾಗಲಿರುವ ಅರ್ಧ ಕಿ.ಮಿ ಹಾದಿಯಲ್ಲಿ ಸುಮಾರು 7 ಅಡಿ ಎತ್ತರದ ತೆಡೆಗೋಡೆ ನಿರ್ಮಾಣ ಮಾಡಲಾಗಿದೆ. ಈ ತಡೆಗೋಡೆ ನಿರ್ಮಿಸಿದ ಬಳಿಕ, ರಸ್ತೆ ಎರಡೂ ಬದಿಗಳಲ್ಲಿ ತಾಳೆ ಮರ, ಲೈಟಿಂಗ್ ಸೇರಿಂದತೆ ಇನ್ನಿತರ ಶೃಂಗಾರ ನೆರವೇರಿಸಲಾಗುತ್ತಿದೆ. ಸುಮಾರು 16 ರಸ್ತೆಗಳ ಸಿಂಗಾರಕ್ಕಾಗಿ 50 ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ವರದಿಗಳು ಕೂಡ ಬಂದಿದೆ. ಕಳೆದ 2017ರಲ್ಲಿ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಭಿಕ್ಷಾಟನೆ ಮುಚ್ಚಿಡುವ ನಿಟ್ಟಿನಲ್ಲಿ ಹೈದರಾಬಾದ್ ನಲ್ಲಿ ಭಿಕ್ಷುಕರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು. 2010ರಲ್ಲೂ ಕೂಡ ದೆಹಲಿಯಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಡೆಯುವ ಸಂದರ್ಭದಲ್ಲೂ ಆಗಿನ ಮುಖ್ಯಮಂತ್ರಿಯಾಗಿದ್ದ ಶೀಲ ದೀಕ್ಷಿತ್ ದೆಹಲಿಯಲ್ಲಿನ ಭಿಕ್ಷುಕರನ್ನು ಉತ್ತರ ಪ್ರದೇಶಕ್ಕೆ ವರ್ಗಾಯಿಸಿದ್ದರು. ಒಟ್ಟಿನಲ್ಲಿ ಸರ್ಕಾರಗಳು ವಿದೇಶಿಯರ ಮುಂದೆ ನಮ್ಮ ಬಡತನ, ನಿರೋದ್ಯೋಗ ವನ್ನು ಮುಚ್ಚಿಹಾಕಿ ನಮ್ಮ ದೇಶ ಅಭಿವೃದ್ದಿ ಹೊಂದಿದೆ ಎಂದು ತೋರ್ಪಡಿಸಲು ತೊಡಗಿದ್ದಾರೆ. ಆದರೆ ಕೇವಲ ತೋರ್ಪಡಿಸುವಿಕೆಯಿಂದ ನಾವು ಏನನ್ನು ಸಹ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬಡವರನ್ನು ಅಳಿಸಿಹಾಕಿ ಬಡತನ ನಿರ್ಮೂಲನೆ ಮಾಡಲು ಸಾಧ್ಯವೇ? ಕೇವಲ ಬಣ್ಣ ಬಳಿದು ಮೇಲ್ನೋಟಕ್ಕೆ ಸುಂದರವಾಗಿ ಕಂಡರೆ ಸಾಲದು, ಒಳಗಿನಿಂದಲೂ ಸಹ ಸುಂದರವಾಗಿ ಇರಬೇಕು ಎಂಬುದು ಎಲ್ಲರೂ ತಿಳಿದಿರಬೇಕು. ಹಚ್ಚಿದ ಬಣ್ಣ ಅಳಿಸಬಹುದೇ ವಿನಃ ಅದು ಎಂದು ಶಾಶ್ವತವಲ್ಲ.

1 COMMENT

LEAVE A REPLY

Please enter your comment!
Please enter your name here