ಹಿಂದಿನ ಭಾಗಗಳಲ್ಲಿ ಪ್ರಸ್ತಾಪಿಸಿದಂತೆ, ಅಂಗಡಿಯ ಮುಂದೆ ನಿಂತ ತಾಯಿ ಆ ಐದು ರೂಪಾಯಿ ನಾಣ್ಯವನ್ನು ಬಣ್ಣದ ಪ್ಯಾಕೆಟ್‌ಗಾಗಿ ವಿನಿಮಯ ಮಾಡಿಕೊಂಡಳು ಎಂದಿಟ್ಟುಕೊಳ್ಳೋಣ. ಅದೇ ರೀತಿ, ಸೂಪರ್‌ಮಾರ್ಕೆಟ್‌ನಲ್ಲಿ ಮಗು ಹಠ ಹಿಡಿದು ಕೇಳಿದ ಕುರುಕುಲು ತಿಂಡಿಯನ್ನು ಪೋಷಕರು ಖರೀದಿಸಿದರು ಎಂದು ಭಾವಿಸೋಣ. ಆ ಕ್ಷಣದ ಸಂತೋಷ, ಮಗುವಿನ ಮುಖದಲ್ಲಿನ ಮಂದಹಾಸ ಇವುಗಳಾಚೆ ಒಂದು ದೀರ್ಘಕಾಲೀನ ಪರಿಣಾಮಗಳ ಸರಮಾಲೆ ಪ್ರಾರಂಭವಾಗುತ್ತದೆ. ಆ ಪ್ಯಾಕೆಟ್‌ನೊಳಗಿನ ಸಂಸ್ಕರಿತ ಆಹಾರ, ಮಗುವಿನ ಎಳೆಯ ದೇಹ ಮತ್ತು ಮೆದುಳಿನ ಮೇಲೆ ಬೀರುವ ಪರಿಣಾಮಗಳೇನು? ಈ ಪ್ರಶ್ನೆಗೆ ಉತ್ತರ ಹುಡುಕಲು, ವೈದ್ಯಕೀಯ ಸಂಶೋಧನೆಗಳನ್ನು ಅತ್ಯಂತ ಸಮತೋಲಿತ ದೃಷ್ಟಿಕೋನದಿಂದ ವಿಶ್ಲೇಷಿಸಬೇಕಾಗಿದೆ.
‘ಆಹಾರ ವ್ಯಸನ’ (Food Addiction) ಕುರಿತ ಚರ್ಚೆ ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳ ನಡುವೆ ಮುಂದುವರಿಯುತ್ತಲೇ ಇದೆ. ಕೆಲವು ಅಧ್ಯಯನಗಳು – ಮುಖ್ಯವಾಗಿ ಪ್ರಾಣಿಗಳ ಮೇಲಿನ ಪ್ರಯೋಗಗಳು ಅತಿ-ಸಂಸ್ಕರಿತ ಆಹಾರಗಳು (Ultra-Processed Foods) ಮೆದುಳಿನ ಆನಂದ ಕೇಂದ್ರವನ್ನು (Reward Center)ಸಕ್ರಿಯಗೊಳಿಸಬಲ್ಲವು ಎಂದು ಸೂಚಿಸಿವೆ. ಉದಾಹರಣೆಗೆ, 2013ರಲ್ಲಿ ಅಮೆರಿಕದ ಕನೆಕ್ಟಿಕಟ್ ಕಾಲೇಜಿನಲ್ಲಿ ನಡೆಸಿದ ಒಂದು ಪ್ರಯೋಗದಲ್ಲಿ ಇಲಿಗಳಿಗೆ ಒರಿಯೊ ಬಿಸ್ಕತ್ತು ಕೊಟ್ಟಾಗ ಅವುಗಳ ಮೆದುಳಿನ ಆನಂದ ಕೇಂದ್ರವು ತೀವ್ರವಾಗಿ ಸಕ್ರಿಯಗೊಂಡಿತು. ಆದರೆ, ಇದನ್ನು ಮಾದಕ ವ್ಯಸನಕ್ಕೆ ಹೋಲಿಸುವುದು ವೈಜ್ಞಾನಿಕವಾಗಿ ಸಮರ್ಥನೀಯವಲ್ಲ ಎಂದು ಹೆಚ್ಚಿನ ತಜ್ಞರು ಒತ್ತಿಹೇಳುತ್ತಾರೆ. ಮನುಷ್ಯರಲ್ಲಿ ‘ಆಹಾರ ವ್ಯಸನ’ ಒಂದು ವೈದ್ಯಕೀಯ ಸ್ಥಿತಿಯೇ ಎಂಬುದು ಇನ್ನೂ ಅಧಿಕೃತವಾಗಿ ಸಾಬೀತಾಗಿಲ್ಲ. ಆದರೂ, ಅತಿಯಾದ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಸೇವನೆಯಿಂದ ಮಕ್ಕಳಲ್ಲಿ ಕೆಲವು ವರ್ತನೆಯ ಬದಲಾವಣೆಗಳು ತಿನ್ನಲೇಬೇಕೆಂಬ ಹಠ, ಸಿಗದಿದ್ದಾಗ ಅತಿಯಾದ ಪ್ರತಿಭಟನೆ – ಕಾಣಬರುತ್ತವೆ ಎಂಬುದನ್ನು ವೈದ್ಯಕೀಯ ವೃತ್ತಿಪರರು ನಿತ್ಯ ಗಮನಿಸುತ್ತಿದ್ದಾರೆ.
ಭಾರತೀಯ ವೈದ್ಯಕೀಯ ವಲಯದಲ್ಲಿ, ನಗರ ಪ್ರದೇಶದ ಮಕ್ಕಳಲ್ಲಿ ‘ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್ಕಾಯಿಲೆ’ (NAFLD) ಮತ್ತು ‘ಇನ್ಸುಲಿನ್ ಪ್ರತಿರೋಧದ’ (Insulin Resistance) ಪ್ರಕರಣಗಳು ಗಣನೀ ಯವಾಗಿಏರಿಕೆಯಾಗುತ್ತಿರುವ ಕುರಿತು ಕ್ಲಿನಿಕಲ್ ಅಧ್ಯಯನಗಳು ಗಂಭೀ ರ ಎಚ್ಚರಿಕೆ ನೀ ಡಿವೆ. ‘ಜರ್ನಲ್ ಆಫ್ ಕ್ಲಿನಿಕಲ್ಅಂಡ್ ಎಕ್ಸಪೆರಿಮೆಂಟಲ್ ಹೆಪಟಾಲಜಿ’ಯಲ್ಲಿ ಪ್ರಕಟವಾದ ಮೆಟಾ-ವಿಶ್ಲೇಷಣೆಯ ಪ್ರಕಾರ, ಭಾರತದ ಮಕ್ಕಳಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಗಮನಾರ್ಹವಾಗಿ ಏರಿಕೆ ಕಂಡಿದೆ.
ಇದಕ್ಕೆ ಪುಷ್ಟಿ ನೀಡುವಂತೆ, ಯುನಿಸೆಫ್ನ (UNICEF) 2025ರ ‘ಫೀ ಡಿಂಗ್ ಪ್ರಾಫಿಟ್’ ವರದಿಯು ಬೆಚ್ಚಿಬೀ ಳಿಸುವಸತ್ಯವೊಂದನ್ನು ತೆರೆದಿಟ್ಟಿದೆ: ಜಾಗತಿಕ ಇತಿಹಾಸದಲ್ಲೇ ಮೊದಲ ಬಾರಿಗೆ, ಮಕ್ಕಳಲ್ಲಿ ತೂಕದ ಕೊರತೆಗಿಂತ(Underweight) ಬೊಜ್ಜಿನ (Obesity) ಸಮಸ್ಯೆಯೇ ವಿಪರೀತವಾಗಿ ಕಾಡಲಾರಂಭಿಸಿದೆ. 2020ರಲ್ಲಿ ವಿಶ್ವದಾದ್ಯಂತ 3.3 ಕೋಟಿ ಮಕ್ಕಳು ಮಿತಿಮೀರಿದ ತೂಕದಿಂದ ಬಳಲುತ್ತಿದ್ದರೆ, 2035ರ ವೇಳೆಗೆ ಈ ಸಂಖ್ಯೆ 8.3 ಕೋಟಿಗೆ ಏರಲಿದೆಎಂದು ಅಂದಾಜಿಸಲಾಗಿದೆ. ಭಾರತದಲ್ಲೂ ಈ ಪ್ರವೃತ್ತಿಢಾಳಾಗಿ ಗೋಚರಿಸುತ್ತಿದೆ.
ಅಲ್ಪಾವಧಿಯ ಪರಿಣಾಮಗಳು: ದೈನಂದಿನ ಆರೋಗ್ಯದ ಮೇಲಾಗುವ ಹಾನಿ
ಅಲ್ಪಾವಧಿಯಲ್ಲಿ ಅತಿ-ಸಂಸ್ಕರಿತ ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ಕೆಲವು ಸಾಮಾನ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ:
ದಂತಕ್ಷಯ: ಸಕ್ಕರೆಯಂಶವು ಹಲ್ಲುಗಳ ಮೇಲೆ ಆಮ್ಲವನ್ನು ಉತ್ಪತ್ತಿ ಮಾಡಿ, ಹಲ್ಲುಗಳು ಕೊಳೆಯುವಂತೆ ಮಾಡುತ್ತದೆ. ಭಾರತದಲ್ಲಿ ಶೇ. 60-70ರಷ್ಟು ಮಕ್ಕಳು ದಂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ICMR ಅಧ್ಯಯನಗಳು ಸೂಚಿಸಿವೆ.
ಚೈತನ್ಯದ ಏರುಪೇರು: ಜಂಕ್ ಫುಡ್ ತಿಂದ ತಕ್ಷಣ ರಕ್ತದಲ್ಲಿ ಸಕ್ಕರೆಯ ಮಟ್ಟ ತ್ವರಿತವಾಗಿ ಏರುತ್ತದೆ ಮತ್ತು ಅಷ್ಟೇ ವೇಗವಾಗಿ ಕುಸಿಯುತ್ತದೆ. ಇದರಿಂದ ಮಕ್ಕಳಲ್ಲಿ ವಿಪರೀತ ಚಟುವಟಿಕೆ (Hyperactivity). ಆಯಾಸ ಮತ್ತು ಏಕಾಗ್ರತೆಯ ಕೊರತೆ ಉಂಟಾಗಬಹುದು.
ಜೀರ್ಣದೋಷ ಮತ್ತು ಉದರಬಾಧೆ: ಈ ಆಹಾರಗಳಲ್ಲಿ ನಾರಿನಂಶ (Fiber) ಅತಿ ಕಡಿಮೆ ಇರುವುದರಿಂದ ಮಲಬದ್ಧತೆ (Constipation) ಸಾಮಾನ್ಯವಾಗುತ್ತಿವೆ.
ದೀರ್ಘಾವಧಿಯ ಗಂಭೀರ ಅಪಾಯಗಳು: ನಿರಂತರವಾಗಿ ಅತಿ-ಸಂಸ್ಕರಿತ ಆಹಾರಗಳನ್ನು ಸೇವಿಸುವುದರಿಂದದೀರ್ಘಾವಧಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಉದ್ಭವಿಸುವ ಅಪಾಯವಿದೆ:
ಸ್ಕೂಲಕಾಯ (Obesity): ಈ ಆಹಾರಗಳು ಕ್ಯಾಲರಿಗಳಿಂದ ತುಂಬಿದ್ದು ಪೌಷ್ಟಿಕಾಂಶಗಳ ಕೊರತೆ ಹೊಂದಿರುತ್ತವೆ. ಇದರಿಂದ ಮಕ್ಕಳು ಅತಿಯಾಗಿ ತಿನ್ನುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಾರೆ.
ಟೈಪ್-2 ಮಧುಮೇಹ (Type-2 Diabetes): ಕೃತಕ ಸಕ್ಕರೆ ಮತ್ತು ಸಂಸ್ಕರಿತ ಕಾರ್ಬೋಹೈಡ್ರೆಟ್‌ಗಳಿಂದಾಗಿ ಎಳೆಯ ದೇಹದಲ್ಲೇ ‘ಇನ್ಸುಲಿನ್ ಪ್ರತಿರೋಧ’ ಹುಟ್ಟಿಕೊಳ್ಳಬಹುದು.
ಹೃದಯ ಸಂಬಂಧಿ ಸಮಸ್ಯೆಗಳು: ಚಿಪ್ಸ್ ನೂಡಲ್ಸ್‌ನಂತಹ ತಿನಿಸುಗಳಲ್ಲಿರುವ ಅತಿಯಾದ ಉಪ್ಪು(ಸೋಡಿಯಂ) ಮತ್ತು ಪಾಮ್ ಎಣ್ಣೆಯಂತಹ ಅನಾರೋಗ್ಯಕರ ಕೊಬ್ಬು ಎಳೆಯ ವಯಸ್ಸಿನಲ್ಲೇ ರಕ್ತದೊತ್ತಡವನ್ನು ಹೆಚ್ಚಿಸುವ ಸಾಧ್ಯತೆಗಳಿವೆ.
ಫ್ಯಾಟಿ ಲಿವರ್ ರೋಗ (Fatty Liver): ದೇಹ ಸೇರುವ ಅತಿಯಾದ ಕೃತಕ ಸಕ್ಕರೆಯು ಯಕೃತ್ತಿನಲ್ಲಿ (Liver) ಕೊಬ್ಬಾಗಿ ಶೇಖರವಾಗುತ್ತದೆ.

ಮಾನಸಿಕ ಆರೋ ಗ್ಯದ ಮೇ ಲಿನ ಪ್ರಭಾವ:
ಕೆಲವು ಅಧ್ಯಯನಗಳು ಅತಿ-ಸಂಸ್ಕರಿತ ಆಹಾರಗಳ ಸೇ ವನೆ ಮತ್ತು ಮಕ್ಕಳ ಮಾನಸಿಕ ಆರೋ ಗ್ಯದ ನಡುವಿನ ಸಂಬಂಧವನ್ನೂ ಪರಿಶೀ ಲಿಸಿವೆ. ಪ್ರತಿಷ್ಠಿತ ‘BMJ’ ಜರ್ನಲ್ನ 2023ರ ವಿಮರ್ಶೆ ಯ (Review) ಪ್ರಕಾರ, ಅತಿ-ಸಂಸ್ಕರಿತ ಆಹಾರಗಳ ಹೆಚ್ಚಿನ ಸೇವನೆ ಮತ್ತು ಖಿನ್ನತೆಯ (Depression) ಲಕ್ಷಣಗಳ ನಡುವೆ ಕೆಲವು ಅಧ್ಯಯನಗಳು ಸಂಬಂಧವನ್ನು ಗುರುತಿಸಿವೆ. ಆದರೆ, ಇದು ನೇ ರ ‘ಕಾರಣ-ಪರಿಣಾಮ’ದ ಸಂಬಂಧವೇ ಅಥವಾ ಇತರ ಅಂಶಗಳು ಇದರ ಮೇ ಲೆ ಪ್ರಭಾವ ಬೀ ರುತ್ತವೆಯೇ ಎಂಬುದರ ಕುರಿತು ಹೆಚ್ಚಿನ ಸಂಶೋ ಧನೆಯ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಈ ಎಲ್ಲಾ ವೈ ದ್ಯಕೀ ಯ ಅಧ್ಯಯನಗಳು ಮತ್ತು ಅಂಕಿ-ಅಂಶಗಳು ನಮಗೆ ನೀ ಡುತ್ತಿರುವ ಮುನ್ಸೂಚನೆ ಒಂದೇ ಅತಿ-ಸಂಸ್ಕರಿತ ಆಹಾರಗಳು ಮಕ್ಕಳ ಎಳೆಯ ದೇ ಹದಲ್ಲಿ ಸದ್ದಿಲ್ಲದೆ ದೊಡ್ಡ ಮಟ್ಟದ ಅಲ್ಲೋಲ-ಕಲ್ಲೋಲ ಸೃಷ್ಟಿಸುತ್ತಿವೆ. ದೈಹಿಕ ಸಮಸ್ಯೆಗಳಿರಲಿ ಅಥವಾ ಮಾನಸಿಕ ಏರುಪೇ ರುಗಳಿರಲಿ, ಭವಿಷ್ಯದ ಆರೋ ಗ್ಯದ ಅಡಿಪಾಯ ಈ ಕೃತಕ ರುಚಿಯ ಸುಳಿಯಲ್ಲಿ ಸಿಲುಕಿ ನಲುಗುತ್ತಿದೆ.
ಹಾಗಾದರೆ, ಈ ಅಪಾಯದಿಂದ ನಮ್ಮಮಕ್ಕಳನ್ನು ಪಾರು ಮಾಡುವುದು ಹೇಗೆ? ಆಕರ್ಷ ಕ ಜಾಹೀ ರಾತುಗಳೆದುರು ಪೋಷಕರು ಅಸಹಾಯಕರಾಗಬೇಕೇ? ಈ ನಿಟ್ಟಿನಲ್ಲಿ ಸರ್ಕಾರ, ಶಾಲೆಗಳು ಮತ್ತು ಕುಟುಂಬಗಳ ಪಾತ್ರವೇನು?
(ಸರಣಿಯ ಅಂತಿಮ ಭಾಗದಲ್ಲಿ: ನೀತಿ, ಶಾಲೆಗಳು ಮತ್ತು ಕುಟುಂಬಗಳು — ಮುಂದಿನ ಹೆಜ್ಜೆಗಳ ಕುರಿತಾದ ಸಮಗ್ರ ಚರ್ಚೆ)
ಉಲ್ಲೇಖಗಳು:
● ರಾಷ್ಟ್ರೀಯ ಕುಟುಂಬ ಆರೋ ಗ್ಯ ಸಮೀ ಕ್ಷೆ-5 (NFHS-5), 2019–21, pp. 204-207.
● ICMR-ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ಆಹಾರ ಮಾರ್ಗ ಸೂಚಿಗಳು 2024.
● ವಿಶ್ವ ಆರೋ ಗ್ಯ ಸಂಸ್ಥೆ (WHO) ಜಾಗತಿಕ ಅಸಾಂಕ್ರಾಮಿಕ ರೋ ಗಗಳ ವರದಿ, 2023-24.
● ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್: ಅತಿ-ಸಂಸ್ಕರಿತ ಆಹಾರಗಳ ಸರಣಿ, 2025.
● BMJ Global Health: ಅತಿ-ಸಂಸ್ಕರಿತ ಆಹಾರಗಳ ಕುರಿತಾದ ಮೆಟಾ-ವಿಶ್ಲೇಷಣೆ, 2023.
● BMJ review on mental health and diet, 2023.
● UNICEF ಮಕ್ಕಳ ಪೌಷ್ಟಿಕಾಂಶ ವರದಿ (“ಫೀ ಡಿಂಗ್ ಪ್ರಾಫಿಟ್”), 2025.
● ಜರ್ನ ಲ್ ಆಫ್ ಕ್ಲಿನಿಕಲ್ ಅಂಡ್ ಎಕ್ಸ್ಪೆರಿಮೆಂಟಲ್ ಹೆಪಟಾಲಜಿ ಮೆಟಾ-ವಿಶ್ಲೇಷಣೆ, 2022-23.
● ICMR ದಂತ ಆರೋ ಗ್ಯ ಕುರಿತ ಅಧ್ಯಯನಗಳು.
● ಕನೆಕ್ಟಿಕಟ್ ಕಾಲೇ ಜ್ ಅಧ್ಯಯನ, 2013 (ಪ್ರಾಣಿಗಳ ಮೇ ಲಿನ ಪ್ರಯೋ ಗ).






















































