ಕೊರೋನಕ್ಕಿಂತ ಭೀಕರವಾಗಿ ಕಾಡುತ್ತಿದೆ ಮಲೆನಾಡಿನಲ್ಲಿ ಮಹಾಮಾರಿ,”ಮಂಗನ ಕಾಯಿಲೆ”

ಶಾರೂಕ್ ತೀರ್ಥಹಳ್ಳಿ

ವಿಶ್ವದ ಎಲ್ಲಾ ಕಡೆ ಕೊರೋನ ವೈರಸ್ ಹರಡುತ್ತಿದ್ದೆ. ಈಗಾಗಲೇ ಈ ಕೊರೋನ ವೈರಸ್ ನಿಂದ ಸಾವಿರಾರು ಮಂದಿ ಸಾವನ್ನಪ್ಪಿದ್ದು ಲಕ್ಷಾಂತರ ಮಂದಿ ಕೊರೋನ ಸೊಂಕಿನಿಂದ ಬಳಲುತ್ತಿದ್ದಾರೆ, ದೇಶಾದ್ಯಾಂತ ಮುನ್ನಚ್ಚರಿಕೆ ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ, ರಾಜ್ಯದಲ್ಲು ಕೊರೋನ ವೈರಸ್ ಎಂಬ ಮಹಾಮಾರಿಯನ್ನು ತಡೆಯಲು ರಾಜ್ಯ ಸರ್ಕಾರ ಎಲ್ಲ ಸಭೆ ಸಮಾರಂಭ, ಮದುವೆ , ಶಾಲಾ ಕಾಲೇಜು, ಸಿನಿಮಾ, ಮಾಲ್ ಹಾಗೂ ಇನ್ನಿತರ ಎಲ್ಲವನ್ನೂ ಸುರಕ್ಷತೆ ದೃಷ್ಟಿಯಿಂದ ಬಂದ್ ಮಾಡಿ ಆದೇಶ ಹೊರಡಿಸಿದೆ. ಅದರ ಜೊತೆಗೆ ಹಲವು ಜಿಲ್ಲೆಗಳಲ್ಲಿ 144 (3) ಸೆಕ್ಷನ್ ಗಳನ್ನು ಸಹ ಜಾರಿ ಮಾಡಲಾಗಿದೆ, ಮಸೀದಿ ಮಂದಿರ ಮತ್ತು ಚರ್ಚ್ ಇನ್ನೀತರ ಧಾರ್ಮಿಕ ಕೇಂದ್ರಗಳಲ್ಲಿ ಗುಂಪು ಗುಂಪಾಗಿ ಸಾರ್ವಜನಿಕರು ಪ್ರವೇಶಿಸಬಾರದೆಂದು ಸೂಚಿಸಲಾಗಿದೆ. ರಾಜ್ಯದ ಮಲೆನಾಡಿನ ಭಾಗಗಳಲ್ಲಿ ಕೊರೋನಾ ವೈರಸ್ ಜೊತೆ ಜೊತೆಗೆ ಮಂಗನ ಕಾಯಿಲೆ ಎಂಬ ಭೀಕರ ವೈರಸ್ ಮತ್ತೊಮ್ಮೆ ಕಾಣಿಸಿಕೊಂಡಿದೆ. ಈ ಎರಡು ಸೋಂಕುಗಳ ವಿರುದ್ದ ರಾಜ್ಯ ಸರ್ಕಾರ ಏಕ ಕಾಲಕ್ಕೆ ನಿಯಂತ್ರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಸರ್ಕಾರ ಈ ಮಂಗನ ಕಾಯಿಲೆ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಮಲೆನಾಡಿನ ಜನರಿಗೆ ಬೇಸರ ಉಂಟು ಮಾಡುತ್ತಿದೆ. ಮಂಗನ ಕಾಯಿಲೆ ಪೀಡಿತರಿಗೆ ಹಿಂದಿನ ಸರ್ಕಾರದಲ್ಲಿ ನೀಡಿದ್ದ ರೀತಿಯ ಸಹಾಯ ಈಗಿನ ಸರ್ಕಾರ ರದ್ದು ಮಾಡಿತ್ತು, ಮಣಿಪಾಲ್ ಆಸ್ಪತ್ರೆಗೆ ಸರ್ಕಾರದ ವೆಂಟಿಲೇಟರ್ ಅಳವಡಿಸಿದ ಆಂಬುಲೆನ್ಸ್ ಸೇವೆ ಮತ್ತು ಮಣಿಪಾಲ್ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆ ಪೀಡಿತರ ಚಿಕಿತ್ಸಾ ವೆಚ್ಚಾ ಸರ್ಕಾರ ಪಾವತಿ ಮಾಡುವುದು. ಜಿಲ್ಲೆಯ ಶಾಸಕರಾದ ಹರತಾಳು ಹಾಲಪ್ಪ ರಾಜ್ಯದ ಆರೋಗ್ಯ ಸಚಿವರನ್ನ ತರಾಟೆಗೆ ತೆಗೆದುಕೊಂಡ ನಂತರ ಸರ್ಕಾರದ ಆರೋಗ್ಯ ಇಲಾಖೆ ಈ ಆದೇಶ ಬಿಡುಗಡೆ ಮಾಡಿದೆ. ಈ ಆದೇಶದ ಪ್ರಕಾರ ಹಿಂದಿನ ಸರ್ಕಾರದ ರೀತಿಯಲ್ಲೇ ಅಂಬೂಲೆನ್ಸ್ ಸಾಗರ ತಾಲ್ಲೂಕಿನ ಅರಲಗೋಡಿನಲ್ಲಿ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನಲ್ಲಿ ತಕ್ಷಣ ಮಂಗನ ಕಾಯಿಲೆ ಪೀಡಿತರನ್ನ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮತ್ತು ಮಣಿಪಾಲ ಆಸ್ಪತ್ರೆಯಲ್ಲಿ ನೀಡುವ ಚಿಕಿತ್ಸೆ ಬಿಲ್ ಸರ್ಕಾರ ಪಾವತಿ ಮಾಡುವುದಾಗಿ ಈಗಾಗಲೇ ಆದೇಶ ಹೊರಡಿಸಿದೆ. ಮಂಗನ ಕಾಯಿಲೆ ನಿಯಂತ್ರಿಸುವುದು ಆಡಳಿತ ವ್ಯವಸ್ಥೆಯ ಆಧ್ಯತೆಯಾಗಿದೆ. ಆದರೆ ಸರ್ಕಾರ ಮಾತ್ರ ಮಾರಕ ಮಂಗನ ಕಾಯಿಲೆಗೆ ಸರಿಯಾದ ಜೌಷಧಿ, ಲಸಿಕೆಯನ್ನು ಸಿದ್ದಪಡಿಸಿಲ್ಲ. ಸುಮಾರು ಅರವತ್ತು ವರ್ಷಗಳಿಂದಲೂ ಇರುವ ಈ ಮಂಗನ ಕಾಯಿಲೆಗೆ ವ್ಯಾಕ್ಸಿನ್ ಬಿಟ್ಟರೆ ನಿರ್ಧಿಷ್ಟ ಜೌಷಧವನ್ನು ಇಲ್ಲಿಯವರೆಗೆ ಕಂಡುಹಿಡಿಯಲಾಗಿಲ್ಲ ಎಂದು ದೂರುಗಳು ಕೇಳಿ ಬರುತ್ತಲಿದೆ. ಸಂಶೋಧನೆ ಪ್ರಕಾರ ಮಂಗನ ಕಾಯಿಲೆಗೆ ವ್ಯಾಕ್ಸಿನ್ ಹಾಕಿಸಿಕೊಂಡರೆ ಕಾಯಿಲೆ ಬರಬಾರದು. ಆದರೆ ಕೆಎಫ್ ಡಿ 3 ಬೂಸ್ಟರ್ ಡೋಸ್ ಹಾಕಿಸಿಕೊಂಡ ಬಳಿಕವೂ ರೋಗ ನಿರೋಧಕ ಶಕ್ತಿ ಸಾಮರ್ಥ್ಯ ಶೇ.83 ರಷ್ಟು ಮಾತ್ರ ಇರುತ್ತದೆ. ಶೇ. 17 ರಷ್ಟು ಜನರಲ್ಲಿ ಲಸಿಕೆ ಹಾಕಿಸಿಕೊಂಡ ಬಳಿಕವೂ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಪ್ರತಿವರ್ಷ ನಿರಂತರ ತೆಗೆದುಕೊಂಡಾಗ ಮಾತ್ರ ರೋಗ ನಿರೋಧಕ ಶಕ್ತಿ ಪಡೆಯುವುದು ಸಾಧ್ಯವೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಕಳೆದ ಐದು ವರ್ಷದಿಂದ ನಿರಂತರ ಲಸಿಕೆ ತೆಗೆದುಕೊಂಡ ಬಳಿಕವೂ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಹೇಗೆ? ವ್ಯಾಕ್ಸಿನ್ ನಲ್ಲಿ ರೋಗ ನಿರೋಧಕ ಶಕ್ತಿ ಎಷ್ಟಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ. ಕಳೆದ ವಾರ ಸಾಗರದಲ್ಲಿ ಕೃಷಿಕನೊಬ್ಬ ಮಂಗನ ಕಾಯಿಲೆಯಿಂದ ಸಾವನಪ್ಪಿದ ವರದಿ ದಿನ ಪತ್ರಿಗೆಗಳಲ್ಲಿ ಪ್ರಕಟವಾಗಿತ್ತು ಮೂರು ತಿಂಗಳಿನಿಂದ ವ್ಯಾಕ್ಸಿನ್ ಲಸಿಕೆಯನ್ನು ಸೇವಿಸಿದ್ದರು ಯಾವುದೇ ಗುಣಮುಖವಾದ ಬಗ್ಗೆ ವರದಿಯಾಗಿರಲಿಲ್ಲ, ರೋಗದಿಂದ ಇನ್ನೂ ಹಲವು ಜನ ಬಳಲುತ್ತಿದ್ದಾರೆ ಸರ್ಕಾರ ಕೂಡಲೇ ಸರಿಯಾದ ಔಷಧವನ್ನು ಕಂಡು ಹಿಡಿದು ಸಾರ್ವಜನಿಕನ್ನು ಮಾರಕ ರೋಗದಿಂದ ಮುಕ್ತಿಗೊಳಿಸಬೇಕಾಗಿದೆ. ಅಂದಹಾಗೇ ಈ ಮಂಗನ ಕಾಯಿಲೆ ಮನೆನಾಡಿನ ಜನರಿಗೆ ಹೊಸದೇನಲ್ಲ 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಕಾಡಿನಲ್ಲಿ ಈ ಕಾಯಿಲೆ ಪ್ರಪ್ರಥಮ ಬಾರಿಗೆ ಪತ್ತೆಯಾಯಿತು. ಈ ಮಂಗನ ಕಾಯಿಲೆಗೆ (ಕೆ ಎಫ್. ಡಿ) ಕ್ಯಾಸನೂರು ಕಾಡಿನ ಕಾಯಿಲೆ ಎಂದು ಸಹ ಕರೆಯುತ್ತಾರೆ. ಮಂಗನ ಕಾಯಿಲೆಗೆ ಪ್ರಮುಖ ಕಾರಣ ವೈರಾಣುಗಳು ಎಂದೇ ಹೇಳಬಹುದು. ಇದು ಕಾಡಿನಲ್ಲಿರುವ ಉಣ್ಣೆಗಳು ಕಚ್ಚುವುದರಿಂದ ಮಾತ್ರ ಬರುತ್ತದೆ. ಈ ಕಾಯಿಲೆಯು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಕಾಡಿನಲ್ಲಿ ಮಂಗಗಳು ಸಾಯುವುದೇ ಈ ಕಾಯಿಲೆಯ ಮುನ್ಸೂಚನೆ. ಕೆಲವೊಂದು ವರದಿಗಳ ಪ್ರಕಾರ ಇಪ್ಪತ್ತರಿಂದ ನಲ್ವತ್ತು ವರ್ಷ ವಯೋಮಾನದ ವ್ಯಕ್ತಿಗಳು ಈ ಕಾಯಿಲೆಗೆ ಹೆಚ್ಚಾಗಿ ತುತ್ತಾಗುತ್ತಾರೆ. ಹೊಲ ಗದ್ದೆಗಳಲ್ಲಿ ಕೆಲಸ ಮಾಡುವವರು, ಕಾಡಿನ ಸಮೀಪವೇ ಜಾನುವಾರುಗಳನ್ನು ಮೇವಿಸುವವರು ಈ ರೋಗಕ್ಕೆ ತುತ್ತಾಗುತ್ತಾರೆ. ರೋಗದ ಮುಖ್ಯ ಲಕ್ಷಣಗಳೆಂದರೆ 1. ಸತತ ಎಂಟು – ಹತ್ತು ದಿನಗಳವರೆಗೆ ಬಿಡದೇ ಬರುವ ಜ್ವರ. 2. ವಿಪರೀತ ತಲೆನೋವು, ಸೊಂಟನೋವು, ಕೈ-ಕಾಲು ನೋವು, ನಿಶ್ಯಕ್ತಿ, ಕಣ್ಣು ಕೆಂಪಾಗುವುದು. 3. ಜ್ಚರ ಬಂದ 2 ವಾರದ ನಂತರ ಮೂಗು, ಬಾಯಿ, ಗದಧ್ವಾರದಿಂದ ರಕ್ತಸ್ರವವಾಗಬಹುದು. 4. ಸಂದಿವಾತ/ಮೆದುಳಿನ ಹೊಂದಿಕೆಯ ಜ್ಚರ ಲಕ್ಷಣಗಳು. 5. ರೋಗದ ತೀವ್ರತೆಯು ರೋಗಿಯ ಪ್ರತಿರೋಧಕ ಶಕ್ತಿಯ ಮೇಲೆ ಅವಲಂಭಿತವಾಗಿರುತ್ತದೆ.ಈ ಮಂಗನ ಕಾಯಿಲೆಯಿಂದ ಪಾರಾಗಲು ಕೆಲವೊಂದು ಮುಂಜಾಗ್ರತಾ ಕ್ರಮಗಳು ಸಹ ಇವೆ ಅವುಗಳೆಂದರೆ, 1. ವಾಸ ಸ್ಥಳದ ಸುತ್ತಮುತ್ತ ಅಥವಾ ಊರಿನಲ್ಲಿ ಮಂಗಗಳು ಸತ್ತಿರುವುದು ಕಂಡೊಡನೆ ಸ್ಥಳೀಯ ಆರೋಗ್ಯಾಧಿಕಾರಿಗಳು /ಆರೋಗ್ಯ ಕಾರ್ಯಕರ್ತೆಯರಿಗೆ ತಿಳಿಸುವುದು. 2. ಮಂಗ ಸಾಯುತ್ತಿರುವ ಕಾಡಿನಲ್ಲಿ ಮತ್ತು ತೋಟ, ಗದ್ದೆಯಲ್ಲಿ ಸಂಚರಿಸುವಾಗ ಮೈತುಂಬಾ ಬಟ್ಟೆ ಧರಿಸಿ ಆರೋಗ್ಯ ಇಲಾಖೆಯಿಂದ ಉಚಿತವಾಗಿ ವಿತರಿಸುವ ಡಿ.ಎಂ.ಪಿ. ಸಥಲವನ್ನಯ ಕೈಕಾಲುಗಳಿಗೆ ಹಚ್ಚಿಕೊಂಡು ಹೋಗಬೇಕು. ಕಾಡಿನಿಂದ ಬಂದ ನಂತರ ಬಿಸಿ ನೀರಿನಿಂದ ಸೋಪು ಹಚ್ಚಿ ಸ್ನಾನ ಮಾಡಬೇಕು. ಬಟ್ಟೆಗಳನ್ನು ಬಿಸಿ ನೀರಿನಿಂದ ಸೋಪು ಹಚ್ಚಿ ತೊಳೆಯಬೇಕು. 3. ಸತ್ತ ಮಂಗದ ಮರಣೋತ್ತರ ಪರೀಕ್ಷೆಗಾಗಿ ವಿ.ಡಿ.ಎಲ್. ಶಿವಮೊಗ್ಗಕ್ಕೆ ಕಳಿಸುವುದು ಮತ್ತು ಸುತ್ತ ಮುತ್ತಲಿರುವ ಉಣ್ಣೆಗಳ ಸಂಗ್ರಹಣೆ ಮಾಡುವುದು. ಸತ್ತ ಮಂಗಗಳ ಅವಶೇಷಗಳನ್ನು ಸುಡುವುದು ಹಾಗೂ 50 ಮೀಟರ್ ಪರಿಧಿಯಲ್ಲಿ ಮೆಲಾಥೀಯನ್ ದ್ರಾವಣ ಸಿಂಪಡಿಸುವುದು.

LEAVE A REPLY

Please enter your comment!
Please enter your name here