ಕವನ

ಡಾ ಸುರೇಶ ನೆಗಳಗುಳಿ

ಉಸಿರಿಹುದು ನಿಜವೇನು
ಹಸುರಾಗಿ ಬಾಳು.
ಕೆಸರು ತುಂಬಿರ ಬಹುದು
ಕಸುರಿರಿಸಿ ಆಳು.

ಮೊಸರು ತಿನುವಾಸೆಯಲಿ
ಪಸರಿಸಲಿ ನಲಿವು.
ಬಸಿರು ಭವಿತವ್ಯದಲೆ
ಕೊಸರಿದರೆ ಬಾಳು.

ಜನಪದೋ ಧ್ವಂಸವಿರೆ
ಕನಸಿರದೆ ಗೋಳು.
ಮನದ ಕನ್ನಡಿಯಲ್ಲಿ
ಹನನವಿರೆ ಸೋಲು.

ದಿನಚರ್ಯೆ ಋತಚರ್ಯೆ
ಜನತೆಗದೆ ಕೂಳು.
ತನು ಶುದ್ಧಿ ಕರದಲಿ
ಇನ ಸ್ನಾನ ಕೇಳು.

ಕಪ್ಪು ಕಟ್ಟಿದೆ ಜಗವು
ಒಪ್ಪ ಮಾಡೇಳು.
ತಪ್ಪು ಮಾಡಲು ಶಿಕ್ಷೆ
ತಪ್ಪದದು ಅಳಲು.

ಶಿಸ್ತು ಇರದಿರೆ ಬದುಕು
ಸುಸ್ತು ಕೊಡುವಾಳು.
ಹಸ್ತಿಯೂ ಕಾಲೆಡವೆ
ಅಸ್ತಮದ ನೆರಳು.

ಮಸ್ತಕದ ವೈಫಲ್ಯ
ಕುತ್ತು ಕೊಡೆ ಹಾಳು
ಹಸ್ತ ಲಾಘವ ಮಾಡೆ
ಮಸ್ತಿನಲಿ ಬೀಳು.

LEAVE A REPLY

Please enter your comment!
Please enter your name here