✒ ಕೆ. ಮುಹಮ್ಮದ್ ಝಮೀರ್

ಕಾನೂನು ವಿದ್ಯಾರ್ಥಿ S.D.M Law College, ಮಂಗಳೂರು

ಕಳೆದ ಪಾರ್ಲಿಮೆಂಟರಿ ಸೆಷನ್, ಅತ್ಯಂತ ತರಾತುರಿಯಲ್ಲಿ ನಡೆದು, ಅತ್ಯಂತ ಕಡಿಮೆ ಸಮಯದಲ್ಲಿ ಸುಮಾರು, ದೇಶದ ಉಭಯ ಎರಡು ಸದನಗಳಲ್ಲಿ ಸುಮಾರು 28 ವಿಧೇಯಕ ಅಂಗೀಕಾರಗೊಂಡು, ರಾಷ್ಟ್ರಪತಿಗಳ ಅಂಕಿತವನ್ನು ಪಡೆದುಕೊಂಡಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಚರ್ಚಿತಗೊಂಡ ವಿವಾದಾತ್ಮಕ ಕಾಯ್ದೆಗಳ ಪೈಕಿ ”ಯು.ಎ.ಪಿ.ಎ. ತಿದ್ದುಪಡಿ (2019)” ಎಂಬ ಅಪಾಯಕಾರಿ ಕಾಯ್ದೆಯು ಒಂದು.

ಆಗಷ್ಟ್ 2 ರಂದು ರಾಜ್ಯ ಸಭೆಯಲ್ಲಿ ನಂತರ ಆಗಷ್ಟ್ 9 ರಂದು ರಾಷ್ಟ್ರಪತಿಗಳಿಂದ ಅಂಕಿತವನ್ನು ಪಡೆದು ಈ ಕಾಯ್ದೆಯು ದೇಶದ ಕಾನೂನಾಗಿ ಪರಿವರ್ತನೆಗೊಂಡಿದೆ.ಇದನ್ನು ಕೆಲವು ಚಿಂತಕರು ಸ್ವಾತಂತ್ರ್ಯ ಭಾರತದ ಅತ್ಯಂತ ಅಪಾಯಕಾರಿ ಕಾಯ್ದೆ ಎಂದು ಬಣ್ಣಿಸಿದ್ದಾರೆ.

ಭಯೋತ್ಪಾದನೆಯನ್ನು ನಿಯಂತ್ರಿಸಲು ಸರಕಾರಗಳು ತಂದ ಕಾನೂನುಗಳು, ಹಲವು ಸಂಧರ್ಭಗಳಲ್ಲಿ ಇಲ್ಲಿನ ದಮನಿತ ವರ್ಗಗಳಾದ ದಲಿತ, ಆದಿವಾಸಿ, ಮುಸ್ಲಿಂ ಮತ್ತು ಇನ್ನಿತರ ಹಿಂದುಳಿದ ವರ್ಗ ಗುರಿ ಮಾಡಿಕೊಂಡು ಎಂದು ಈ ರೀತಿಯ ಕಾನೂನುಗಳನ್ನು ಮತ್ತು ಈ ಕಾಯ್ದೆ ಯಾವ ಸಮುದಾಯವನ್ನು ಪ್ರಭಾವಿಸುತ್ತಿದೆ ಎಂದು ಅವಲೋಕಿಸಿದರೆ ತಿಳಿಯ ಬಹುದಾದ ವಿಚಾರ.

1908 ಬ್ರಿಟಿಷರ ಕಾಲದಲ್ಲಿ ಕ್ರಿಮಿನಲ್ ಲಾ ಎಮೆಂಡ್ಮೆಂಟ್ ಎಂಬ ಕಾಯ್ದೆಯನ್ನು ತರಲಾಯಿತು ಅದರ ಪ್ರಕಾರ ಕಾನೂನನ್ನು (Role of Law) ದಿಂದ ಅನಾಗರಿಕ ಹಾಗು ಭಯೋತ್ಪಾದಕ ವ್ಯಕ್ತಿಗಳನ್ನು ಹೊರಗಿಡಲಾಗುವುದು, ಆದರೂ ಕೂಡ ಅವರಿಗೆ 2 ಹಕ್ಕುಗಳನ್ನು ನೀಡಲಾಯಿತು

1) ಮುಗ್ದತೆಯ ಕಲ್ಪನೆ. (presumption of innocence )ಅರ್ಥತ್ ನ್ಯಾಯಾಲಯದಲ್ಲಿ ಅವರ ತಪ್ಪು ಸಾಬೀತಾಗುವವರೆಗೂ ಅವರನ್ನು ನಿರಪರಾಧಿ ಎಂದೇ ಕಾಣುವುದು.
2) ನ್ಯಾಯೋಚಿತ ವಿಚಾರಣೆ (ಫೇರ್ ಟ್ರೈಲ್) ಅವರನ್ನು ಯಾವುದೇ ಪಕ್ಷಪಾತ ಇಲ್ಲದೆ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುವಂತೆ ನೋಡಿಕೊಳ್ಳುವುದು.ಇತರ ಕ್ರಿಮಲ್ ಕಾನೂನಿನಡಿಯಲ್ಲಿ ಬಂಧಿತರಾದ ವ್ಯಕ್ತಿಯನ್ನು ಗರಿಷ್ಠ 90 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು ಆದರೆ ಯು.ಎ.ಪಿ.ಎ. ಎಂದರೆ (unlawful activities prevention act) ಈ ಕಾನೂನು ಅಡಿಯಲ್ಲಿ ನ್ಯಾಯಾಂಗ ಬಂಧನವನ್ನು ಸುಮಾರು 180 ದಿನ ಗಳಿಗೆ ಏರಿಸಲಾಯಿತು. ಅದೇ ರೀತಿ ಸಾಮಾನ್ಯವಾಗಿ ಯಾವುದೇ ವ್ಯಕ್ತಿಯು ನ್ಯಾಯಾಂಗ ಪ್ರಕ್ರಿಯೆಯನ್ನು ವೀಕ್ಷಿಸಬಹುದಿತ್ತು. ಆದರೆ ಈ ಕಾನೂನಿನ ಪ್ರಕಾರ ಅದು ಇನ್ ಕ್ಯಾಮರಾ ಪ್ರೊಸಿಡಿಂಗ್(ಕೇವಲ ಎರಡು ಕಡೆಯ ವಕೀಲರು ಮತ್ತು ಸಂಬಂಧಿತ ಜನರು ಮಾತ್ರ ಭಾಗವಹಿಸಬಹುದು) ನಡೆಯುತ್ತೆ. ಈ ಕಾನೂನಿನಲ್ಲಿ ಸಾಕ್ಷಿಯ ಗುರುತು ಬಹಿರಂಗ ಪಡಿಸುವಂತಿಲ್ಲ, ಈ ಕಾನೂನು ಪ್ರಕ್ರಿಯೆಯು ವಿಶೇಷ ಕೋರ್ಟಿನಲ್ಲಿ ನಡೆಯುತ್ತದೆ.

1950 ಅಂದರೆ ಸ್ವಾತಂತ್ರ್ಯದ ನಂತರ Prevention detention act 1950 ಯನ್ನು ಪರಿಚಯಿಸಲಾಯಿತು, ಇದರ ಪ್ರಕಾರ ಅಪರಾಧ ಮಾಡಬಹುದೆಂದು ಅನುಮಾನಿಸ ಬಹುದಾದ ವ್ಯಕ್ತಿಯನ್ನು ಬಂಧಿಸುವ ಅಧಿಕಾರವನ್ನು ನೀಡಲಾಯಿತು ಮತ್ತು ಈ ಕಾಯ್ದೆ ಅಂದಿನ ದಿನಗಳಲ್ಲಿ ಅತೀ ಹೆಚ್ಚಾದ ಕಾನೂನು ಇದೆ ಆಗಿತ್ತು.

1985 ರಲ್ಲಿ TADA (Terrorist, Disruptive (Prevention ) Act ಅನ್ನು ಪರಿಚಯಿಸಲಾಯಿತು.
ಇದರ ಪ್ರಕಾರ ಪೊಲೀಸರಿಗೆ ನ್ಯಾಯಾಲಯದ ಮುಂದೆ 24 ಘಂಟೆಯ ಒಳಗೆ ಬಂಧಿತನನ್ನು ಹಾಜರುಪಡಿಸುವ ಅಗತ್ಯವಿಲ್ಲ, ಆತನನ್ನು ಬಹಳಷ್ಟು ದಿನಗಳವರೆಗೆ ನ್ಯಾಯಾಲಯಕ್ಕೆ ಯಾವುದೇ ಮಾಹಿತಿ ನೀಡದೆ ಪೊಲೀಸ್ ಕಸ್ಟಡಿಯಲ್ಲಿ ಇಟ್ಟು, ಆತ ಪೋಲೀಸರ ಎದುರು ತಪ್ಪೊಪಿದರೆ ಅದನ್ನು ಸ್ವೀಕರಿಸಲಾಗುತ್ತಿತ್ತು(ಸಾಮಾನ್ಯ ಅಪರಾಧಗಳಲ್ಲಿ ಪೋಲೀಸರ ಎದುರು ತಪ್ಪೋಪಿದರೆ ಅದನ್ನು ಸ್ವೀಕರಿಸಲಾಗುವುದಿಲ್ಲ) ಈ ಕಾಯ್ದೆಯು ಕೊಡ ಬಹಳ ದುರುಪಯೋಗ ಗೊಂಡಿತು. ಈ ಕಾಯ್ದೆಯ ಅಡಿಯಲ್ಲಿ ಸುಮಾರು 77,000 ಜನರನ್ನು ಬಂಧಿಸಲಾಯಿತು ಆದರೆ ಅದರ ಪೈಕಿ ಕೇವಲ 0.81% ರಷ್ಟು ಅಂದರೆ 700 ಜನರನ್ನು ಅಪರಾಧಿ ಎಂದು ತೀರ್ಪು ನೀಡಲಾಯಿತು. ನಂತರ ಸರಕಾರವು 1995 ರಲ್ಲಿ ಈ ಕಾಯ್ದೆಯನ್ನು ರದ್ದು ಮಾಡಿ, 2002 ರಲ್ಲಿ Prevention of Terrorist Act 2002 (POTA) ಎಂಬ ಕಾಯ್ದೆಯನ್ನು ಜಾರಿಗೆ ತಂದಿತು ಮತ್ತು ಕೇವಲ ಎರಡೇ ವರ್ಷದಲ್ಲಿ ಅದನ್ನು ಕೊಡ ರದ್ದುಮಾಡಿ, 2004 ರಲ್ಲಿ UAPA (unlawful activities prevention act ) ಎಂಬ ಕಾನೂನನ್ನು ಜಾರಿಗೆ ತರಲಾಯಿತಲ್ಲದೆ, 2008 ರ ತಿದ್ದುಪಡಿಯ ಮುಖಾಂತರ ಹಳೆಯ TADA ಹಾಗು POTA ದಲ್ಲಿ ಇದ್ದ ಅಧಿಕಾರಗಳನ್ನು ಕೊಡ ಅದಕ್ಕೆ ನೀಡಲಾಯಿತು.

ಈ ಕಾನೂನಿನ ಪ್ರಕಾರ ಸರ್ಕಾರವು ಯಾವುದೇ ಸಂಘಟನೆಯನ್ನು ‘ಉಗ್ರ ಸಂಘಟನೆ’ ಎಂದು ಘೋಷಿಸಬಹುದು ಹಾಗು ಅದರ ಕಾರ್ಯಕರ್ತರನ್ನು ಬಂಧಿಸಬಹುದು.
ಆದರೆ 2019ರ ತಿದ್ದುಪಡಿ ಕಾಯ್ದೆಯು ಕೇವಲ ಸಂಘಟನೆ ಮಾತ್ರವಲ್ಲ ಬದಲಾಗಿ ವ್ಯಕ್ತಿಗಳನ್ನು ಕೊಡ ಯಾವುದೇ CHAREGE SHEET, F.I.R ಮತ್ತು ದಾಖಲೆ, ಮತ್ತು ಸಾಕ್ಷಿ ಆಧಾರಗಲಿಲ್ಲದೆ ಭಯೋತ್ಪಾದಕ ಎಂದು ಘೋಷಿಸುವ ಅಧಿಕಾರವನ್ನು ಸರಕಾರವು ನೀಡಿತು.

ಉಚಿತ ಕಾನೂನು ನರೆವಿನ ಹಕ್ಕು ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದೊರೆತಿರುವ ಮೂಲಭೂತ ಹಕ್ಕಾಗಿದೆ ಇದನ್ನು ಭಾರತ ಸಂವಿಧಾನದ ಆರ್ಟಿಕಲ್ 21 (1) ಪ್ರತಿಪಾದಿಸುವಂತೆ. ಆದರೆ ಸಮರ್ಪಕವಾದ ಕಾನೂನಿನ ನೆರವು ದೊರೆಯದೆ ಎಷ್ಟೋ ಜನರು ಜೈಲಿನಲ್ಲಿ ಬಂಧಿತರಾಗಿದ್ದಾರೆ.
ಅದಿರಲಿ, ಈ ಕಾನೂನಿನ ಪ್ರಕಾರ ಯಾವುದಾದರು ಒಬ್ಬ ಈ ದೇಶದ ನಾಗರೀಕ ಭಯೋತ್ಪಾದನೆಯ ಕೃತ್ಯ ವೆಸಗಿದ್ದಾನೆಂದು ಸರಕಾರಕ್ಕೆ ಅಥವಾ ಪೊಲೀಸರಿಗೆ ಅನುಮಾನ ಬಂದರೆ ಸಾಕು ಅವರು ಆತನನ್ನು ಬಂಧಿಸಬಹುದು.

1) ಕಮಿಟ್ (ಕೃತ್ಯ ಮಾಡಿದರೆ) ಎನ್ನುವ ಅನುಮಾನ.
2)ಷಡ್ಯಂತ್ರದ ಮಾಡಿದ್ದರೆನ್ನುವ ಅನುಮಾನ.
3)ಪ್ರಚಾರ ಮಾಡಿದ್ದಾರೆನ್ನುವ ಅನುಮಾನ
4) ಭಾಗಿಯಾಗಿದ್ದರೆನ್ನುವ ಅನುಮಾನ
ಈ ರೀತಿಯ ಜನರನ್ನು ಭ್ಯಯೋತ್ಪಾದಕ ಎಂದು ಘೋಷಿಸುವ ಅಧಿಕಾರವನ್ನು ನೀಡಲಾಗಿದೆ.
ಆದರೆ ಇದರಲ್ಲಿ ಪ್ರೊಪೋಗೆಟ್ (ಪ್ರಚಾರದ)ಬಗ್ಗೆ ಸರಿಯಾದ ವಿವರಣೆ ನೀಡಲಾಗಿಲ್ಲ, ಪಾರ್ಲಿಮೆಂಟ್’ನಲ್ಲಿ ಇದರ ಬಗ್ಗೆ ಪ್ರಶ್ನಿಸಿದರೆ, ದೇಶದ ಗೃಹ ಸಚಿವರು ”ಬಂದೂಕಿಗಿಂತ ಕೃತಿಗಳು ಭಯೋತ್ಪಾದನೆಗೆ ಪ್ರಚಾರನಿಡುತ್ತದೆ” ಎಂದಿದ್ದಾರೆ.
ಹಾಗಾದರೆ ಒಬ್ಬ ವ್ಯಕ್ತಿಯ ಮನೆಯಲ್ಲಿ ಕೇವಲ ಒಂದು ಕೃತಿ ಇದೆ ಎನ್ನುವ ಕಾರಣಕ್ಕಾಗಿ ಮಾತ್ರ ಆ ವ್ಯಕ್ತಿಯನ್ನು ಸರಕಾರವು ಭಯೋತ್ಪಾದಕ ಎಂದು ಘೋಷಿಸ ಬಹುದೇ ?
ಕೆಲವು ದಿನಗಳ ಹಿಂದೆ ಸಾಹಿತಿಯೊಬ್ಬರ ಮನೆಯಲ್ಲಿ ”war and peace ” ಎಂಬ ಗ್ರಂಥವಿದೆ ಎನ್ನುವ ಕಾರಣಕ್ಕೆ ಅವರನ್ನು ಕೋರ್ಟಿನಲ್ಲಿ ನಕ್ಸಲ್ ಪರ ಸಹಾನುಭೂತಿ ಇರುವವ ಎಂದು ಚರ್ಚ್ ನಡೆಸಿದ್ದು ಕೆಲವರಿಗೆ ನೆನಪಾಗಬಹುದು.

ಇತಿಹಾಸದೊದ್ದಕ್ಕೂ ಅತೀ ಹೆಚ್ಚು ದುರುಪಯೋಗವಾಗುತ್ತಿರುವ ಈ ಕಾಯ್ದೆಯು, ಬರುವ ದಿನಗಳಲ್ಲಿ ಹೆಚ್ಚು ದುರುಪಯೋಗವಾಗಬಹುದೆಂದು ದೇಶದ ನಾಗರಿಕರಲ್ಲಿ ಅನುಮಾನ ಮೂಡುತ್ತಿದೆ ಎಂದರೆ ತಪ್ಪಾಗಲಾರದು.

LEAVE A REPLY

Please enter your comment!
Please enter your name here