ವ್ಯಕ್ತಿ ಪರಿಚಯ

ಪರಿಚಯ: ವಿಜಯ ಇನಾಮದಾರ ಕವಿಜು ಧಾರವಾಡ

ಹಳೆ ಮಂದಿ ಯಾರ ಕೇಳಿಲ್ಲ ಈ ಹೆಸರು? ಆಕಾಶವಾಣಿಯಲ್ಲಿ ಸಿಬಾಕಾ ಗೀತಮಾಲಾ ಪ್ರಸಿದ್ಧ ರೇಡಿಯೋ ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ನಿರೂಪಕ ಇವರು.
ಅದ್ಯಾಕೋ ಮೊನ್ನೆಯಿಂದ ಇವರು ಬಾಳ ನೆನಪಾಗಲಿಕತ್ತಿದ್ದರು.
ಇವರು ಬಗ್ಗೆ ಈಗೀನ ಪೀಳಿಗೆಗೆ ಪರಿಚಯಿಸುವ ಪುಟ್ಟ ಪ್ರಯತ್ನ ಮಾಡಿನಿ.ಇವರ ಬಗ್ಗೆ ಇನ್ನಷ್ಟು ಮಾಹಿತಿ ಹುಡುಕಿ ಹುಡುಕಿ ಇವರ ಬಗ್ಗೆ ಬರೆದ ಹಳೆಯ ಲೇಖನ ಓದಿ ಇವರ ವೈಯಕ್ತಿಕ ಅನೇಕ ಸಂದರ್ಶನ ನೋಡಿ ನನ್ನ ಲೇಖನ ಬರದೇ ಬಿಟ್ಟೆ.. ನೀವು ಓದೇ ಬಿಡ್ರಿ…

ಇಸ್ವಿ 1951 ರಾಗ ರೇಡಿಯೋ ಶಿಲೋನ ನಲ್ಲಿ ಬಿನಾಕಾ ಹಿಟ್ ಪರೇಡ್ ಅಂತ ಶ್ರೋತೃಗಳ ಪತ್ರಗಳ ಓದಿ ಇಂಗ್ಲಿಷ್ ಪ್ರಸಿದ್ಧ ಹಾಡುಗಳನ್ನು ಪ್ರಸಾರ ಮಾಡತ್ತಿದ್ದರು.ಈ ಕಾರ್ಯಕ್ರಮ ಮುಂಬಯಿಯಲ್ಲಿ ರಿಕಾರ್ಡಿಂಗ ಆಗ್ತಿತ್ತು.ಇದರ ನಿರ್ದೇಶಕ ಅಮೀನ್ ರ ಸಹೋದರ ಹಮೀದ್.ಈ ಕಾರ್ಯಕ್ರಮ ದ ನಿರೂಪಕ *ಹ್ಯಾಪಿ ಗೋ ಗ್ರೇಗ್* ಬಾಳ ಪ್ರಸಿದ್ಧಿ ಆಗಿದ್ದರು.ಭಾರತದಲ್ಲಿಯೂ ಈ ಕಾರ್ಯಕ್ರಮ ಬಾಳ ಮಸ್ತ ಪ್ರಸಿದ್ಧ ಆತು. ಆವಾಗ ಭಾರತದ ಆಕಾಶವಾಣಿಯಲ್ಲಿ ಹಿಂದಿ ಚಲನಚಿತ್ರ ಗೀತೆಗಳ ಪ್ರಸಾರ ಇದ್ದಿಲ್ಲ. ಇದೇ ರೀತಿ ಹಿಂದಿ ಚಲನಚಿತ್ರ ಗೀತೆಗಳ ಕಾರ್ಯಕ್ರಮ ಗೀತಮಾಲಾ ಶಿಲೋನ ನಿಲಯದಿಂದ ಪ್ರಸಾರ ಮಾಡಿದರ ‌ಹ್ಯಂಗ ಅನ್ನು ವಿಚಾರ ಬಂತು. ಆಗ ಬಿನಾಕಾ ಸಂಸ್ಥೆ ಮಾಡ್ರಿ ನಾ ಪ್ರಯೋಜನ ಮಾಡ್ತೀನಿ ಅಂತು. ಹಿಂಗ ಶಿಲೋನ ನಿಲಯದಿಂದ *ಬಿನಾಕಾ ಗೀತಮಾಲಾ* ಶುರು ಮಾಡುದು ನಿರ್ಧಾರ ಆತು. ಆದರ ನಿರೂಪಣೆ ಯಾರು ಮಾಡುದು ? ಎಂಬ ಪ್ರಶ್ನೆ ಎದುರಾತು. ಬರೆ ಇಪ್ಪತ್ತೈದು ರೂಪಾಯಿ ಪಗಾರ ಇಡೀ ಕಾರ್ಯಕ್ರಮ ಮಾಡ್ಲಿಕ್ಕೆ ನೂರಾ ಐವತ್ತು ರೂಪಾಯಿಗೆ ಹೊಸಬರನ ಹುಢಕಲಿಕತ್ತಾಗ ಅಮೀನ್ ಸಯಾನಿ ಗೇ ಈ ಜವಾಬ್ದಾರಿ ಸಿಕ್ಕಿತು.

 

ಹಿಂದಿ.ಗುಜರಾತಿ, ಉರ್ದು ಗೊತ್ತಿದ್ದ ಅಮೀನ್ ಮೊದಲ ಸಂಚಿಕೆ ಗೇ ಬರೆ ೨೦ ಪತ್ರಗಳು ಬಂದುವು.. ಆಮೇಲೆ ಮಂದಿಗೆ ಇವರ ಧ್ವನಿ ಹೇಳುವ ಶೈಲಿ ಬಾಳ ಬಾಳ ಸೇರತು.. ಅಮೀನ್ ಸಯಾನಿ ಎಷ್ಟು ಹುಚ್ಚು ಎಬ್ಬಿಸಿದರು ಅಂದ್ರ ವಾರಾ 65000 ಪತ್ರಗಳು ಬಂದುವು ಬರಬರತ ಎರಡು ಲಕ್ಷ ಮಂದಿ ಬರೆದರು. ಇವರ ಕೌಂಟಡೌನ ಕಾರ್ಯಕ್ರಮ ಅಂತೂ ಎಲ್ಲಾ ಪ್ರಶಸ್ತಿ ಗಳಿಗೆ ಮಾನದಂಡ ಆತು.. ಎಷ್ಟೋ ಹೊಸ ಸಿನಿಮಾ ಹಾಡು ಇವರ ನಿರೂಪಣೆಯಿಂದಲೆ ಪ್ರಸಿದ್ಧ ಆದುವು ಎಷ್ಟೋ ಹಳೆ ಹಾಡಿಗೆ ಮರುಜೀವ ಸಿಕ್ಕತು.

ಬುಧವಾರ ರಾತ್ರಿ 8 ಹೋಡಿತು ಅಮೀನ್ ಸಯಾನಿ *”ಬೆಹನೋ ಔರ ಭಾಹಿಯೋ** ಅಂತ ಶುರು ಮಾಡಿದರಂದ್ರ ರಸ್ತೆ ಬಿಕೋ ಎನ್ನುತ್ತಿತ್ತು. ಎಲ್ಲಾರ ಕಿವಿ ರೇಡಿಯೋಕ್ಕ.ಮುಂದ ಇವರು ಮಾಡಿದ ಅನೇಕ ಹಿರಿಯ ಕಲಾವಿದರ ಸಂದರ್ಶನ ಬಾಳ ಪ್ರಸಿದ್ಧಿ ಆದುವು.

1989ರಾಗ ಬಿನಾಕಾ ಗೀತಮಾಲಾ ಶಿಲೋನ ನಿಲಯದಿಂದ ಆಕಾಶವಾಣಿ ಗೇ ವರ್ಗಾವಣೆ ಆತು.. ಇದು 1993 ರಾಗ ಬಂದ ಆತು…ಮತ್ತೆ 1998 ರಾಗ ಸ್ವಲ್ಪ ಶುರು ಆದರೂ ಐದಾರು ತಿಂಗಳಿಗೆ ಬಂದ್ ಮಾಡಿದರು..ಆದರ ಸತತ ನಲವತ್ತ ವರ್ಷ ಈ ಕಾರ್ಯಕ್ರಮ ಕ್ಕ ಭಾರಿ ನಿರೂಪಣಾ ಮಾಡಿದ *ಅಮೀನ್ ಸಯಾನಿ* ಧ್ವನಿ ಇನ್ನೂ ಹಂಗ ಎಲ್ಲಾರ ಕಿವ್ಯಾಗ ಇನ್ನೂ ಅದ.. ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಐದು ನಿರೂಪಕರಲ್ಲಿ ಇವರು ಒಬ್ಬರು ಎಂದು “ದಿ ಹಿಂದು ಪತ್ರಿಕೆ” ಹೇಳಿತ್ತು.ಈಗ ಅವರಿಗೆ 85 ವರ್ಷ…
ಅಮೀನ್ ಸಯಾನಿ ಯವರ ಧ್ವನಿ ಇನ್ನೂ ಕೇಳಬೇಕು ಅನಸ್ತದ..ಅವರ ಅನೇಕ ಸಂದರ್ಶನ ಈಗೂ ಯು ಟ್ಯೂಬ್ ನ್ಯಾಗ ಅವ..
ಶ್ರೀ ಅಮೀನ್ ಸಯಾನಿ ನಿರೂಪಕರಿಗೆ ಅಥವಾ ನಿರೂಪಣೆಗೇ ಮಾದರಿ..

ನಿಮ್ಮ ಕೆಲಸ ಮಾಡ್ಕೋತ ರೇಡಿಯೋ ಕೇಳ್ರೀ.

LEAVE A REPLY

Please enter your comment!
Please enter your name here