ಎಂ . ಅಶೀರುದ್ದೀನ್ ಮಂಜನಾಡಿ

ವಿಧ್ಯಾಸಂಸ್ಥೆಗಳು ವಿಧ್ಯಾರ್ಥಿಗಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸಲು ಪ್ರಯತ್ನಿಸುವ ಒಂದು ಕೇಂದ್ರ. ಜ್ಞಾನದ ದೀಪ್ತಿಯಿಂದ ಮಕ್ಕಳ ಮನಸ್ಸು ಬೆಳಗುತ್ತದೆ ಸುಂದರ ವಾತಾವರಣ ನಿರ್ಮಾಣವಾಗುತ್ತದೆ “ಸಾಕ್ಷರತೆ” “ಸಮಾನ ಶಿಕ್ಷಣ ಅಭಿಯಾನ” “ಮರಳಿ ಬಾ ಶಾಲೆಗೆ” ಇತ್ಯಾದಿ ಯೋಜನೆಗಳಿಂದ ಮಕ್ಕಳನ್ನು ಶಾಲೆ ಕಡೆ ಹೆಜ್ಜೆ ಹಾಕುವಂತೆ ಪ್ರೇರಣೆ ನೀಡುತ್ತದೆ. ಶಿಕ್ಷಣದಿಂದ ಮನುಷ್ಯ ಬೆಳೆಯುತ್ತಾನೆ ದೇಶವನ್ನು ಬೆಳೆಸುತ್ತಾನೆ. ಇಂದಿನ ಯುಗದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಜನಸಾಮಾನ್ಯರಿಗೂ ಹೆಚ್ಚಿನ ಅರಿವು ಇರುವುದರಿಂದ ಪ್ರವೇಶ ಪಡೆದ ಮಕ್ಕಳನ್ನು ಹೇಗೆ ವಿಧ್ಯಾ ಸಂಪನ್ನರಾಗಿ ಪರಿವರ್ತಿಸಬೇಕು ಎಂಬುವುದಷ್ಟೆ ಅಧ್ಯಾಪಕರು ಮತ್ತು ವಿಧ್ಯಾ ಸಂಸ್ಥೆಗಳಿಗಿರುವ ಮುಖ್ಯ ಹೊಣೆಗಾರಿಕೆ.

ಕಾಲ ಬದಲಾದಂತೆ ಶಿಕ್ಷಣದ ಮತ್ತು ಶಿಕ್ಷಣ ಸಂಸ್ಥೆಗಳ ಉದ್ದೇಶ ಮತ್ತು ಗುರಿ ಬದಲಾಗುತ್ತಾ ಬಂದಿದೆ. ಶಿಕ್ಷಣದ ವ್ಯಾಪಾರೀಕರಣ, ಶಿಕ್ಷಣದ ಕೋಮುವಾದೀಕರಣ ಶಿಕ್ಷಣದ ಮೇಲೆ ಬಿದ್ದ ದೊಡ್ಡ ಹೊಡೆತ. ಕಲಿಯುವ ಮಕ್ಕಳಿಗೆ ಮುಂದೆ ಏನು ಆಗಬೇಕು ಎಂಬುವುದನ್ನು ತಿಳಿಸದೆ ಹೇಗೆ ದೊಡ್ಡ ಉದ್ಯೋಗ ಗಿಟ್ಟಿಸಿ ಹಣ ಸಂಪಾದಿಸಬಹುದು ಎಂಬುವುದು ಮುಖ್ಯವಾಗಿದೆ. ರಾಜಕೀಯದ ದುರೀಣರ ಅಭಿಲಾಶೆಗಳಿಗಾಗಿ ಪಠ್ಯ ಪುಸ್ತಕಗಳಲ್ಲಿ ಇತಿಹಾಸವನ್ನು ತಿರುಚಿ ಕೋಮುವಾದದ ವಿಷ ಉಣ್ಣಿಸುವ ಪಾಠಗಳನ್ನು ಬೋಧಿಸಲಾಗುತ್ತಿದೆ ಸಣ್ಣ ಮಗುವೂ ತನ್ನ ಹತ್ತಿರವಿರುವ ಅಲ್ಪ ಸಂಖ್ಯಾತನ ಮೇಲೆ ಕೆಲವರ್ಗದವರ ಮೇಲೆ ವಕ್ರ ದೃಷ್ಠಿಯಿಂದ ನೋಟುವ ಪರಿಸ್ಥಿತಿ ವರೆಗೆ ತಲುಪಿದೆ. ಇದೆಲ್ಲವನ್ನು ಶಿಕ್ಷಣದ ಮೇಲೆ ಅಲವಡಿಸಿದ ನಂತರ ಇದೀಗ ಶಿಕ್ಷಣ ಫಲಿತಾಂಶದ ಪೈಪೋಟಿಯ ಬೆನ್ನಹಿಂದೆ ಬಿದ್ದಿದೆ ಶಿಕ್ಷಣದ ಫತಾಂಶೀಕರಣವಾಗುತ್ತಿದೆ.

ವಿಧ್ಯಾರ್ಥಿಗಳು, ಹೆತ್ತವರು, ಅಧ್ಯಾಪಕರು ಮತ್ತು ಶಿಕ್ಷಣ ಸಂಸ್ಥೆಗಳು ಫಲಿತಾಂಶಗಳ ಪೈಪೋಟಿಗಳಿಗೆ ಬಲಿಯಾಗಿದೆ. ಉತ್ತಮ ಫಲಿತಾಂಶ ಮತ್ತು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುವುದು ನಿಜವಾಗಿಯೂ ತಪ್ಪು ಎಂದು ಭಾವಿಸಬಾರದು ಆದರೆ ಅದು ಶಿಕ್ಷಣದ, ಶಿಕ್ಷಕರ ಮುಖ್ಯ ಗುರಿಯಾಗಿರಬಾರದು. ಶಿಕ್ಷಣ ಖಾಸಗಿಕರಣವಾದ ನಂತರ ಹೆತ್ತವರು ಮತ್ತು ಆಡಳಿತ ಮಂಡಳಿ ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹಾಕಿ ಫಲಿತಾಂಶಗಳ ಬೆನ್ನು ಬಿದ್ದಿದೆ. ಉತ್ತಮ ಫಲಿತಾಶದಿಂದ ಸಂಸ್ಥೆಯ ಗಣತೆ ಹೆಚ್ಚುತ್ತದೆ, ಹೊಸದಾಗಿ ಪ್ರವೇಶ ಪಡೆಯುವ ಮಕ್ಕಳ ಸಂಖ್ಯವೂ ಹೆಚ್ಚಾಗಬಹು, ಡೊನೇಷನ್ ಹೆಚ್ಚು ಪಡೆಯಬಹುದು ಎಂಬುವುದು ಮುಖ್ಯ ಉದ್ದೇಶವಾಗಿ ಬಿಟ್ಟಿದೆ. ಈ ಕಾರಣಕ್ಕೆ ಪಾಸ್‍ಗಿಂತ ಫೈಲ್‍ಗಳು ಹೆಚ್ಚಾಗಿ ನಡೆಯುತ್ತಿದೆ. ನಿಜವಾಗಿಯೂ “ಫೈಲ್” ಎಂಬ ಪದ ನಕರಾತ್ಮಕ ಎಂಬುವುದು ಶಿಕ್ಷಣ ತಜ್ಞರ ಅಭಿಪ್ರಾಯ. ಅಂಕಗಳ ಮೇಲೆ ಮಕ್ಕಳ ಸಾಮಥ್ರ್ಯವನ್ನು ಅಳೆಯುವುದ ಸರಿಯಲ್ಲ. ಕಡ್ಡಾಯ ಶಿಕ್ಷಣ ಹಕ್ಕು ಮಸೂದೆ (R.T.E) ಸರ್ವ ಶಿಕ್ಷಣ ಅಭಿಯಾನದ ಅಂಗವಾಗಿ 2008-09 ಸಾಲಿನಲ್ಲಿ 1 ರಿಂದ 8ನೇ ತರಗತಿಯವರೆಗೆ ಫೈಲ್ ಮಾಡಬಾರದಿರಲು ನೀತಿ ಜಾರಿಗೆ ಬಂದಿತ್ತು 8 ನೇ ಮತ್ತು 9 ನೇ ತರಗತಿಯಲ್ಲಿ ಫೈಲ್ ಮಾಡುವುದರಿಂದ ಮಕ್ಕಳು ಅರ್ಧದಲ್ಲೇ ಶಾಲೆ ತೊರೆವ ಸಾಧ್ಯತೆ ಹಿನ್ನಲೆಯಲ್ಲಿ ಫೈಲ್ ಮಾಡುವುದಕ್ಕಿಂತ ಪಾಸು ಮಾಡುವುದೇ ಸೂಕ್ತ. ಆದರೆ ಇವಿಷ್ಟು ವಿಚಾರಗಳನ್ನು ಎಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಿಸುತ್ತದೆ. ಫಲಿತಾಂಶದ ಉದ್ದೇಶದಿಂದ ಎಷ್ಟು ಫೈಲುಗಳು ಗಪ್ ಚುಪ್ ಆಗಿ ನಡೆಯುತ್ತಿದೆ ಫೈಲು ಮಾಡಿ ಎಷ್ಟು ಮಕ್ಕಳ ಭವಿಷ್ಯವನ್ನು ಭಗ್ನಗೊಳಿಸಿದೆ ಎಂಬುವುದರ ಬಗ್ಗೆ ಅನ್ವೇಷಣೆಯು ಶಿಕ್ಷಣ ಇಲಾಖೆಯಿಂದ ನಡೆಯಬೇಕಾಗಿದೆ. ಇತ್ತೀಚೆಗೆ ನನ್ನ ಅನುಭವಕ್ಕೆ ಬಂದ ಘಟನೆಯೊಂದನ್ನು ಪ್ರಸ್ತಾಪಿಸುತ್ತೇನೆ.

ಈ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲೆಗೆ ಬೇರೆ ಶಾಲೆಯಿಂದ ಬಂದ ಒಬ್ಬ ಹೊಸಾ ವಿಧ್ಯಾರ್ಥಿ ಹತ್ತನೇ ತರಗತಿಗೆ ಪ್ರವೇಶ ಪಡೆದುಕೊಂಡಿದ್ದ ಕಲಿಯಲು ಆಸಕ್ತಿ ಇರುವವನಾಗಿದ್ದ ಅವನ ವರ್ಗಾವಣೆ ಪತ್ರ ಪರಿಶೋಧಿಸಿದಾಗ ಅದರಲ್ಲಿ ಫೈಲ್ ಎಂದು ನಮೋದಿಸಲಾಗಿತ್ತು ಮುಖ್ಯ ಶಿಕ್ಷಕಿ ಈ ಬಗ್ಗೆ ಅವನ ಹೆತ್ತವರಲ್ಲಿ ವಿಚಾರಿಸಿ ಅನುತೀರ್ಣವನ್ನು ತಿದ್ದು ಪಡಿ ಮಾಡಿ ತರಲು ಕಲುಹಿಸಲಾಯಿತು ಆದರೆ ಹೆತ್ತವರು ನಿರಾಶೆಯಿಂದ ಮರಳಿದರು ಯಾಕೆಂದರೆ ಆ ಶಾಲೆಯವರು ತಿದ್ದುಪಡಿ ಮಾಡಲು ಒಪ್ಪಲಿಲ್ಲ ಅದೂ ಅಲ್ಲದೆ ಆ ಶಾಲೆಯಲ್ಲಿ ಒಂಬತ್ತನೇ ತರಗತಿಯಿಂದ ಸುಮಾರು ಇಪ್ಪತ್ತು ವಿಧ್ಯಾರ್ಥಿಗಳನ್ನು ಫೈಲು ಮಾಡಲಾಗಿದೆ ಎಂದು ನಮಗೆ ತಿಳಿದು ಬಂತು. ನಾವು ನಿಸ್ಸಹಾಯಕರಾದೆವು ಅವನಿಗೆ ಹತ್ತನೇ ತರಗತಿಯಲ್ಲಿ ಕಲಿಯಲು ಸಾಧ್ಯವಿಲ್ಲದ ಕಾರಣಕ್ಕೆ ಅವುನು ಶಾಲೆ ತೊರೆಯಬೇಕಾಗಿ ಬಂತು. ಒಂದೂ ಅವನು 9ನೇ ತರಗತಿಯಲ್ಲಿ ಒಂದು ವರ್ಷ ಮತ್ತೆ ಕೂರಬೇಕು ಇಲ್ಲದಿದರೆ ಟುಟೋರಿಯಲ್ ಸೇರಿ ಹತ್ತನೇ ತರಗತಿ ಕಲಿಯಬೇಕು ( ಹೆಚ್ಚಿನವರು ಟುಟೋರಿಯಲ್ ಟ್ಯೂಷನ್ ಕ್ಲಾಸನ್ನೇ ಆಯ್ಕೆ ಮಾಡುತ್ತಾರೆ) ಅಂತು ಆ ಮಗುವಿನ ಶಾಲಾ ಕನಸ್ಸು ಅಲ್ಲಿಗೆ ಮುಕ್ತಾಯವಾಯಿತು.

ಇದಕ್ಕೆಲ್ಲ ಹೊಣೆ ಯಾರು ? ಶಿಕ್ಷಕರೆ, ಹೆತ್ತವರೆ, ಅಥವಾ ಶಿಕ್ಷಣ ಸಂಸ್ಥೆಗಳೆ ಇವರ್ಯಾರು ಈ ಹೊಣೆಯನ್ನು ಹೊತ್ತುಕೊಳ್ಳುವುದಿಲ್ಲ ಬದಲಾಗಿ ವಿಧ್ಯಾರ್ಥಿಗಳೇ ಇದರ ಜವಾಬ್ದಾರರು ಎಂದು ಬೆರಳು ತೊರಿಸುತ್ತಾರೆ. ಇದು ಕೇವಲ ಒಂದು ಶಾಲೆಯ ಉದಾಹರಣೆ ಹೆಚ್ಚಿನ ಎಲ್ಲಾ ಖಾಸಗಿ ಶಾಲೆಗಳ ಅವಸ್ಥೆ ಇದೇ ಆಗಿದೆ. ಹೆಚ್ಚು ಅಂಕಗಳಿಸಿದರೆ ಉಚಿತ ಸೀಟ್, ಅಂತರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೂಗ, ಉತ್ತಮ ವೇತನ, ಸ್ಕಾಲರ್ ಶಿಪ್ ಮತ್ತು ಸಮಾಜದಲ್ಲಿ ದೊಡ್ಡ ಗೌರವ ಇದೆಲ್ಲವನ್ನು ಮುಂದಿಟ್ಟು ರಾತ್ರಿ ಹಗಲು ಕಣ್ಣಿಗೆ ಎಣ್ಣೆ ಬಿಟ್ಟು ಆರೋಗ್ಯ ಹದಗೆಡಿಸಿ ಓದಿ ಒಂದೊ ಎರಡೊ ಅಂಕ ಕಡಿಮೆ ಬಂದರೆ ಮಾನಸಿಕ ಸ್ಥಿರತೆ ಕಳಕೊಳ್ಳುವ, ಆತ್ಮಹತ್ಯೆಗೆಯ್ಯುವ ಮಕ್ಕಳ ಸಂಖ್ಯೆ ಹೆಚ್ಚಾಗಳು ಫಲಿತಾಂಶಗಳ ಪೈಪೋಟಿ ಮತ್ತು ಹೆಚ್ಚು ಅಂಕಗಳಿಗೆ ಬೇಕಾಗಿ ಮಾಡುವ ಒತ್ತಡವೇ ಮೂಲ ಕಾರಣ.

ಫಲಿತಾಂಶಗಳ ಪೈಪೋಟಿಯಿಂದಾಗಿ ವಿಧ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ. ಫೈಲಾದ ಕಾರಣಕ್ಕೆ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ, ಆತ್ಮಹತ್ಯೆಗೆ ಶರಣಾಗುತ್ತಾರೆ ಕಲಿಕೆ ಬಿಟ್ಟು ಕೂಲಿ ಕೆಲಸಕ್ಕೆ ಹೋಟೆಲ್ ಕೆಲಸಕ್ಕೆ ಗುಜರಿ ಹೆಕ್ಕಲು, ಗ್ಯಾರೇಜ್ ಗಳಲ್ಲಿ ಸೇರಿಕೊಂಡು ತಮ್ಮ ಕನಸ್ಸಿನ ಗೋಪುರವನ್ನು ಅಲ್ಲಿಗೆ ಹೊಡೆದುರುಳಿಸುತ್ತಾರೆ. ಶಿಕ್ಷಣ ಇಲಾಖೆ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಯಾವ ಕಾರಣಕ್ಕೆ ಫೈಲ್ ಮಾಡಲಾಯಿತು ಎಂಬುವುದನ್ನು ಪರಿಶೀಲಿಸಬೇಕಾಗಿದೆ. ಹಣವನ್ನೇ ಮುಖ್ಯ ಗುರಿಯಾಗಿಸಿದ ಸಂಸ್ಥೆಗಳಿಗೆ ವಿಧ್ಯಾರ್ಥಿಗಳ ಬವಿಷ್ಯದ ಬಗ್ಗೆ ಚಿಂತಿಸಲು ಸಾಧ್ಯವಿಲ್ಲ ಈ ಬಗ್ಗೆ ಶಿಕ್ಷಣ ರಂಗದಲ್ಲಿ ಸೇವೆ ಮಾಡುವ ಎಲ್ಲಾ ಸಮಾಜ ಮುಖಿ ಕಾರ್ಯಕರ್ತರು ಒಂದು ಶೈಕ್ಷಣಿಕ ಅನ್ವೇಷಣೆ ನಡೆಸಬೇಕಾದ್ದು ಅಗತ್ಯವಿದೆ ಎಂದನಿಸುತ್ತದೆ

LEAVE A REPLY

Please enter your comment!
Please enter your name here