ಲೇಖಕಿ-ಚೈತ್ರಿಕಾ ನಾಯ್ಕ ಹರ್ಗಿ

ಒಂದೆಡೆ 2024ರಲ್ಲಿ ಮಂಗಳ ಗೃಹಕ್ಕೆ ಹೋಗುವ ಯೋಜನೆಗೆ ಈಗಾಗಲೇ ಅಂದರೆ 2015ರಲ್ಲೇ ಮಿಲಿಯನ್ ಗಟ್ಟಲೆ ಕೊಟ್ಟು ರೆಜಿಸ್ಟರ್ ಮಾಡಿಸಿದ ಭಾರತೀಯ 2 ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಹಾಗೆ 2017ರಲ್ಲಿ 1.3 ಲಕ್ಷ ಭಾರತೀಯರು ನಾಸಾ ದ 2018 ರ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಿದ, ಆಶಾವಾದಿ ಮತ್ತು ಶ್ರೀಮಂತ ಜನರನ್ನು ಹೊಂದಿರುವ ರಾಷ್ಟ್ರ ನಮ್ಮದು.

ಇನ್ನೊಂದೆಡೆ ನಮ್ಮ ಸರ್ಕಾರಗಳು ನಮ್ಮ ಬದುಕನ್ನು ಇನ್ನಷ್ಟು ಮತ್ತಷ್ಟು ವೇಗವಾಗಿ ಸಾಗಬೇಕು ಎಂದು ಬಯಸಿ ಬುಲೆಟ್ ರೈಲು ಯೋಜನೆ ಪ್ರಸ್ತಾಪಿಸುತ್ತವೆ. ಮತ್ತೊಂದೆಡೆ ನಮ್ಮ ಸಂಸತ್ತಿನ 10 ಕಿ.ಮೀ ವ್ಯಾಪ್ತಿಯೊಳಗೆ ತಗಡಿನ ಶೀಟ್ ಹಾಕಿ ಗುಡಿಸಲು ಕಟ್ಟಿ ಮಕ್ಕಳನ್ನು ಗಲ್ಲಿಯಲ್ಲಿ ಕಕ್ಕಸ್ಸಿಗೆ ಕೂರಿಸಿ ಅಲ್ಲೆ ರೋಡಿನಲ್ಲಿ ಸ್ನಾನ ಮಾಡಿ ಅಲ್ಲೆ ಸ್ಟಾರ್ ಹೊಟೆಲ್ ಗಳ ಬಟ್ಟೆ ಒಗೆಯುವ ದೋಬಿ ಗಳಿದ್ದಾರೆ. ಕೇವಲ 5 ಕಿ.ಮೀ ವ್ಯಾಪ್ತಿಯಲ್ಲಿ ಮೇಣದಬತ್ತಿ ಬಲೂನು ಮಾರುವ 4 ವರ್ಷದಿಂದ ಹಿಡಿದು 14 ವರ್ಷದ ನೂರಾರು ಮಕ್ಕಳಿದ್ದಾರೆ.

ಇವರನ್ನೆಲ್ಲಾ 70 ವರ್ಷಗಳಿಂದ ಹೀಗೆ ಇಲ್ಲೆ ನೋಡಿಕೊಂಡು ದಲಿತ ಬಡವ ಅಲ್ಪಸಂಖ್ಯಾತ ಹಿಂದುಳಿದ ವರ್ಗದ ಹೆಸರು ಹೇಳಿ ಒಬ್ಬ ಭಾರತೀಯ ಮನುಷ್ಯನ ಸರಾಸರಿ ಜೀವಿತಾವಧಿಯಷ್ಟು ಕಾಲ ಆಳಿದ ಸರ್ಕಾರವಿದೆ.

ಕಾನೂನು ಪುಸ್ತಕದಲ್ಲಿ ಉಳಿದಿವೆ, ನ್ಯಾಯಾಲಯದ ತೀರ್ಪು ಕೇಸ್ ಸ್ಟಡಿ ಹಾಗೂ ಅಂದಿನ ಟಿವಿ ಪತ್ರಿಕೆ ಮಾಧ್ಯಮಗಳ ಪೇಜು ತುಂಬಿಸಲು ಮೀಸಲಾಗಿವೆ.

ಸಾಮಾಜಿಕ ಸಮೀಕ್ಷೆಗಳು ವರದಿಗಳನ್ನು ಸುಳ್ಳು ಅಂಕಿ-ಸಂಕೆಗಾಗಿ ತಿರುವಿ ಹಾಕಬೇಕಷ್ಟೆ. ಕಮಿಷನ್ ಗಳ ಶಿಫಾರಸುಗಳು ಶಿಫಾರಸ್ಸುಗಳಾಗಿ, ಯೋಜನೆಗಳ ಹಣ ರಾಜಕಾರಣಿಗಳ ಗುತ್ತಿಗೆದಾರರ ಜೇಬು ತುಂಬಿವೆ.

ಇತ್ತಕಡೆ ಈ ಜನರಿಗೆ ಧ್ವನಿಯು ಇಲ್ಲ, ರಾಜಕೀಯ, ಸಂವಿಧಾನ, ಕಾನೂನಿನ ಗಂಧಗಾಳಿಯೂ ಇಲ್ಲದೆ ತೀರಾ ಕಳಪೆ ಮಟ್ಟದ ಜೀವನ ಸಾಗಿಸುತ್ತಾರೆ. ಅದೇನೆ ಹೇಳಿ ಕೆಲವೊಮ್ಮೆ ಸಂಘಟಿತ ಹೋರಾಟಗಳು ಕೂಡ ನಿರಂತರ ನಡೆದರೂ ಅವು ಕೂಡ ಮಣ್ಣುಗೂಡುತ್ತವೆ. ಸಫಾಯಿ ಕರ್ಮಾಚಾರಿಗಳು ( ಮ್ಯಾನ್ಯುವಲ್ ಸ್ಕಾವೆಂಜರ್ಸ್ )

ಭಾರತದಲ್ಲಿ ಅದು ಅಧಿಕ ಜನರು ಹಿಂದೂಗಳೆ ಅಂದಾಜು 20,500 ಜನರು ಇದ್ದಾರೆ. ಲೋಕಸಭೆಯ ವರದಿ 5 ದಿಗಳಿಗೊಮ್ಮೆ ಸಫಾಯಿ ಕರ್ಮಾಚಾರಿ ಸಾಯುತ್ತಾನೆ ಎನ್ನುತ್ತದೆ. ಹಾಗೇ ಪ್ರತಿ 7 ದಿನಕ್ಕೆ 2 ಸಾಯುತ್ತಾರೆ ಎಂದು ಎನ್.ಜಿ.ಒ ಹೇಳುತ್ತವೆ. ಹಾಗೆಯೇ 2013ರಲ್ಲಿ The prohibition of employment and manual scavengers and their rehabilitation ಕಾಯಿದೆ ಬಂದಿದೆ

ಅಕ್ಟೋಬರ್ ನಲ್ಲಿ ಸರ್ಕಾರ ಪುನರ್ವಸತಿ ಇನ್ನಿತರ ಸೌಲಭ್ಯ ಒದಗಿಸುತ್ತೇವೆ ಎಂದು ಹೇಳಿದೆ.

ಹೋರಾಟ ತಿಂಗಳಿಗೊಮ್ಮೆ ನಡೆಯುತ್ತಲೇ ಇರುತ್ತವೆ. ಬಿಜೆಪಿ ಪ್ರಣಾಳಿಕೆ 2014ರಲ್ಲಿ ಜನ ಜಾಗೃತಿಯ ಮೂಲಕ ಶೌಚಾಲಯ ನಿರ್ಮಾಣ ಮಾಡುತ್ತೇವೆ, ಬಯಲು ಶೌಚ ಮುಕ್ತ ಮಾಡುತ್ತೇವೆ, ವೈಜ್ಞಾನಿಕ ಮತ್ತು ಆಧುನಿಕ ಒಳಚರಂಡಿ ನಿರ್ಮಿಸುತ್ತೇವೆ ಎಂದು ಹೇಳಿತು. ಆದರೆ ಸಾಧಿಸಿದ್ದು ಮಾತ್ರ ಕೇವಲ 31.8%. ಈ ವೈಫಲ್ಯಕ್ಕೆ ಸರ್ಕಾರ ಮಾತ್ರ ಅಲ್ಲ ಮೂಲವಾಗಿ ಕಾರಣಕರ್ತರು ನಾವು.

ನಾವು ಸರಿಯಾಗಿ ಕಸ ವಿಂಗಡಿಸಿದರೆ ನಮ್ಮ ಚರಂಡಿ ವ್ಯವಸ್ಥೆ ಹದಗೆಡುವುದಿಲ್ಲ.

ಇನ್ನು ನಾವು ಅವರ ಸಾವಿನ ಬಗ್ಗೆ ಉದಾಸೀನತೆ. ಕುಡಿದು ಟ್ಯಾಂಕ್ ಇಳಿದ ಸತ್ತರೆಂಬ ಮಾತುಗಳು. ನಮ್ಮ ಅಡುಗೆ ಮನೆಯ ತ್ಯಾಜ್ಯ ಒಂದು ದಿನ ಮನೆಯೊಳಗೆ ಇಟ್ಟು ಸಹಿಸಲು ಸಾಧ್ಯವಾಗುವುದಿಲ್ಲ ಅವರ ಯಾವ ಶೋಕಿ ಮಜಾ ಮಾಡಲು ಅಲ್ಲ 2 ಜೊತೆ ಬಟ್ಟೆ ಮೂರು ಹೊತ್ತಿನ ಊಟಕ್ಕೆ ಇಷ್ಟೆಲ್ಲ ಸಹಿಸಬೇಕು. ಕುಡಿದ ಬಾಟಲಿಗಳು, ಬಳಸಿದ ಪ್ಯಾಡ್, ಮಕ್ಕಳ ಡೈಪರ್, ಮನೆ ತ್ಯಾಜ್ಯ, ತಿಂದು ಎಸೆಯುವ ಕವರ್ ಗಳನ್ನು ಸರಿಯಾಗಿ ಡಿಸ್ಪೋಸ್ ಮಾಡಲು ಬರದಿದ್ದವರು ಅನಾಗರಿಕರ ಸಾಲಿನ ಮೊದಲಿಗರು.

ನಾವು ಕಸ ಹರಡುವ ಮೂಲಕ ಕೊಳಕು ಮಾಡುವ ಮೂಲಕ ಅವರಿಗೆ ಉದ್ಯೋಗ ಸೃಷ್ಟಿಸಿದಂತಾಗುತ್ತದೆ, ಅವರ ಕೆಲಸವೇ ಅದು ಎಂದು ಮಾತನಾಡುವ ಕೆಟ್ಟ ಜನ ನಮ್ಮ ಮಧ್ಯೆ ಇರುವ ಪ್ರಾಣಿಗಳೂ ಕೂಡ ಇದ್ದಾರೆ.

ನಾವು ಎಸೆಯುವ ಕಸ ಹೊಲಸು ನಾವೇ ಎತ್ತಬೇಕು. ಕೊನೆ ಪಕ್ಷ ಅವಕ್ಕಾಗಿ ಇರುವ ನಿರ್ದಿಷ್ಟ ಸ್ಥಳದಲ್ಲಿ ಸರಿಯಾಗಿ ಹಾಕಬೇಕು. ನಮ್ಮ ನಮ್ಮ ಬಚ್ಚಲು ಟಾಯ್ಲೆಟ್ ಗಳನ್ನು ನಾವು ತೊಳೆಯುವಷ್ಟಾದರೂ ಮನುಷ್ಯರಾಗಬೇಕು. ಸರ್ಕಾರದ ಜೊತೆ ನಾವು ಅವರ ಏಳಿಗೆಗೆ ಕೈಜೋಡಿಸಿದರೆ ಅವರ ಪರಿಸ್ಥಿತಿ ಬೇಗ ಸುಧಾರಿಸುತ್ತದೆ. ನಾವೂ ಇದಕ್ಕೆಲ್ಲ ಜವಾಬ್ದಾರರು ಹೊಣೆಗಾರರು.

1 COMMENT

LEAVE A REPLY

Please enter your comment!
Please enter your name here