ಲೇಖಕರು: ಮೌ.ವಹೀದುದ್ದಿನ್ ಖಾನ್
ಅನುವಾದ: ತಲ್ಹಾ.ಕೆ.ಪಿ

ಇಂದಿನ ದಿನಗಳಲ್ಲಿ ತಯಾರಾಗುತ್ತಿರುವ ಪ್ಲಾಸ್ಟಿಕ್ ಹಣ್ಣು ಮತ್ತು ಹೂವು ನೋಡಲು ನಿಜವಾದ ಹಣ್ಣು ಮತ್ತು ಹೂವಿನಂತಿದ್ದರೂ, ಮೂಸಿ ನೋಡಿದರೆ ಹೂವಿನ ಪರಿಮಳವಿರುವುದಿಲ್ಲ. ಬಾಯಿ ಹಾಕಿದರೆ ಹಣ್ಣಿನ ರುಚಿ ಇರುವುದಿಲ್ಲ. ಇದೇ ರೀತಿ ಈಗಿನ ಕಾಲದಲ್ಲಿ ಧರ್ಮ ನಿಷ್ಠೆಯ ವಿಚಿತ್ರವಾದ ರೂಪವು ಸೃಷ್ಟಿಯಾಗಿದೆ.ಬಾಹ್ಯವಾಗಿ ಆತನ ಬಳಿ ಸಂತೋಷ ಪಡುವಷ್ಟು ಧರ್ಮ ನಿಷ್ಠೆಯು ಕಾಣಬಹುದು ಆದರೆ ಆತನನ್ನು ಸಮೀಪಿಸಿ ಅನುಭವಿಸಿದಾಗ, ಆತನ ಬಳಿ ಧರ್ಮದ ನಿಜವಾದ ಸಾರಾಂಶವಾದ, ದೇವ ಭಯ ಮತ್ತು ಮನುಷ್ಯನಿಗಾಗಿರಬೇಕಾದ ಸಹಾನುಭೂತಿಯೇ ಆತನಲ್ಲಿ ಇರುವುದಿಲ್ಲ.

ಪ್ಲಾಸ್ಟಿಕಿನ ಕಾಲದಲ್ಲಿ ಧರ್ಮ ನಿಷ್ಠೆಯು ಪ್ಲಾಸ್ಟಿಕಿನದ್ದೇ ಆಗಿ ಹೋಗಿದೆ.ಜನರು ಧರ್ಮ ನಿಷ್ಠರಾಗಿದ್ದರೆ ಆದರೆ ಯಾರೂ ಕೂಡ ತನ್ನ ತಪ್ಪೊಪ್ಪಿಕೊಳ್ಳಲು ಸಿದ್ಧರಿಲ್ಲ. ಯಾರೂ ಕೂಡ ದೇವನಿಗಾಗಿ ತನ್ನ ಸೊಕ್ಕನ್ನು ಅಂತ್ಯಗೊಳಿಸಲು ಸಿದ್ಧರಿಲ್ಲ. ತನ್ನ ವಯಕ್ತಿಕ ಲಾಭಕ್ಕಾಗಿ ಬಹಳಷ್ಟು ಜನರು ಪರಸ್ಪರರ ಮಧ್ಯ ಇರುವ ದೂರುಗಳು ಮತ್ತು ಅಭಿಪ್ರಾಯ ವ್ಯತ್ಯಾಸಗಳನ್ನು ಮರೆತು ಒಂದಾಗಿದ್ದಾರೆ. ಆದರೆ ದೇವನ ಈ ಭೂಮಿಯಲ್ಲಿ ದೇವನಿಗಾಗಿ ಪರಸ್ಪರರ ಮಧ್ಯೆ ಇರುವ ಭಿನಾಭಿಪ್ರಾಯ ಮತ್ತು ದೂರುಗಳನ್ನು ಮರೆತು ಒಂದಾಗುವವರು ಯಾರೂ ಇಲ್ಲ.

ಧರ್ಮ ಎಂಬುದು ನಿಜವಾದ ಅರ್ಥದಲ್ಲಿ ಮನುಷ್ಯನು ವಾಸ್ತವದಲ್ಲಿ ತಿಳಿಯಬೇಕಾಗಿರುವುದು, ಈ ಬ್ರಹ್ಮಾಂಡದ ಸೃಷ್ಟಿಕರ್ತನಿದ್ದಾನೆ ಮತ್ತು ಆತನೇ ಎಲ್ಲಾ ವಸ್ತುಗಳನ್ನು ಸೃಷ್ಟಿಸಿದ್ದಾನೆ.ಆತ ಮರಣಾನಂತರ ಮಾನವರನ್ನು ಒಟ್ಟುಗೂಡಿಸಿ, ಅವರ ಲೆಕ್ಕ ಪರಿಶೋಧನೆಮಾಡಿ, ಎಲ್ಲರಿಗೂ ಅವರವರ ಕರ್ಮಗಳಿಗನುಸಾರವಾಗಿ ಚಿರಾಯುವಾದ ಸ್ವರ್ಗ ಅಥವಾ ನರಕ ಪ್ರವೇಶ ಮಾಡಿಸುವನು . ಈ ವಾಸ್ತವವು ಎಷ್ಟು ಕಠಿಣವಾಗಿದೆ. ಎಂದರೆ , ಅದು ಒಂದು ವೇಳೆ ನಿಜವಾಗಿ ಒಬ್ಬನ ಬುದ್ಧಿ ಮತ್ತು ಹೃದಯ ಸ್ಪರ್ಶಿಸಿ ಅಂತರಾಳಕ್ಕೆ ಇಳಿದು ಬಿಟ್ಟರೆ ಮನುಷ್ಯ ಜೀವನವು ಎಲ್ಲಿಂದ ಎಲ್ಲಿಗೂ ಕ್ರಮಿಸಿ ಬಿಡುತ್ತದೆ. ಆತ ಮಾನವನನ್ನು ನರಕಾಗ್ನಿಯಂತೆ ಕೊಂಡೊಯ್ಯುವ ಎಲ್ಲಾ ವಿಷಯಗಳ ಕುರಿತು ಸೂಕ್ಷ್ಮತೆ ವಹಿಸುತ್ತಾನೆ. ಆತ ತನ್ನ ಸ್ವರ್ಗದ ತೋಟದ ಬಳಿ ಕೊಂಡೊಯ್ಯುವ ಎಲ್ಲಾ ವಸ್ತುಗಳನ್ನು ಅತಿಯಾಗಿ ಇಷ್ಟಪಡುತ್ತಾನೆ. ಆತ ಎಲ್ಲಾ ವಸ್ತುಗಳಿಗಿಂತ ದೇವನನ್ನು ಹೆಚ್ಚು ಭಯ ಪಡುತ್ತಾನೆ ಮತ್ತು ಎಲ್ಲಾ ವಸ್ತುಗಳಿಗಿಂತ ಮಿಗಿಲಾಗಿ ದೇವನನ್ನು ಪ್ರೀತಿಸಲಾರಂಭಿಸುತ್ತಾನೆ. ಆತ ತನ್ನ ವೈಯಕ್ತಿಕ ಅಸ್ತಿತ್ವವನ್ನು ದೇವನ ಮಹಾ ಅಸ್ತಿತ್ವದಲ್ಲಿ ಕಳೆದು ಕೊಳ್ಳುತ್ತಾನೆ.

ದೇವಾ ಮತ್ತು ಪರಲೋಕದ ಕುರಿತು ಆತನಲ್ಲಿ ವಿಕಾಸ ಹೊಂದಿರುವ ಸೂಕ್ಷ್ಮತೆಯು, ಆತನಿಗೆ ದೇವನ ದಾಸರ ಮೇಲೂ ಅಷ್ಟೇ ಸೂಕ್ಷ್ಮತೆ ಮತ್ತು ಜವಾಬ್ದಾರಿಕೆಯನ್ನು ನೀಡುತ್ತದೆ. ಒರ್ವನೊಂದಿಗೆ ಕೆಟ್ಟದಾಗಿ ವರ್ತಿಸುವಾಗ ಆತನಿಗೆ ತಾನು ತನ್ನನ್ನೇ ನರಕದಲ್ಲಿ ಬೀಳಿಸಿದಂತೆ ಭಾಸವಾಗುತ್ತದೆ.

ಮನುಷ್ಯನೊಂದಿಗೆ ಅಕ್ರಮವಾಗಿ ವ್ಯವಹರಿಸುವಾಗ ಆತನು ಎಲ್ಲಾ ವ್ಯಕ್ತಿಯು ತನ್ನೊಂದಿಗೆ ನರಕದ ದೇವಾ ಧೂತರನ್ನಿಟ್ಟು ಕೊಂಡಂತೆ ಹೆದರಲಾರಂಭಿಸುತ್ತಾನೆ. ಜನರೊಂದಿಗೆ ಅನ್ಯಾಯವಾಗಿ ವ್ಯವಹರಿಸುವಾಗ, ಆತನು ತಾನು ತನ್ನನ್ನೇ ಆಳವಾದ ಗುಹೆಯಲ್ಲಿ ದುಡಿದಂತೆ ತಿಳಿದುಕೊಳ್ಳುತ್ತಾನೆ. ಈಗ ಪ್ರತಿ ವ್ಯಕ್ತಿಯು ಆತನ ಮುಂದೆ ಕೇವಲ ಒಬ್ಬ ಮನುಷ್ಯನಾಗಿರದೆ ದೇವಾನು ತನ್ನ ಎಲ್ಲಾ ದೇವಾ ಧೂತರೊಂದಿಗೆ ನಿಂತಿರುವ ಒಂದು ಅಸ್ತಿತ್ವವಾಗಿ ಬಿತ್ತುತ್ತಾನೆ .

LEAVE A REPLY

Please enter your comment!
Please enter your name here