ವ್ಯಕ್ತಿ ಪರಿಚಯ

ಎಂ . ಅಶೀರುದ್ದೀನ್ ಮಂಜನಾಡಿ

ಕಾಲಿಗ್ರಾಫಿ (Calligraphy)ವಿಶ್ವದ ಅತ್ಯಂತ ಪುರಾತನ ಕಲೆಯಲ್ಲಿ ಒಂದು. ‘ಕೊಲೆನ್’ ‘ಗ್ರಾಫಿಕ್’ ಎಂಬ ಗ್ರೀಕ್ ಭಾಷೆಯ ಪದಪ್ರಯೋಗದಿಂದ ಬಳಕೆಯಾದ ಕಾಲಿಗ್ರಾಫಿಯೂ ವಿಶ್ವದ ಎಲ್ಲಾ ಭಾಷೆಯಲ್ಲಿಯೂ ಅದರದ್ದೇ ಆದ ಶೈಲಿಯಲ್ಲಿ ಪ್ರಸಿದ್ದವಾಗಿದೆ. ಭಾರತದಲ್ಲಿ ಅಷ್ಟೇನು ಪರಿಚಿತ ಮತ್ತು ಪ್ರಾಮುಖ್ಯತೆ ಇಲ್ಲದಿದ್ದರೂ ಚಾಲ್ತಿಯಲ್ಲಿದೆ. ಗೋಡೆ ಬರಹ, ಆಮಂತ್ರಣ ಪತ್ರಿಕೆ, ಸಿನಿಮಾ ಟೈಟಲ್ ಗಳಿಗೆ ಸೀಮಿತವಾಗಿದೆ. ದೇವನಗಿರಿ,ಇಂಡಿಯನ್ ಕಾಲಿಗ್ರಾಫಿ, ನಾರಾಯಣ ಪಟ್ಟದರಿಯವರ ಮಲಯಾಳಂ ಶೈಲಿಯೂ ಬಳಸಲಾಗುತ್ತದೆ. ಕಾಲಿಗ್ರಾಫಿಗೆ ಅತೀ ಹೆಚ್ಚು ಪ್ರಾಶಸ್ತ ಕೊಡುವ ಎರಡು ಭಾಷೆಗಳೆಂದರೆ ಅರೆಬಿಕ್ ಮತ್ತು ಚೈನೀಸ್. ಪರ್ಶಿಯನ್ ಮತ್ತು ಉರ್ದು ಭಾಷಾ ಪ್ರಭಾವದಿಂದಾಗಿ, ವಿದೇಶಿ ಅರೆಬಿಕ್ ರಾಜರುಗಳ ಆಗಮನದಿಂದಾಗಿ ಪರಿಚಿತವಾದ ಅರಬಿಕ್ ಕಾಲಿಗ್ರಾಫಿ(Arabic Calligraphy ) ಎಂಬ ಕಲೆಗೆ ಭಾರತದಲ್ಲಿಯೂ ಹೆಚ್ಚು ಪ್ರೋತ್ಸಾಹವಿದೆ ಬೇಡಿಕೆಯೂ ಇದೆ. ಮೊಘಲರ,ದೆಹಲಿ ಸುಲ್ತಾನರ, ಬಿಜಾಪುರ ಸುಲ್ತಾನರ ವಾಸ್ತುಶಿಲ್ಪಗಳ ಕೆತನೆಗಳ ಶೈಲಿಯೂ ಕಾಲಿಗ್ರಾಫಿ ಕಲೆನ್ನೂಳಗೊಂಡಿದೆ.ಈ ಕಲೆಯ ಬೆಳವಣಿಗೆಯಲ್ಲಿ ಭಾರತೀಯ ಕಲಾವಿದರ ಪಾತ್ರವೂ ಮಹತ್ವದ್ದಾಗಿದೆ ಎಂಬುವುದು ಹೆಮ್ಮೆಯ ವಿಷಯ.

ಅರೆಬಿಕ್, ಕುರಾನಿಕ್, ಇಸ್ಲಾಮಿಕ್,ಪರ್ಶಿಯನ್, ಬಗ್ದಾದಿ, ಮಿಸ್ರಿ(ಈಜಿಪ್ತ್) ಅರೆಬಿಕ್ ಕಾಲಿಗ್ರಾಫಿಯ ಪ್ರಮುಖ ವಿಭಾಗಗಳು. ಇರಾನ್, ಇರಾಕ್, ಬಗ್ದಾದ್,ಈಜಿಪ್ತ್, ತುರ್ಕಿ, ಜೋರ್ಡಾನ್, ಮಕ್ಕಾ,ಮದೀನಾ, ಪ್ರದೇಶಗಳು ಬಹಳಷ್ಟು ಕಾಲದಿಂದ ಈ ಕಲೆಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ.

ಝೊಮಾಫಿಕ್ ಕಾಲಿಗ್ರಾಫಿ ( zoomorphic Calligraphy) ಅಕ್ಷರಗಳನ್ನು ಚಿತ್ರಗಳ ರೂಪದಲ್ಲಿ ರಚಿಸುವುದು ಒಂದು ವಿಭಿನ್ನ ರೀತಿಯ ಕಲೆಯಾಗಿದೆ. ನಮಿರ್ (ಸಿಂಹ) ಫೀಲ್ (ಆನೆ) ಖೈಲ್(ಕುದುರೆ) ನಮ್ಲ್ (ಇರುವೆ) ಇತ್ಯಾದಿಗಳ ಹೆಸರಿನಲ್ಲಿ ಅವುಗಳ ಚಿತ್ರದೊಂದಿಗೆ ರಚಿಸಲಾಗುತ್ತದೆ. ಹಾಗೂ ಮನುಷ್ಯರ ರೂಪದ ಶೈಲಿಯಲ್ಲಿಯೂ ಬಳಸಲಾಗುತ್ತದೆ. ಖಲೀಲ್ ಅಸ್ಹಾಬಿಯವರು ರಚಿಸಿದ ಅತ್ತಹಿಯಾತ್ ಗೆ ಕೂತುಕೊಂಡ ಚಿತ್ರವು ಬಗ್ದಾದಿನಲ್ಲಿ ಪ್ರಸಿದ್ದವಾದ ಝೊಮೋಫಿಕ್ ಕಾಲಿಗ್ರಾಫಿಯಾಗಿದೆ. ಉಸ್ತಾದ್ ಹಸನ್ ಶಲಾಬಿ, ಕಮಲ್ ಬಾಬ ಈ ಕಲೆಯ ಪ್ರಸಿದ್ದರು

ಈ ಕಲೆಯು ವ್ಯಾಪರದ ದೃಷ್ಟಿಯಿಂದಲೂ,ಸಾಮಾಜಿಕ ಪರಿಶ್ಕರಣೆಗಿರುವ ಸಂದೇಶವಾಗಿಯೂ ಅನ್ಯಾಯದ ವಿರುದ್ದ ಪ್ರತಿಭಟಿಸಲು ಇರುವ ಅಸ್ತ್ರವಾಗಿಯೂ ಬಳಸಲಾಗುತಿತ್ತು. ಈ ಕಾರಣದಿಂದಲೇ ಬಗ್ದಾದಿನ ಖಲೀಲ್ ಅಸ್ಹಾಬಿಯವರನ್ನು ಅಮೇರಿಕಾದ ಸೈನ್ಯವು ಗುಂಡಿಟ್ಟು ಕೊಂದಿದೆ.

ಕ್ಲಾಸಿಕಲ್ ಕಾಲಿಗ್ರಾಫಿ ಶೈಲಿಯಲ್ಲಿ ಹಲವು ವಿಧಗಳಿವೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಸುಲುಸು, ನಸ್ಕ್,ದೀವಾನಿ, ಜಾಲಿದೀವಾನಿ, ರಿಕಾ, ಕೂಫಿ,ಹಾಗೆಯೆ, ಕತ್ತ್ ಇಶ್ಮಾನ್ ಕತ್ತ್ ಯೂನಾ,ಶೈಲಿಯೂ ಪ್ರಸಿದ್ದವಾಗಿದೆ. ಇನ್ನಿತರ ಶೈಲಿಗಳೆಂದರೆ ಮಗ್ರಿಬ್,ನಸ್ತಲಿಕ್,ಮುಅಲ್ಲಿಲ್, ಕರೀಶ್ಮ, ಸುಂಬಲಿ ಶೈಲಿಗಳೂ ಇವೆ. ಕೂಫಿ ಶೈಲಿಯೂ ಪ್ರಸ್ತುತ ಅತ್ಯಂತ ಪ್ರಸಿದ್ದವಾದದ್ದು.

ಅರಬಿಕ್ ಕಾಲಿಗ್ರಾಫಿ ಕಲೆಗೆ ಭಾರತೀಯರ ಕೊಡುಗೆಯು ಅಪಾರವಾದದ್ದು. ಭಾರತೀಯರು ಅರಬಿ ಬಲ್ಲವರಲ್ಲ ಅವರಿಗೆ ಕಾಲಿಗ್ರಾಫಿಯ ಬಗ್ಗೆ ಅಷ್ಟು ಒಲವಿಲ್ಲ ಎಂಬ ಬಗ್ಗೆ ತಾತ್ಸರ ಮನೋಭಾವ ಮತ್ತು ಅರೇಬಿಯನ್ ಜನರಿಗೆ ಒಂದು ಕೀಲು ಭಾವನೆಯಿತ್ತು ಪ್ರಸಕ್ತ ಕಾಲದಲ್ಲಿ ಆ ಭಾವನೆಯನ್ನು ಹುಸಿಯಾಗಿಸಿ ಅರಬಿಕ್ ಕಲೆ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿ ಪ್ರಸಿದ್ದರಾದವರಲ್ಲಿ ಭಾರತಿಯರೂ  ಇದ್ದಾರೆ ಎಂಬುವುದು ವಾಸ್ತವ. ಅದೂ ಅಲ್ಲದೆ ಅನಾಟಮಿಕ್ ಕಾಲಿಗ್ರಾಫಿ. (Anatomic calligraphy) ಎಂಬ ಹೊಸ ಕಲೆಯ ಪರಿಚಯವನ್ನು ಅರಬ್ ಲೋಕಕ್ಕೆ ನೀಡಿದ್ದು ಭಾರತೀರು ಎಂಬುವುದು ನಮ್ಮ ಹೆಮ್ಮೆ.

ಅನಾಟಮಿಕ್ ಕಾಲಿಗ್ರಾಫಿ ಎಂದರೆ ಒಬ್ಬ ವ್ಯಕ್ತಿ ರೋಪವನ್ನು ಅವನ ಹೆಸರಿನ ಅಕ್ಷರದೊಂದಿಗೆ ಜೋಡಿಸುವುದು ಅಥವಾ ಅಕ್ಷರಗಳ ವಿನ್ಯಾಸದಿಂದ ವ್ಯಕ್ತಿ ರೂಪ ರಚಿಸುವುದು. ಈ ಕಲೆಯನ್ನು ಪ್ರಥಮ ಬಾರಿ ಪರಿಚಯಿಸಿದ್ದು ಮತ್ತು ಅನಾಟಮಿಕ್ ಕಾಲಿಗ್ರಾಫಿ ಎಂಬ ಹೊಸ ಹೆಸರನ್ನು ನೀಡಿದ್ದು ಕೇರಳದ ಕಾಸರಗೋಡಿನ “ಖಲೀಲುಲ್ಲಾಹ್ ಚೆಮ್ನಾಡ್”

1970 ರಲ್ಲಿ ಕಾಸರಗೋಡಿನ ಚೆಮ್ನಾಡಿನಲ್ಲಿ ಹುಟ್ಟಿ ಬೆಳೆದ ಇವರು ಚೆಮ್ನಾಡ್ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ, ಚೆಮ್ನಾಡ್ ಜಮಾಅತ್ ಶಾಲೆಯಲ್ಲಿ ಪ್ರಾರ್ಥಮಿಕ ವಿಧ್ಯಾಬ್ಯಾಸವನ್ನು ಮುಗಿಸಿ, ಕಣನ್ನೂರಿನ ವಾದಿಹುದಾ ವಿಧ್ಯಾ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದರು. ಕಲ್ಲಿಕೋಟೆಯ ಕೊಝಿಕ್ಕೋಡ್ ಕಾಲೇಜಿನಲ್ಲಿ +2ವಿಧ್ಯಾಭ್ಯಾಸದ ನಂತರ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪದವಿದರರಾದರು.

ಅರಬಿಕ್ ಬಾಷೆಯೊಂದಿಗೆ ಹೆಚ್ಚು ಒಳವು ಮತ್ತು ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಲೇಖನ, ಪ್ರಭಂದಗಳನ್ನು ಬರೆಯೂದರ ಜೊತೆಗೆ ಮಾಪಿಳ್ಳ ಸಾಹಿತ್ಯದಲ್ಲಿ ಅತೀ ಹೆಚ್ಚು ಆಸಕ್ತಿ ಹೊಂದಿದ್ದರು ಮತ್ತು ಚಂದ್ರಿಕ, ಮಾಧ್ಯಮಂ, ಮಾತೃಭೂಮಿ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದಿದ್ದಾರೆ. ‘ಅದ್ದಅವಾ’ ಮಾಸಿಕದ ಹೆಡ್ಡಿಂಗ್ ನಲ್ಲಿರುವ ಆರ್ಟ್ ರೂಪದ ಅಕ್ಷರವನ್ನು ಅನುಕರಿಸಿ ಕಾಲಿಗ್ರಾಫಿ ಕಡೆಗೆ ಹೆಚ್ಚು ಆಸಕ್ತಿ ಬೆಳೆಸಿದರು. ಮಗನ ಕಲೆಯ ಬೆಳವಣಿಗೆಯನ್ನು ಕಂಡು ತಂದೆ ಅವರಿಗೆ ಹೆಚ್ಚು ಪ್ರೂತ್ಸಾಹನವನ್ನು ನೀಡಿದರು. ಪ್ರಥಮ ಬಾರಿಗೆ ತಂದೆಯವರು‘ಹಾಝಾ ಮಿನ್ ಫಲಿಲಿ ರಬ್ಬೀ” (ಇದು ಅಲ್ಲಾಹನ ಔದಾರ್ಯದಿಂದ) ಎಂಬ ಅರ್ಥ ಬರುವ ಅರಬಿಕ್ ಅಕ್ಷರವನ್ನು ಕಾಲಿಗ್ರಾಫಿ ರೂಪದಲ್ಲಿ ರಚಿಸಲು ಸಲಹೆ ಕೊಟ್ಟರು ಅದನ್ನು ಮನೆಯ ಆಕೃತಿಯಲ್ಲಿ ಬರೆದು ಕೊಟ್ಟರಲ್ಲದೆ ಚಂದ್ರಿಕಾ ಪತ್ರಿಕೆಯಲ್ಲಿ ಅದು ಪ್ರಕಟವೂ ಆಗಿತ್ತು. ತಂದೆಯ ಸಲಹೆಯ ಮೇರೆಗೆ ಕುರಾನಿನ ಸೂಕ್ತಗಳನ್ನು ಕಾಲಿಗ್ರಾಫಿ ರೂಪದಲ್ಲಿ ರಚಿಸಲು ಆರಂಭಿಸಿ ಯಶಸ್ವಿಯಾದರು. ಅಲ್ಲಾಹನ ಹೆಸರನ್ನು ನೂರು ಶೈಲಿಯಲ್ಲಿ ಬರೆದಿದ್ದರು, ದುಬೈ ದೊರೆಯ ಮಗಳಾದ ಹಯಾಳ ಹೆಸರನ್ನು ನೂರು ಶೈಲಿಯಲ್ಲಿ ಬರೆದು ಕೊಟ್ಟಿದ್ದರು. ಆನೆ,ಕುದುರೆ,ಸಿಂಹ,ಒಂಟೆ ಇರುವೆ, ಜೇನು, ನಾಗರಹಾವು,ಇತ್ಯಾದಿಗಳ ಚಿತ್ರಗಳನ್ನು ಅವುಗಳ ಹೆಸರಿನೋದಿಗೆ ಕುರಾನಿಕ್ ಸೂಕ್ತಗಳೊಂದಿಗೆ ಜೋಡಿಸಿ ಕಾಲಿಗ್ರಾಫಿ ಮಾಡಿರುವರು. ನಂತರ ಕುರಾನಿಕ್ ಸೂಕ್ತಗಳನ್ನು ಚಿತ್ರಗಳ ರೂಪದಲ್ಲಿ ರಚಿಸುವುದು ವಿಮರ್ಶೆಗೆ ಎಡೆಮಾಡಿ ಕೊಟ್ಟಾಗ ಅನಾಟಮಿಕ್ ಕಾಲಿಗ್ರಾಫಿ ಕಡೆಗೆ ಹೆಚ್ಚು ಆಸಕ್ತಿ ಬೆಳೆಸಿದರು. ಶೈಕ್ ಮುಹಮ್ಮದ್ ಬಿನ್ ಅಲ್ ಮಕ್ತೂಮ್, ಕತರ್ ಹಂದಾನ್ ಅಲ್ ಸಾನಿ, ಶೈಕ್ ಖಲೀಫ ಅಲ್ ಝಾಹಿದ್ ಬಿನ್ ನುಹಾನಿ, ಶೈಕ್ ಝಾಹಿದ್ ಸಲ್ಮಾನ್,ಮನಮೋಹನ್ ಸಿಂಗ್,ಮೋಹನ್ ಲಾಲ್,ರಾಹುಲ್ ಗಾಂಧಿ, ಎ.ಆರ್ ರಹ್ಮಾನ್,ಮಮ್ಮುಟ್ಟಿ ಹೀಗೆ ಹಲವರ ಅನಾಟಮಿಕ್ ಶೈಲಿಯ ಕಾಲಿಗ್ರಾಫಿಯನ್ನು ರಚಿಸಿದ್ದಾರೆ.

ಕಳೆದ 26 ವರ್ಷಗಳಿಂದ ವಿದೇಶದಲ್ಲಿ ಸೇವೆಯಲ್ಲಿರುವ ಇವರು ಇರಾನ್,ಅಲ್ಜೀರಿಯಾ, ದುಬೈ, ತುರ್ಕಿ, ಮೊರೋಕ್ಕೋ,ಸಿರಿಯಾ, ಕೆನಿಯಾ, ದೇಶದ ಪ್ರವಾಸ ಕೈಗೊಂಡಿದ್ದಾರೆ. ರಷ್ಯ, ಬರ್ಲಿನ್,ಜರ್ಮನಿಯಲ್ಲಿ ಇವರ ಕಾಲಿಗ್ರಾಫಿಯ ಪ್ರದರ್ಶನವೂ ನಡೆದಿದೆ.

ತೂಲಿಗಾ ಅವಾರ್ಡ, ಅನ್ಮೋ ಅವಾರ್ಡ,ಎಂ.ಪಿ. ನಾರಾಣಯ ಪಿಳ್ಳೆ ಪ್ರಶಸ್ತಿ,ಮಲೆಯಾಟೂರು ಅವಾರ್ಡ ಬಶೀರ್ ಅವಾರ್ಡ, ಸಾಹಿತ್ಯ ಪ್ರಶಸ್ತಿ, ಇರಾನ್ ಅಲ್ಜೀರಿಯಾ ಅಬುದಾಬಿ ತುರ್ಕಿ ವತಿಯಿಂದ ಕಲ್ಚರಲ್ ಅವಾರ್ಡ, ವಿಶ್ವ ದಾಖಲೆ ಗಿನ್ನೆಸ್ ಅವಾರ್ಡ್-2009, ಲಿಮ್ಕಾ ವಲ್ಡ್ ರೆಕಾರ್ಡ್-2010 ಹಾಗೂ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ

ಇಂದಿನ ಬೆಳೆಯುವ ಕಲಾ ಪ್ರೇಮಿಗಳಿಗೆ ಅವರು ಹೀಗೆ ಕಿವಿಮಾತು ನೀಡುತ್ತಾರೆ“ಕಲೆಯು ಮನುಷ್ಯನ ಅಂತರಂಗದಲ್ಲಿ ಅವಿತುಕೊಂಡಿರುವ ಒಂದಾಗಿದೆ ಅದನ್ನು ಹುಡುಕುವ ಕೆಲಸ ಅವನಿಂದಲೇ ಆಗಬೇಕು ಅದನ್ನು ಪ್ರೋತ್ಸಾಹಿಸಲು ಹಲವರಿರುತ್ತಾರೆ,ವಿಮರ್ಶಿಸಲೂ ಕೆಲವರಿರುತ್ತಾರೆ ಅದನ್ನು ಲೆಕ್ಕಕ್ಕೆ ತೆಗೆಯದೆ ಸಾಧಿಸುವುದೇ ನಮ್ಮ ಕೆಲಸವಾಗಬೇಕು. ಮೊದಲು ಅನುಕರಿಸಿ ಕಲಿಯಬೇಕು ಅದು ಕಲಿಯಲು ಬೇಕಾಗಿ ಮಾತ್ರ. ಕೈ ಬರಹದ ಶೈಲಿ ಸರಿದಾರಿ ಹಿಡಿಯುವ ತನಕ ಮಾತ್ರ. ಅನುಕರಿಸುವ ಚಿತ್ರ ಮತ್ತು ಅನುಕರಿಸುವವನು ಮಾತ್ರ ಅದು ನೂಡಬೇಕು ಇನ್ನೂಬ್ಬರ ಚಿತ್ರವನ್ನು ಅಥವಾ ಕಲೆಯನ್ನು ಅನುಕರಿಸಿ ಕಲಿತ ನಂತರ ತಮ್ಮ ಹೊಸಾ ಶೈಲಿಯನ್ನು ಹುಡುಕಿ ಮುಂದೆ ಹೆಜ್ಜೆ ಇಡಬೇಕು ಕಠಿಣ ಪರಿಶ್ರಮವೇ ಯಶಸ್ವಿಗೆ ಕಾರಣ ಹೆಚ್ಚು ಪರಿಣಿತಿ ಪಡೆಯಲು ಹೆಚ್ಚು ತರಬೇತು (Training) ಪಡೆಯಬೇಕು. ಆದ್ದರಿಂದ ಪ್ರಶಸ್ತಿಗಳು ಬಾಗಿಲ ಬಳಿ ಬರುತ್ತದೆ.” 25 ವರ್ಷಗಳ ಪರಿಶ್ರಮದಿಂದಲೇ ನಾನು ಇಷ್ಟು ಬೆಳೆಯಲು ಕಾರಣ ಎಂದರು. ಹೆಚ್ಚಿನ ಮಾಹಿತಗಾಗಿ WWW.worldofcalligraphy.com ಸಂಪರ್ಕಿಸಿ

LEAVE A REPLY

Please enter your comment!
Please enter your name here