ಕ್ಯಾಂಪಸ್ ವರದಿ: ಇಂಕ್ ಡಬ್ಬಿ ಬಳಗ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎಸ್.ವಿ.ಎಸ್ ಕಾಲೇಜಿನಲ್ಲಿ ನಡೆದ ಘಟನೆ

ಮೂಲಭೂತ ಸೌಕಯ್ರ್ಯಗಳ ಕೊರತೆ ಮತ್ತು ಕಾಲೇಜು ಆಡಳಿತ ಮಂಡಳಿಯೂ ವಿದ್ಯಾರ್ಥಿಗಳ ಯಾವುದೇ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎಸ್.ವಿ.ಎಸ್ ಕಾಲೇಜಿನ ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ತರಗತಿಯನ್ನು ಬಹಿಷ್ಕರಿಸಿ ಕಳೆದ ಎರಡು ದಿನಗಳ ಕಾಲ ಪ್ರತಿಭಟನೆಯನ್ನು ಮಾಡಿದ್ದು ಇದೀಗ ಸುದ್ದಿಯಾಗಿದೆಯಾದರು ಹೆಚ್ಚಿನ ಪತ್ರ ಮಾಧ್ಯಮಗಳು ದೊಡ್ಡ ಮಟ್ಟದಲ್ಲಿ ವರದಿ ಮಾಡಲಿಲ್ಲ ಎಂಬುವುದು ವಿಶೇಷವೆನಿಸುತ್ತದೆ. ವಿದ್ಯಾರ್ಥಿಗಳ ವಿಷಯವಾದ ಕಾರಣಕ್ಕೋ, ಆಂತರಿಕ ವಿಷಯವೆಂದೋ, ಆಡಳಿತ ಮಂಡಳಿಯ ಪ್ರಭಾವ ವಿರುವುದರಿಂದಲೋ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗದೆ ಹೋಯಿತು.

ಶಿಕ್ಷಣ, ಕ್ಯಾಂಪಸ್‍ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಕಾಳಜಿ ಮತ್ತು ಮಹತ್ವ ಕೊಡುವ ಕಾರಣಕ್ಕೆ, ನಮ್ಮ ತಂಡವು ಅಲ್ಲಿನ ಕೆಲವು ವಿದ್ಯಾರ್ಥಿಗಳನ್ನು ಮತ್ತು ಹೆತ್ತವರನ್ನು ಸಂಪರ್ಕಿಸಿ ಮಾತನಾಡಿದಾಗ ಮೂಲ ಸೌಕಯ್ರ್ಯಗಳ ಕೊರತೆಯನ್ನು ವಿದ್ಯಾರ್ಥಿಗಳು ಕಳೆದ ಕೆಲವು ವರ್ಷಗಳಿಂದ ಎದುರಿಸುತ್ತಾ ಬಂದಿದ್ದಾರೆ ತಿಳಿದು ಬಂದದೆ.

S.V.S (Sir Venkataramana swamy) ಕಾಲೇಜು ಬಂಟ್ವಾಳ, ಹಲವು ಪ್ರಶಸ್ತಿಗಳನ್ನು ಪಡೆದ ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದಾಗಿದೆ. NAAC (National Assessment and Accreditation) ನಿಂದ A Grade ಪಡೆದಿದೆ.

ಕಾಲೇಜು ಸೇರ್ಪಡೆಗೊಂಡ ವಿದ್ಯಾರ್ಥಿಗಳು ಶುಲ್ಕವನ್ನು(Fee’s) ಸರಿಯಾಗಿ ಪಾವತಿಸುತ್ತಾರೆಯಾದರೂ ಅವರಿಗೆ ಬೇಕಾದ ಸರಿಯಾದ ಸೌಚಾಲಯದ ವ್ಯವಸ್ಥೆಯೂ ಇಲ್ಲ, ಕಲಿಕೆಗೆ ಬೇಕಾದ ಸಲಕರಣೆಗಳೂ ಇಲ್ಲ, ಇರುವ ಕೆಲವೊಂದು ಪಠ್ಯೋಪಕರಣಗಳು ಮತ್ತು ಕೆಲವು ವಸ್ತುಗಳು Out Dated ಸರಿಯಾದ ಮೈದಾನವೂ ಇಲ್ಲ, ವಿದ್ಯಾರ್ಥಿಗಳಿಂದ ಪ್ರತೀ ವರ್ಷವೂ ಕಾಲೇಜು ಆಡಳಿತ ಮಂಡಳೀ ಕ್ರೀಡಾ ಶುಲ್ಕ ತೆಗೆಯುತ್ತವೆಯಾದರೂ, ಸ್ವತಃ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳೇ ವೆಚ್ಚವನ್ನು ಭರಿಸಬೇಕಾಗುತ್ತದೆ ಎನ್ನುತ್ತಾರೆ. ಕ್ರೀಡಾ ಸಲಕರಣೆಗಳು ಸರಿಯಾಗಿ ಸಿಗುತ್ತಿಲ್ಲ. ಈ ಬಗ್ಗೆ ಯಾರಾದರು ಪ್ರಶ್ನಿಸಿದರೆ, ಆಡಳಿತ ಮಂಡಳಿ ಸರಿಯಾಗಿ ಸ್ಪಂದಿಸುವುದಿಲ್ಲ, ಅನುಭವವಿರುವ ಶಿಕ್ಷಕ-ಶಿಕ್ಷಕಿಯರನ್ನು ತೆಗೆದು ಕಾಲೇಜು ಮುಗಿಸಿದ ಹೊಸ ಶಿಕ್ಷಕ-ಶಿಕ್ಷಕಿಯರನ್ನು ನೇಮಕಗೊಳಿಸಲಾಗಿದೆ ಇದರಿಂದ ಬೊಧನೆಯೂ ಸರಿಯಾಗಿ ನಡೆಯುತಿಲ್ಲ, ಆಡಳಿತ ಮಂಡಳಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡುತಿದ್ದಾರೆ ಎಂದು ವಿದ್ಯಾರ್ಥಿ ಯೂನಿಯನ್ ಆರೋಪಿಸಿದೆ. ಕೆಲವು ಅಧ್ಯಾಪಕರು ಈ ಬಗ್ಗೆ ಮಾತನಾಡಿದರೆ ಹೆಚ್ಚಿನವರು ಮೌನವಾಗಿರುವುದು ಸಹ ವಿದ್ಯಾರ್ಥಿಗಳಿಗೆ ಬಹಳ ಬೇಸರ ತಂದಿದೆ.

ಕಾಲೇಜು ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಸೌಲಭ್ಯವಿದ್ದರೂ ಅದರಲ್ಲಿ ಹೊರಗಿನ ಜನರಿಗೂ ಕಾಲೇಜು ಹಾಸ್ಟಲ್ ನಲ್ಲಿ ಅವಕಾಶ ಕೊಡಲಾಗುತ್ತಿದೆ ಎಂಬ ಆರೋಪವೂ ಇದೆ. ಹಾಸ್ಟೆಲ್ ನಲ್ಲಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ವಾಶ್ ರೂಮ್ ಸರಿಯಾಗಿಲ್ಲ, ಕರೆಂಟ್ ಹೋದರೆ ಇನ್ವೆಟರ್ ವ್ಯವಸ್ಥೆ ಇಲ್ಲ. ಹಾಸ್ಟೆಲ್ ನಲ್ಲಿ ಕೆಟ್ಟು ಹೋದ ವಸ್ತುವನ್ನು ಸರಿ ಪಡಿಸಲು ಹಲವು ತಿಂಗಳುಗಳನ್ನು ಕಾಯಬೇಕಾಗುತ್ತದೆ. ಸರಿಯಾದ ಲಾಬ್, ರಿಫ್ರೆಶ್ ಮೆಂಟ್ ವ್ಯವಸ್ಥೆ, ಕೈ ಕಾಲು ತೊಳೆಯಲು ಟ್ಯಾಪ್ ವ್ಯವಸ್ಥೆ ಇಲ್ಲಿ ಇಲ್ಲ ಎನ್ನುತ್ತಾರೆ. ಆಡಳಿತ ಮಂಡಳಿಯ ನಿರ್ಲಕ್ಷ ದಿಂದ ಕಳೆದ ವರ್ಷಕ್ಕಿಂತ ಈ ವರ್ಷ ಸೇರ್ಪಡೆ ಗೊಂಡ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ.

ಅದೇ ರೀತಿ P.G ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಿದೆ(ಕೇವಲ 8 ವಿದ್ಯಾರ್ಥಿಗಳು) ಎಂಬ ಕಾರಣದಿಂದ ಅವರನ್ನು ಯಾವುದಕ್ಕೂ ಪರಿಗಣಿಸುವುದಿಲ್ಲ, ಕಾರ್ಯಕ್ರಮಕ್ಕೆ ಆಹ್ವಾನಿಸುವುದಿಲ್ಲ, ಅವರಿಗಾಗಿ ಯಾವುದೇ Event ನ್ನು ಸಹ ಆಯೋಜಿಸುವುದಿಲ್ಲ, ಸ್ಪರ್ಧೆಗಳಿಗೆ, ಆಟೋಟಗಳಿಗೆ ಭಾಗವಹಿಸುವ ಅವಕಾಶವೂ ಇಲ್ಲ ಎಂದು P.G ವಿದ್ಯಾರ್ಥಿಗಳು ತಮ್ಮ ಅಳಲನ್ನು ವ್ಯಕ್ತಪಡಿಸಿದರು.

ಇದೀಗ ಪ್ರತಿಭಟನೆ ನಡೆಸಿಯೂ ಆಡಳಿತ ಮಂಡಳಿ ಯಾವುದೇ ರೀತಿಯಲ್ಲಿ ಚರ್ಚೆಗೆ ಮುಂದಾಗದ ಕಾರಣಕ್ಕೆ ವಿದ್ಯಾರ್ಥಿಗಳು ಆಕ್ರೋಷಗೊಂಡು ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಎಲ್ಲಾ ರೀತಿಯ ಶುಲ್ಕವನ್ನು ಪಡೆಯೂವುದರಿಂದ ಕನಿಷ್ಠ ಮಟ್ಟದ ಸೌಕಯ್ರ್ಯಗಳನ್ನಾದರು ನೀಡಬೇಕೆಂದು ಬೇಡಿಕೆಯನ್ನು ಇಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಕಾಲೇಜು ಪ್ರಾಂಶುಪಾಲರು ಸಂದನಕ್ಕೆ ಮುಂದಾಗಿದ್ದಾರೆ.

ವಿದ್ಯಾರ್ಥಿಗಳೇ ಭವ್ಯ ಭಾರತದ ಭವಿಷ್ಯದ ನಕ್ಷತ್ರಗಳು ಅವರ ಕಲಿಕೆಗೆ, ಬೆಳವಣಿಗೆಗೆ ಬೇಕಾದ ಸೌಕರ್ಯಗಳನ್ನು ಒದಗಿಸುವುದು ಶಿಕ್ಷಣ ಸಂಸ್ಥೆಗಳ, ಆಡಳಿತ ಮಂಡಳಿಗಳ, ಅದ್ಯಾಪಕ ವೃಂದದವರ ಮುಖ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೀದಿಗಳಿದು ಆಕ್ರೋಶದಿಂದ ಪ್ರತಿಭಟಿಸುವ ಅವಕಾಶ ಮುಂದೆ ಎಲ್ಲಿಯೂ ಒದಿಗಿಬರಬಾರದು. ಆಂತರಿಕ ಕಲಹ, ಸ್ವಾರ್ಥ ಹಿತಾಸಕ್ತಿಯನ್ನು ಬಿಟ್ಟು ಸಮಾನ ಶಿಕ್ಷಣ ಸರಿಯಾದ ರೀತಿಯಲ್ಲಿ ಎಲ್ಲರಿಗೂ ಸಿಗಬೇಕು, ಮುಂದೆ ಇಂತಹ ಸಂಭವಗಳು ಶಿಕ್ಷಣ ಸಂಸ್ಥೆಗಳಲ್ಲಿ ನಡೆಯದಂತೆ ಸರಕಾರ ಮತ್ತು ಶಿಕ್ಷಣ ಇಲಾಖೆ ಜಾಗೃತೆ ವಹಿಸಬೇಕಾಗಿದೆ.

ವರದಿ: ಇಂಕ್ ಡಬ್ಬಿ ಬಳಗ

LEAVE A REPLY

Please enter your comment!
Please enter your name here