ತುಳು ಚಿತ್ರ ವಿಮರ್ಶೆ

✒ಎಂ.ಅಶೀರುದ್ದಿನ್ ಆಲಿಯಾ, ಮಂಜನಾಡಿ

ಇದೀಗ ಕರಾವಳಿ ಭಾಗದಲ್ಲಿ ಎಲ್ಲರ ಬಾಯಿಯಲ್ಲೂ ಗಿರ್ಗಿಟ್ ತಿರುಗುತ್ತಾ ಇದೆ. ಕಾರಣ ಗಿರ್ಗಿಟ್ ಸಿನಿಮ ಬಿಡುಗಡೆ ಗೊಂಡು ಹೊಸ ಸಂಚಲನ ಮೂಡಿಸಿದೆ. ಹಲವು ವರ್ಷಗಳ ನಂತರ ತುಳು ಸಿನಿಮವೊಂದು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ ಅದೋ ಅಲ್ಲದೆ ಬಕ್ಸ್ ಆಫೀಸ್ ನಲ್ಲಿ ಅಬ್ಬರ ಬಾರಿಸಿದೆ.

ತುಳು ಸಿನಿಮಾ ರಂಗಕ್ಕೆ ಅದರದ್ದೇ ಆದ ವಿಶೇಷತೆ, ಹಿನ್ನಲೆ ಮತ್ತು ಇತಿಹಾಸವಿದೆ. 1971 ರಲ್ಲಿ ಕೆ.ಎನ್ ಟೈಲರ್ ರವರ “ಎನ್ನತಂಗಡಿ” ಸಿನಿಮದ ಮೂಲಕ ಆರಂಭವಾದ ತುಳು ಸಿನಿ ಯಾನ ಇಂದು ನೂರು ಸಿನಿಮಗಳ ಸಾಲಿನಲ್ಲಿ ಸೇರಲು ರೂಪೇಶ್ ಶೆಟ್ಟಿಯವರ “ಗಿರ್ ಗಿಟ್” ವರೆಗೆ ನಿಂತಿದೆ. ಹಲವಾರು ಏಳು ಬೀಳುಗಳನ್ನು ಎದುರಿಸಿ ತುಳು ಸಿನಿಮವು ಯಶಸ್ವಿನಡೆಗೆ ಮುನ್ನುಗ್ಗುತ್ತಿರುವುದನ್ನು ನಾವು ಪ್ರಶಂಸಿಸಲೇ ಬೇಕು. ತುಳುವರು ತುಳು ಸಿನಿಮವನ್ನು ಮೆಚ್ಚುವುದಿಲ್ಲ ಎಂಬ ಊಹೆಗೆ “ಗಿರ್‍ಗಿಟ್” ಬರೆ ಎಳೆದಿದೆ
“ಗಿರ್‍ಗಿಟ್” ಎಂಬ ಹೊಸ ಟ್ರೆಂಡ್ ಸಿನಿಮ ಇತ್ತೀಚಿಗೆ ಬಿಡುಗಡೆಗೊಂಡು ಕರಾವಳಿಯಾದ್ಯಂತ ಸಿನಿ ಪ್ರೀಯರನ್ನು ರಂಜಿಸಿದೆ. ಒಳ್ಳೆಯ ಸಿನಮವನ್ನು ಜನರು ಮೆಚ್ಚುತ್ತಾರೆ ಎಂಬುವುದಕ್ಕೆ ಗಿರ್‍ಗಿಟ್ ಒಂದು ಉದಾಹರಣೆಯಾಗಿದೆ. ಸಿನಿಮಾದ ಬಗ್ಗೆ ಹೇಳುವುದಾದರೆ, ಕಥೆಯಲ್ಲಿ ಹೊಸತನವೇನು ಇಲ್ಲದಿದ್ದರೂ ಒಂದು ರೀತಿಯ ಮನೋರಂಜನೆಯನ್ನು ಸಿನಿ ಪ್ರೀಯರಿಗೆ ನೀಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಸಿನಿಮಾದ ಚಿತ್ರಕಥೆ, ಸಂಗೀತ, ಸಮಂಭಾಷಣೆ ಚೆನ್ನಾಗಿದೆ. ಕಥೆ ಸಂಪೂರ್ಣವಾದ ಒಂದು ಚೌಕಟ್ಟಿನಲ್ಲಿ ನಿಂತಿದೆ ಎಂಬುವುದು ವಿಶೇಷ.

ಹಾಸ್ಯ ಕಲಾವಿದರಾದ ನವೀನ್ ಡಿ ಪಡೀಲ್ ಬೋಜರಾಜ ವಾಮಂಜೂರು, ಅರವಿಂದ ಬೋಲಾರ್, ಉಮೇಶ್ ಮಿಜಾರ್ ಅತ್ಯುತ್ತಮವಾದ ರೀತಿಯಲ್ಲಿ ನಟಿಸಿ ಪ್ರೇಕ್ಷಕರನ್ನು ನಗಿಸಿದ್ದಾರೆ. ಹಲವಾರು ಹಾಸ್ಯ ಸನ್ನಿವೇಶದಲ್ಲಿ ಸಮಾಜಿಕವಾಗಿ ಜನರು ವಂಚನೆಗೀಡಾಗುವ ಸನ್ನಿವೇಶಗಳನ್ನು ಅರ್ಥವತ್ತಾಗಿ ಚಿತ್ರೀಕರಿಸಲಾಗಿದೆ. ಕೋರ್ಟು ಸಂಭಾಷಣೆ, ವಕೀಲರಿಂದ ಜನ ಸಾಮಾನ್ಯರಿಗಾಗುವ ವಂಚನೆ ಇತ್ಯಾದಿಗಳ ಬಗ್ಗೆ ಹಾಸ್ಯಾಸ್ಪದವಾಗಿ ಚಿತ್ರೀಕರಿಸಿದ್ದಾರೆ(ಈ ಬಗ್ಗೆ ಮಂಗಳೂರು ವಕೀಲರ ಸಂಘ ಕೊರ್ಟ್ಬನಲ್ಲಿ ದಾವೆ ಹೂಡಿ ಸಿನಿಮಾ ಪ್ರದರ್ಶನ ನಿಲ್ಲಿಸಿದ್ದು ಒಂದು ವಾರ್ತೆಯಾಗಿತ್ತು, ಹಾಸ್ಯ ವನ್ನು ಮನರಂಜನೆಯಾಗಿ ಸ್ವೀಕರಿಸಬೇಕು ಕೇಸು ಮಾಡಬೆಕಿರುವ ಯಾವ ಗುರುತರವಾದ ಸಂಭವವೂ ಸಿನಿಮಾದಲ್ಲಿ ಇಲ್ಲ) ಸಾಮಾಜಿಕ ಕಲಕಳಿಯಿರುವ ಸಂಭಾಷಣೆ ಶೈಲಿಯೂ ಚೆನ್ನಾಗಿದೆ “ನೆತ್ತರ್ ವೈಪರೆ ಜನ ತಿಕ್ಕುವೆರ್ ನೆತ್ತರ್ ಕೊರಿಯರೆ ಜನ ತಿಕ್ಕುಜತ್ತೆ ಮರ್ರೆ” (ರಕ್ತ ತೆಗೆಯಲು ಜನರು ಸಿಗುತ್ತಾರೆ ರಕ್ತ ಕೊಡಲು ಯಾರು ಬರುವುದಿಲ್ಲವಲ್ಲ” ಇತ್ಯಾದಿ ವಿಭಿನ್ನ ಶೈಲಿ ಸಂಭಾಷಣೆಗಳಿವೆ
ನಾಯಕ ರೂಪೇಶ್ ಶೆಟ್ಟಿ ಮತ್ತು ಖಲ ನಾಯಕ ರೋಶನ್ ಶೆಟ್ಟಿಯ ನಟಿ ಶಿಲ್ಪಾ ಶೆಟ್ಟಿಯೂ ತಮ್ಮ ಅಭಿನಯಕ್ಕೆ ಜೀವ ತುಂಬಿದ್ದಾರೆ ನಟನೆಯೂ ಸಹ ಅದ್ಬುತವಾಗಿದೆ ಮತ್ತು ಪ್ರಬುದ್ದತೆಯನ್ನು ಎತ್ತಿ ತೋರಿಸುತ್ತದೆ. ಕಥೆ, ನಿರ್ದೇಶನ, ನಟನೆಯಲ್ಲಿ ಪಳಗಿದ ರೂಪೇಶ್ ಶೆಟ್ಟಿಯ ಸಮಥ್ರ್ಯವನ್ನು ಮೆಚ್ಚಬೇಕು. ನಿರೂಪಕರಾಗಿದ್ದ ರೂಪೇಶ್ ಶೆಟ್ಟಿಯವರು ಇದೀಗಾಗಲೇ ಕನ್ನಡ,ಕೊಕಣಿ,ತುಳು ಸಿನಿಮಗಳಲ್ಲಿ ತನ್ನ ಸಾಮಥ್ರ್ಯವನ್ನು ತೋರಿಸಿದ್ದಾರೆ. ಭಾರತೀಯ ಸಿನಿಮಾ ರಂಗದಲ್ಲಿ ಅವರಿಗೆ ಉತ್ತಮ ಭವಿಷ್ಯವಿದೆ.

ಕೆಲವೊಂದು ಕೊರತೆಗಳು ಸಿನಿಮಾದಲ್ಲಿ ನಮಗೆ ಕಾಣಲು ಸಿಗುತ್ತದೆ ಇತರ ಭಾಷಾ ಚಿತ್ರಗಳಿಂದ ಎರವಲು ಪಡೆದ ಹಲವು ದೃಷ್ಯಗಳು ಸಂಭಾಷಣೆಗಳನ್ನು ತುಳುವೀಕರಿಸಿ ಚಿತ್ರೀಕರಿಸಲಾಗಿದೆ. ಅರವಿಂದ್ ಬೋಲಾರ್ ಮತ್ತು ಉಮೇಶ್ ಮಿಜಾರ್, ನವೀನ್ ಡಿ ಪಡೀಲ್ ನಟನೆಯೂ ಸ್ವಾರಸ್ಯಕರವಾಗಿದ್ದು ಬೊಜರಾಜ್ ರವರದ್ದು ಸ್ವಲ್ಪ ಹಾಸ್ಯ ಕಡಿಮೆಯಾದಂತೆ ಅನಿಸುತ್ತದೆ. ಕಲಾತ್ಮಕವಾಗಿ ಮತ್ತು ದೃಶ್ಯಾತ್ಮಕವಾಗಿ ಚೆನ್ನಾಗಿ ಮೂಡಿ ಬಂದಿದೆ. ಪಿ.ಕೆ.ದಾಸ್ ರವರ ಛಾಯಾಗ್ರಹಣ ಡೆರೆಲ್ ಮಸ್ಕರೇನಸ್, ಜಿಯೋಲ್ ರವರ ಸಂಗೀತ ತುಂಬ ಚೆನ್ನಾಗಿದೆ. “ಕರ್ಫಿ ಪಾಡೆಡ್” “ಲವ್ ಶುರುವಾಂಡ”ಹಾಡು ತುಂಬಾ ಚೆನ್ನಾಗಿದೆ. ಬಹಳ ಸಮಯದ ನಂತರ ತುಳು ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದ ‘ಗಿರ್‌ಗಿಟ್’ ! ಹಾಸ್ಯ-ಮನೋರಂಜನೆಯ ಬಯಸಿದವರಿಗೆ ಔತಣ ನೀಡಿದ ಚಿತ್ರ. ತುಳು ಚಿತ್ರ ರಂಗ ಇನ್ನಷ್ಟು ಬೆಳೆಯಲಿ ಎಂಬ ಹಾರೈಕೆಯೊಂದಿಗೆ.

LEAVE A REPLY

Please enter your comment!
Please enter your name here