ಅಮ್ಮಾರ್ ಅಹ್ಸನ್
ಬಿ.ಕಾಂ ವಿದ್ಯಾರ್ಥಿ, ಮಹೇಶ್ ಕಾಲೇಜು ಮಂಗಳೂರು

ಕಾಶ್ಮೀರದ ಎಂಟು ವರ್ಷದ ಹುಡುಗಿ ಆಸೀಫ ಬಾನುಳ ಅತ್ಯಾಚಾರ ಮತ್ತು ಕೊಲೆಯ ಭಯಬೀತ ಪ್ರಕರಣದಲ್ಲಿ ಬಾಲಾಪರಾಧಿಯನ್ನು ಒಳಗೊಂಡತೆ ಪುರುಷರ ಗುಂಪು ನಡೆಸಿರುವ ಸಾಮೂಹಿಕ ಅತ್ಯಾಚಾರವು ನಾಗರೀಕ ಸಮಾಜವು ಬೃಹತ್ ಪ್ರಮಾಣದಲ್ಲಿ ಬೀದಿಗಿಳಿದು ಅಪರಾಧಿಗಳ ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟಿಸುವಂತೆ ಮಾಡಿತು. 2012ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಇದೇ ಸಾಮ್ಯತೆ ಇರುವ ಇನ್ನೊಂದು ಪ್ರಕರಣವು ಜಗತ್ತಿನ ಗಮನಕ್ಕೆ ಒಳಪಟ್ಟಿತು. ಆದರೆ, ಪ್ರಶ್ನೆ ಏನೆಂದರೆ ಭಾರತದಲ್ಲಿ ಅತ್ಯಾಚಾರವೆಂಬುವುದು ಯಾಕೆ ದಿನ ನಿತ್ಯದ ಪ್ರಕರಣಗಳಾಗುತ್ತಿವೆ? ನಾವು ಯಾಕೆ ಇದನ್ನು ಕೊನೆಗಾಣಿಸುವಲ್ಲಿ ವಿಫಲರಾಗುತ್ತಿದ್ದೇವೆ? ಕಾನೂನುಗಳು ಬಲಗೊಂಡರೆ ಇಂತಹ ಪ್ರಕರಣಗಳು ಸಂಪೂರ್ಣವಾಗಿ ನಿಂತು ಹೊಗುತ್ತದೆಯೇ ಅಥವಾ ಮಾಯವಾಗುತ್ತದೆಯೇ?

ಇಲ್ಲ. ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಹಿಂಸೆಯನ್ನು ನಿಲ್ಲಿಸಲು ಅಥವಾ ಯಾವುದೇ ರೀತಿಯಾದ ಅಪರಾಧವನ್ನು ಕೊನೆಗಾಣಿಸಲು ಅದರ ಮೂಲ ಕಾರಣವನ್ನು ನಾವು ಅವಲೋಕಿಸಿ ಪತ್ತೆಹಚ್ಚಬೇಕಿದೆ. ಮೊದಲನೇದಾಗಿ, ನಾವು ಚಿಕ್ಕವರಿದ್ದಂದಿನಿಂದಲೇ ನೇರವಾಗಿ ಅಥವಾ ಪರೋಕ್ಷವಾಗಿ ನಮಗೆ ಪುರುಷ ಮಗುವು ಹೆಣ್ಣು ಮಗುವಿಗಿಂತ ಶ್ರೇಷ್ಠವೆಂಬುವುದನ್ನು ಕಲಿಸಲಾಗುತ್ತದೆ. ಪುರುಷರು ಕುಟುಂಬಕ್ಕೆ ದುಡಿದು ಅನ್ನ ಹಾಕುವವರು ಎಂದು ಅವರಿಗೆ ಸ್ತ್ರೀಯರಿಗಿಂತ ಹೆಚ್ಚಿನ ಮಹತ್ವವನ್ನು ಕೊಡಲಾಗುತ್ತದೆ. ಆದ್ದರಿಂದ ಶಿಕ್ಷಣದ ವಿಚಾರದಲ್ಲಿಯೂ ಅವರಿಗೆ ಮೊದಲ ಆಧ್ಯತೆಯನ್ನು ಕೊಡಲಾಗುತ್ತದೆ. ಇದು ಪುರುಷರಲ್ಲಿ ಅಧಿಪತ್ಯದ ಭಾವನೆಯನ್ನು ಬೆಳೆಸುತ್ತದೆ.
ಮಾಧ್ಯಮದ ವಿವಿಧ ಪ್ರಕಾರಗಳಲ್ಲಿ ಮಹಿಳೆಯರನ್ನು ಸರಕೀಕರಿಸುವುದು ನಾವು ಚರ್ಚಿಸಬೇಕಿರುವ ಅಗತ್ಯ ವಿಚಾರವಾಗಿದೆ. ಸಿನೆಮಾಗಳು, ವಿಶೇಷವಾಗಿ ಬಾಲಿವುಡ್ ಸಿನೆಮಾಗಳು ಮಹಿಳೆಯನ್ನು ಐಟಂ ಎಂದಾಗಿ ಗುರುತಿಸುತ್ತದೆ. ಯಾವತ್ತೂ ಮುನ್ನಿ ಬದ್ನಾಮ್ ಆಗುತ್ತಾಳೆ ಮತ್ತು ಮುನ್ನ ಎಂ.ಬಿ.ಬಿ.ಎಸ್ ಆಗಿರುತ್ತದೆ. ಎಲ್ಲಾ ಕೆಡುಕುಗಳ ತಾಯಿ ಎಂದು ಗುರುತಿಸಲ್ಪಡುವ ಶರಾಬು ಭಾರತದಲ್ಲಿ ಬೃಹತ್ ಪ್ರಮಾಣದ ವ್ಯಾಪಾರವಾಗಿದೆ. ಸರಕಾರಗಳು ಅಥವಾ ಜನರು ಶರಾಬನ್ನು ಬೆಂಬಲಿಸುತ್ತಾರೆ, ಖರೀದಿಸುತ್ತಾರೆ ಮತ್ತು ಅಪರಾಧ ಮಟ್ಟದಲ್ಲಿ ಇಳಿಕೆಯನ್ನು ಬಯಸುತ್ತಾ ತಮ್ಮ ದ್ವಿಮುಖ ಧೋರಣೆಯನ್ನು ಪ್ರಕಟಿಸುತ್ತಿದ್ದಾರೆ. ಇನ್ನೊಂದು ಪ್ರಮುಖ ಕಾರಣವೇನೆಂದರೆ ಬೃಹತ್ ಪ್ರಮಾಣದಲ್ಲಿ ಹಬ್ಬಿಕೊಂಡಿರುವ ಮಾದಕ ಪಾದಾರ್ಥಗಳ ಬಳಕೆ. ಮಿಲಿಯಗಟ್ಟಲೆ ಜನರು ಮಾದಕ ವಸ್ತುವನ್ನು ಬಳಸುತ್ತಿದ್ದಾರೆ ಮತ್ತು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಈ ವಿಚಾರದ ಬುಡದಿಂದಲೇ ನಾವು ಬಗೆಗರಿಸಲು ಪತ್ರಯತ್ನಿಸಬೇಕಿದೆ. ಮಹಿಳೆಯರು ಕಿರುಕುಳ ಮತ್ತು ಲೈಂಗಿಕ ಪೀಡನೆಗೆ ಯಾಕೆ ಬಲಿಯಾಗುತ್ತಿದ್ದಾರೆ ಎಂಬುವುದರ ಪಟ್ಟಿಗೆ ಅಶ್ಲೀಲ ಚಿತ್ರ(ಪೋರ್ನೊಗ್ರಾಫಿ)ಗಳ ಕೊಡುಗೆಯು ಸೇರುತ್ತವೆ.
ಮಹಿಳೆಯರ ಮೇಲಿನ ಹಿಂಸೆಯನ್ನು ನಿಲ್ಲಿಸಲು ನಾವು ಈ ವಿಚಾರಗಳನ್ನು ಮೊದಲು ಬಗೆಹರಿಸಬೇಕಿದೆ. ನಂತರದಲ್ಲಿ ಮಾತ್ರ ಕಾನೂನು ಪರಿಣಾಮಕಾರಿಯಾಗಳು ಸಾಧ್ಯ.

 

LEAVE A REPLY

Please enter your comment!
Please enter your name here