ಮಹಾಂತೇಶ ದುರ್ಗ. ಹೆಚ್.ಇ. ಪಿ.ಎಚ್.ಡಿ.ಸಂಶೋಧನಾ ವಿದ್ಯಾರ್ಥಿ, ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ

“ಜಾಹಿರಾತುಗಳು ಪತ್ರಿಕೆಗಳ ಅತ್ಯಂತ ಸತ್ಯಕ್ಕೆ ಹತ್ತಿರವಾದ ಅಂಶಗಳು”ಇದು ಯಾವುದೇ ಒಬ್ಬ ಸಾಮಾನ್ಯ ವ್ಯಕ್ತಿ ಕೊಟ್ಟ ಹೇಳಿಕೆಯಲ್ಲ. ಆಮೇರಿಕದ ಮಾಜಿ ರಾಷ್ಟ್ರಪತಿ ಥೋಮಸ್ ಜೆಫರ್ಸ್‍ನ್ ಅವರ ಅನುಭವದ ಮಾತು, ಇಂದಿನ ಮಾಧ್ಯಮ ಜಗತ್ತು ಬೆಳೆದಿರುವ ಪರಿಯನ್ನು ವರ್ಣಿಸಲು ಅಸಾಧ್ಯ ಅತ್ಯಾಧುನಿಕ ತಂತ್ರಜ್ಞಾನ, ಜಗತ್ತಿನ ಕೊನಕೋನಗಳಲ್ಲೂ ಲೆಕ್ಕವಿಲ್ಲದಷ್ಟು ವರದಿಗಾರರು, ಸ್ವಂತ ಡ್ರೋನ್‍ಗಳು ಮಾಧ್ಯಮದ ಬೆಳೆವಣಿಗೆಗ ಸಾಕ್ಷಿ, ಇಂದು ಈ ಸಮಾಜದ ಮೇಲೆ ಮಾಧ್ಯಮಗಳ ಪರಿಣಾಮ ಆಗಾಧ, ಜೆಸ್.ಸಿ.ಸ್ಕಾಟ್ ಹೇಳುವ ಹಾಗೆ “ಜನರು ಒಂದು ಕುರಿಮಂದೆ, ಮಾಧ್ಯಮ ಅವರ ಕುರಿಗೊಲ್ಲ”ಎಂಬ ಮಾತು ಸತ್ಯಕ್ಕೆ ದೂರವದುದಲ್ಲ. ಇಂತಹ ಒಂದು ದೈತ್ಯ ಮಾಧ್ಯಮ ಜಗತ್ತು ಮಹಿಳೆಯ ಕುರಿತಾಗಿ ಬೆಳೆಸಿಕೊಂಡಿರುವ ದೃಷ್ಠಿಕೋನ ಮಾತ್ರ ವಿಪರ್ಯಾಸಕರ.

          ಜನರ ನಾಡಿಮಿಡಿತವಾದ ದಿನಪತ್ರಿಕೆಗಳನ್ನು ತೆಗೆದುಕೊಳ್ಳಿ, ಯಾವುದಾದರು ನಟಿಯ ಮಾದಕ ಭಂಗಿಯನ್ನೊಳಗೊಳ್ಳದ ಒಂದಾದರು ದಿನಪತ್ರಿಕೆಯನ್ನು ಓದಿರುವಿರಾ ? ಖಂಡಿತ ಸಾಧ್ಯವಿಲ್ಲ. ಇಂತಹ ಅಸಂಬದ್ಧ ವಿಷಯಗಳು ಪತ್ರಿಕೆಯನ್ನು ಮಾರಿಸುವ ಒಂದು ಸರಕಾಗಿದೆ. ಓರ್ವ ನಟಿಯ ಸಾಧನೆಗಿಂತ ಆಕೆಯ ಗಾಸಿಪ್ ಕಾಲಮ್‍ಗಳೇ ಹೆಚ್ಚಾಗಿ ಸಿಗುತ್ತವೆ. ಇದು ಯಾವ ಮಟ್ಟಿಗೆ ಇಂದು ಬೆಳೆದಿದೆಯೆಂದರೆ ವೃತಿಪತ್ರಿಕೆಗಳು ಇಂದು ಗಾಸಿಪ್ ಅಂಕಣಕಾರೆಂಬ ಹೊಸದೊಂದು ಶಾಖಾ ವಿಭಾಗವನ್ನೇ ತೆಗೆದಿದ್ದಾರೆ! “ಸೆಲೆಬ್ರಿಟಿ”ಎನ್ನಿಸಿಕೊಳ್ಳುವ ಮಹಿಳೆಯರಿಗೊಂದು ಖಾಸಗಿ ಜೀವನವಿರುತ್ತದೆ. ಎಂಬ ವಿವೇಕವೂ ಇವರಿಗಿರುವುದಿಲ್ಲ. ನಟಿಮಣಿಯರು ಮಾಧ್ಯಮದಲ್ಲಿ ತೋರ್ಪಡಿಸುವಿಕೆಗೆ ತಮ್ಮ ದೇಹವನ್ನು ದಂಡಿಸುವ ಪರಿ ನಿಜಕ್ಕೂ ಆರೋಗ್ಯಕರವಲ್ಲ. “ಸೈಜ್ ಜ್ಷಿರೋ”ಎಂಬ ಪರಿಕಲ್ಪನೆ ನೋಡಲು ಎಷ್ಟು ಸುಂದರವೋ ಅವರ ಆರೋಗ್ಯಕ್ಕೆ ಅಷ್ಟೇ ಹಾನಿಕಾರಕ, ಸಮೀಕ್ಷೆಯ ಪ್ರಕಾರ 60% ಗಿಂತ ಹೆಚ್ಚು ಮಹಿಳೆಯರು “ಡಯಟ್”ಎಂಬ ಪರಿಕಲ್ಪನೆಯೊಂದಿಗೆ ಕಡಿಮೆ ಆಹಾರ ಸೇವಿಸುವುದರಿಂದ, ಆರೋಗ್ಯಕರ ಬೆಳವಣಿಗೆಗಿಂತ ಎರಡರಿಂದ ಮೂರು ಪಟ್ಟುತೂಕ ಮತ್ತು ದೇಹರಚನೆ ಕಡಿಮೆ ಹೊಂದಿರುತ್ತಾರೆ.

ಜನರ ಮೇಲೆ ಮಾಧ್ಯಮದ ಪ್ರಭಾವ ಇಂದು ನೆನ್ನೆಯದಲ್ಲ ಜಗತ್ತು ಕಂಡ ಶ್ರೇಷ್ಠ ನಾಯಕರಲ್ಲೊಬ್ಬರಾದ ನೆಪೋಲಿಯನ್ ಹೇಳುವ ಹಾಗೆ “ನಾನು ನೂರು ಸಾವಿರ ಬಂದೂಕುಗಳಿಗಿಂತ, ಮೂರು ಪತ್ರಿಕೆಗಳಿಗೆ ಹೆಚ್ಚು ಹೆದರುವೆನು”ಎಂಬ ಮಾತು ಇದಕ್ಕೊಂದು ನಿದರ್ಶನ.

ದಿನಪತ್ರಿಕೆಗಳಲ್ಲದೆ ಮಾಸಪತ್ರಿಕೆಗಳಲ್ಲೂ ಕೂಡ ಮುಖಪುಟದಲ್ಲಿ  ರಾರಾಜಿಸುವ ನಡಿಮಣಿಯರೇ ಕಾಣಸಿಗುತ್ತಾರೆ ವಿನಾ ಎಂದಿಗೂ ಈ ಸಮಾಜದಲ್ಲಿ ಉನ್ನತ ಸಾಧನೆ ಮಾಡಿದ ಮಹಿಳೆಯರಿಗೆ ಸ್ಥಾನವಿರುವುದಿಲ್ಲ. ಇದು ಇನ್ನಿತರೆ ಮಹಿಳೆಯರಲ್ಲಿ ತಾನು ಅಂತಹ ರೂಪವತಿಯಲ್ಲ ಎಂಬ ಭಾವನೆ ಮೂಡಿಸುವದು ಸಹಜ. ಹೀಗಾಗಿಯೇ ಅವರನ್ನು ಅನುಕರಣೆ ಮಾಡಲು ಹೊರಡುತ್ತಾರೆ. ನಟಿಯರು ಮಾಡಿಕೊಳ್ಳುವಂತಹ  ಮೇಕಪ್, ಹಾಕುವ ಬಟ್ಟೆಗಳಿಂದ ಹಿಡಿದು ಅವರ ಧರಿಸುವ ಪಾದರಕ್ಷೆಗಳನನು ಅನುಕರಣೆ ಮಾಡುವವರಿದ್ದಾರೆ. ಇಂದು ಬ್ಯೂಟಿ ಪಾರ್ಲರ್‍ಗಳು, ಸ್ಪಾ ಗಳಲ್ಲಿ ಜನಸಂದಣಿ ಕಾಣಸಿಗುವುದು ಸಾಮಾನ್ಯ ಸೌಂದರ್ಯಪ್ರಜ್ಞೆಗೆ ಅಲ್ಲ, ಅನಾರೋಗ್ಯಕರ ಸ್ಪರ್ಧೆಯಿಂದಾಗಿ  ದಿನಪತ್ರಿಕೆಗಳಲ್ಲಿ ಮಹಿಳಾ               ಸಾಧಕಿಯರ ಕುರಿತಾಗಿ ಒಮ್ಮೆ  ಓದಿ ನೋಡಿ. ಅವರ ಸಾಧನೆಗಳ ಜೊತೆಜೊತೆಗೆ ಅವರ ವೈಯಕ್ತಿಕ ವಿಷಯಗಳಿರುತ್ತವೆ. ಅವರ ಸಾಂಸಾರಿಕ ಬದುಕುಗಳ ಒಡಕು ತೊಡಕುಗಳನ್ನು ಮೀರಿ ಅವರು ಮಾಡಿದ ಸಾಧನೆಗಿಂತ ಅವರಿಗಂಂಂಟಿರವು ಗಾಸಿಪ್‍ಗಳೇ ಹೆಚ್ಚಿರುತ್ತವೆÉ.

ಇನ್ನು ಟಿ.ವಿ. ಎಂಬ ದೈತ್ಯನ ಕಡೆ ತಿರುಗೋಣ, ಟಿ.ವಿ. ಧಾರವಾಹಿಗಳಲ್ಲಿ ಇಂದು ಮಹಿಳೆಯರ ಚಿತ್ರಣ ಹಾಸ್ಯಸ್ಪದ, ಯಾವುದೇ ಧಾರವಾಹಿಯನ್ನು ತೆಗೆದುಕೊಳ್ಳಿ ಕೇವಲ ಮೂರು ರೀತಿಯ ಮಹಿಳೆಯರು ನಿಗೆ ಕಾಣಸಿಗುತ್ತಾರೆ ಶೂರ್ಪನಖಿಯನ್ನು ನಾಚಿಸುವಷ್ಟು ಕೆಟ್ಟ ಗುಣಗಳನ್ನು ಹೊಂದಿರುವ, ಯಾವಾಗಲೂ ಕೇಡನ್ನೇ ಬಯಸುವ ಒಂದು ವರ್ಗ, ಎರಡನೆಯವರು ಸತ್ಯಕ್ಕೆ ದೂರವಾದಷ್ಟು ಒಳ್ಳೆಯ ಗುಣಗಳನ್ನು ಹೊಂದಿರುವವರು. ಇವರು ಯಾವ ಮಟ್ಟಿಗೆ ಒಳ್ಳೆಯವರಾಗಿರುತ್ತಾರೆಂದರೆ, ಇತರೆ ಪಾತ್ರ ವರ್ಗ ಇವರಿಗೆ ಎಷ್ಟೇ ಕಷ್ಟಗಳನ್ನು ನೀಡಿದರು ಸಹಿಸಿಕೊಂಡು, ಎಲ್ಲವನ್ನು ಸಹಿಸಿಕೊಂಡು ಸಂಸಾರವನ್ನು ಮುನ್ನಡೆಸುತ್ತಿರುತ್ತಾರೆ. ಮಾತುಮಾತಿಗೂ ತಿರುಗಿಬೀಳುವ ಹೆಣ್ಣುಮಕ್ಕಳ ಇಂದಿನ ಕಾಲದಲ್ಲಿ ಇಂತಹವರನ್ನು ಕೇವಲ ನೀವು ಧಾರವಾಹಿಗಳಲ್ಲಿ ಕಾಣಬೇಕು! ಇನ್ನು ಮೂರನೆಯದು ಅತಿ ಪ್ರಮುಖ ವರ್ಗ ಈ ಮಹಿಳೆಯರಿಂದಲೇ ಇಂದು ಮನೆಯಲ್ಲಿ ಮಹಿಳೆಯರು ಧಾರವಾಹಿಗಳನ್ನು ವೀಕ್ಷಿಸುತ್ತಾರೆ ಎಂದರೆ ತಪ್ಪಿಲ್ಲ. ಆದು ಅಳುವ ವರ್ಗ ! ಒಳ್ಳೆಯವರಾಗಿರಲಿ, ಕೆಟ್ಟವರಾಗಿರಲಿ ಅಳುವುದೇ ಮಹಿಳೆಯರ ಪ್ರಮುಖ ಅಸ್ತ್ರ ಎಂದು ಧಾರವಾಹಿಗಳ ನಿರ್ದೇಶಕರು ಚೆನ್ನಾಗಿ ಅರಿತಿದ್ದಾರೆ ಸಂಪೂರ್ಣ ಮಗ್ನವಾಗಿ ಧಾರವಾಹಿಗಳನ್ನು ನೋಡುವ ಜನರು ಪಾತ್ರಗಳು ಅಳುವಾದ ಇವರೂ ಅಳುತ್ತಿರುತ್ತಾರೆ ! ಇಂದು ಧಾರವಾಹಿಗಳು ಯಾವ ಮಟ್ಟಿಗೆ ಜನಪ್ರಿಯವೆಂದರೆ ಪಾರ್ಕ್‍ಗಳಲ್ಲಿ, ಶಾಲಾಕಾಲೇಜುಗಳಲ್ಲಿ ನಡೆಯ ಬೇಕಾದ ಆರೋಗ್ಯಕರ ಚರ್ಚೆಯ ಬದಲು ಧಾರವಾಹಿಯಲ್ಲಿ ಆ ಹಿಂದಿನ ತಾವು ನೋಡಿದ್ದರ ಬಗ್ಗೆ. ಮತ್ತು ಅಂದು ಏನಾಗಬಹುದೆಂಬ ಅಂತೆ-ಕಂತೆಗಳ ತಾಣವಾಗಿರುತ್ತವೆ !

ಪಿ.ಎಚ್.ಡಿ.ಸಂಶೋಧನಾ ವಿದ್ಯಾರ್ಥಿಯಾದ ನನಗೆ ನನ್ನ ಗೆಳೆಯರು ಮಾತಿನ ಮಧ್ಯದಲ್ಲಿ ಅವರು ನೋಡುವ ಧಾರವಾಹಿಗಳ ಅಥವಾ ಚಲನಚಿತ್ರದ ಪಾತ್ರಗಳ ಬಗ್ಗೆಯೇ ಮಾತು. ಅನುಕರಣೆ ಮಾಡುವ ಪರಿ ನಗು ತರಿಸುತ್ತದೆ. ಟ.ವಿ.ಚಾನೆಲ್‍ಗಳು ಮಹಿಳೆಯರನ್ನು ನೋಡುವ ಪರಿಯಂತು ನಾಚಿಕೆಗೇಡು ಮಹಿಳೆಯರನ್ನು ಕೇವಲ ತಮ್ಮ ಟಿ.ಆರ್.ಪಿ ಹೆಚ್ಚಿಸುವ ಸರಕಾಗಿಸಿಕೊಂಡಿದ್ದಾರೆ. ಚಲನಚಿತ್ರಗಳಲ್ಲಿ ಕಾರಣವಿಲ್ಲದೇ ಬರುವ ಐಟಮ್ ಸಾಂಗ್‍ಳೆಂಬ ಹಾಡುಗಳಿಗೆ ಆ ಚಿತ್ರಕಥೆಯಲ್ಲಿ ಅಥವಾ ಅದರಕ್ಕುರಯವ ಯಾವುದೇ ಸಂದರ್ಭಕ್ಕೂ ಅರ್ಥವೂ ಇರುವುದಿಲ್ಲ. ಸಂಬಂಧವೂ ಇರುವುದಿಲ್ಲ. ಕೇವಲ ಮಹಿಳೆಯರ ಅಂಗಾಂಗ ದರ್ಶನ ಮಾಡಿಸುವ ವಿಕೃತ ಮನೋಭಾವನ್ನು ನೀವು ಇಲ್ಲಿ ಕಾಣಬಹುದು.

ಯಾವುದೇ ಒಂದು ಮಹಿಳೆಯರ ಮೇಲೆ ದೌರ್ಜನ್ಯವಾದರೆ ಸಾಕು, ನಮ್ಮ ಎಲ್ಲಾ ಟಿ.ವಿ.ಸುದ್ದಿವಾಹಿನಿಗಳಿಗೆ ಎರಡು ದಿನದವರೆಗೆ ಸುದ್ದಿಗೆ ಯಾವುದೇ  ಬರವಿರುವುದಿಲ್ಲ. ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳ ನೈಜ ಕಾಳಜಿ ತೋರಿಸುವ ಮಾಧ್ಯಮ ಮಿತ್ರರು ಕೇವಲ ಬೆರಳಣಿಕೆಯಷ್ಟು, ದೌರ್ಜನ್ಯದ ಘಟನೆಯನ್ನೇ ರಬ್ಬರ್ನಂತೆ ಎಳೆದು ದಿನವಿಡೀ ಅದರ ಕುರಿತಾಗಿಯೇ ಸ್ಪೆಷಲ್ ರಿಪೋರ್ಟ್‍ಗಳು, ಸ್ಪೆಷಲ್ ಪ್ರೋಗ್ರಾಮ್‍ಗಳು ಬರುತ್ತವೆ ವಿನಹ ನಿಜವಾಗಿಯೂ ಇಂತಹ ಘಟನೆಗಳನ್ನು ಮುಂದೆ ತಡೆಯುವ ಸಲುವಾಗಿ ಚರ್ಚೆ ನಡೆಯುವುದು. ನಡೆದರೂ ಅದನ್ನು ಕೊನೆಗಾಣಿಸುವವರು ಯಾರು ಇಲ್ಲ. ಇನ್ನು ಇಂತಹ ಸುದ್ದಿ ಬಿತ್ತರವಾಗುತ್ತಿದ್ದಂದೆ ಸರ್ಕಾರದ ಮೇಲೆ ಮುಗಿಬೀಳುವುದು ವಿರೋಧ ಪಕ್ಷಗಳ ಸಂಪ್ರದಾಯವಾಗಿಬಿಟ್ಟಿದೆ.

ಯಾವುದಾದರೊಂದು ಹೊಸ ವಿಷಯವು ಸಿಗುತ್ತಲೆ ನಮ್ಮ ಈ ಮಾಧ್ಯಮ ಮಿತ್ರರು. ವಿರೋಧ ಪಕ್ಷದವರು ಈ ವಿಷಯವನ್ನು ಸಂಪೂರ್ಣವಾಗಿ ಮರೆತು ಆ ವಿಷಯದ ಬಗ್ಗೆಯ ಗಮನ ಹರಿಸುತ್ತಾರೆ.

“ಟೈಮ್ಸ್ ಆಫ್ ಇಂಡಿಯಾ”ದಂತಹ ಪ್ರಸಿದ್ಧ ಪತ್ರಿಕೆಯು ತನ್ನ ಅಂತರ್ಜಾಲದ ಜಾಲತಾಣದಲ್ಲಿ ದೀಪಿಕಾ ಪಡುಕೋಣೆಯಂತಹ ಪ್ರಸಿದ್ಧ ನಟಿಯ ಬಗ್ಗೆ ಅತಿಕೇವಲವಾಗಿ ಮಾತಾಡಿದ ನಿದರ್ಶನ ಕಣ್ಣು ಮುಂದೆಯೇ ಇದೆ. ದೀಪಿಕಾರವರು ಅವರಿಗೆ ಪ್ರತ್ಯುತ್ತರ ನೀಡಿದ ಬಗೆ ಎಲ್ಲರಿಗೂ ಆದರ್ಶವಾಗಬೇಕು. ಸುಮ್ಮನೆ ಈ ಮಾಧ್ಯಮದ ಅವಾಂತರಗಳನ್ನು ಸಹಿಸಿಕೊಳ್ಳುವ  ಈ ಸಮಾಜವು ಖಂಡಿತ ಆರೋಗ್ಯಕರ ಬೆಳವಣೆಗೆಯೆಲ್ಲ.

ಇದಕ್ಕೆಲ್ಲ ಪರಿಹಾರ ? ಈ ಶಿಕ್ಷಣ-ಸುಶಿಕ್ಷಿತರೂ, ವಿವೇಕ ಹೊಂದಿಂದ ಜನರನ್ನು ಹೊಂದಿದ ಈ ಸಮಾಜದಲ್ಲಿರುವ ಈ ಮಾಧ್ಯಮ  ಈ ಮಹಿಳೆಯನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಲು ಸಾಧ್ಯ… !

ಇಂದ,

 

 

LEAVE A REPLY

Please enter your comment!
Please enter your name here