ಶಿಕ್ಷಣ ದಿನಾಚರಣೆಯ ಪ್ರಯುಕ್ತ ವಿಶೇಷ ಲೇಖನ

ಕವನ ಉಪ್ಪಿನಂಗಡಿ
B.A Journalism
Philomena College Puttur

ಒಂದು ಮಗು ಜನಿಸಿದಾಗ, ಜನಿಸಿದ ನಂತರ ಆ ಮಗುವಿನ ಮೊದಲ ಗುರು ತಂದೆ-ತಾಯಿ ಆಗಿರುತ್ತಾರೆ. ಎರಡನೇ ಆದ್ಯತೆ ರಕ್ಷಕರಿಗೆ ದೊರೆಯುತ್ತದೆ. ಯಾವುದೋ ಒಂದು ತನಗೆ ಸಂಬಂಧ ಇಲ್ಲದ ಮಗುವನ್ನು ತನ್ನ ಮಗುವೆಂದು ತಿಳಿದುಕೊಂಡು ಆ ಮಗುವನ್ನು ತಾನು ತಪ್ಪು ಮಾಡಿದಲ್ಲಿ ಆ ಮಗುವನ್ನು ತಿದ್ದಿ. ಒಳ್ಳೆಯ ಕೆಲಸ ಮಾಡಿದಲ್ಲಿ ಬೆನ್ನು ತಟ್ಟಿ ಪ್ರೊತ್ಸಾಹ ಕೊಟ್ಟು ಆ ಮಗು ಧೈರ್ಯದಿಂದ ಜನತೆಯ ಮುಂದೆ ಮಾತನಾಡುವಂತೆ ತಲೆಎತ್ತಿ ನಡೆಯುವಂತಹ ಧೈರ್ಯ, ಉತ್ಸಾಹವನ್ನು ನೀಡುವ ಏಕೈಕ ಗುರು ಎಂದರೆ ಶಿಕ್ಷಕ ಎನ್ನಬಹುದು.
ಶಿಕ್ಷಕರೆಂದರೆ, ನಮ್ಮ ನಾಡಿನಲ್ಲಿರುವ ಎಲ್ಲಾ ಪೋಲಿಸ್, ಡಾಕ್ಟರ್, ಸೈನಿಕ, ವಕೀಲರು ಮತ್ತು ಇತರೆ ಮುಂತಾದ ಹುದ್ದೆಗಳಲ್ಲಿ ಕೆಲಸ ಮಾಡಿಕೊಂಡು ಜನಸಾಮಾನ್ಯರ ನೋವು, ಗೋಳು, ಕಷ್ಟಗಳಿಗೆ ಸ್ಪಂದಿಸುತ್ತಿರುವ ಇತರ ಮಹಾನ್, ವೀರ ವ್ಯಕ್ತಿಗಳ ಗುರುಗಳಾಗಿರುತ್ತಾರೆ. ಎಲ್ಲಾ ಮಕ್ಕಳನ್ನು ಸಮಾನಾಗಿ ನಡೆಸಿಕೊಂಡು, ಆ ಮಕ್ಕಳು ಇಟ್ಟಿರುವ ಗುರಿಗಳನ್ನು ತಲುಪುವಲ್ಲಿ ಪ್ರತ್ಯಕ್ಷವಾಗಿ ಇಲ್ಲದಿದ್ದರೂ ಪರೋಕ್ಷವಾಗಿಯಾದರೂ ಶಿಕ್ಷಕರು ಮುಖ್ಯ ಕಾರಣಕರ್ತರಾಗಿರುತ್ತಾರೆ. ಬರೀ ಮಹಾನ್ ವ್ಯಕ್ತಿಗಳು ಎಂದರೆ ಸಾಲದು ನಮ್ಮ ಸಮಾಜದಲ್ಲಿ ಮಾನವೀಯತೆಯಿಂದಿರುವ, ಸರಳತೆ ಹಾಗೂ ತ್ಯಾಗಮಯಿಗಳು, ಜನರ ನೋವಿಗೆ ಸ್ಪಂದಿಸುವ ಇನ್ನಿತರ ವ್ಯಕ್ತಿಗಳು ಸೃಷ್ಟಿಯಾಗಬೇಕಾದರೆ ಪೋಷಕರು ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದು. ಕೆಲವರು ಶಿಕ್ಷಕರನ್ನು ನೋಡಿ ಸ್ಫೂರ್ತಿಗೊಂಡು ಆದರೂ ಕೂಡಾ ಆ ಶಿಕ್ಷಕರಂತೆ ಆಗಬೇಕೆಂದು ತಮ್ಮ ಗುರಿಯನ್ನು ಬದಲಿಸಿ ಶಿಕ್ಷಕರಾದವರು ಎಷ್ಟೋ ಮಂದಿ ಇದ್ದಾರೆ.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ನೆನಪಿಗಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅವರು ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರ, ತತ್ವಜ್ಞಾನ ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್. ಭಾರತೀಯರ ಮನದಲ್ಲಿ ಮರೆಯಲಾಗದ ನೆನಪಾಗಿ ಉಳಿದಿದ್ದಾರೆ. ಇವರು ಒಬ್ಬ ಶ್ರೇಷ್ಟ ಶಿಕ್ಷಕರಾಗಿದ್ದರು. ಇವರ ಜನ್ಮದಿನವಾದ ಸೆಪ್ಟಂಬರ್ 5 ರಂದು ಪ್ರತೀ ವರ್ಷ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇವರು 1948ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್‍ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು. ಇವರ ಇಂತಹ ಸಾಧನೆ, ಪರಿಶ್ರಮದ ಪ್ರತಿಫಲವಾಗಿ ನಾವು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತೇವೆ.

ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರ ಹಾಗೆಯೇ ನಮ್ಮ ಎಲ್ಲಾ ಶಿಕ್ಷಕರು ಕೂಡ ಸೇವೆ ಮಾಡಿದರೆ ನಮ್ಮ ದೇಶ ವಿದ್ಯಾವಂತ ದೇಶ ಹಾಗೂ ಶ್ರೇಷ್ಟ ರಾಷ್ಟ್ರವಾಗುವುದರಲ್ಲಿ ಎರಡು ಮಾತಿಲ್ಲ.

LEAVE A REPLY

Please enter your comment!
Please enter your name here