ಲೇಖಕರು: ಮೌ.ವಹೀದುದ್ದೀನ್ ಖಾನ್

ಅನುವಾದ: ತಲ್ಹಾ ಕೆ.ಪಿ

ಯುರೋಪಿನಲ್ಲಿ ಸ್ಟೆಫೆನ್ ಪ್ರಿಸ್ತ್ಲೆಯ್ ಎಂಬ ಒಬ್ಬ ಆರ್ಟಿಸ್ಟ್ ಇದ್ದ ಚೀಸ್ಟರ್ ಇಂಗ್ಲೆಂಡಿನ ಒಂದು ಹರಾಜಿನಲ್ಲಿ ನಾಲ್ಕು ಫೋಟೋ ಇಡಲಾಗಿತ್ತು. ಅದರ ಬೆಲೆಯೂ ಕೇವಲ ಒಂದು ಪೌನ್ಡ ಎಂದು ನಿರ್ಧರಿಸಲಾಗಿತ್ತು. ಆದರಿಂದ ಸ್ಟೆಫೆನ್ ಪ್ರಿಸ್ತ್ಲೆಯ್ ಒಂದು ಒಂದು ಪೌನ್ಡ ಚೆಕ್ಕನ್ನು ನೀಡಲಾಗಿತ್ತು. ಯುರೋಪಿಯನ್ ಆರ್ಟಿಸ್ಟ್ ಒಂದು ಪೌನ್ಡ’ನ ಚೆಕ್ಕನ್ನು ಪಡೆದು ಕೋಪಿತನಾದ, ಅವನ ಪ್ರಕಾರ ಆ ನಾಲ್ಕು ಚಿತ್ರಗಳ ಬೆಲೆಯು ಖರೀದಿ ಮಾಡಿದವನ್ನು ನೀಡಿದಕ್ಕಿಂತ ಎಷ್ಟೋ ಅಧಿಕವಾಗಿತ್ತು. ಆತ ತನ್ನ ಚಕ್ಕಿನಲ್ಲಿರುವ ಒಂದು ಪೌನ್ಡ ಬೆಳೆಯನ್ನು ೧೦೦೧ ಪೌನ್ದ್ ಎಂದು ಬದಲಿಸಿ, ಬ್ಯಾಂಕಿನಿಂದ 1001 ಪೌನ್ಡ ಹಣವನ್ನು ಪಡೆದಿದ್ದ . ಬ್ಯಾಂಕಿನವರಿಗೆ ಆದಷ್ಟು ಬೇಗ ಬ್ಯಾಂಕಿನವರಿಗೆ ಆತ ನಕಲಿ ಚಕ್ ನೀಡಿರುವುದಾಗಿ ತಿಳಿಯಿತು. ಸ್ಟಿಫೆನ್ ಪ್ರಿಸ್ತ್ಲೆಯ್’ಯನ್ನು ಪೊಲೀಸರು ಬಂಧಿಸಿದರು. ಈಗ ಆತ ಜೈಲಿನಲ್ಲಿ ತನ್ನ ಮೋಸಗಾರಿಕೆಯ ಶಿಕ್ಷೆ ಅನುಭವಿಸುತ್ತಿದ್ದಾನೆ.
(ಹಿಂದೂಸ್ತಾನ್ ಟೈಮ್ಸ್ 2 /9 /1981)

ಈ ಘಟನೆಯನ್ನು ನಾವು ಪ್ರಪಂಚದಲ್ಲಿ ನಡೆಯುವ ವ್ಯವಹಾರದೊಂದಿಗೆ ಸೇರಿಸಬಹುದು. ಅಷ್ಟೇ ಅಲ್ಲ ಬದಲಾಗಿ ನಾವು ಇದರಲ್ಲಿ ಪರಲೋಕದ ಚಿತ್ರಣವನ್ನು ಕಾಣ ಬಹುದು. ಹೆಚ್ಚಿನ ಜನರು ಈ ಲೋಕದಲ್ಲಿ ಒಂದು ಪೌನ್ಡ’ನಷ್ಟು ಕಾರ್ಯವೆಸೆಗಿದ್ದಾರೆ ಆದರೆ ಅದನ್ನು ಪರಲೋಕದಲ್ಲಿ ಸಾವಿರದ ಒಂದು ಪೌನ್ಡ ಎಂದು ಬದಲಿಸಿ ಹಣ(ಪುಣ್ಯ) ಪಡೆಯಲು ಇಚ್ಚಿಸುತ್ತಿದ್ದರೆ. ಕೆಲವರು ಇಲ್ಲಿ ಧರ್ಮದ ಅಂಶಿಕವಾದ ಕೆಲಸವನ್ನು ಮಾತ್ರಮಾಡುತ್ತಾರೆ. ಮತ್ತು ಅದನ್ನೇ ಇಡೀ ಧರ್ಮದ ಕೆಲಸವೆಂಬಂತೆ ಬಿಂಬಿಸುತ್ತಾರೆ. ಕೆಲವರು ಹೆಸರು ಗಾಲಿಸಾಲಿಕ್ಕಾಗಿ ಮಾತ್ರ ಕಾರ್ಯನಿರತರಾಗುತ್ತಾರೆ ಆದರೆ ಅದಕ್ಕಿ ಧಾರ್ಮ ಸೇವೆಯ ಹೆಸರನ್ನು ನೀಡುತ್ತಾರೆ.ಕೆಲವರು ಸ್ವಜನ ಪಕ್ಷಪಾತಕ್ಕಾಗಿ ಕಾರ್ಯ ನಿರತರಾಗುತ್ತಾರೆ ಆದರೆ ಅದನ್ನು ಧಾರ್ಮಿಕ ಆಂಧೋಲನವೆಂದು ಕರೆಯುತ್ತಾರೆ. ಕೆಲವರು ತನ್ನ ಸ್ವಾರ್ಥ ರಾಜಕೀಯ ಇಚ್ಚಾ ಶಕ್ತಿಗಾಗಿ ಕೆಲಸ ಮಾಡುತ್ತಾರೆ ಆದರೆ ಅದನ್ನು ಧಾರ್ಮಿಕ ವ್ಯವಸ್ಥೆ ಎನ್ನುತ್ತಾರೆ. ಕೆಲವರು ಸಂಪತ್ತು ಮತ್ತು ಗೌರವದ ಗಳಿಕೆಗಾಗಿ ಕೆಲಸ ಮಾಡುತ್ತಾರೆ ಆದರೆ ಅದನ್ನು ಸಹೋದರತೆಯ ಅಭಿಮಾನದ ಶಬ್ದಗಳಿಂದ ನಿನಪಿಸಲಾಗುತ್ತದೆ. ಕೆಲವರು ಚರ್ಚೆ ಮತ್ತು ಸಂವಾದಗಳಲ್ಲಿ ಮಗ್ನರಾಗುತ್ತಾರೆ ಮತ್ತು ಅದನ್ನೇ ಧರ್ಮದ ಪುನರುತ್ತಾನಾದ ಕೆಲಸವೆಂದು ಭಾವಿಸುತ್ತಾರೆ.ಕೆಲವರು ಅತೀ ಸಣ್ಣದಾದ ಸುಧಾರಣಾ ಕೆಲಸವನ್ನು ಮಾಡುತ್ತಾರೆ ಮತ್ತು ಅದನ್ನು ಸಂದೇಶ ಪ್ರಚಾರದ ಹೆಸರಿನೊಂದಿಗೆ ನೆನಪಿಸುತ್ತಾರೆ.

ಇದರಲ್ಲಿರುವ ಪ್ರತೀ ವ್ಯಕ್ತಿಯು ಈ ಲೋಕದಲ್ಲಿಯೇ ತಾನು ಮಡಿದ ಪುಣ್ಯ ಕಾರ್ಯದ ಬೆಳೆಯನ್ನು ಸಂಪೂರ್ಣವಾಗಿ ಪಡೆಯುತ್ತಾನೆ. ಆತ ತನ್ನ ಕ್ಷುಲ್ಲಕ ಕೆಲಸವನ್ನು ದೊಡ್ಡ ಕೆಲಸವಾಗಿ ಬಿಂಬಿಸಿ ಖುಷಿಪಡುತ್ತಾನೆ. ಆದರೆ ಮರಣವು ಈ ಎಲ್ಲ ಹರುಷ ಭರಿತ ಊಹೆಯನ್ನು ತಪ್ಪೆಂದು ಸಾಬೀತುಪಡಿಸಲಿದೆ. ಮರಣ ನಂತರ ಬರುವ ನ್ಯಾಯಾಲಯದಲ್ಲಿ ಇಂತಹ ಎಲ್ಲಾ ವ್ಯೆಕ್ತಿಗಳು ಮೋಸಗಾರಿಕೆಯ ಆರೋಪವನ್ನೆದುರಿಸುವರು. ಅವರು ಇಂದು ಇಹಲೋಕದಲ್ಲಿ ಒಂದು ಪೌನ್ಡ ಚೆಕ್ಕನ್ನು ಹಿಡಿದುಕೊಂಡು 1001 ಪೌನ್ಡ’ನಷ್ಟು ಹಣ ಪಡೆದಿರಬಹುದು.

LEAVE A REPLY

Please enter your comment!
Please enter your name here