ಕವನ (ಜಾನಪದ ಶೈಲಿ)
- ಅಬುಲ್ ಅಸ್ರಾ
ಕಿಸೆಯಲ್ಲಿ ಹಣವಿಲ್ಲ
ದೇಶದಲ್ಲಿ ಕೆಲಸವಿಲ್ಲ
ಇಪ್ಪತ್ತು ಲಕ್ಷಕೋಟಿ ಎಲ್ಲಿ ಹೋಯ್ತು
ಕೇಳಿದರೆ ಯಾರಲ್ಲೂ ಉತ್ತರವಿಲ್ಲ
ಹಡೆದವ್ವ ಸಿಟ್ಟಾಗಿ ಯಾರನ್ನು ಬೈ ಬ್ಯಾಡ
ಕಪ್ಪು ಧನ ಈವರೆಗೆ ತರಲಿಲ್ಲ
ಬಡವರ ಲೆಕ್ಕದಲ್ಲಿ ಬೀಳಲಿಲ್ಲ
ಹದಿನೈದು ಲಕ್ಷವದು ಎಲ್ಲಿ ಹೋಯ್ತು
ಕೇಳಿದರೆ ಯಾರಲ್ಲೂ ಉತ್ತರವಿಲ್ಲ
ಹಡೆದವ್ವ ಸಿಟ್ಟಾಗಿ ಯಾರನ್ನೂ ಬೈ ಬ್ಯಾಡ
ನೋಟ್ ಬ್ಯಾನ್ ಮಾಡಿಯಾಯ್ತು
ಜಿ ಎಸ ಟಿ ಲಾಗುವಾಯ್ತು
ಬಡವರ ಜೇಬು ಯಾಕೆ ಖಾಲಿಯಾಯ್ತು
ಕೇಳಿದರೆ ಯಾರಲ್ಲೂ ಉತ್ತರವಿಲ್ಲ
ಹಡೆದವ್ವ ಸಿಟ್ಟಾಗಿ ಯಾರನ್ನೂ ಬೈ ಬ್ಯಾಡ
ವ್ಯಾಪಾರವೆಲ್ಲ ಮಂದವಾಯ್ತು
ಫ್ಯಾಕ್ಟರಿ ಎಲ್ಲಾ ಬಂದಾಯ್ತು
ಒಂದೊಂದಾಗಿ ನದಿಗೆ ಜನರೇಕೆ ಹಾರಿ ಹೋದರು
ಕೇಳಿದರೆ ಯಾರಲ್ಲೂ ಉತ್ತರವಿಲ್ಲ
ಹಡೆದವ್ವ ಸಿಟ್ಟಾಗಿ ಯಾರನ್ನೂ ಬೈ ಬ್ಯಾಡ
ರೈತನ ಜೀವನ ಸಾಲದಲ್ಲಾಯ್ತು
ಬೆಳೆಗೆ ಇಲ್ಲಿ ಬೆಲೆ ಇಲ್ಲದಾಯ್ತು
ಆತ್ಮ ಹತ್ಯೆ ಒಂದೇ ದಾರಿ ಯಾಕೆ ಉಳಿದಿರುವುದು
ಕೇಳಿದರೆ ಯಾರಲ್ಲೂ ಉತ್ತರವಿಲ್ಲ
ಹಡೆದವ್ವ ಸಿಟ್ಟಾಗಿ ಯಾರನ್ನು ಬೈ ಬ್ಯಾಡ
ಲೋಕವೆಲ್ಲಾ ತಿರುಗಿಯಾಯ್ತು
ಹಾರಿ ಹಾರಿ ಸಾಕಾಗಿ ಹೋಯ್ತು
ಮೋಜು ಮಸ್ತಿ ಪ್ರಚಾರದಲ್ಲಿ ಹಣ ಮುಗಿದೋಯ್ತು
ಕೇಳಿದರೆ ಯಾರಲ್ಲೂ ಉತ್ತರವಿಲ್ಲಾ
ಹಡೆದವ್ವ ಸಿಟ್ಟಾಗಿ ಯಾರನ್ನು ಬೈ ಬ್ಯಾಡ
ದೇಶದ ಸೊತ್ತನ್ನು ಮಾರುತ್ತಿದ್ದಾರೀಗ
ಗೆಳೆಯರಿಗೆ ಉಪಕಾರ ಮಾಡುತ್ತಿದ್ದಾರೀಗ
ಕುರ್ಚಿಜಾರಬಹುದೆಂದೋ ರೆಡಿ ಮಾಡುತ್ತಿದ್ದಾರೀಗ
ಕೇಳಿದರೆ ಯಾರಲ್ಲೂ ಉತ್ತರವಿಲ್ಲ
ಹಡೆದವ್ವ ಸಿಟ್ಟಾಗಿ ಯಾರನ್ನು ಬೈ ಬ್ಯಾಡ