ಮೌಲಾನ ವಹಿದುದ್ದೀನ್ ಖಾನ್

ಅನಂತ ಸಂಶೋಧನೆಯ ಮನೋಭಾವವು ಮಾನವನನ್ನು ಇತರ ಸೃಷ್ಟಿಗಳಿಂದ ಪ್ರತ್ಯೇಕಿಸುತ್ತಿರುವುದು ಒಂದು ವಿಶೇಷತೆಯಾಗಿದೆ. ಪ್ರತಿಯೋರ್ವನು ತನ್ನ ಹುಟ್ಟಿನಿಂದಲೇ ತನಗೆ ಪರಿಚಯವಿಲ್ಲದ ವಸ್ತುವಿನ ಸಂಶೋಧನೆಯ ಸ್ಪೂರ್ತಿಯನ್ನು ಹೊಂದಿರುತ್ತಾನೆ. ಆದರೆ, ಅದು ಅವನಿಗೆ ಲಭಿಸುವುದಿಲ್ಲ. ಯಾವುದೇ ವಿಜಯವು ಆತನಿಗೆ ಮನಸ್ಸಿನ ಸಂತೃಪ್ತಿಯನ್ನು ನೀಡಲಾರದು ಮತ್ತು ಯಾವುದೇ ಪರಾಜಯದಿಂದಾಗಿ ಅದು ಅಂತ್ಯಗೊಳ್ಳುವುದೂ ಇಲ್ಲ. ತತ್ವಜ್ಞಾನಿಗಳು ಇದನ್ನು ಐಡಿಯಲ್‍ನ ಹುಡುಕಾಟ ಎಂದೆನ್ನುತ್ತಾರೆ.

ಐಡಿಯಲ್‍ನ ಸಂಶೋಧನೆಯು ಎಲ್ಲಾ ಮಾನವರ ಕಾರ್ಯವೈಖರಿಯ ನೈಜ ಮತ್ತು ಅಂತಿಮ ಪ್ರೇರಕ ಶಕ್ತಿಯಾಗಿದೆ. ಒಂದು ವೇಳೆ ಈ ಹುಡುಕಾಟ ಇಲ್ಲವೆಂದಾದರೆ ಈ ಲೋಕದ ಎಲ್ಲಾ ಚಟುವಟಿಕೆಗಳು ಒಮ್ಮೆಲೆ ನಿಂತು ಬಿಡುತ್ತದೆ. ಈ ಅರಸುವಿಕೆಯನ್ನು ಫ್ರಾಯಿಡ್‍ನು ತಪ್ಪಾಗಿ ಲೈಂಗಿಕ ಬಯಕೆ ಎಂದು ಅರ್ಥೈಸಿದನು. ಎಡ್ಲರ್ ಇದನ್ನು ತಪ್ಪಾದ ರೀತಿಯಲ್ಲಿ ಶಕ್ತಿ ಶೇಖರಣೆ ಎಂದನು. ಮೈಕ್ ಡೂಗಲ್‍ನು ಇದನ್ನು ತಪ್ಪಾಗಿ ಮಾನವ ಸಹಜ ಸ್ವಭಾವಗಳ ಫಲವೆಂದು ವಿವರಿಸಿದನು. ಮಾಕ್ರ್ಸ್ ಇದನ್ನು ಉಪಜೀವನದ ಹುಡುಕಾಟವೆಂದೂ ಮತ್ತು ಅದುವೇ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುವುದೆಂದು ಸಾಬೀತುಗೊಳಿಸಲು ಪ್ರಯತ್ನಿಸಿದನು. ಆದರೆ, ಈ ವೀಕ್ಷಣೆಗಳನ್ನು ತಪ್ಪೆಂದು ಸಾಬೀತುಪಡಿಸಲು ಈ ಎಲ್ಲಾ ಅಭಿಲಾಷೆಗಳು ಪೂರ್ತಿಗೊಂಡು ಅವರಿಗೆ ಸಂತೃಪ್ತಿ ಸಿಗದಿರುವುದು ಸಾಕಲ್ಲವೆ?

ಈ ಆಗ್ರಹಗಳು ಲಭಿಸಿದವರು ಕಳವಳಗೊಂಡಂತೆ, ದೊರಕಿದ ಈ ಮಂದಿಯ ಮನಮಸ್ತಿಷ್ಕಗಳು ವ್ಯಾಕುಲಚಿತ್ತರಾಗಿ ಕಂಡು ಬಂದುವು.

ಮಾನವನು ಸಾವಿರಾರು ವರ್ಷಗಳಿಂದ ಈ ಐಡಿಯಲ್‍ನ್ನು ಲೋಕದ ಹಲವು ವಸ್ತುಗಳಲ್ಲಿ ಹುಡುಕುತ್ತಿದ್ದಾನೆ. ಆದರೆ, ಯಾವನೇ ವ್ಯಕ್ತಿಯು ತನ್ನ ಹುಡುಕಾಟಕ್ಕೆ ಸರಿಯಾದ ಉತ್ತರ ಸಿಕ್ಕಿದುದಾಗಿ ಕಂಡುಕೊಂಡಿಲ್ಲ. ಈ ವಿಷಯದಲ್ಲಿ ರಾಜ ಮಹಾರಾಜರುಗಳು, ದರಿದ್ರರೂ ಸಂತೃಪ್ತರಲ್ಲ. ಮಾನವನ ಹುಡುಕಾಟಕ್ಕೆ ಸರಿಯಾದ ಉತ್ತರವಿಲ್ಲ ಎಂಬುವುದನ್ನು ಈ ದೀರ್ಘ ಅನುಭವಗಳು ಸಾಬೀತು ಪಡಿಸುತ್ತದೆ. ಬದಲಾಗಿ ಇದರ ಉತ್ತರವು ಅಗೋಚರ ಲೋಕದಲ್ಲಿ ಲಭ್ಯವಿದೆ ಅದನ್ನು ಮಾನವನು ಅನುಭವಿಸುತ್ತಿದ್ದಾನೆ. ಆದರೆ, ಅದು ಕಾಣುತ್ತಿಲ್ಲ.

ವಾಸ್ತವದಲ್ಲಿ ಈ ಹುಡುಕಾಟವೇ ದೇವನ ಹುಡುಕಾಟವಾಗಿದೆ. ಮಾನವನು ಯಾವ ಐಡಿಯಲ್‍ನನ್ನು ಪಡೆಯಲು ತಳಮಳಗೊಂಡಿದ್ದಾನೋ ಅದುವೇ ಆತನ ಸೃಷ್ಟಿಕರ್ತನಾಗಿದ್ದು, ಆತನ ಪ್ರಾಣದಲ್ಲೇ ಅಡಕವಾಗಿರುವ ಆ ದೇವನನ್ನು ಹುಡುಕುತ್ತಿದ್ದಾನೆ. ಎಲ್ಲಾ ಮಾನವರು ಪ್ರಕೃತಿಯ ದೇವನ ಹುಡುಕಾಟದಲ್ಲಿ ತಲ್ಲೀನವಾಗಿದ್ದು, ಆದ್ದರಿಂದಲೇ ಅವನ ಒಳಮನಸ್ಸು ಬೇರೆ-ಬೇರೆ ವಸ್ತುಗಳೆಡೆಗೆ ಓಡುತ್ತಿದೆ. ಮಾನವನು ಈ ವಸ್ತುಗಳು ತನ್ನ ಸಮಸ್ಯೆಗಳ ಪರಿಹಾರವಾಗಿರಬಹುದೆಂದು ನಂಬುತ್ತಾನೆ. ಆದರೆ, ಅದು ಕೈಗೆ ಸೇರುವಾಗ ತಾನು ಹುಡುಕಿದ ವಸ್ತು ಇದಲ್ಲವೆಂದು ಅವನಿಗೆ ಅರಿವಾಗುತ್ತದೆ.

ಅನು: ತಲ್ಹಾ ಇಸ್ಮಾಯಿಲ್ ಕೆ.ಪಿ

LEAVE A REPLY

Please enter your comment!
Please enter your name here