ಮೋಹನನ್
ಶಿಕ್ಷಣ ತಜ್ಞರು
“ತೆರೆದ ಪುಸ್ತಕ ಪರೀಕ್ಷೆ” ಎಂದರೆ ಪರಿಕ್ಷಾರ್ಥಿಯು ಪ್ರಶ್ನೆಗಳಿಗೆ ಉತ್ತರಿಸುವಾಗ ತಮ್ಮ ನೋಟು ಪುಸ್ತಕ, ಪಠ್ಯಪುಸ್ತಕ ಮತ್ತು ಇತರ ಅನುಮೋದಿತ ವಸ್ತುಗಳನ್ನು ಸಮಾಲೋಚಿಸಲು ಅನುಮತಿಯನ್ನು ನೀಡಲಾಗುವುದು. ಕಾನೂನು ಕೋರ್ಸುಗಳಲ್ಲಿ ಈ ವ್ಯವಸ್ಥೆಯು ಹೊಸತೇನಲ್ಲ, ಆದರೆ, ಉಳಿದ ವಿಷಯಗಳಿಗೆ ಇದು ಕೇಳಿರದಂತಹ ವಿಚಾರವಾಗಿರಬಹುದು. ಅಮೂಲಾಗ್ರವಾದ ಮತ್ತು ಗೊಂದಲಯುತವಾಗಿರುವ ಈ ಕಲ್ಪನೆಯು ಸಾಂಪ್ರದಾಯಿಕ ಪರೀಕ್ಷಾ ಪದ್ಧತಿಗೆ ಒಗ್ಗಿಕೊಂಡಿರುವವರಿಗೆ ಕಠೋರವಾಗಿ ಕೇಳಿಸಬಹುದು. ಇದು ಕಲಿಕಾ ಕಾರ್ಯಕ್ರಮಗಳಿಗೆ ಹೆಚ್ಚು ಸೂಕ್ತವಾಗಿದೆ ಮತ್ತು ವಿಶೇಷವಾಗಿ ವಿಮರ್ಶಾ ಸಾಮಥ್ರ್ಯ ಮತ್ತು ಕ್ರಿಯಾತ್ಮಕ ಚಿಂತನೆಯ ಕೌಶಲ್ಯವನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಮಾಹಿತಿ ಪಸರಿಸುವ ಸಾಧನವಾಗಿ ಶಿಕ್ಷಣ:
ತೆರೆದ ಪುಸ್ತಕ ಪರೀಕ್ಷೆಗಳ ಅರ್ಹತೆಯನ್ನು ಪ್ರಶಂಸಿಸಲು, ಬೋಧನಾ ಕಾರ್ಯಕ್ರಮಗಳ ಸ್ವರೂಪವನ್ನು ಒಟ್ಟಾಗಿ ಅರ್ಥೈಸಿಕೊಳ್ಳುವುದು ಪ್ರಥಮ ಅಗತ್ಯವಾಗಿದೆ. ಅನೇಕ ಜನರು ಶಾಲೆ ಮತ್ತು ವಿಶ್ವವಿದ್ಯಾಲಯದ ಶಿಕ್ಷಣದ ಕೇಂದ್ರ ಗುರಿಯು “ಜ್ಞಾನ ಪ್ರಸಾರ” ಎಂದು ಯೋಚಿಸುತ್ತಾರೆ. ಶಿಕ್ಷಣದ ಈ ವಿಧಾನವು ಒಂದು ವಿಷಯದ ಮಾಹಿತಿಯನ್ನು ಅತ್ಯಂತ ಮುಖ್ಯವಾದುದೆಂದು ಪರಿಗಣಿಸುತ್ತದೆ. ಮಾಹಿತಿಗಳನ್ನು ಪಠ್ಯಪುಸ್ತಕದಿಂದ ವಿದ್ಯಾರ್ಥಿಗಳ ಮನಸ್ಸಿಗೆ ವರ್ಗಾಯಿಸುವುದನ್ನು ಶಿಕ್ಷಕನ ಪಾತ್ರವೆಂದು ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಗಳು ಆ ಮಾಹಿತಿಯನ್ನು ಅರ್ಥೈಸುವುದು, ಉಳಿಸಿಕೊಳ್ಳುವುದು ಮತ್ತು ಅಂತಿಮ ಪರೀಕ್ಷೆಯ ಸಮಯದಲ್ಲಿ ಅದನ್ನು ಪುನಃಸ್ಮರಿಸುವುದು ಮಾಡಬೇಕಂದು ನಿರೀಕ್ಷಿಸಲಾಗುತ್ತದೆ.
ಈ ಮೇಲಿನ ವಿಧಾನವನ್ನು ಅನುಸರಿಸಿ ಸಾಂಪ್ರದಾಯಿಕ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ತಮ್ಮ ಮನಸ್ಸಿನಲ್ಲಿ ಎಷ್ಟು ಮಾಹಿತಿಯನ್ನು ಶೇಖರಿಸಿಡಲು ಸಾಧ್ಯವೆಂದು ಪರೀಕ್ಷಿಸುತ್ತದೆ. ಈ ಬೇಡಿಕೆಯನ್ನು ಪೂರೈಸುವ ಸಲುವಾಗಿ ವಿದ್ಯಾರ್ಥಿಗಳು ನೋಟು ಪುಸ್ತಕ ಮತ್ತು ಪಠ್ಯಪುಸ್ತಕದ ಮಾಹಿತಿಯನ್ನು ಕಂಠಪಾಠ ಮಾಡಿಕೊಳ್ಳುತ್ತಾರೆ ಮತ್ತು ಪರೀಕ್ಷೆಯ ಸಂಧರ್ಭದಲ್ಲಿ ಅದನ್ನು ಪ್ರಶ್ನೆ ಪುಸ್ತಿಕೆಗೆ ವರ್ಗಾಯಿಸುತ್ತಾರೆ. ಈ ರೀತಿಯಾದ ಪರೀಕ್ಷೆಯ ವಿಜಯವು ಕಂಠಪಾಠ ಮಾಡಿರುವ ಮಾಹಿತಿ ಪ್ರಮಾಣಮತ್ತು ಅದನ್ನು ಪುನರುತ್ಪಾನೆ ಮಾಡುವ ಸಾಮಥ್ರ್ಯದ ಮೇಲೆ ಅವಲಂಬಿತವಾಗಿದೆ.
ಮಾನಸಿಕ ಬೆಳವಣಿಗೆಯ ಪ್ರಚೋದಕವಾಗಿ ಶಿಕ್ಷಣ:
ಶಿಕ್ಷಣವೆಂಬುವುದು ಮಾಹಿತಿಗಳನ್ನು ಗ್ರಂಥಾಲಯ ಮತ್ತು ಪಠ್ಯಪುಸ್ತಕಗಳಿಂದ ವಿದ್ಯಾರ್ಥಿಗಳ ಮನಸ್ಸಿಗೆ ವರ್ಗಾಯಿಸುವುದಲ್ಲ ಎಂಬುದು ಒಂದು ಪರ್ಯಾಯ ಯೋಚನೆಯಾಗಿದೆ. ಬದಲಾಗಿ ನೈಜ ಶಿಕ್ಷಣವೆಂದರೆ ವಿದ್ಯಾರ್ಥಿಗಳಿಗೆ ಕಲಿಯುವುದು ಹೇಗೆಂದು ಬೋಧಿಸುವುದು. ಅಂದರೆ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಗಳಿಸುವ ಸಾಮಥ್ರ್ಯ, ಹೊಸ ಅನುಭವಗಳ ಆಧಾರದಲ್ಲಿ ಅಸ್ತಿತ್ವದಲ್ಲಿರುವ ಜ್ಞಾನವನ್ನು ಮಾರ್ಪಡಿಸುವುದು, ಹೊಸ ಜ್ಞಾನವನು ನಿರ್ಮಿಸುವುದು, ಸಮಸ್ಯೆಗಳನ್ನು ಪರಿಹರಿಸಲು ಪ್ರಸ್ತುತ ಜ್ಞಾನವನ್ನು ಬಳಸಿಕೊಳ್ಳಲು ಮತ್ತು ವಿವೇಕಪೂರ್ಣ ನಿರ್ಧಾರಗಳನ್ನು ಕೈಗೊಳ್ಳಲು ಶಿಕ್ಷಣವು ಸಜ್ಜುಗೊಳಿಸಬೇಕು. ಶಿಕ್ಷಣವೆಂದರೆ ಪದವಿಯನ್ನು ಪಡೆಯಲು ಏನೆಲ್ಲಾ ಬೇಕೋ ಅದನ್ನು ಮಾಡುವುದಲ್ಲ, ಬದಲಾಗಿ, ಅದು ಮಾನಸಿಕ ಬೆಳವಣಿಗೆಯ ಜೀವನ ಪರ್ಯಂತವಾದ ಪ್ರಕ್ರಿಯೆಯಾಗಿದ್ದು, ಯಾವುದೇ ಪದವಿಯೊಂದಿಗೆ ಅಂತ್ಯಗೊಳ್ಳುವುದಿಲ್ಲ.
ನಾವು ಶಿಕ್ಷಣದ ಈ ದೃಷ್ಟಿಕೋನವನ್ನು ಸ್ವೀಕರಿಸಿದರೆ, ಬೋಧನೆಯ ಮುಖ್ಯ ಗಮನವು ಜ್ಞಾನವನ್ನು ಸಂಪಾದಿಸುವ, ಮಾರ್ಪಡಿಸುವ ಮತ್ತು ರಚಿಸುವ ಕೌಶಲ್ಯಗಳ ಮೇಲೆ ಕೇಂದ್ರಿಕೃತವಾಗುತ್ತದೆ. ಅಂದರೆ, ವಿಷಯದ ಮಾಹಿತಿಗಿಂತ ಹೆಚ್ಚಾಗಿ ಮಾಹಿತಿಯ ಸಂಸ್ಕರಣೆ ಉಂಟಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಕಲಿಕೆಯು ಕಂಠಪಾಠದಿಂದ ಕೆಲವು ಮಾನಸಿಕ ಶಾಖೆಯ ಬೆಳವಣಿಗೆಯತ್ತ ಗಮನವನ್ನು ವರ್ಗಾಯಿಸುತ್ತದೆ. ಶಿಕ್ಷಕನ ಕಾರ್ಯವು ಪಠ್ಯಪುಸ್ತಕದ ಮಾಹಿತಿಯನ್ನು ಸಂಕ್ಷಿಪ್ತಗೊಳಿಸುವುದಾಗಿರುವುದಿಲ್ಲ. ಬದಲಾಗಿ ಕ್ರಿಯಾಶೀಲ ಮತ್ತು ವಿಮರ್ಶಾತ್ಮಕ ಶಾಖೆಗಳನ್ನು ಪ್ರಚೋದಿಸುವ ಪರಿಸರವನ್ನು ಬೆಳೆಸುವುದನ್ನು ಖಾತ್ರಿಪಡಿಸುವುದಾಗಿರುತ್ತದೆ. ಪ್ರಶ್ನಿಸುವುದರ ಮೂಲಕ ಕಲಿಕೆಯನ್ನು ಸಕ್ರಿಯಗೊಳಿಸುವಿಕೆ, ಅಭ್ಯಾಸ ಚಟುವಟಿಕೆ, ಯೋಜನಾಕಾರ್ಯ, ಪ್ರೊಜಕ್ಟ್ಗಳು, ಅಸೈನ್ಮೆಂಟ್ ಮುಂತಾದವುಗಳ ಮೂಲಕ ಇದನ್ನು ಸಾಧಿಸಬಹುದು ಮತ್ತು ಅದರಲ್ಲಿ ಸುಸ್ಥಿರತೆಯನ್ನು ಉಳಿಸಲು ಕಾಮೆಂಟ್ಗಳು, ವಿಮರ್ಶೆ ಮತ್ತು ಇತರ ರೀತಿಯ ಪ್ರತಿಕ್ರಿಯೆಯನ್ನು ನೀಡುವುದರ ಮೂಲಕ ಮಾರ್ಗದರ್ಶಿಸಬೇಕು.
ಈ ರೀತಿಯಾದ ವಿಧಾನಕ್ಕೆ ಉತ್ತಮ ಸಾದೃಶ್ಯವು ದೈಹಿಕ ಶಿಕ್ಷಣ ಕಾರ್ಯಕ್ರಮವಾಗಿದ್ದು, ಇದು ವಿದ್ಯಾರ್ಥಿಗಳ ದೈಹಿಕ ಸಾಮಥ್ರ್ಯ, ಶಕ್ತಿ ಮತ್ತು ನಮ್ಯತೆ(ಈಟexibiಟiಣಥಿ)ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಈ ಉದಾಹರಣೆಯನ್ನು ಬಳಸಿಕೊಂಡು ಪ್ರೌಢಶಾಲೆ ಅಥವಾ ವಿಶ್ವವಿದ್ಯಾಲಯದಲ್ಲಿ ಕಲಿಸಿದ ವಿಷಯಗಳು ವಿದ್ಯಾರ್ಥಿಗಳ ಬೌದ್ಧಿಕ ಸಾಮಥ್ರ್ಯ, ಬೌದ್ಧಿಕ ಶಕ್ತಿ ಮತ್ತು ಬೌದ್ಧಿಕ ನಮ್ಯತೆಯನ್ನು ಬೆಳೆಸುವ ಗುರಿಯನ್ನು ಹೊಂದಬೇಕು ಎಂದು ಅಭಿಪ್ರಾಯಿಸಬಹುದು.
ಕಂಠಪಾಠ ಕಲಿಕೆ ಮತ್ತು ಆಲೋಚನಾ ಕೌಶಲ್ಯವನ್ನು ಪರೀಕ್ಷಿಸುವುದು:
ಈ ರೀತಿಯಾದ ಶೈಕ್ಷಣಿಕ ಕಾರ್ಯಕ್ರಮಕ್ಕೆ ಯಾವ ರೀತಿಯ ಪರೀಕ್ಷೆಗಳು ಹೆಚ್ಚು ಸೂಕ್ತವೆನಿಸುತ್ತದೆ? ನಿಶ್ವಯವಾಗಿಯೂ, ನೆನಪನ್ನು ಪರೀಕ್ಷಿಸುವ ಸಾಂಪ್ರದಾಯಿಕ ಪರೀಕ್ಷೆಗಳು ವಿದ್ಯಾರ್ಥಿಗಳ ಬೌದ್ಧಿಕ ಕೌಶಲ್ಯವನ್ನು ಪರಿಶೀಲಿಸುವ ಪರೀಕ್ಷೆಗೆ ದಾರಿಯನ್ನು ಒದಗಿಸಬೇಕಾಗಿದೆ. ಈ ಸಂಧರ್ಭದಲ್ಲಿಯಾಗಿದೆ ತೆರೆದ ಪುಸ್ತಕ ಪರೀಕ್ಷೆಗಳು ಮುನ್ನೆಲೆಗೆ ಬರುವುದು.
ವಿದ್ಯಾರ್ಥಿಗಳು ನೆನಪಿಟ್ಟುಕೊಳ್ಳುವ ಮಾಹಿತಿಯನ್ನು ಪರೀಕ್ಷಿಸುವುದು ಪರೀಕ್ಷೆಯ ಉದ್ದೇಶವಾಗಿದ್ದರೆ ತೆರೆದ ಪುಸ್ತಕ ಪರೀಕ್ಷೆಗಳು ಅನುಚಿತವಾಗಿದೆ. ಏಕೆಂದರೆ ವಿದ್ಯಾರ್ಥಿಗಳು ಈ ಮಾಹಿತಿಯನ್ನು ಪಠ್ಯಪುಸ್ತಕ ಅಥವಾ ನೋಟು ಪುಸ್ತಕಗಳಿಂದ ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಸುಲಭವಾಗಿ ವರ್ಗಾಯಿಸಬಹುದು. ಉದಾಹರಣೆಗೆ ಪರೀಕ್ಷೆಯು “ಸಾಪೇಕ್ಷತೆಯ ಸಿದ್ಧಾಂತವನ್ನು ಯಾರು ಕಂಡುಹಿಡಿದಿದ್ದಾರೆ?”, “ಪ್ರಮಾಣಿತ ವಿಚಲನ” ಎಂಬ ಪದವನ್ನು ವಿವರಿಸಿ ಅಥವಾ “ಹಳೇಯ ಇಂಗ್ಲಿಷ್ನ ಮುಖ್ಯ ರಚನಾತ್ಮಕ ಗುಣಲಕ್ಷಣಗಳ ಬಗ್ಗೆ ಒಂದು ಪ್ರಬಂಧವನ್ನು ಬರೆಯಿರಿ” ಎಂಬಂತಹ ಮಾಹಿತಿ ಆಧಾರಿತ ಪ್ರಶ್ನೆಗಳನ್ನು ಒಳಗೊಂಡಿದ್ದರೆ ವಿದ್ಯಾರ್ಥಿಗಳು ಸುಲಭವಾಗಿ ಪಠ್ಯಪುಸ್ತಕದಲ್ಲಿ ಅಥವಾ ನೋಟ್ ಬುಕ್ನಲ್ಲಿ ಉತ್ತರಗಳನ್ನು ಕಂಡುಹಿಡಿದು ಅವುಗಳನ್ನು ಉತ್ತರ ಪುಸ್ತಕದಲ್ಲಿ ನಕಲಿಸಬಹುದು.
ಮತ್ತೊಂದೆಡೆ ಪರೀಕ್ಷೆಯು ಸಮಸ್ಯೆಗಳನ್ನು ಬಗೆಹರಿಸುವ ಮತ್ತು ವಿಮರ್ಶಾತ್ಮಕವಾದ ಆಲೋಚನಾ ಕೌಶಲ್ಯವನ್ನು ಪರೀಕ್ಷಿಸುತ್ತದೆ ಎಂದಾದರೆ ವಿದ್ಯಾರ್ಥಿಗಳು ತಮ್ಮ ಪಠ್ಯಪುಸ್ತಕ ಮತ್ತು ನೋಟ್ ಬುಕ್ಗಳನ್ನು ಸಂಪರ್ಕಿಸುವುದರಲ್ಲಿ ಯಾವುದೇ ಹಾನಿಯಿಲ್ಲ. ಪ್ರಮಾಣಿತ ವಿಚಲನದ ಕುರಿತು ತನ್ನ ಅರ್ಥೈಸುವಿಕೆಯ ಅವಲೋಕನವನ್ನು ವಿದ್ಯಾರ್ಥಿಯು ಮಾಡಬೇಕೆಂದಾದರೆ, ಪಠ್ಯಪುಸ್ತಕದಲ್ಲಿರುವುದನ್ನು ಪುನಃ ಸಲ್ಲಿಸುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ. ಅಂತೆಯೇ, ಹಳೇಯ ಇಂಗ್ಲಿಷ್ನ ಒಂದು ವಾಕ್ಯವನ್ನು ನೀಡಿ, ರಚನಾತ್ಮಕ ಗುಣಲಕ್ಷಣಗಳ ಅರ್ಥೈಸುವಿಕೆಯನ್ನು ಬೇಡುವ ನಿರ್ದಿಷ್ಟ ಪರೋಕ್ಷ ಪ್ರಶ್ನೆಗಳನ್ನು ಕೇಳಿದಾಗ ವಿದ್ಯಾರ್ಥಿಗಳು ಪಠ್ಯಪುಸ್ತಕದಿಂದ ಏನನ್ನೂ ನಕಲಿಸಲು ಸಾಧ್ಯವಾಗುವುದಿಲ್ಲ.
ಒಂದು ತೆರೆದ ಪುಸ್ತಕ ಪರೀಕ್ಷೆಯಲ್ಲಿ “ಅಣುವಿನ ಕಲ್ಪನೆಯನ್ನು ವ್ಯಾಖ್ಯಾನಿಸಿ” ಎಂಬಂತ ಪ್ರಶ್ನೆಗಳನ್ನು ಕೇಳುವುದು ಅರ್ಥಹೀನವಾಗಿದೆ. ಏಕೆಂದರೆ, ವಿದ್ಯಾರ್ಥಿಗಳು ಮಾಡಬೇಕಿರುವುದು ಏನೆಂದರೆ, ಅಗತ್ಯ ಮಾಹಿತಿಯನ್ನು ಪಠ್ಯಪುಸ್ತಕದಿಂದ ಉತ್ತರ ಪತ್ರಿಕೆಗೆ ನಕಲಿಸುವುದು. ಮುಚ್ಚಿದ ಪುಸ್ತಕ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಮೊದಲು ಪಠ್ಯಪುಸ್ತಕದಿಂದ ಮಾಹಿತಿಯನ್ನು ತನ್ನ ಸ್ಮರಣೆಯಲ್ಲಿ ಶೇಖರಿಸಬೇಕು ತದನಂತರ ಅದನ್ನು ಉತ್ತರ ಪತ್ರಿಕೆಗೆ ನಕಲಿಸಬೇಕು. ತೆರೆದ ಪುಸ್ತಕ ಪರೀಕ್ಷೆಯು ಈ ಮಧ್ಯಂತರದ ಸ್ಮರಣಿಕೆಯ ಪ್ರಕ್ರಿಯೆಯನ್ನು ತೊಡೆದು ಹಾಕಲು ಪ್ರಯತ್ನಿಸುತ್ತದೆ. ಪರೀಕ್ಷಾ ಕೊಠಡಿಯಲ್ಲಿ ಪಠ್ಯಪುಸ್ತಕಗಳ ಲಭ್ಯತೆಯಿಂದಾಗಿ, ಕೇವಲ ಮಾಹಿತಿಯನ್ನು ಪಠ್ಯಪುಸ್ತಕದಿಂದ ವರ್ಗಾಯಿಸುವ ಅಗತ್ಯವಿರುವ ಪ್ರಶ್ನೆಗಳನ್ನು ಶಿಕ್ಷಕರು ಕೇಳುವುದಿಲ್ಲ.
ಹೇಳುವುದು ಅನಗತ್ಯವಾಗಿರಬಹುದು. ಆದರೆ, ವಿದ್ಯಾರ್ಥಿಗಳ ಆಲೋಚನಾ ಕೌಶಲ್ಯವನ್ನು ಪರೀಕ್ಷಿಸುವ ಸಮಸ್ಯೆಗಳನ್ನು ಬಗೆಹರಿಸುವ ಪರೋಕ್ಷ ಪ್ರಶ್ನೆಗಳನ್ನು ಮುಚ್ಚಿದ ಪುಸ್ತಕ ವ್ಯವಸ್ಥೆಯಲ್ಲಿಯೂ ಉಪಯೋಗಿಸಬಹುದು. ಆದ್ದರಿಂದ ಒಬ್ಬನು ತೆರೆದ ಪುಸ್ತಕ ಪರೀಕ್ಷೆಯನ್ನು ಸಿದ್ಧಪಡಿಸುವುದಕ್ಕಿಂತ ಹೆಚ್ಚಾಗಿ ಯಾವೆಲ್ಲಾ ವಿಚಾರಗಳು ಸರಿಯಾದ ಪ್ರಶ್ನೆಗಳ ವಿನ್ಯಾಸ ಮಾಡುತ್ತದೆ ಎಂಬುವುದಾಗಿ ವಾದಿಸಲು ಪ್ರಲೋಭನೆಗೊಳ್ಳಬಹುದು. ಆದರೆ, ಈ ವಾದವು ಅದನ್ನು ಪರಿಹರಿಸುವ ಬದಲಾಗಿ ಸಂಘರ್ಷಕ್ಕೆ ಕಾರಣವಾಗಬಹುದು. ಮುಚ್ಚಿದ ಪುಸ್ತಕ ಪರೀಕ್ಷೆ ಮತ್ತು ತೆರೆದ ಪುಸ್ತಕ ಪರೀಕ್ಷೆಯ ಪ್ರಮುಖ ವ್ಯತ್ಯಾಸವೇನೆಂದರೆ, ವಿದ್ಯಾರ್ಥಿ ಎಷ್ಟು ನೆನಪಿನಲ್ಲಿಟ್ಟುಕೊಂಡಿದ್ದಾನೆ ಎಂಬುವುದನ್ನು ಮೌಲ್ಯಮಾಪನ ಮಾಡಲು ಹಿಂದಿನದ್ದನ್ನು ಈಗಲೂ ಬಳಸಬಹುದು. ಆದರೆ ನಂತರದ್ದರಲ್ಲಿ ಸಾಧ್ಯವಾಗುವುದಿಲ್ಲ. ನೆನಪಿನಲ್ಲಿಟ್ಟುಕೊಳ್ಳುವ ಮಾಹಿತಿಯನ್ನು ಪರೀಕ್ಷಿಸಲು ನಮಗೆ ಆಸಕ್ತಿಯಿಲ್ಲ ಎಂದಾದಮೇಲೆ, ಏಕೆ ಮುಚ್ಚಿದ ಪುಸ್ತಕ ಪರೀಕ್ಷೆಗಳನ್ನು ಉಪಯೋಗಿಸಬೇಕು?
ಶಿಕ್ಷಣದಲ್ಲಿ ಸ್ಮರಣೆ(ನೆನಪಿನಲ್ಲಿಡುವುದು)ಗೆ ಯಾವುದೇ ಮೌಲ್ಯವಿಲ್ಲವೆಂದು ನಾನು ಹೇಳುತ್ತಿಲ್ಲ. ಕಂಠಪಾಠದ ಕಲಿಕೆಯಲ್ಲಿ ಒಳಗೊಂಡಿರುವ ನಿಷ್ಕ್ರಿಯ ಹಾಗು ಸ್ಥಿರ ಸ್ಮರಣೆ ಮತ್ತು ಕ್ರಿಯಾಶೀಲ ಹಾಗು ವಿಮರ್ಶಾತ್ಮಕ ಆಲೋಚನೆಯ ಭಾಗವಾಗಿರುವ ಸಕ್ರಿಯಾ ಮತ್ತು ಸೃಜನಶೀಲ ಸ್ಮರಣೆಯನ್ನು ಪ್ರತ್ಯೇಕಿಸೋಣ. ನಮಗೆ ಅರ್ಥ ತಿಳಿಯದ ವಿದೇಶಿ ಭಾಷೆಯ ಕೆಲವು ವಾಕ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಏನೆಲ್ಲಾ ಬೇಕೆಂಬುವುದನ್ನು ಕಲ್ಪಿಸೋಣ. ಸ್ವಲ್ಪ ಪರಿಶ್ರಮದಿಂದ ಈ ಕಾರ್ಯವನ್ನು ಸಾಧಿಸಬಹುದು. ಆದರೆ, ಇದೊಂದು ಯಾಂತ್ರಿಕೃತ ಸ್ಮರಣೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಸಾಮಾಜಿಕ ಅಥವಾ ರಾಜಕೀಯ ಸಮಸ್ಯೆ ಮೂಲಕ ಯೋಚಿಸಲು ರಾಜನೀತಿಜ್ಞನಿಗೆ ಅಗತ್ಯವಿರುವ ಸ್ಮರಣೆಯನ್ನು ತೆಗೆದುಕೊಳ್ಳಿರಿ. ಪರಿಸ್ಥಿತಿಯು ಅಗತ್ಯವಿರುವ ಅನೇಕ ಆಧಾರಗಳನ್ನು ಒಂದೇ ಸಮಯದಲ್ಲಿ ನೆನಪಿನಲ್ಲಿಡುವಂತೆ ಬೇಡ ಬಹುದು, ವಿವಿಧ ಕೋನಗಳಿಂದ ಅವುಗಳನ್ನು ವೀಕ್ಷಿಸುವುದು, ಸಂಪರ್ಕಗಳನ್ನು ನಿರ್ಮಿಸುವುದು ಮತ್ತು ತೀರ್ಮಾನಕ್ಕೆ ತಲುಪುವುದನ್ನು ಮಾಡಬೇಕಾಗುತ್ತದೆ. ಈ ಉದ್ದೇಶಕ್ಕಾಗಿ ಬೇಕಾಗಿರುವಂತಹ ಸ್ಮರಣೆಯನ್ನು ಕಂಠಪಾಠದ ಕಲಿಕೆಯು ಒದಗಿಸುವುದಿಲ್ಲ. ಅವುಗಳನ್ನು ಸಕ್ರಿಯ ಸ್ಮರಣೆ(ಂಛಿಣive memoಡಿಥಿ)ಯ ಬಳಕೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಪರಿಣಾಮಕಾರಿಯಾಗಿ ಬಳಸಬಹುದು.
ತೆರೆದ ಪುಸ್ತಕ ಪರೀಕ್ಷೆಯ ಎರಡು ವಿಧಗಳು:
ತೆರೆದ ಪುಸ್ತಕ ಪರೀಕ್ಷೆಗಳ ಎರಡು ವಿಧಗಳ ಬಗ್ಗೆ ಯೋಚಿಸಬಹುದು. ಒಂದು ನಿರ್ಬಂಧಿತ ಪ್ರಕಾರ ಮತ್ತು ಇನ್ನೊಂದು ಅನಿರ್ಬಂಧಿತ ಪ್ರಕಾರ. ನಿರ್ಬಂಧಿತ ರೀತಿಯ ಮುಕ್ತ ಪುಸ್ತಕ ಪರೀಕ್ಷೆಯಲ್ಲಿ ಕೋರ್ಸ್ ಬೋಧಕರಿಂದ ಅನುಮೋದಿಸಲ್ಪಟ್ಟ ಒಂದು ಅಥವಾ ಹೆಚ್ಚಿನ ನಿರ್ದಿಷ್ಟ ದಾಖಲೆಗಳನ್ನು ಪರೀಕ್ಷಾ ಕೊಠಡಿಗೆ ತರಲು ಅನುಮತಿ ನೀಡಲಾಗುತ್ತದೆ. ಅನಿರ್ಬಂಧಿತ ರೀತಿಯ ತೆರೆದ ಪುಸ್ತಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಇಷ್ಟಪಡುವ ಯಾವುದನ್ನು ತರಲು ಮುಕ್ತರಾಗಿರುತ್ತಾರೆ.
ನಿರ್ಬಂಧಿತ ಮುಕ್ತ ಪುಸ್ತಕ ಪರೀಕ್ಷೆಯಲ್ಲಿ ಲಾಗರಿದಮ್ ಕೋಷ್ಟಕಗಳು, ನಿಘಂಟುಗಳು ಅಥವಾ ಷೇಕ್ಸ್ಪಿಯರ್ನ ಸಂಪೂರ್ಣ ಕೃತಿಗಳಂತಹ ಮುದ್ರಿತ ದಾಖಲೆಗಳನ್ನು ಪೂರೈಸಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಬಹುದು. ಆದರೆ, ಪೂರ್ವಾನುಮತಿ ಇಲ್ಲದ ಕೈಬರಹದ ವಸ್ತು ಅಥವಾ ಮುದ್ರಿತ ದಾಖಲೆಗಳನ್ನು ಒಯ್ಯಲು ಅನುಮತಿ ಇಲ್ಲ. ವಿದ್ಯಾರ್ಥಿಗಳು ತರುತ್ತಿರುವ ಮುದ್ರಿತ ದಾಖಲೆಗಳ ಅಂಚಿನಲ್ಲಿ ಯಾವುದೇ ಗೀಚು ಬರಹವನ್ನು ಹೊಂದಿಲ್ಲವೆಂದು ಖಚಿತ ಪಡಿಸಿಕೊಳ್ಳಬೇಕು. ಈ ರೀತಿಯಾದ ಪರೀಕ್ಷೆಯಲ್ಲಿ ಅನುಮೋದಿತ ದಾಖಲೆಗಳು ಹೆಚ್ಚು–ಕಡಿಮೆ ಪ್ರಶ್ನೆ ಪತ್ರಿಕೆಗೆ ಅನುಬಂಧಗಳಾಗಿ ಕಾರ್ಯನಿರ್ವಹಿಸುತ್ತದೆ. ಈ ಪರೀಕ್ಷೆಗಳು ಮುಚ್ಚಿದ ಪುಸ್ತಕ ಪರೀಕ್ಷೆಗಳಿಂದ ಸಂಪೂರ್ಣ ಭಿನ್ನವಲ್ಲ. ಕೋರ್ಸ್ನ ಸ್ವರೂಪದ ಹೊರತಾಗಿ ಅವುಗಳು ಯಾವುದೇ ವಿಶೇಷ ಸಮಸ್ಯೆಗಳನ್ನು ಪ್ರಸ್ತುತ ಪಡಿಸುವುದಿಲ್ಲ.
ನಾನು ಮೊದಲೇ ಹೇಳಿರುವಂತೆ, ವಿದ್ಯಾರ್ಥಿಗಳು ಅನಿರ್ಬಂಧಿತ ತೆರೆದ ಪುಸ್ತಕ ಪರೀಕ್ಷೆಯಲ್ಲಿ ಏನು ತರಬಹುದು ಎಂಬುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಯಾವುದೇ ಪುಸ್ತಕಗಳನ್ನು(ಅಂಚುಗಳಲ್ಲಿ ಗೀಚು ಬರಹ ಇರುವ ಅಥವಾ ಇಲ್ಲದಿರುವ), ಕೋರ್ಸ್ ಬೋಧಕನ ಉಪನ್ಯಾಸ ಕೈಪಿಡಿಗಳು ಅಥವಾ ತಮ್ಮ ಸ್ವಂತ ಕೈಬರಹದ ಟಿಪ್ಪಣಿಗಳನ್ನು ತರಬಹುದು. ಈ ರೀತಿಯಾದ ಪರೀಕ್ಷಾ ವಿಧಾನಗಳು ಕೆಲವು ಬೋಧನಾ ತಂತ್ರಗಳನ್ನು ಮತ್ತು ಪ್ರಶ್ನೆಯ ವಿಧಗಳನ್ನು ಕಲ್ಪಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕೋರ್ಸ್ ವಿಷಯದ ಮಾಹಿತಿಗಿಂತಲೂ ಕೆಲವು ಬೌದ್ಧಿಕ ಕೌಶಲ್ಯಗಳನ್ನು ಕೇಂದ್ರೀಕರಿಸುತ್ತದೆ ಮತ್ತು ಪರೀಕ್ಷೆಯಲ್ಲಿ ಯಾವುದೇ ವಿಷಯ ಆಧಾರಿತ ಪ್ರಶ್ನೆಗಳನ್ನು ಕೇಳಬಾರದೆಂದು ಅದು ಬಯಸುತ್ತದೆ. ಕೋರ್ಸ್ ಬೋಧಕನು ಪ್ರಸ್ತುತ ಲಭ್ಯವಿರುವ ಜ್ಞಾನವನ್ನು ಹಸ್ತಾಂತರಿಸುವತ್ತ ಗಮನ ಕೇಂದ್ರೀಕರಿಸಿದ್ದರೆ ಮತ್ತು ಪ್ರಶ್ನೆ ಪತ್ರಿಕೆಯು “ಬ್ರಿಟಿಷ್ ಮತ್ತು ಅಮೇರಿಕನ್ ಇಂಗ್ಲಿಷ್ ನಡುವಿನ ವ್ಯತ್ಯಾಸದ ಮೇಲೆ ಪ್ರಬಂಧ ಬರೆಯಿರಿ” ನಂತಹ ಸಾಂಪ್ರದಾಯಿಕ ವಿಷಯಾಧಾರಿತ ಪ್ರಶ್ನೆಗಳನ್ನು ಹೊಂದಿದ್ದರೆ, ಅನಿರ್ಬಂಧಿತ ತೆರೆದ ಪುಸ್ತಕ ಪರೀಕ್ಷೆಗಳ ಬಳಕೆ ಹಾನಿಕಾರಕ.
ಈ ವ್ಯವಸ್ಥೆಯನ್ನು ಸರಿಯಾಗಿ ಉಪಯೋಗಿಸಿದಾಗ, ವಿದ್ಯಾರ್ಥಿಗಳು ಅನಿರ್ಬಂಧಿತ ತೆರೆದ ಪುಸ್ತಕ ಪರೀಕ್ಷೆಗೆ ಯಾವುದೇ ದಾಖಲೆಗಳನ್ನು ಸಂಬಂಧಿಸಲು ತರುವುದು ವ್ಯರ್ಥ. ಯಾಕೆಂದರೆ ಪ್ರಶ್ನೆಗಳು ಯಾವ ರೀತಿಯಲ್ಲಿ ವಿನ್ಯಾಸ ಮಾಡಲಾಗಿರುತ್ತದೆಂದರೆ, ಉತ್ತರಗಳು ಪಠ್ಯಪುಸ್ತಕದಲ್ಲಿ, ತರಗತಿ ಟಿಪ್ಪಣಿಗಳಲ್ಲಿ ಲಭ್ಯವಾಗುವುದೇ ಇಲ್ಲ. ಈ ರೀತಿಯಾದ ಪರೀಕ್ಷೆಯನ್ನು ಒಮ್ಮೆ ಅನುಭವಿಸಿದ ಬುದ್ಧಿವಂತ ವಿದ್ಯಾರ್ಥಿಯು ಮುಂದಿನ ಪರೀಕ್ಷೆಗೆ ಏನನ್ನೂ ತರುವುದರ ಬಗ್ಗೆ ಗಮನ ಕೊಡುವುದಿಲ್ಲ. ಆತ/ಆಕೆಗೆ ತಿಳಿಯುತ್ತದೆ ಯಾವುದೇ ತಯಾರಿಸಿದ ವಿಷಯ ವಸ್ತುಗಳು ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಈ ಪರೀಕ್ಷೆಗಳ ಬಳಕೆಯು ನಂತರ ಸಾಂಕೇತಿಕ ಭಾವಸೂಚಕವಾಗಿ ವರ್ತಿಸುತ್ತದೆ, ಅದು ವಿದ್ಯಾರ್ಥಿಗಳು ಕೋರ್ಸ್ ಮತ್ತು ಪರೀಕ್ಷೆಯ ಸ್ವರೂಪವನ್ನು ಅರಿತುಕೊಳ್ಳುವಂತೆ ಮಾಡುತ್ತದೆ ಮತ್ತು ಅವುಗಳು ಕುಸಿತವನ್ನು ಒಳಗೊಳ್ಳದ ಅಧ್ಯಯನ ಮಾಡುವ ವಿಧಾನವಾಗಿ ಆಘಾತಗೊಳಿಸುತ್ತದೆ.
ಕಲಿಕೆಯ ತಂತ್ರಗಳ ಮೇಲಿನ ಪರಿಣಾಮಗಳು:
ತೆರೆದ ಪುಸ್ತಕ ಪರೀಕ್ಷೆಗಳನ್ನು ಬಳಸುವುದಕ್ಕಾಗಿ ಹೆಚ್ಚು ಮುಖ್ಯವಾದ ಕಾರಣವೆನೆಂದರೆ ಕಲಿಕೆ ಮತ್ತು ಬೋಧನೆ ಎರಡರಲ್ಲೂ ಸರಿಯಾದ ಮಾನಸಿಕ ಕ್ರಮವನ್ನು ಉತ್ತೇಜಿಸುವಲ್ಲಿ ಮಹತ್ತರವಾದ ಪರಿಣಾಮವನ್ನು ಬೀರುತ್ತದೆ. ವಿದ್ಯಾರ್ಥಿಗಳ ಮೇಲೆ ಅತ್ಯಂತ ತಕ್ಷಣದ ಫಲಿತಾಂಶವೇನೆಂದರೆ ಅವರು “ಕಂಠಪಾಠ” ಅಥವಾ ಬಾಯಿಪಾಠದ ಕಲಿಕೆಯನ್ನು ನಿಲ್ಲಿಸುತ್ತಾರೆ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಗೆ ಸಂಬಂಧಿಸಿದಂತೆ ಪಠ್ಯಪುಸ್ತಕಗಳು ಮತ್ತು ಕ್ಲಾಸ್ ನೋಟ್ಗಳಲ್ಲಿನ ಮಾಹಿತಿಯನ್ನು ಯಾಂತ್ರಿಕವಾಗಿ ಕಂಠಪಾಠ ಮಾಡುವುದೇ “ಅಧ್ಯಯನ” ಎಂದು ಯೋಚಿಸುತ್ತಾರೆ. ತೆರೆದ ಪುಸ್ತಕ ಪರೀಕ್ಷೆಗಳು ಈ ವರ್ತನೆಯ ಮೂಲಭೂತ ಬದಲಾವಣೆಗೆ ಪರಿಣಾಮವನ್ನು ಬೀರುತ್ತವೆ. ಪರೀಕ್ಷಾ ಕೊಠಡಿಗಳಲ್ಲಿ ಪಠ್ಯಪುಸ್ತಕಗಳನ್ನು ಸಮಾಲೋಚಿಸಬಹುದಾದರೆ, ಅವುಗಳನ್ನು ನೆನಪಿಟ್ಟುಕೊಳ್ಳುವ ಜಂಜಾಟ ಯಾಕೆ ಬೇಕು?
ಪರೀಕ್ಷೆಗೆ ವಿದ್ಯಾರ್ಥಿಗಳು “ಕಲಿಯುವ” ಅಗತ್ಯವಿಲ್ಲ ಎಂಬುವುದು ಇದರ ಅರ್ಥವೇ? ಖಂಡಿತ ಅಲ್ಲ. ಇದು ಕಲಿಕೆಯನ್ನು ಕಂಠಪಾಠ ಮಾಡುವುದಕ್ಕೆ ಸಮನಾಗಿಸಬಾರದು ಎಂದು ಸೂಚಿಸುತ್ತದೆ. ಬದಲಾಗಿ, ಅದು ಪರಿಕಲ್ಪನೆಗಳನ್ನು ಅರ್ಥೈಸುವ ಮತ್ತು ಈ ಪರಿಕಲ್ಪನೆಗಳನ್ನು(ಲಭ್ಯವಿರುವ ಮಾಹಿತಿಗಳ ಜೊತೆಗೆ) ಮಾರ್ಪಡಿಸುವ ಕೌಶಲ್ಯವನ್ನು ಅಭ್ಯಸಿಸಲು ಉಪಯೋಗಿಸುವುದು, ಜ್ಞಾನದ ನಿರ್ಮಾಣ, ವಿಮರ್ಶಾತ್ಮಕ ಆಲೋಚನೆ ಮತ್ತು ಸಮಸ್ಯೆ ಬಗೆಹರಿಸುದು ಮುಂತಾದ ಕೌಶಲ್ಯವಾಗಬೇಕಾಗಿದೆ. ಅಧ್ಯಯನ ಮಾಡುವ ಸರಿಯಾದ ಕಾರ್ಯತಂತ್ರಗಳನ್ನು ಪಡೆದುಕೊಳ್ಳುವುದರಲ್ಲಿ, ಕಂಠಪಾಠವು ಪರೀಕ್ಷೆಯಲ್ಲಿ ಯಾವುದೇ ರೀತಿಯ ಉಪಯೋಗ ಬೀರುವುದಿಲ್ಲ ಎಂಬ ಆಘಾತಕಾರಿಯಾದ ಸಾಕ್ಷಾತ್ಕಾರದಷ್ಟು ಬೇರಾವುದೂ ಪರಿಣಾಮ ತೋರುವುದಿಲ್ಲ. ತೆರೆದ ಪುಸ್ತಕ ಪರೀಕ್ಷೆಯನ್ನು ನೀಡುವುದರಿಂದ ಕಂಠಪಾಠವು ಕೊನೆಗೊಳ್ಳುತ್ತದೆ. ಕಂಠಪಾಠದ ಹೊರೆಯನ್ನು ನೀಗಿಸಿದರೆ ಶಿಕ್ಷಣವು ಉಲ್ಲಾಸಭರಿತ ಚಟುವಟಿಕೆಯಾಗಬಹುದೇ ಹೊರತು ದುಃಖಭರಿತವಾದ ಪರಿಶ್ರಮವಲ್ಲ. ಸಂತೋಷದಿಂದ ಕಲಿತದ್ದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತ ದೀರ್ಘ ಕಾಲಿಕವಾಗಿರುತ್ತದೆ.
ಬೋಧನಾ ತಂತ್ರಗಳ ಮೇಲಿನ ಪರಿಣಾಮಗಳು:
ಬೋಧನಾ ತಂತ್ರಗಳ ಮೇಲಿನ ತೆರೆದ ಪುಸ್ತಕ ಪರೀಕ್ಷೆಗಳ ಪರಿಣಾಮವು ಸಮನಾಗಿ ಆಳವಾಗಿರುತ್ತದೆ. ಮೊದಲು ಪರೀಕ್ಷೆಯ ಪ್ರಶ್ನೆಗಳ ಸ್ವರೂಪವು ಬದಲಾಗುತ್ತದೆ. “ಎಕ್ಸ್ ಎನ್ನುವುದರ ಬಗ್ಗೆ ಪ್ರಬಂಧವನ್ನು ಬರೆಯಿರಿ”, “ಬಿ ಎನ್ನುವ ವಿಚಾರವನ್ನು ವಿವರಿಸಿ ಉದಾಹರಣೆಗಳನ್ನು ನೀಡಿರಿ”, “ಝಡ್ ಪದವನ್ನು ವ್ಯಾಖ್ಯಾನಿಸಿ” ಮುಂತಾದ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗುವುದಿಲ್ಲ. ಆದರೆ, ವಿದ್ಯಾರ್ಥಿಗಳ ಅರ್ಥೈಸುವಿಕೆ ಮತ್ತು ಅರ್ಥೈಸಿರುವುದನ್ನು ಅನ್ವಯಿಸುವ ಕೌಶಲ್ಯವನ್ನು ಪರಿಶೀಲಿಸಲು ಬಹಳ ಕಾಳಜಿಯಿಂದ ಮತ್ತು ಬುದ್ಧಿವಂತಿಕೆಯಿಂದ ವಿನ್ಯಾಸ ಮಾಡಬೇಕಿದೆ.
ಪರೀಕ್ಷೆಯ ಪ್ರಶ್ನೆಗಳ ಸ್ವರೂಪವು ಬದಲಾದರೆ, ಆ ಪರೀಕ್ಷೆಗಳನ್ನು ತೆಗೆದುಕೊಳ್ಳಲು ತಯಾರಿ ಮಾಡುವ ತಂತ್ರಗಳು ಕೂಡಾ ಬದಲಾಗಬೇಕಾಗುತ್ತದೆ. ತರಗತಿಯಲ್ಲಿರುವ ಪಠ್ಯ ಪುಸ್ತಕಗಳ ವಿಷಯ ವಿವರಣೆಯನ್ನು ಅಥವಾ ಸರಳಗೊಳಿಸುವಿಕೆಯನ್ನು ಇನ್ನು ಮುಂದೆ ಕೊನೆಗೊಳಿಸಬೇಕಾಗುತ್ತದೆ. ಪ್ರತಿ ವಿಷಯದಲ್ಲೂ ಅಗತ್ಯವಾದ ಸೂಕ್ತ ಮಾನಸಿಕ ಕೌಶಲ್ಯಗಳಿಗಾಗಿ ಅಭ್ಯಾಸಗಳನ್ನು ನೀಡುವ ಶಿಕ್ಷಕರು ಕಾರ್ಯಗಳನ್ನು ವಿನ್ಯಾಸಗೊಳಿಸಬೇಕು. ಎಲ್ಲಾ ಸಮಯದಲ್ಲೂ ಮಾತನಾಡುವ ಶಿಕ್ಷಕ ಮತ್ತು ನೋಟ್ಸ್ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಬದಲು ತರಗತಿಗಳು ಚರ್ಚೆಗಳು, ಪ್ರಶ್ನೆಗಳು ಮತ್ತು ಇತರ ಸಕ್ರಿಯ ಪ್ರಕ್ರಿಯೆಗಳನ್ನು ಹೊಂದಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬೋಧಕರಿಂದ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ವರ್ಗಾಯಿಸುವುದು ಇನ್ನು ಮುಂದೆ ಆಗುವುದಿಲ್ಲ. ಕೆಲವು ಬೌದ್ಧಿಕ ಕೌಶಲ್ಯಗಳಲ್ಲಿ ಇದು ಮನಸ್ಸಿನ ತರಬೇತಿಯಾಗಬೇಕಾಗುತ್ತದೆ.
ಹೀಗಾಗಿ ಮುಕ್ತ ಪುಸ್ತಕ ಪರೀಕ್ಷೆಗಳು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣದ ನಿಜವಾದ ಅರ್ಥವನ್ನು ಮರಳಿಸುತ್ತದೆ. ತೆರೆದ ಪುಸ್ತಕ ಪರೀಕ್ಷೆಗಳ ಬೇಡಿಕೆಗಳಿಗೆ ತಕ್ಕಂತೆ ಹೊಂದಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಮಯದ ಮತ್ತು ಪ್ರಯತ್ನದ ಅಗತ್ಯವಿರುವುದು ನಿಜ. ಆದರೆ, ಬದಲಾವಣೆಗಲು ಅನಿವಾರ್ಯವಾಗಿರುತ್ತದೆ. ಆಲೋಚನಾ ಕೌಶಲ್ಯಗಳನ್ನು ಕೇಂದ್ರೀಕರಿಸುವ ಬೋಧನೆಯ ವಿಧಾನದೊಂದಿಗೆ ಸಂಯೋಜಿಸಿದಾಗ, ಅವರು ಶಿಕ್ಷಣವನ್ನು ಒಂದು ಉತ್ತೇಜಕ ಮತ್ತು ಆಹ್ಲಾದಿಸಬಹುದಾದ ಬೌದ್ಧಿಕ ಸಾಹಸವಾಗಿ ಮಾಡುತ್ತಾರೆ. ಜ್ಞಾನವು ಜೀವಿತಾವಧಿಯ ಶೋಧನೆಯಾಗಲು ತೊಡಗುತ್ತದೆ.
Thank ? for your support????