• ನಸೀಬ ಗಡಿಯಾರ್

ಪ್ರವಾದಿಯವರ ಜೀವನ ಶೈಲಿ ನಮಗೆಲ್ಲರಿಗೂ ಉತ್ತಮ ಮಾದರಿಯಾಗಿದೆ. ಅವರ ಸೌಮ್ಯಸ್ವಭಾವ, ನಿಷ್ಠೆ ಮತ್ತು ಪ್ರಾಮಾಣಿಕತೆ ಇವೆಲ್ಲವೂ ವಿವರಣೆಗೂ ಮೀರಿದ್ದು. ಬರೀ ಅವರ ಜೀವನಶೈಲಿಯ ಚರಿತ್ರೆಗಳು ನಮ್ಮ ಬದಲಾವಣೆಗೆ ಒಂದು ಮಾದರಿಯಾಗಿದೆ. ಪ್ರವಾದಿಯವರ ಜೀವನ ಶೈಲಿ ಅತ್ಯಂತ ಸರಳ ಹಾಗೂ ಸುಂದರವಾಗಿತ್ತು.

ಅಂದು ಒಬ್ಬಳು ಮುದುಕಿ ತನ್ನ ತಲೆಯ ಮೇಲೆ ಕಟ್ಟಿಗೆಯನ್ನು ಹೊತ್ತು ಸುಡು ಬಿಸಿಲನ್ನು ತಾಳದೆ ನಡೆಯಲು ಆಗದೆ ಕಷ್ಟಪಡುತ್ತಿರುವ ವೇಳೆಯಲ್ಲಿ ಒಬ್ಬ ಯುವಕ ಬಂದು ಮುದುಕಿಯ ಸಹಾಯಕ್ಕೆ ನೆರವಾಗುತ್ತಾನೆ ಮುದುಕಿಯ ಕಟ್ಟಿಗೆಯ ಕಟ್ಟನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಮುದುಕಿಯೊಂದಿಗೆ ಹಾಗೆ ಮುನ್ನಡೆಯುತ್ತಾನೆ ಮುದುಕಿಗೆ ಆತನ ಸಹಾಯಕತೆಯ ಗುಣವನ್ನು ಕಂಡು ತುಂಬಾ ಸಂತೋಷಗೊಂಡು ಕೊನೆಯದಾಗಿ ಒಂದು ಮಾತನ್ನು ಹೇಳುತ್ತಾಳೆ.
ಇಲ್ಲಿ ಕೇಳು ಮಗನೇ… ಮಕ್ಕಾದಲ್ಲಿ ಒಬ್ಬ ಮೊಹಮ್ಮದ್ ಎಂಬ ಕಳ್ಳ ಪ್ರವಾದಿಯೂ ನೆಲೆಸಿದ್ದಾನೆ, ಆತ ಜನರನ್ನು ಮೋಡಿ ಮಾಡಿ ಆತನೆಡೆಗೆ ಸೆಳೆಯುತ್ತಿದ್ದಾನೆ ದಯವಿಟ್ಟು ಆತನೊಂದಿಗೆ ಸೇರದಿರು ಎಂದು ಹೇಳುತ್ತಾಳೆ. ಆಗ ಆ ಯುವಕ ಮುಗುಳ್ನಗುತ್ತಾ ಅಜ್ಜಿ ಮಕ್ಕಾದಲ್ಲಿ ನೆಲೆಸಿರುವ ಆ ಪ್ರವಾದಿ ಮೊಹಮ್ಮದ್ ನಾನೇ ಎಂದು ಹೇಳುತ್ತಾರೆ.ಆಗ ಅಜ್ಜಿ ಸಿಡಿಲು ಬಡಿದಂತಾಗಿ ನಿಂತು ಆಶ್ಚರ್ಯಚಕಿತಳಾಗಿ ಶಹದತ್ ಕಲಿಮ ದೊಂದಿಗೆ ಆ ಕ್ಷಣವೇ ಇಸ್ಲಾಂ ಮತವನ್ನು ಸ್ವೀಕರಿಸುತ್ತಾಳೆ.
ಈ ಕಥೆಯಲ್ಲಿ ಪ್ರವಾದಿಯವರ ಸಹಾಯಕತೆಯ ಗುಣ, ಹಾಗೂ ತಾಳ್ಮೆಯ ಗುಣ ನಮಗೆ ಕಾಣಬಹುದು.
ಎಂದೂ ಯಾರಿಗೂ ಕೇಡನ್ನು ಬಯಸದ ಉಪಟಳವನ್ನು ಮಾಡದ ಅದೆಷ್ಟೇ ಬೇರೆಯವರಿಂದ ನೋವನ್ನು ಅನುಭವಿಸುತ್ತಿದ್ದರು ನಮ್ಮ ಪ್ರವಾದಿ ಎಂದು ಸೇಡನ್ನು ತೀರಿಸಿಕೊಂಡವರಲ್ಲ.

ಒಂದು ದಿನ ಒಬ್ಬ ವ್ಯಕ್ತಿ ತನ್ನ ಮನೆಗೆ ಅತಿಥಿಯಾಗಿ ಬಂದು ಅತಿಥಿ ಸತ್ಕಾರವನ್ನು ಪ್ರವಾದಿಯವರಿಂದ ಪಡೆದು ಮರುದಿನ ತೆರಳುವ ವೇಳೆಗೆ ಪ್ರವಾದಿಯವರಿಗೆ ದ್ರೋಹ ಬಗೆವ ಉದ್ದೇಶದಿಂದ ಉಪಟಳವನ್ನು ನೀಡಬೇಕೆಂಬ ಹಟದೊಂದಿಗೆ ಪ್ರವಾದಿಯವರು ಮಲಗುವ ಸ್ಥಳದಲ್ಲಿ ಮಲಮೂತ್ರ ವಿಸರ್ಜನೆಯನ್ನು ಮಾಡಿ ಅಲ್ಲಿಂದ ಓಡಿ ಹೋಗುತ್ತಾನೆ. ದಾರಿಯ ಮಧ್ಯದಲ್ಲಿ ಆತನಿಗೆ ತನ್ನ ಅಮೂಲ್ಯವಾದ ವಸ್ತುವನ್ನು ಪ್ರವಾದಿಯವರ ಮನೆಯಲ್ಲಿ ಬಿಟ್ಟು ಬಂದನೆಂದು ಹಿಂದುರಿಗಿ ಪ್ರವಾದಿಯವರ ಮನೆಯತ್ತ ಹೊರಡುತ್ತಾನೆ ಅವರು ಏನು ಮಾಡುತ್ತಿರಬಹುದೆಂದು ಮೆಲ್ಲನೆ ಕಿಟಕಿ ಹತ್ತಿ ಇಣುಕಿ ನೋಡುತ್ತಾನೆ ಆದರೆ ಮಹಾನ್ ಪ್ರವಾದಿಯವರು ತನ್ನ ಕೈಯಾರ ಆತ ಮಾಡಿದ ಮಲಮೂತ್ರ ವಿಸರ್ಜನೆಯಲ್ಲಿ ಶುಚಿಗೊಳಿಸುತ್ತಾ ಇರುವುದನ್ನು ಕಂಡು ಆತ ಗೊಳೋ ಎಂದು ಅತ್ತು ನೆಬಿಯವರೊಂದಿಗೆ ಕ್ಷಮೆಯನ್ನು ಯಾಚಿಸುತ್ತಾನೆ.

ನೋಡಿ ಸ್ನೇಹಿತರೇ… ಎಂತಹ ಗುಣ ಉಳ್ಳವರಾಗಿದ್ದಾರೆ ನಮ್ಮ ಪ್ರವಾದಿ. ಆತ ತನಗೆ ದ್ರೋಹ ಮಾಡಿ ಜೊತೆಗೆ ವಿಸರ್ಜನೆಯನ್ನು ಮಾಡಿ ಓಡಿ ಹೋದರು ಕೂಡ ಆತನೊಂದಿಗೆ ಕೋಪಗೊಳ್ಳದೆ ಕ್ಷಮಿಸಿಬಿಡುತ್ತಾರೆ.

ಪ್ರವಾದಿಯವರು ಹೇಳುತ್ತಾರೆ ನೆರೆಹೊರೆಯಲ್ಲಿ ಹಸಿದವನಿರುವಾಗ ಹೊಟ್ಟೆ ತುಂಬಾ ಉನ್ನುವವನು ನಮ್ಮವನಲ್ಲ, ನೆರೆಹೊರೆಯವರಿಗೆ ಉಪಟಳವನ್ನು ನೀಡುವವನು ನಮ್ಮವನಲ್ಲ, ದಾರಿಹೋಕರಿಗೆ ಉಪಟಳವನ್ನು ನೀಡುವವನು ನಮ್ಮವನಲ್ಲ,
ಪ್ರವಾದಿ ಜನ್ಮದಿನ ಆಚರಣೆಯಲ್ಲಿ ಪರರಿಗೆ ತೊಂದರೆ ಆಗದಂತೆ ಜಾಗೃತಿ ವಹಿಸುವುದು ಪ್ರವಾದಿಯವರನ್ನು ಪ್ರೀತಿಸುವ ಧೌತ್ಯದ ಭಾಗವಾಗಿದೆ. ನಾವು ಪ್ರವಾದಿಯವರನ್ನು ನೆನಪಿಸಿದರೂ ಅಥವಾ ನೆನಪಿಸದಿದ್ದರೂ ಜಗತ್ತು ನಿರಂತರವಾಗಿ ಅವರನ್ನು ನೆನಪಿಸುತ್ತದೆ. ನೆಬಿ(ಸ.ಅ)ರವರ ನಾಮವನ್ನ ಪ್ರತಿನಿತ್ಯ ಐದು ಹೊತ್ತಿನ ಆಝಾನ್ ನಲ್ಲಿ ಕೇಳುತ್ತೇವೆ.ಅಶ್ಹದು ಅಲ್ಲಾಹಿಲಾಹ ಇಲ್ಲಲ್ಲಾಹ್ ಅಶ್ಹದು ಅನ್ನ ಮಹಮ್ಮದರ್ರಸೂಲುಲ್ಲಾಹ್ “ಪ್ರವಾದಿಯವರು ಅಲ್ಲಾಹನ ಸಂದೇಶ ವಾಹಕರಾಗಿದ್ದಾರೆ. ಎಲ್ಲಾ ಮನುಷ್ಯ ಕುಲಕ್ಕೆ ಮಾರ್ಗದರ್ಶಕರೂ ಹಾಗೂ ಅನುಗ್ರಹಿತರೂ ಆಗಿದ್ದಾರೆ” ಎಂಬ ಘೋಷಣೆಯು ದಿನನಿತ್ಯ ನಾವು ಕೇಳುತ್ತೇವೆ.
ನಿಜವಾಗಿಯೂ ಪ್ರವಾದಿಯವರ ಸಹನೆ, ಕರುಣೆಗೆ ಸರಿ ಸಾಟಿ ಯಾರಿದ್ದಾರೆ ಈ ಜಗದಿ.

ಅಂದು ಮಕ್ಕಾದಲ್ಲಿ ಜನರ ಜೀವನ ಶೈಲಿಯು ಅಸ್ತವ್ಯಸ್ತವಾಗಿತ್ತು.ಬಹಳ ಕೆಡುಕುಗಳಿಂದ ತುಂಬಿ ಕಲುಷಿತವಾಗಿತ್ತು.ಆದರೆ ಆ ಕೆಟ್ಟ ಸಮಾಜದಲ್ಲಿ ಪ್ರಾಮಾಣಿಕ, ನಿಷ್ಠೆಯುಳ್ಳ,ಕರುಣೆಯುಳ್ಳ,ಸಮಾನತೆಯನ್ನು ಸಾರುವ, ಅನ್ಯಾಯದ ವಿರುದ್ಧ ಹೋರಾಡುವ,ಎಲ್ಲರನ್ನೂ ಪ್ರೀತಿಯಿಂದ ಕಾಣುವ ವ್ಯಕ್ತಿ ಯಾರಾದರೂ ಇದ್ದಾರೆಯೇ ಎಂದು ಪ್ರಶ್ನಿಸಿದರೆ ಎಲ್ಲರಿಗೂ ನೆನಪಾಗುವ ವ್ಯಕ್ತಿಯೊಬ್ಬರಿದ್ದರೆ ಅದು ಪ್ರವಾದಿ (ಸ.ಅ)ರ ಹೆಸರಾಗಿತ್ತು.
ಮಕ್ಕಾದಲ್ಲಿ ನೆಲೆಸಿರುವ ಜನರು ನೆಬಿಯವರುು ಪ್ರವಾದಿಯಾಗುವುದಕ್ಕಿಂತ ಮೊದಲೇ ಅವರಿಗೆ ಅಮೀನ್ ಮತ್ತು ಸಾದಿಕ್ ಎಂಬ ಬಿರುದನ್ನು ನೀಡಿದ್ದರು. ಅಮೀನ್ ಎಂದರೆ ಪ್ರಾಮಾಣಿಕ ಹಾಗೂ ಸಾದಿಕ್ ಎಂದರೆ ಸತ್ಯಸಂದ ಎಂಬುವುದಾಗಿದೆ.

ಪ್ರವಾದಿಯವರು ಉತ್ತಮ ನಾಯಕ ಮಾತ್ರವಲ್ಲ, ಅವರು ನಮಗೆಲ್ಲರಿಗೂ ಅತ್ಯುತ್ತಮ ಗುರು ಕೂಡ ಹೌದು. ಸಾಕಷ್ಟು ಹಿತ ನುಡಿಗಳನ್ನು ಹಾಗೂ ಉತ್ತಮ ಅನುಭವಗಳನ್ನು ಸಾಕ್ಷಿ ಸಮೇತ ನಮ್ಮಂತ ಜನಸಾಮಾನ್ಯರಿಗೆ ಬಿಟ್ಟು ಹೋಗಿದ್ದಾರೆ. ಅವರ ಜೀವನ ಶೈಲಿಯನ್ನು ಆಳವಾಗಿ ಅಧ್ಯಯನ ನಡೆಸಿದಾಗ ಅರೆ ಕ್ಷಣ ಮೈಮಪುಳಕಗೊಳ್ಳುತ್ತದೆ. ಅವರಷ್ಟು ಸರಳವಾಗಿ ನಿಷ್ಠೆ,ಪ್ರಾಮಾಣಿಕತೆಯುಳ್ಳವರಾಗಿ ಬದುಕಿದ ರೀತಿ ಅತ್ಯಂತ ಶ್ರೇಷ್ಠ. ಅದೆಷ್ಟೋ ಪಂಡಿತರು ನೆಬಿಯವರ ಜೀವನಚರಿತ್ರೆಯನ್ನು ಬರೆಯವುದರಲ್ಲಿ ವಿಫಲರಾಗಿದ್ದಾರೆ. ಏಕೆಂದರೆ ಅವರ ಜೀವನ ಅಷ್ಟೊಂದು ವ್ಯಾಪಕವಾಗಿತ್ತು ಮತ್ತು ಅವರ ಗುಣಗಳನ್ನು ವರ್ಣಿಸಲು , ಹಾಡಿ ಹೊಗಳಲು ಪದಗಳೇ ಸಾಲಲ್ಲ. ಪ್ರವಾದಿಯವರು ಜ್ಞಾನದ ಭಂಡಾರ, ವರ್ಣಿಸಿ ಮುಗಿಯದ ಗುಣಗಳ ಚಿತ್ತಾರ

ಪ್ರವಾದಿಯವರು ಹೇಳುತ್ತಾರೆ ನಿಮ್ಮ ಧರ್ಮವನ್ನು ಪ್ರೀತಿಸು ಅನ್ಯ ಧರ್ಮವನ್ನು ಗೌರವಿಸುವ ಎಂದು ಹೇಳಿ ಅವರ ಶಾಂತಿ ಪತಾಕೆಯನ್ನು ಜಗತ್ತಿಗೆ ಸಾರಿದ್ದಾರೆ
ಅವರಿಗೆ ಎಷ್ಟು ಶತ್ರು ಗಳಿದ್ದರೂ ಅವರ ಸಹನೆ ,ಕರುಣೆ ಮುಂದೆ ಎಲ್ಲಾ ಶತ್ರುಗಳು ಸೋತು ಹೋಗಿದ್ದರು. ಎಂದೂ ಯಾರೊಂದಿಗೂ ಕೋಪಗೊಂಡು ದುಡುಕಿ ಮಾತಾಡಿದವರಲ್ಲ, ಯಾರೊಬ್ಬರಿಗೂ ಒಂದೇಟು ಹೊಡೆದವರಲ್ಲ
ವಿಧವೆಯರ ಮುಂದೆ ನಿಮ್ಮ ಪತ್ನಿಯನ್ನು ಪ್ರೀತಿಸದಿರು ಎಂದು ಹೇಳಿದ ಹೃದಯವಂತ ಪ್ರವಾದಿಯಾಗಿದ್ದರು. ನೀವು ತಿನ್ನುವುದರಲ್ಲಿ ನಿಮ್ಮ ಪತ್ನಿಗೂ ತಿನ್ನಿಸಿರಿ, ನೀವು ಧರಿಸುವುದರಲ್ಲಿ ಅವರಿಗೂ ಧರಿಸಲು ಕೊಡಿ, ಎಂದೂ ಅವರನ್ನು ಅವಮಾನಿಸದಿರಿ ಎಂದು ಹೇಳಿಕೊಟ್ಟ ಜಗತ್ಪ್ರಸಿದ್ಧ ಹೆಮ್ಮೆಯ ನಾಯಕ ಅವರು.
ಕರಿಯ ಜನರನ್ನು ಗುಲಾಮರಾಗಿ ಕಾಣುವ ವ್ಯವಸ್ಥೆಯಲ್ಲಿ ಅತ್ಯಂತ ಕರಿಯ ವ್ಯಕ್ತಿಯಾಗಿದ್ದ ಬಿಲಾಲ್ ಅವರನ್ನು ಬಾಚಿ ತಬ್ಬಿಕೊಂಡು ಕಾಬಾದ ಮೇಲೆ ಕಾಲಿಟ್ಟು ಆಝಾನ್ ಹೇಳು ಎಂದು ಸಮಾನತೆಯನ್ನು ವಿಶ್ವಕ್ಕೆ ಪರಿಚಯಿಸಿದ ಸಮಾನತೆಯ ಪ್ರತೀಕ
ಪ್ರವಾದಿಯವರು. ಅನಾಥ ಮಕ್ಕಳ ಮುಂದೆ ನಿಮ್ಮ ಮಕ್ಕಳನ್ನು ಪೋಷಿಸದಿರಿ ಎಂದು ಜಗತ್ತಿಗೆ ಸಾರಿದ ಕರುಣೆಯ ಕಡಲು ಮಹಮ್ಮದ್ ಪೈಗಂಬರರು. ಇಂತಹ ಸಹಸ್ರಾರು ಹಿತನುಡಿಗಳು ಜಗತ್ತಿಗೆ ತಿಳಿಸಿ ಕೊಟ್ಟ ಮಹಾನ್ ಗುರು ಪ್ರವಾದಿಯವರು.

ಪ್ರವಾದಿಯವರನ್ನು ಯಾರು ಕೂಡ ಕಂಡವರಿಲ್ಲ ಅವರ ಹೆಸರಿನಲ್ಲಿ ಯಾವ ಮೂರ್ತಿಯೂ ಇಲ್ಲ. ಆದರೂ ಜಗತ್ತಿನ ಕೋಟ್ಯಾನುಕೋಟಿ ವಿಶ್ವಾಸಿಗಳ ಹೃದಯದಲ್ಲಿದ್ದಾರೆ.
ಅಂದು ಇಂದು ಎಂದೆಂದೂ ಪ್ರತಿಯೊಬ್ಬ ಮುಸಲ್ಮಾನ ಪ್ರೀತಿಸುವ ಓರ್ವ ವ್ಯಕ್ತಿ ಇದ್ದರೆ ಅದು ಮಹಾನ್ ಕರುಣಾಮಯಿಯಾದ ಪ್ರವಾದಿಯವರು. ಪ್ರಿಯ ಸ್ನೇಹಿತರೆ ನಮ್ಮ ಪ್ರವಾದಿ ಪ್ರೇಮ ತೋರಿಕೆಗೆ ಮೀಸಲಾಗದಿರಲಿ.
ಒಮ್ಮೆ ನೆಬಿಯವರನ್ನು ಮನಸ್ಸಿನಿಂದ ಪ್ರೀತಿಸಿ, ಅವರು ಕೂಡ ನಿಮ್ಮನ್ನು ಸದಾ ಪ್ರೀತಿಸುತ್ತಾರೆ.

ನೆಬಿಯವರ ನೂರಾರು ಘಟನೆಗಳು ಮನುಷ್ಯರಿಗೆ ಮಾರ್ಗದರ್ಶನವಾಗಿದೆ. ನೆಬಿಯವರು ಎಲ್ಲಾ ಪ್ರವಾದಿಗಳ ಪೈಕಿ ಅತ್ಯಂತ ಕೊನೆಯ ಪ್ರವಾದಿ ಯಾರದ್ದಾರೆ. ಅವರಿಗಿಂತ ಮುಂಚೆ ಲಕ್ಷಕ್ಕೂ ಮಿಗಿಲಾದ ಪ್ರವಾದಿಗಳು ಬಂದುಹೋಗಿದ್ದಾರೆ.

ಪ್ರವಾದಿಯವರ ಸಂಸ್ಕಾರ, ಅವರ ಚಾರಿತ್ರ್ಯ ಎಲ್ಲವೂ ಬೆಚ್ಚಿ ಬೀಳುವಷ್ಷು ಪ್ರಾಮಾಣಿಕವಾಗಿ. ಜಗತ್ತಿನಲ್ಲಿ ಮನುಷ್ಯನಲ್ಲಿರಬೇಕಾದ ಎಲ್ಲಾ ಗುಣಗಳಿಗಿಂತ ಮುಖ್ಯವಾಗಿ ಮನುಷತ್ವದ ಗುಣ ಅತಿ ಶ್ರೇಷ್ಠವಾದುವುದು.
ಸಚ್ಚಾರಿತ್ರ್ಯದ ಪರಿಪೂರ್ಣತೆಯನ್ನು ಈ ಜಗತ್ತಿಗೆ ಪರಿಚಯಿಸಲು ಹಾಗೂ ಮನುಷ್ಯತ್ವವನ್ನು ಸಂಪೂರ್ಣವಾಗಿಮನುಷ್ಯ ಕುಲಕ್ಕೆ ಕಲಿಸಿಕೊಡುವುದಕ್ಕಾಗಿ ನನ್ನನ್ನು ಕಳುಹಿಸಿಕೊಟ್ಟಿದ್ದಾನೆ ಪ್ರವಾದಿ(ಸ.ಅ). ಹೇಳುತ್ತಾರೆ. ಪ್ರವಾದಿಯವರನ್ನು ಯಾರೂ ಕೂಡ ಕಂಡಿಲ್ಲ. ಅವರ ಹೆಸರಲಿ ಯಾವ ಪ್ರತಿಮೆ ಇಲ್ಲದಿದ್ದರೂ ಕೂಡ ಕೋಟ್ಯಂತರ ವಿಶ್ವಾಸಿಗಳ ಹೃದಯದಲ್ಲಿದ್ದಾರೆ.ಗತಿಸಿಹೋದ ಲಕ್ಷಾಂತರ ವಿಶ್ವಾಸಿಗಳ ಮನದಲ್ಲಿ ಅವರು ಇದ್ದರು.ಇನ್ನು ಮುಂದೆಯೂ ಖಂಡಿತವಾಗಿ ಇರುತ್ತಾರೆ.
ನೆಬಿಯವರು ತನ್ನ ಏಕಾಂತದಲ್ಲಿ ಅಲಾಹನೊಂದಿಗೆ ಪ್ರಾರ್ಥಿಸುತ್ತಾರೆ. ಜಗತ್ತಿನ ಎಲ್ಲಾ ಮನುಷ್ಯರು ನನ್ನ ಸಹೋದರರು ಮತ್ತು ನಾನು ಅವರನ್ನು ಕಾಲಾಂತ್ಯದವರೆಗೂ ಪ್ರೀತಿಸುತ್ತೇನೆ ಎಂದು.
ಅದರಂತೆಯೇ ಅದೆಷ್ಟೋ ವಿಶ್ವಾಸಿಗಳು ತಮ್ಮನ್ನು ತಾವು ಇಷ್ಟಪಡುವುದಕ್ಕಿಂತ ಹೆಚ್ಚಾಗಿ ನೆಬಿಯವರನ್ನು ಇಷ್ಟಪಡುತ್ತಾರೆ.
ಪ್ರವಾದಿಯವರು ನಾನು ಜಗತ್ತಿಗೆ ಬಂದ ಏಕೈಕ ಪ್ರವಾದಿ ಎಂದು ಹೇಳಿಕೊಳ್ಳಲಿಲ್ಲ, ಅಥವಾ ತಾನು ಜಗತ್ತಿಗೆ ಬಂದುಹೊಸ ಧರ್ಮವನ್ನು ಪರಿಚಯ ಪಡಿಸಲು ಬಂದಿದ್ದೇನೆ ಎಂದೂ ಅವರು ಹೇಳಿಕೊಂಡವರಲ್ಲ.
ಇದಕ್ಕಿಂತ ಮೂದಲು ಬಂದ ಪ್ರವಾದಿಯವರು ಯಾವ ಧರ್ಮವನ್ನು ಕಲಿಸಿಕೊಟ್ಟಿದ್ದಾರೋ ಆದೇ ಧರ್ಮವನ್ನು ಕಲಿಸಿಕೊಡುತ್ತೇನೆ ಮತ್ತು ಅದರ ಪರಿಪೂರ್ಣತೆಯನ್ನು ಕಲಿಸಿಕೊಡುತ್ತೇನೆ.
ಎಂದು ಬಹಳ ಸಾಮ್ಯತೆಯಿಂದ ಹೇಳಿದರು .
ಪ್ರವಾದಿಯವರು ಜಗತ್ತಿಗೆ ಬಹಳ ದೊಡ್ಡ ಮಾರ್ಗದರ್ಶನ ಮಾಡಿದ್ದರು.ಹಾಗೆಯೇ ಪ್ರವಾದಿಯವರು ಬದುಕಿದ ರೀತಿ.ಜಗತ್ತಿಗೆ ನೀಡಿದ ಸಂದೇಶ. …ಇನ್ನೆಂದೂ ಮತ್ತೊಮ್ಮೆ ಕಾಣಲು ಸಾಧ್ಯವಿಲ್ಲ. ಖಂಡಿತವಾಗಿಯೂ ಅವರ ಆ ಉಜ್ವಲ ಗುಣಕ್ಕೆ ಸರಿಸಾಟಿ ಯಾರು ಇಲ್ಲ .

LEAVE A REPLY

Please enter your comment!
Please enter your name here