• ನಸೀಬ ಗಡಿಯಾರ್

20೨೦ಕ್ಕೆ ವಿದಾಯ ಹೇಳಿ 2021ರ ಆಗಮನಕ್ಕೆ ಲೋಕ ವು ಸಜ್ಜಾಗಿ ನಿಂತಿದೆ,ಡಿಸ್ಕೋ ಡ್ಯಾನ್ಸ್ ಗಳು, ಬಣ್ಣದ ಸಿಡಿ ಮದ್ದುಗಳು, ಎಲ್ಲೆಡೆ ಮನರಂಜನೆಯ ವಾತಾವರಣಕ್ಕೆ ಕಾದು ಕುಳಿತಿದೆ. ನನ್ನ ಪ್ರಕಾರ ಹೊಸ ವರ್ಷದ ಆಚರಣೆ ಅನಾವಶ್ಯಕ.”ಹೊಸ ವರುಷದ ಧಾಮ್ ಧೂಮ್ ಆಚರಣೆಯ ಆಲೋಚನೆಗಳ ಬದಲು ಹೊಸ ವರುಷಕ್ಕೆ ಸಕರಾತ್ಮಕವಾಗಿ ಹೊಸ ಆಲೋಚನೆಗಳನ್ನು ಅಭಿವೃದ್ಧಿಗೊಳಿಸುವುದು ಉತ್ತಮ”ಪ್ರಿಯ ಸ್ನೇಹಿತರೆ ಪ್ರತಿವರ್ಷವೂ ಹೊಸ ವರುಷ ಬರುತ್ತದೆ ಹೊಸ ವರ್ಷದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸುತ್ತೇವೆ, ಆದರೆ ಆ ವರ್ಷ ನಾವು ಏನು ಮಾಡಿದ್ದೇವೆ? ಹೊಸವರ್ಷದ ಸಂಭ್ರಮದಂತೆ ಸಮಾಜವು ಏನಾದರೂ ಹೊಸದಾಗಿ ಬದಲಾಯಿತೇ?ಇಲ್ಲ ಸ್ನೇಹಿತರೆ, ಸಮಾಜವು ವರ್ಷ ವರ್ಷ ಹೋದಂತೆ ಅತಿಹೀನಾಯ, ಹಾಗೂ ಶೋಚನೀಯ ಸ್ಥಿತಿಗೆ ಒಳಗಾಗುತ್ತಿದೆ. ದಿನೇದಿನೇ ಕಳ್ಳತನ, ದರೋಡೆ, ಅತ್ಯಾಚಾರ, ಇವೆಲ್ಲವೂ ನಮ್ಮ ಸುತ್ತಮುತ್ತಲೇ ಕಾಣುತ್ತಿದ್ದೇವೆ.ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಒಬ್ಬಂಟಿಯಾಗಿ ಕಳುಹಿಸಿಕೊಡಲು ಕೂಡ ಧೈರ್ಯ ಸಲ್ಲದಂತಹ ಸಮಾಜವಾಗಿ ಬದಲಾಗಿದೆ, ಇವೆಲ್ಲವೂ ಸಮಾಜದಿಂದ ದೂರವಾಗಬೇಕು , ಶುಭ್ರ ಸಮಾಜವಾಗಿ ಬದಲಾಗಬೇಕು, ಸಮಾಜ ಹೊಸದಾಗಿ ಬದಲಾಗಬೇಕಾದರೆ ಮಾನವರ ಆಲೋಚನೆಯೂ ಹೊಸದಾಗಬೇಕು…ಹೊಸವರ್ಷಕ್ಕೆ ಹೊಸ ರೀತಿಯ ಆಲೋಚನೆಯನ್ನು ,ಜ್ಞಾನವನ್ನು ವೃದ್ಧಿಸಿ ಹೊಸವರ್ಷಕ್ಕೆ ಸ್ವಲ್ಪವಾದರೂ ಬದಲಾಗಬೇಕೆಂಬ ಯೋಚನೆಯನ್ನು ಬೆಳೆಸೋಣ, ಹೊಸವರ್ಷದ ಸಂಭ್ರಮಕ್ಕಿಂತ ಹೊಸ ರೀತಿಯ ಆಲೋಚನೆಯನ್ನು ಬೆಳೆಸಿಕೊಳ್ಳುವುದು ಅತ್ಯುತ್ತಮ…..

೨೦೨೦ ಏನು ಕಲಿಸಿಕೊಟ್ಟಿತು?:

  • ಹಸಿವು,ಬಡತನ ,ಸಾಲ ಏನೆಂಬುದು ಕಲಿಸಿಕೊಟ್ಟಿತು
  • ರೈತನ ಬೆಲೆ ಏನೆಂಬುದು ತಿಳಿಸಿಕೊಟ್ಟಿತು
  • ಹಣವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಭ್ರಮೆಯಲ್ಲಿ ಬದುಕುವವರಿಗೆ ಎಚ್ಚರಿಸಿದ ವರ್ಷ
  • ವ್ಯವಹಾರ ಉದ್ಯಮ ಎಂದು ಕುಟುಂಬವನ್ನೇ ಮರೆತು ಬದುಕುತ್ತಿದ್ದ ಜನರಿಗೆ ಕುಟುಂಬಸ್ಥರೆಲ್ಲಾ ಒಟ್ಟಾಗಿ ಕುಳಿತು ಸಾಕಷ್ಟು ಕಾಲ ಕಳೆಯುವಂತ ಸಮಯವನ್ನು ಒದಗಿಸಿಕೊಟ್ಟಿತು.
  • ಕುಟುಂಬ ಬಂಧವನ್ನು ಸಂಪೂರ್ಣವಾಗಿ ಮನದಟ್ಟು ಮಾಡಿಸಿ ಕೊಟ್ಟಂತಹ ವರ್ಷ
  • ಸೇವೆಯೆಂಬ ಜ್ಞಾನವನ್ನು ಸಾಕಷ್ಟು ಜನರಿಗೆ ತಿಳಿಸಿ ಕೊಟ್ಟಂತಹ ವರುಷ….

೨೦೨೧ ರಲ್ಲಿ ಏನನ್ನು ಅಪೇಕ್ಷಿಸಬಹುದು:

  • ರೈತರ ಬದುಕಿಗೆ ಬೆಳಕಾಗಲಿ ರೈತನಿಗೆ ತಕ್ಕ ನ್ಯಾಯ ಸಿಗಲಿ
  • ಕೋರೋಣ ಎಂಬ ಮಾರಕ ಸೋಂಕು ಜಗತ್ತಿನಿಂದ ತೊಲಗಿ ಜನರಿಗೆ ಹೊಸ ಜೀವನವನ್ನು ಕಟ್ಟಿಕೊಡಲಿ
  • ಅದೆಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣವು ಕೈಬಿಟ್ಟು ಹೋಗುತ್ತಿದೆ ಎಲ್ಲಾ ಶಾಲಾ ಕಾಲೇಜುಗಳು ಪುನರಾರಂಭಗೊಳ್ಳಲಿ.
  • ಸತ್ಯ, ಶಾಂತಿ ,ನೆಮ್ಮದಿ ಜಗತ್ತಿನಲ್ಲಿ ಬೆಳಗಲಿ
  • ಆಸಿಫಾ, ಸೌಜನ್ಯಳಂತಹ, ಮರೆಯಾದ ಇನ್ನಿತರ ಮುಗ್ಧ ಮುಗ್ಧ ಕೂಗುಗಳಿಗೆ ನಿಖರ ನ್ಯಾಯ ದೊರಕಲಿ……

LEAVE A REPLY

Please enter your comment!
Please enter your name here