7ನೇ ಶತಮಾನದಲ್ಲಿ ಕೆಲವೆಡೆ ಹೆಣ್ಣು ಮಗು ಹುಟ್ಟಿದರೆ ಅವಮಾನವೆಂದು ಭಾವಿಸಲಾಗುತ್ತಿತ್ತು.ಕೆಲವು ಜನಾಂಗಗಳಲ್ಲಿ ಹೆಣ್ಣು ಮಕ್ಕಳನ್ನು ಜೀವಂತವಾಗಿ ಹೂಳುವ ಪದ್ಧತಿ ಇತ್ತು.
ಹೆಣ್ಣಿಗೆ ಆತ್ಮ ಇದೆಯೋ ಇಲ್ಲವೋ ಎಂಬ ಸಂದೇಹವೂ ಇತ್ತು.ಸ್ತ್ರೀಗೆ ವಾರೀಸಿನಲ್ಲಿ ಹಕ್ಕು ಇರಲಿಲ್ಲ.ಅವಳನ್ನು ಆಸ್ತಿಯಂತೆ ನೋಡುತ್ತಿದ್ದರು.
ಹಲವಾರು ಪ್ರಾಚೀನ ಸಮಾಜಗಳಲ್ಲಿ ಅವಳ ರಾಜಕೀಯ ಅಥವಾ ಆರ್ಥಿಕ ಹಕ್ಕುಗಳು ಕಡಿಮೆ ಇದ್ದವು.ಕೆಲವು ಸಂಸ್ಕೃತಿಗಳಲ್ಲಿ ಸ್ತ್ರೀಯು ಪೂರ್ಣವಾಗಿ ಪುರುಷರ ಅಧೀನದಲ್ಲೇ ಇರಬೇಕಿತ್ತು.ಶಿಕ್ಷಣ ಮತ್ತು ಸಾರ್ವಜನಿಕ ಜೀವನದಲ್ಲಿ ಅವಳ ಪಾಲ್ಗೊಳ್ಳುವಿಕೆ ಇರಲಿಲ್ಲ.ಸತಿ ಪದ್ಧತಿಯು ಅವಳನ್ನು ಪತಿಯ ಚಿತೆಯಲ್ಲಿ ಸುಟ್ಟು ಹಾಕುತ್ತಿತ್ತು

ಅಂದು ಜಗತ್ತಿನೆಲ್ಲೆಡೆ ಸ್ತ್ರೀಯ ಗೋಳನ್ನು ಅರಿತವನು ಅವಳನ್ನು ಸೃಷ್ಟಿಸಿದ ಆ ದೇವನು ಮಾತ್ರನಾಗಿದ್ದ !!ಇಂತಹ ಸನ್ನಿವೇಶದಲ್ಲಿ ಮಹಿಳೆಯರಿಗೆ ದೈವದತ್ತ ಹಕ್ಕುಗಳನ್ನು ನೀಡಲು ಪವಿತ್ರ ಕುರ್ಆನ್ ಅವತೀರ್ಣಗೊಂಡಿತು.

ಈ ಕುರ್ಆನಿನ ಅಧ್ಯಯನ ನಡೆಸಿದ್ದ,ನೋಬೆಲ್ ಪ್ರಶಸ್ತಿ ವಿಜೇತರೂ,ಲೇಖಕರೂ,ಚಿಂತಕರೂ,ನಾಟಕಕಾರೂ ಆದ ಜಾರ್ಜ್ ಬರ್ನಾರ್ಡ್ ಶಾ ಅವರು ಪವಿತ್ರ ಕುರಾನ್ ಬಗ್ಗೆ ಹೀಗೆ ಹೇಳಿದರು-
ಈ ಕುರಾನನ್ನು ಒಬ್ಬ ಮಹಿಳೆಯೇ ಬರೆದಿರಬೇಕು ಎನ್ನುವಷ್ಟು ಮಹಿಳೆಯ ಪರವಾದ ಸಂದೇಶಗಳು ಈ ಕುರಾನಿನಲ್ಲಿವೆ!!!

ಈ ದೇವಾಜ್ಞೆಯಂತೆ ಲೋಕದೆಲ್ಲೆಡೆ ಮಹಿಳಾ ಹಕ್ಕುಗಳನ್ನು ಸ್ಥಾಪಿಸುವ ಹೋರಾಟಕ್ಕಾಗಿ ಪ್ರವಾದಿ ಮುಹಮ್ಮದ್ (ಸ)ಚಾಲನೆ ನೀಡಿದರು.ಲೋಕದ ಸರ್ವ ಮಹಿಳೆಯರೂ ಇಂದು ಈ ಹಕ್ಕುಗಳ ಸವಿಯುಣ್ಣುತ್ತಿರುವರು.

ಆದರೂ ‘ಮುಸ್ಲಿಂ ಮಹಿಳೆಯರು ಬಂಧಿತರು’ ಎನ್ನುತ್ತಾ ಅವರ ಬಗ್ಗೆ ಮೊಸಳೆ ಕಣ್ಣೀರು ಸುರಿಸಲಾಗುತ್ತಿದೆ.ಅವರ ಬಗ್ಗೆ ಕಾಳಜಿ ತೋರಿಸುವಂತೆ ಕಂಡರೂ ಇದು ಟೀಕೆ ಮಾತ್ರವಾಗಿದೆ.ನೈಜ ಸಹಾನುಭೂತಿಯ ಯಾವ ಲಕ್ಷಣವನ್ನೂ ನಾವು ಕಾಣುತ್ತಿಲ್ಲ.ಕೇವಲ ತೋರಿಕೆ ಅಥವಾ ರಾಜಕೀಯ ಉದ್ದೇಶ ಮಾತ್ರ ಎಂಬುದು ಸಾಬೀತಾಗಿದೆ.ಪ್ರಚಾರಕ್ಕಾಗಿ ಮಾತ್ರ ಮುಸ್ಲಿಂ ಮಹಿಳೆಯರ ವಿಷಯಗಳನ್ನು ಬಳಸುತ್ತಾರೆ.ಕೆಲವರಂತೂ ಮುಸ್ಲಿಂ ಮಹಿಳೆಯರ ಹಕ್ಕುಗಳ ಬಗ್ಗೆ ತುಂಬಾ ಚಿಂತಿಸುತ್ತಿರುವಂತೆ ಮಾತನಾಡುತ್ತಾರೆ.ಆದರೆ ಅದೇ ಜನರು ಇತರ ಸಮಾಜಗಳ ಮಹಿಳೆಯರ ಸಮಸ್ಯೆಗಳ ಬಗ್ಗೆ ಮೌನ ಪಾಲಿಸುತ್ತಾರೆ.ಮುಸ್ಲಿಂ ಮಹಿಳೆಯರ ನಿಜವಾದ ಧ್ವನಿಯನ್ನು ಕೇಳಲು ಯಾವ ರಾಜಕೀಯವೂ ತಯಾರಿಲ್ಲವೆಂಬುದು ಸತ್ಯ!!

ಇಂದು ಲೋಕದ ಮಹಿಳೆಯರು ಸವಿಯುತ್ತಿರುವ ಪವಿತ್ರ ಕುರಾನಿನ ಮೂಲಕ ನೀಡಲಾದ ದೈವದತ್ತ ಹಕ್ಕುಗಳು ಹೀಗಿವೆ-

ಜೀವಿಸುವ ಹಕ್ಕು
ಹುಟ್ಟಿದ ಮಗು ಹೆಣ್ಣಾಯಿತೆಂದು ಅದನ್ನು ಕೊಲ್ಲುವುದಕ್ಕೆ ತಡೆ

ವಸ್ತ್ರಧಾರಣೆಯ ಹಕ್ಕು
ಧಾರ್ಮಿಕ ವಿಧಿಗಳಲ್ಲಿ ಸ್ರೀಯರ ನಗ್ನತೆಯು ಪವಿತ್ರವೆಂಬ ಕಲ್ಪನೆಯನ್ನು ಮೂಲೋತ್ಪಾಟನೆಗೊಳಿಸಲಾಯಿತು.

ಶಿಕ್ಷಣದ ಹಕ್ಕು
ಜ್ಞಾನವನ್ನು ಪಡೆಯುವುದು ಪುರುಷ ಮತ್ತು ಮಹಿಳೆ ಇಬ್ಬರಿಗೂ ಅಗತ್ಯ

ಆಸ್ತಿ ಹೊಂದುವ ಹಕ್ಕು
ಮಹಿಳೆಗೆ ತನ್ನದೇ ಆದ ಆಸ್ತಿ ಹೊಂದುವ ಮತ್ತು ಅದನ್ನು ಬಳಸುವ ಸಂಪೂರ್ಣ ಹಕ್ಕು ಇದೆ.

ವಾರಸತ್ವದ ಹಕ್ಕು
ಮಹಿಳೆಯರು ತಂದೆ-ತಾಯಿ ಮತ್ತು ಸಂಬಂಧಿಕರಿಂದ ವಾರೀಸಿನಲ್ಲಿ ಪಾಲು ಪಡೆಯಬೇಕು

ಮದುವೆಯಲ್ಲಿ ಒಪ್ಪಿಗೆ ಹಕ್ಕು
ಮಹಿಳೆಯ ಒಪ್ಪಿಗೆ ಇಲ್ಲದೆ ಮದುವೆ ಮಾಡಬಾರದು.

ಮಹರ್ ಪಡೆಯುವ ಹಕ್ಕು
ಮದುವೆಯ ಸಮಯದಲ್ಲಿ ಮಹಿಳೆ ಅವಳು ಇಚ್ಛಿಸಿದಷ್ಟು ಮಹರ್ ಕಡ್ಡಾಯವಾಗಿ ಪಡೆಯಬೇಕು.

ಗೌರವ ಮತ್ತು ಉತ್ತಮ ವರ್ತನೆಯ ಹಕ್ಕು
“ಪುರುಷರಲ್ಲಿ ಉತ್ತಮನು
ತನ್ನ ಪತ್ನಿಯೊಂದಿಗೆ ಉತ್ತಮವಾಗಿ ವರ್ತಿಸುವವನು”
ಪ್ರವಾದಿ ಮುಹಮ್ಮದ್(ಸ) ಹೇಳಿದರು.

ವಿಚ್ಛೇದನದ ಹಕ್ಕುಗಳು(ಖುಲಾ,ಫಸ್ಕ್,ಮುಬಾರತ್)
ವಿಚ್ಛೇದನವಾದ ನಂತರವೂ ಮಹಿಳೆಯ ಹಕ್ಕುಗಳನ್ನು ಕಾಪಾಡುವ ನಿಯಮಗಳಿವೆ.

ವಿಧವೆಯ ಹಕ್ಕು
ಪ್ರವಾದಿಯವರು ವಿಧವೆಯರ ವಿವಾಹಕ್ಕೆ ಸ್ವತ ಮಾದರಿಯಾದರು

ತಾಯಿಯ ಹಕ್ಕು
ತಾಯಿಯ ಪಾದದಡಿ ಸ್ವರ್ಗವಿದೆ ಎನ್ನುವ ಮೂಲಕ ತಾಯಿಯ ಸೇವೆಗೆ ಪ್ರೋತ್ಸಾಹಿಸಲಾಯಿತು.

ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳೊಂದಿಗೆ…
ಹುಮೈರಾ ಕಾರ್ಕಳ

Previous articleಆಯತೊಲ್ಲಾ ಖಮೇನಿ: ಸವಾಲುಗಳೆದುರು ಇರಾನ್ ಕಟ್ಟಿದ ಅಜೇಯ ನಾಯಕ
Next articleಆಹಾರ ಜಾಹೀರಾತು ಮತ್ತು ನೀತಿ ನಿಯಂತ್ರಣ: ಮಾರುಕಟ್ಟೆ ತಂತ್ರದ ಮುಂದೆ ಮಂಕಾಯಿತೇ ಕಾನೂನು?
ಹುಮೈರಾ ಕಾರ್ಕಳ
ಹುಮೈರಾ ಕಾರ್ಕಳ ಅವರು ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಮಾಜ ಹಿತೈಷಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಕುಟುಂಬ ಹಾಗೂ ದಾಂಪತ್ಯ ಸಂಬಂಧಿತ ವಿವಾದಗಳು ಸೇರಿದಂತೆ ವಿವಿಧ ಸಾಮಾಜಿಕ ಸಮಸ್ಯೆಗಳಲ್ಲಿ ಸಲಹೆಗಾರ್ತಿಯಾಗಿ (ಕೌನ್ಸಿಲರ್) ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಕುಟುಂಬಗಳ ವೈವಾಹಿಕ ಸಮಸ್ಯೆಗಳು ಮತ್ತು ವೈಮನಸ್ಸುಗಳನ್ನು ಸಂವಾದ ಹಾಗೂ ಸಮನ್ವಯದ ಮೂಲಕ ಪರಿಹರಿಸಲು ಅವರು ಪ್ರಯತ್ನಿಸುತ್ತಿದ್ದು, ಸಮಾಜದಲ್ಲಿ ಶಾಂತಿ ಮತ್ತು ಸಮತೋಲನವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದಾರೆ. ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಹಾಗೂ ಸೇವಾ ಮನೋಭಾವ ಮತ್ತು ಮಾರ್ಗದರ್ಶನದ ಮೂಲಕ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿತ್ವವಾಗಿ ಅವರು ಗುರುತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here