ಮಂಗಳೂರು: ನಗರದ ಬೆಂಗ್ರೆ ಎ.ಆರ್.ಕೆ ಶಾಲೆಯ ಆಟದ ಮೈದಾನಕ್ಕೆಂದು ಪೋರ್ಟ್ ಬರೆದು ಕೊಟ್ಟಿರುವ ಜಾಗವನ್ನು ಕೆಲವರು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಆ ಜಾಗದಲ್ಲಿ ಬೇರೆ ಬೇರೆ ಯೋಜನೆಯ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಆಟದ ಮೈದಾನದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳಿಂದ ಸಿ.ಎಂ ಸಿದ್ದರಾಮಯ್ಯ ಹಾಗೂ ದ.ಕ. ಜಿಲ್ಲಾಧಿಕಾರಿಗಳಿಗೆ ಶಶಿಕುಮಾರ್ ಸೆಂಥಿಲ್ ರಿಗೆ ಪೋಸ್ಟ್ ಕಾರ್ಡ್ ನಲ್ಲಿ ಮನವಿಯನ್ನು ಬರೆಯುವ ಮೂಲಕ ಹೋರಾಟ ನಡೆಸುತ್ತಿದ್ದಾರೆ.
ಭಾರತೀಯ ಸಂವಿಧಾನದ 21ನೇ ಆರ್ಟಿಕಲ್ ಶಿಕ್ಷಣವೂ ಮೂಲಭೂತ ಹಕ್ಕಾಗಿದ್ದು ಅದಕ್ಕಾಗಿ ಭಾರತವು ಶಿಕ್ಷಣ ಹಕ್ಕು ಕಾಯ್ದೆಯನ್ನು 2009ರಲ್ಲಿ ಜಾರಿಗೊಳಿಸಿದೆ. ಅದರ ಪ್ರಕಾರ ಒಂದು ಶಿಕ್ಷಣ ಸಂಸ್ಥೆಯು ಮೂಲಭೂತವಾಗಿ ಆಟದ ಮೈದಾನವನ್ನು ಹೊಂದಿರಬೇಕಾಗಿರುವುದು. ಶಾಲೆಯು ಪೋರ್ಟ್‍ಗೆ ಸುಮಾರು 3 ಲಕ್ಷ ಹಣಗಳನ್ನು ಪಾವತಿಸಿ 3 ವರ್ಷದ ಲೀಸಿಗಾಗಿ ಪೋರ್ಟ್‍ನ ಜಾಗವನ್ನು ಪಡೆದುಕೊಂಡಿದೆ. ಅದೇ ರೀತಿ ಈಗ ಕೆಲವರು ಆ ಜಾಗವು ಮಕ್ಕಳಿಗೆ ಸೇರಿದ್ದಲ್ಲ ಎಂದು ಕಬಳಿಸಲು ಹೊರಟಿದ್ದಾರೆ. ಇನ್ನು ಕೆಲವರು ಅಂಗನವಾಡಿ ಕೇಂದ್ರವು ಅದೇ ಜಾಗದಲ್ಲಿ ನಿರ್ಮಾಣ ಮಾಡಬೇಕೆಂದು ಹಠ ಹೊಂದಿದ್ದಾರೆ. ಹಾಗೆಯೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅಂಗನವಾಡಿ ನಿರ್ಮಿಸಲು ಎಲ್ಲಾ ಅವಕಾಶಗಳು ಇದ್ದರು ಕೂಡ ಶಾಲೆಯ ಮಕ್ಕಳಿಗೆ ಆಟದ ಮೈದಾನ ಸಿಗಬಾರದೆಂದು ದುರುದ್ದೇಶದಿಂದ ಅದೇ ಜಾಗದಲ್ಲಿ ಅಂಗನವಾಡಿ ಕೇಂದ್ರ ಮಾಡಲು ಅವರು ಹೊರಟಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಡಿಸಿ ಹಾಗು ಸಿ.ಎಂ ಸಿದ್ಧರಾಮಯ್ಯ ರಿಗೆ ಬರೆದಿರುವ ಅಂಚೆಯಲ್ಲಿ ಕೆಲವು ಜನರು ನಮ್ಮ ಆಟದ ಮೈದಾನವನ್ನು ಕಬಳಿಸಲು ಯತ್ನಿಸುತ್ತಿದ್ದಾರೆ ಅದೇ ರೀತಿ ಫುಟ್ಬಾಲ್ ಪೋಸ್ಟನ್ನು ಮೈದಾನದಿಂದ ಹೊರಗೆ ಎಸೆದಿದ್ದಾರೆ .ನಮ್ಮ ಆಟದ ಮೈದಾನದಲ್ಲಿ ನಮಗೆ ತೊಂದರೆಯಾಗಲೆಂದೇ ಚಪ್ಪರವನ್ನು ಕಟ್ಟಿದ್ದಾರೆ ಅದೇ ರೀತಿ ಅಲ್ಲಿ ಆಟವಾಡಲು ನಾನಾ ರೀತಿಯ ತೊಂದರೆಯನ್ನು ಅನುಭವಿಸಿದ್ದೇವೆ. ಅದರಿಂದಾಗಿ ನಮ್ಮ ಆಟದ ಮೈದಾನವನ್ನು ರಕ್ಷಿಸಬೇಕೆಂದು ವಿನಯಪೂರ್ವಕವಾಗಿ ವಿನಂತಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಅಂಚೆಯಲ್ಲಿ ಉಲ್ಲೇಖಿಸಿದ್ದಾರೆ.
ಎಸ್.ಐ. ಓ ದ.ಕ. ಜಿಲ್ಲಾ ನಿಯೋಗ ಭೇಟಿ:
ವಿದ್ಯಾರ್ಥಿಗಳ ಈ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಓ) ದ.ಕ. ಜಿಲ್ಲಾ ಘಟಕವು, ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿತು.
ಈ ಸಂದರ್ಭದಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಎಸ್.ಐ.ಓ ಕ್ಯಾಂಪಸ್ ಕಾರ್ಯದರ್ಶಿ ಅಫ್ನಾನ್ ಹಸನ್, ವಿದ್ಯಾರ್ಥಿಗಳ ಮೂಲಭೂತ ಹಕ್ಕಾಗಿರುವ ಆಟದ ಮೈದಾನವನ್ನು ಕಬಳಿಸಲು ನೋಡುತ್ತಿರುವುದು ದುರದೃಷ್ಟಕರ. ನ್ಯಾಯ ಪರವಾದ ಹೋರಾಟ ನಡೆಸಬೇಕಿದೆ ಎಂದು ತಿಳಿಸಿದರು.
ಈ ಸಂದÀರ್ಭದಲ್ಲಿ ಮಾತನಾಡಿದ ಎಸ್.ಐ.ಓ ಜಿಲ್ಲಾ ಅಧ್ಯಕ್ಷ ತಲ್ಹಾ ಇಸ್ಮಾಯಿಲ್, ವಿದ್ಯಾರ್ಥಿಗಳ ಅಭಿವೃದ್ಧಿಯಿಂದಲೇ ಊರಿನ ಅಭಿವೃದ್ಧಿ. ಏಕೆಂದರೆ ವಿದ್ಯಾರ್ಥಿಗಳೇ ಊರಿನ ಭವಿಷ್ಯ. ಈ ಹೋರಾಟ ಕೇವಲ ವಿದ್ಯಾರ್ಥಿಗಳದ್ದು ಮಾತ್ರವಲ್ಲ ಊರಿನ ಸಮಸ್ತ ನಾಗರಿಕರ ಹೋರಾಟವಾಗಿರುವುದರಿಂದ ಎಲ್ಲರೂ ಕೈ ಜೋಡಿಸಬೇಕಾಗಿರುವುದು ಅನಿವಾರ್ಯ. ನನಗೆ ಇದು ಕಾನೂನು ಹೋರಾಟ. ಶಿಕ್ಷಣ ಹಕ್ಕು ಕಾಯ್ದೆಯೂ ಅತೀ ಸ್ಪಷ್ಟವಾಗಿ ಶಾಲೆಗಳಿಗೆ ಆಟದ ಮೈದಾನ ಇರಬೇಕಾಗಿರುವುದು ಅವಶ್ಯವಾಗಿದೆ ಹಾಗಿರುವಾಗ ಜನ ಪ್ರತಿನಿಧಿಗಳಾಗಿರುವ ಎಮ್.ಎಲ್.ಎ ಗಳು ಮುಂದೆ ಬಂದು ಊರಿನ ಹಿತ ದೃಷ್ಟಿಯಿಂದ ವಿದ್ಯಾರ್ಥಿಗಳಿಗಾಗಿ ಉತ್ತಮ ರೀತಿಯ ಆಟದ ಮೈದಾನವನ್ನು ನಿರ್ಮಿಸಬೇಕಾಗಿದೆ. ಇಲ್ಲವಾದಲ್ಲಿ ವಿದ್ಯಾರ್ಥಿಗಳ ಈ ಹೋರಾಟವು ಮುಂದುವರಿಯಲಿದೆ ಎಂದರು.
ಈ ಸಂಧರ್ಭದಲ್ಲಿ ಎಸ್.ಐ.ಓ ಬೆಂಗರೆಯ ಕಾರ್ಯದರ್ಶಿಗಳಾದ ತಿಹಾನ್ ಬೆಂಗರೆ, ಇಮ್ರಾನ್ ಬೆಂಗರೆ, ಪಿ.ಟಿ.ಎ ಸದಸ್ಯರು ಮತ್ತಿತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here