ಲೇಖಕರು : ತೇಜ ರಾಮ್

ಪೋಷಕರು ಮತ್ತು ಮುಖ್ಯ ಶಿಕ್ಷಕರು ಜೈಲಿನಲ್ಲಿರುವ ಸಮಯದಲ್ಲಿ 60ಕ್ಕೂ ಹೆಚ್ಚು ಅಪ್ರಾಪ್ತ ವಿದ್ಯಾರ್ಥಿಗಳನ್ನು ಪೋಲಿಸರು ಪ್ರಶ್ನಿಸಿದ್ದಾರೆ. ಸಿ.ಎ.ಎ. ವಿರೋಧಿ ನಾಟಕವನ್ನು ನಡೆಸಿದ್ದಕ್ಕಾಗಿ ಶಾಲೆಯ ವಿರುದ್ಧ ದಾಖಲಾದ ದೇಶದ್ರೋಹ ಪ್ರಕರಣಕ್ಕೆ ಸಂಬಂದಿಸಿದಂತೆ ಶಾಹಿನ್ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳನ್ನು ಪ್ರಶ್ನಿಸಿದ್ದಾರೆ. ಮುಖ್ಯೋಪಾಧ್ಯಾಯಿನಿ ಫರೀದಾ ಬೇಗಂ ಮತ್ತು ನಾಟಕದಲ್ಲಿ ಭಾಗವಹಿಸಿದ ವಿದ್ಯಾರ್ಥಿಯ ತಾಯಿಯನ್ನು ಜನವರಿ 30ರಂದು ದೇಶದ್ರೋಹ ಸೇರಿದಂತೆ ಐಪಿಸಿಯ ಹಲವಾರು ಸೆಕ್ಷನ್‍ಗಳಡಿಯಲ್ಲಿ ಬಂಧಿಸಲಾಯಿತು.
ಡಿವೈಎಸ್ಪಿ ಬಸವೇಶ್ವರ ಹಿರಾ ಮತ್ತು ಇತರ ಇಬ್ಬರು ಪೋಲಿಸ್ ಅಧಿಕಾರಿಗಳು 9 ರಿಂದ 12 ವರ್ಷದೊಳಗಿನ ಮಕ್ಕಳನ್ನು ಪ್ರಶ್ನಿಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪ್ರಾರಂಭಿಸಿದರು ಮತ್ತು 4 ಘಂಟೆಗೆ ವಿಚಾರಣೆಯನ್ನು ಮುಗಿಸಿದರು ಎಂದು ಶಾಲೆಯ ಮುಖ್ಯಸ್ಥ ತೌಸೀಫ್ ಮಡಿಕೇರಿಯವರು ಮಾಧ್ಯಮಕ್ಕೆ ತಿಳಿಸಿದರು. ಮಕ್ಕಳು ನಾಟಕವನ್ನು ನೋಡಿರುತ್ತಾರೆಯೇ ಮತ್ತು ಶಾಲೆಯು NRC-CAA ಬಗ್ಗೆ ಸುಳ್ಳು ಹರಡುತ್ತಿದೆಯೇ ಎಂಬ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಲಾಯಿತು ಎಂದು ತೌಸೀಫ್‍ರವರು ಹೇಳಿರುತ್ತಾರೆ. ಪ್ರಧಾನಿ ಮೋದಿಯವರ ವಿರುದ್ಧ ಹೇಳಿಕೆ ನೀಡುವಂತೆ ಶಾಲೆಯು ವಿದ್ಯಾರ್ಥಿಗಳಿಗೆ ಕಲಿಸಿದೆಯೇ ಅಥವಾ ಒತ್ತಾಯಿಸಿದೆಯೇ ಎಂದು ಪೋಷಕರು ಕೇಳಿದ್ದಾರೆ ಮತ್ತು ವಿದ್ಯಾರ್ಥಿಗಳು ಅವರಿಗೆ ತಿಳಿದ ಉತ್ತರಗಳನ್ನು ನೀಡಿದ್ದಾರೆ ಎಂದು ತೌಸೀಫ್‍ರವರು ಹೇಳುತ್ತಾರೆ.
ABVP ಸದಸ್ಯ ನಿತೀಶ್ ರಕ್ಷಲಾ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಜನವರಿ 26ರಂದು ಶಾಲೆಯ ವಿರುದ್ಧ ಎಫ್‍ಐಆರ್ ದಾಖಲಾಯಿತು. ಹಾಗೆಯೇ ಇಬ್ಬರು ಮಹಿಳೆಯರನ್ನು ಜನವರಿ 30ರಂದು ಬಂಧಿಸಲಾಗಿದ್ದು ಜನವರಿ 31ರಂದು ರಿಮಾಂಡ್‍ಗೆ ಅರ್ಜಿ ಸಲ್ಲಿಸಲಾಗಿದೆ. ರಿಮಾಂಡ್ ಅರ್ಜಿಯಲ್ಲಿ ಪೋಷಕರಾದ ರಜ್ಬುನ್ನೀಸ ಮತ್ತು ಮುಖ್ಯೋಪಾಧ್ಯಾಯಿನಿ ಫರೀದಾ ಬೇಗಂ ವಿರುದ್ಧ ಭಾರತದ ದಂಡ ಸಂಹಿತೆಯ ಸೆಕ್ಷನ್ 124ಎ (ದೇಶದ್ರೋಹ) ಅಡಿಯಲ್ಲಿ ಸೆಕ್ಷನ್ 504 (ಶಾಂತಿಯ ಉಲ್ಲಂಘನೆಯನ್ನು ಉಂಟುಮಾಡುವ ಉದ್ದೇಶದಿಂದ ಉದ್ದೇಶ ಪೂರ್ವಕ ಅವಮಾನ) 505(2) ವಿವಿಧ ವರ್ಗಗಳ ನಡುವೆ ಶತ್ರುತ್ವ, ಕೆಟ್ಟ ಭಾವನೆ ಮತ್ತು ಧ್ವೇಷವನ್ನು ಉಂಟು ಮಾಡುವ ಅಥವಾ ಉತ್ತೇಜಿಸುವಂತಹ ಹೇಳಿಕೆಗಳು) 153ಎ (ಅಶಾಂತಿಯನ್ನು ಉತ್ತೇಜಿಸುವುದು, ಅದಕ್ಕಾಗಿ ಪ್ರಯತ್ನಿಸುವುದು) ಮತ್ತು ಸೆಕ್ಷನ್ 34 (ಸಾಮಾನ್ಯ ಉದ್ದೇಶ)ಗಳು ದಾಖಲಾಗಿರುತ್ತದೆ.

ಶಾಲೆ ಮತ್ತು ಮಹಿಳೆಯರಿಬ್ಬರು “ಸಿಎಎ ಮತ್ತು ಎನ್‍ಆರ್‍ಸಿ ಬಗ್ಗೆ ಸುಳ್ಳು ಮಾಹಿತಿ ಹರಡಲು ಪ್ರಯತ್ನಿಸುತ್ತಿದ್ದಾರೆ” ಮತ್ತು ಅಪ್ರಾಪ್ತ ವಯಸ್ಕ ಮಕ್ಕಳಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಚಪ್ಪಲಿಯಿಂದ ಒಡೆಯಬೇಕು ಎಂದು ಹೇಳುವಂತೆ ಮಾಡಿದ್ದಾರೆ” ಎಂದು ಪೋಲಿಸರು ಆರೋಪಿಸಿದ್ದಾರೆ. ಜನವರಿ 26ರ ನಂತರ ಈ ನಾಟಕದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ರಿಮಾಂಡ್ ಅರ್ಜಿಯ ಪ್ರಕಾರ, “ಮನೆಯಲ್ಲಿ ನಾಟಕಕ್ಕಾಗಿ ಸಾಲುಗಳನ್ನು ಅಭ್ಯಾಸ ಮಾಡುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹೇಳಿಕೆ ನೀಡುವಂತೆ ತಾಯಿ ನಜ್ಬುನ್ನೀಸ ಹೇಳಿದ್ದಾರೆ ಎಂದು ಪೋಲಿಸರ ಪ್ರಶ್ನೆಗೆ ವಿದ್ಯಾರ್ಥಿಯು ಉತ್ತರಿಸುತ್ತಾಳೆ ಎಂದು ಈ ಅರ್ಜಿಯು ತಿಳಿಸುತ್ತದೆ.
ಆದರೆ ಶಾಲೆಯು ಇದನ್ನು ನಿರಾಕರಿಸಿದೆ ಮತ್ತು ಸಾಲನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಅದರಲ್ಲಿ ಪ್ರಧಾನಿಯನ್ನು ಗುರಿಯಾಗಿರಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಮಗುವು ಪೂರ್ವ ಸಿದ್ಧತೆ ಇಲ್ಲದೆ ಈ ಸಾಲನ್ನು ಸೇರಿಸಿಕೊಂಡಿದ್ದಾಳೆ ಎಂದು ಅವರು ಹೇಳಿದ್ದಾರೆ. ಶನಿವಾರ, ಎಐಎಂ ನಾಯಕ ಅಸಾದುದ್ದೀನ್ ಓವೈಸಿಯವರು ಜೈಲಿನಲ್ಲಿರುವ ಮಹಿಳೆಯರನ್ನು ಭೇಟಿಯಾದರು. ಅವರು ಭಯಭೀತರಾಗಿದ್ದಾರೆ ಮತ್ತು ಅವರಿಗೆ ನ್ಯಾಯಾಲಯವು ಜಾಮೀನು ನೀಡುತ್ತದೆ ಎಂದು ಆಶಿಸುತ್ತಿದ್ದಾರೆ ಎಂದು ಮಾಧ್ಯಮದೊಂದಿಗೆ ಹೇಳಿದ್ದಾರೆ.
ನಜ್ಬುನ್ನೀಸರವರು ವಿಧವೆಯಾಗಿದ್ದು ಅವರ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದು ಓವೈಸಿ ಹೇಳಿದ್ದಾರೆ.

ಕೃಪೆ : ದಿ ನ್ಯೂಸ್ ಮಿನಿಟ್ ಅನುವಾದ : ಸುಹಾನ ಸಫರ್

LEAVE A REPLY

Please enter your comment!
Please enter your name here