ಲೇಖಕರು: ಮೌ.ವಹೀದುದ್ದಿನ್ ಖಾನ್
ಅನುವಾದ: ತಲ್ಹಾ ಕೆ.ಪಿ

ಒಂದು ದಿನ ಒಬ್ಬ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಸುತ್ತಿದ್ದೆ. ಇಪ್ಪತ್ತು ವಷಗಳ ಹಿಂದೆ ಆತ ಒಬ್ಬ ಸಾಮಾನ್ಯ ಮೆಕಾನಿಕ್ ಆಗಿದ್ದನು.ಈಗ ಆತ ಸುಮಾರು ಎರಡು ಡಜನ್ ಯಂತ್ರಗಳ ಮಲಕನಾಗಿದ್ದಾನೆ. ಆತ ಬಹಳಷ್ಟು ಕಾರ್ಖಾನೆಗಳನ್ನು ನಡೆಸುತ್ತಿದ್ದಾನೆ.ನಾನು ಒಮ್ಮೆ ಆತನನ್ನು ಭೇಟಿಯಾದಾಗ ನೀನು ವ್ಯಾಪಾರದಲ್ಲಿ ಬಹಳಾ ವಿಕಾಸ ಹೊಂದಿದ್ದಿ ಎಂದೆ, ಆತ ಸಂತೋಷ ಮತ್ತು ಭರವಸೆಯೊಂದಿಗೆ, ಈಗ ನಾನು ಸಂಪಾದಿಸಿರುವುದು, ನನ್ನ ಮಕ್ಕಳು ದುಡಿಯದಿದ್ದರೂ ನೂರು ವರ್ಷ ಆರಾಮವಾಗಿ ತಿನ್ನುತ್ತಾರೆ.

ಇದು ಒಂದು ಉದಾಹರಣೆ, ಆದರೆ ಈಗಿನ ಕಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಅವಸ್ಥೆಯು ಇದೇ ಆಗಿದೆ. ಪ್ರತಿಯೊಬ್ಬನು ತನ್ನ ವರ್ತುಲದಲ್ಲಿ ತನ್ನ ವ್ಯವಹಾರವನ್ನು ಸುದೃಢ ಪಡಿಸಿದ್ದಾನೆಂಬ ಭರವಸೆಯಲ್ಲಿರುತ್ತಾನೆ. ಈಗ ಅವನಿಗೆ ಯಾವುದೇ ಆಪತ್ತು ಇಲ್ಲ. ಕನಿಷ್ಠ ಪಕ್ಷ ”ನೂರು ವರ್ಷಗಳವರೆಗೆ” ಖಂಡಿತ ಇಲ್ಲ. ಒಬ್ಬನು ತನ್ನ ಹಿರಿಯರನ್ನು ಖುಷಿಪಡಿಸಿ ಸಂತೃಪ್ತನಾಗುತ್ತಾನೆ.ಒಬ್ಬ ತಾನು ಕಾನೂನಿನ ಕಾಗದವನ್ನು ದೃಢಪಡಿಸಿದ್ದಾನೆಂದು ಹೆಮ್ಮೆ ಪಡುತ್ತಾನೆ.

ಕೆಲವರಿಗೆ ತನ್ನ ಶಕ್ತಿ ಮತ್ತು ತೋಳ್ಬಲದ ಮೇಲೆ ನಂಬಿಕೆ ಇದ್ದರೆ, ಇನ್ನೂ ಕೆಲವರಿಗೆ ತನ್ನ ಗುಂಡಾಗಿರಿಯ ಮೇಲೆ ಭರವಸೆ ಇರುತ್ತದೆ.ಏನ್ನೂ ಇಲ್ಲದವನು ಇದ್ದವನೊಂದಿಗೆ ವ್ಯವಹಾರ ಸಂಭಂದವನ್ನು ಸ್ಥಾಪಿಸಿ ತನಗೂ ಒಂದು ಕೊಡೆ ಸಿಕ್ಕಿದೆ ಮತ್ತು ಈಗ ತನಗೇನು ಆಗಲಾರದು ಎಂದು ಭಾವಿಸುತ್ತಾನೆ. ಆದರೆ ಭೂಕಂಪ ಸಂಭವಿಸಿದರೆ ಅದು ಈ ರೀತಿಯ ಎಲ್ಲ ಭರವಸೆಗಳನ್ನು ಸುಳ್ಳೆಂದು ಸಾಬೀತು ಪಡಿಸುತ್ತದೆ. ಭೂಕಂಪಕ್ಕೆ ಸುದೃಢವಾದ ಅರಮನೆ ಮತ್ತು ಗುಡಿಸಲಿನಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಬಲಿಷ್ಠ ಮತ್ತು ಬಲಹೀನ ಅದಕ್ಕೆ ಸಮಾನ. ಅದು ನಿಸ್ಸಹಾಯಕರನ್ನು ಯಾವರೀತಿ ಬಲಹೀನ ಗೊಳಿಸುತ್ತದೆ ಅದೇ ರೀತಿ ಗಟ್ಟಿ ಆಧಾರ ಹೊಂದಿರುವುದನ್ನು ಸರ್ವನಾಶಗೊಳಿಸುತ್ತದೆ. ಭೂಕಂಪವು ಮನುಷ್ಯನನ್ನು ಯಾವರೀತಿ ಈ ಲೋಕದಲ್ಲಿ ಬಲಹೀನನಾಗಿದ್ದಾನೆಬುದನ್ನು ನೆನಪಿಸುತ್ತದೆ.

ಈ ಭೂಕಂಪವು ದೇವಾನು ಮುಂಗಡವಾಗಿ ತೋರಿಸುವಂತಹ ಒಂದು ಗುರುತಾಗಿದೆ. ಅದು ಪ್ರತಿಯೋರ್ವನಿಗೂ ಏನು ಸಂಭವಿಸಲಿದೆ ಎಂಬುವುದನ್ನು ತೋರಿಸುತ್ತದೆ. ಭೂಕಂಪವು ಒಂದು ರಿತ್ತಿಯ ಚಿಕ್ಕದಾದ ಖಿಯಾಮತ್ (ಮುಸ್ಲಿಮರ ನಂಬಿಕೆಯ ಪ್ರಕಾರ ಪ್ರಳಯಕಾಲದಲ್ಲಿ ಮೃತರ ಜೀವಂತವಾಗಿ ಎದ್ದು ನಿಲ್ಲುತ್ತಾರೆ) ಆಗಿದೆ. ಅದು ಭಯಂಕರವಾದ ಖಿಯಾಮತ್ತನ್ನು ನಿನಪಿಸುತ್ತದೆ.ಭಯಾನಕ ಶಬ್ದಗಳಿಂದ ಜನರು ದಿಗ್ಭ್ರಮೆಗೊಳ್ಳುತ್ತಾರೆ. ಮನೆ ಕಡ್ಡದಾಗಲೂ ಸ್ಪೀಟು ಕಾರ್ಡಿನಂತೆ ಬೀಳಲಾರಂಭಿಸುತ್ತದೆ.ಭೂಮಿಯ ಕೆಳ ಭಾಗವು ಮೇಲೆ ಬರುತ್ತದೆ ಮತ್ತು ಮೇಲಿನ ಭಾಗವು ಕೆಳಗೆ ದಫನವಾಗುತ್ತದೆ.ಆಗ ಮನುಷ್ಯನು ತಾನು ಪ್ರಕೃತಿಯ ಮುಂದೆ ಸಂಪೂರ್ಣ ಬಲಹೀನನೆಂದು ತಿಳಿದುಕೊಳ್ಳುತ್ತಾನೆ.ಆತನ ವಿಧಿಯು ನಿಸ್ಸಹಾಯಕವಾಗಿ ತನ್ನ ವಿನಾಶದ ತಮಾಷೆಯನ್ನು ಮೂಕ ಪ್ರೇಕ್ಷಕನಂತೆ ನೋಡುವುದಲ್ಲದೆ ಅದರ ವಿರುದ್ಧವಾಗಿ ಏನೂ ಮಾಡಲಾರನು.

ಕಿಯಮತ್ತಿನ ಪ್ರಳಯವು ಪ್ರಸಕ್ತ ಭೂಕಂಪಕ್ಕಿಂತ ಸಾವಿರಾರು ಪಟ್ಟು ಹೆಚ್ಚು ಖಠಿಣವಾಗಿರುತ್ತದೆ. ಆ ಸಮಯದಲ್ಲಿ ಎಲ್ಲ ನಿರೀಕ್ಷೆಗಳು ಮುಗಿದು ಹೋಗುವುದು, ಎಲ್ಲ ವ್ಯಕ್ತಿಯು ತನ್ನ ಬುದ್ಧಿವಂತಿಕೆಯನ್ನು ಮರೆತು ಬಿಡುವನು.ಎತ್ತರಕೇರುವ ಎಲ್ಲ ಮೆಟ್ಟಲುಗಳು ಸರ್ವನಾಶವಾಗಿಬಿಡುತ್ತದೆ. ಅಂದು ಪ್ರಸಕ್ತ ವಸ್ತುಗಳನ್ನು ಬಲವೆಂದು ಭಾವಿಸುವವನು ಬಲವಂತನಾಗುವನು. ಆ ದಿನ ದೇವನನ್ನು ಮರೆತು ಬೇರೆ ಬೇರೆ ನೆರೆಳುಗಳನ್ನು ಆಶ್ರಯಿಸುವಾಗ ದೇವನನ್ನು ನಂಬಿದವನೇ ವಿಜಯಿಯಾಗುವನು.

LEAVE A REPLY

Please enter your comment!
Please enter your name here