ಪುಸ್ತಕ ವಿಮರ್ಶೆ
ಲೇಖಕರು:- ರವಿ ನವಲಹಳ್ಳಿ (ವಿದ್ಯಾರ್ಥಿ)
“ಬಂಡಾಯದ ತೀರ್ಪು ಅರ್ಥಾತ್ ಧನಿಕನ ಸೊಕ್ಕಿಗೆ ತಕ್ಕ ಶಿಕ್ಷೆ ” ಎಂಬ ಕ್ರಾಂತಿಕಾರಿ ಸಾಮಾಜಿಕ ನಾಟಕವನ್ನು ನನ್ನ ಆತ್ಮೀಯ ಮತ್ತು ಪ್ರೀತಿಯ ಶಂಕರ ವಾಲಿಕಾರ ಗುರುಗಳು ರಚಿಸಿದ್ದಾರೆ. ಇವರ ಚೊಚ್ಚಲ ಕೃತಿಯೇ ಕರ್ನಾಟಕ ಸಾರ್ಕಾರದಿಂದ ಧನ ಸಹಾಯ ಪಡೆದ ಕೃತಿಯಾಗಿರುವುದು ಹೆಮ್ಮೆಯ ಸಂಗತಿ.
ಜಾತ್ಯತೀತ ದೃಷ್ಟಿಕೋನಗಳ ಚೌಕಟ್ಟಿನಲ್ಲಿ ನಡೆಯುವ ಕೆಲವೊಂದು ಅಂಶಗಳನ್ನು ಕುರಿತು ರಚಿತವಾದ ಈ ನಾಟಕವು ನಿಜಕ್ಕೂ ಹಲವರಿಗೆ ತಿಳಿ ಹೇಳುವಂತಿದೆ. ಧನಿಕರೆಂಬ ಸೊಕ್ಕಿನಲ್ಲಿಯೂ ಮತ್ತು ಅಧಿಕಾರ, ಉನ್ನತ ಜಾತಿಯಲ್ಲಿ ಜನಿಸಿದ್ದೆನೆಂಬ ಅಹಂನಿಂದಲೂ ಕೆಲವರು ನಡೆಸುವ ದೌರ್ಜನ್ಯವನ್ನು ಇಲ್ಲಿ ಅರ್ಥವತ್ತಾಗಿ ಚಿತ್ರಿಸಿದ್ದಾರೆ. ಹಣವಿದ್ದರೆ ಏನನ್ನು ಬೇಕಾದರೂ ಮಾಡಬಹುದೆಂಬ ಅರಿವು ಇಂದಿಗೆ ಸರ್ವೇ ಸಾಮಾನ್ಯವಾಗಿದೆ. “ದುಡ್ಡೇ ದೊಡ್ಡಪ್ಪ” ಎಂಬ ನಾಣ್ನುಡಿಗೆ ತಕ್ಕಂತೆ ದೇಶವು ಬದಲಾಗಿರುವುದು ಶೋಚನೀಯ. ಹಗಲು-ರಾತ್ರಿ ಎನ್ನದೇ ಬಿಡುವಿಲ್ಲದೇ ಶ್ರಮಿಸುವವರಿಗೆ ಇಲ್ಲಿ ಮಾನ್ಯತೆ ದೊರೆತಿಲ್ಲ. ಹಣದ ಆಮಿಷವನ್ನು ಒಡ್ಡಿ ಎಲ್ಲವನ್ನು ಖರೀದಿಸುವವರಿಗೆ ಅದು ಸ್ವತ್ತಾಗಿ ಮಾರ್ಪಡಾಗುತ್ತಿದೆ ಎಂಬುದನ್ನು ಸುಂದರವಾಗಿ ಈ ನಾಟಕದಲ್ಲಿ ರೂಪುಗೊಂಡಿರುವುದನ್ನು ನಾವಿಲ್ಲಿ ಕಾಣಬಹುದು. ಶಂಕರ ವಾಲಿಕಾರ ಗುರುಗಳ “ಬಂಡಾಯದ ತೀರ್ಪು”ಯ ಬಗೆಗೆ ಬರೆಯಲು ನನಗಿರಬಹುದಾದ ಏಕೈಕ ಅರ್ಹತೆಯೆಂದರೆ ನಾನು ಒಬ್ಬ ಸಹೃದಯ ಶಿಷ್ಯನಾಗಿ ಅವರ ರಚನೆಗಳ ಬಗೆಗೆ ಆರೋಗ್ಯಕರವಾದ ಚರ್ಚೆಯಲ್ಲಿ ತೊಡಗುತ್ತಿದ್ದುದು ಮತ್ತು ಅವರ ಈವರೆಗಿನ ಬರಹಗಳನ್ನೆಲ್ಲಾ ಕುತೂಹಲದಿಂದ ಗಮನಿಸುತ್ತಾ ಬಂದಿರುವುದು. ಈ ನಾಟಕವನ್ನು ಪ್ರವೇಶಿಸಿದಾಗ ಸಹೃದಯಗಳು ತಮ್ಮ ತಮ್ಮ ಊರುಗಳು ಅಲ್ಲಿನ ಪರಿಸ್ಥಿತಿಗಳ ಜೊತೆಗೆ ಮುಖಾಮುಖಿಯಾಗುವುದು ತಮ್ಮನ್ನು ತಾವು ಕಂಡುಕೊಂಡಂತೆ ಭಾಸವಾಗುತ್ತದೆ.
ತಲೆಮಾರುಗಳಿಂದಲೂ ತಮ್ಮ ಜಾತಿ, ಸಿರಿವಂತಿಕೆಗಳ ನೆಪಗಳನ್ನೊಡ್ಡಿ ಬಡಜನರನ್ನು ಆಳ್ವಿಕೆ ನಡೆಸುವುದು ಕೆಲವೊಂದು ಹಳ್ಳಿಗಳಲ್ಲಿ ಇಂದಿಗೂ ಸಹ ನಡೆಯುತ್ತಿದೆ. ಅಲ್ಲಿ ಅವರು ಹೇಳುವುದೇ ವೇದ ವಾಕ್ಯ, ಅವರ ನಡವಳಿಕೆಯೇ ಕಾನೂನು. ಅದನ್ನು ವಿರೋಧಿಸಿ ನಿಲ್ಲುವವರು ದ್ರೋಹಿಗಳು ಎಂಬ ಬಿರುದಿಗೆ ಒಡೆಯರಾಗಬೇಕಾಗುತ್ತದೆ. ಇಲ್ಲವೇ ಆ ವಿರೋಧಿಯನ್ನು ನೆಲಸಮ ಮಾಡುವುದೇ ಆ ಧನಿಕನ ಮುಖ್ಯ ಉದ್ದೇಶವಾಗಿರುವುದು. ಇಂತಹ ಅನೇಕ ವಿಷಯಗಳನ್ನು ಒಳಗೊಂಡಿದೆ ಈ ನಾಟಕ.
ಬರೀ ದಬ್ಬಾಳಿಕೆ, ಬಂಡಾಯದ ತಿರುಳನ್ನು ಮಾತ್ರ ಒಳಗೊಂಡಿರದೇ, ಹಾಸ್ಯ, ಪ್ರೇಮ ಪ್ರಸಂಗಗಳು, ದೈವಿಕ ಚಿಂತನೆ, ಸ್ವಾಭಿಮಾನದ ವಿಷಯಗಳು, ನೋವು, ವ್ಯಥೆ ಎಲ್ಲವನ್ನು ಒಟ್ಟಿಗೆ ಹಿಡಿದಿಟ್ಟು ಕೊಂಡಿದೆ. ವ್ಯಕ್ತಿತ್ವ ಎಂಬುದು ಅನೇಕ ಶಕ್ತಿಗಳ ಸಂಗಮವೆಂದೇ ಅರಿತಿರುವ ಶಿವ ಮತ್ತು ಶಕ್ತಿಯೆಂಬ ಪಾತ್ರಗಳ ಒಳಗೆ ಇರುವ ಆದರ್ಶ, ಸದಾಚಾರ, ಶ್ರದ್ಧೆ, ನಿಷ್ಠೆ, ದಕ್ಷತೆ, ಎಚ್ಚರ ಮತ್ತು ಸನ್ನಿವೇಶಗಳೊಡನೆ ಹೊಂದಿಕೊಳ್ಳುವ ಸಾಮರ್ಥ್ಯ, ವೃತ್ತಿಪ್ರಿಯತೆ, ಪರೋಪಕಾರ ಬುದ್ಧಿ, ಪ್ರಾಮಾಣಿಕತೆಯ ಗುಣಗಳೆಲ್ಲವು ಸೇರಿ ಧನಿಕರಾದವರಿಗೆ ಚುಚ್ಚುವ ಮುಳ್ಳಿನ ಕಿರೀಟದಂತಾದರು. ಈ ನಿಟ್ಟಿನಲ್ಲಿ ನೋಡಿದಾಗ ನಾಯಕನು ತನ್ನ ಜೀವನವನ್ನೇ ಪಣಕ್ಕಿಟ್ಟು ಧನಿಕ ಮಹಾಶಯರ ವಿರುದ್ದ ಬಂಡಾಯಕ್ಕೆ ಸಿದ್ದನಾಗುತ್ತಾನೆ. ಹೂವಿಗೆ ಪರಿಮಳವಿರುವಂತೆ ಧನಿಕರಿಗೆ ಗತ್ತು ಮುಖ್ಯವೆಂಬ ಭಾವನೆಗೆ ಒಳಪಟ್ಟಿದ್ದ ಧನಿಕರ ಕುಟುಂಬಕ್ಕೆ ಮರಣ ದಂಡನೆಯನ್ನು ವಿಧಿಸಿ ಬಿಡುತ್ತಾನೆ. ಪ್ರತಿಯೊಬ್ಬರ ಜೀವನದ ಒಳಿತು-ಕೆಡಕುಗಳಿಗೆ ಅವರೇ ಶಿಲ್ಪಿಗಳಾಗಿರುತ್ತಾರೆ. ಮನುಷ್ಯ ತನ್ನ ಜೀವನವನ್ನು ತನ್ನಿಷ್ಟದಂತೆ ರೂಪಿಸಿಕೊಳ್ಳುತ್ತಾನೆ, ಅಂದರೆ ತನ್ನೆಲ್ಲ ಆಲೋಚನೆಗಳ ವಸ್ತುರೂಪವೇ ಮಾನವನಾಗಿರುತ್ತಾನೆ.
ಬಡವರಿಗೆ ಸ್ವಾಭಿಮಾನವೆಂಬುದು ಹುಟ್ಟಿನಿಂದ ಸಾವಿನವರೆಗೆ ರೂಪುಗೊಳ್ಳುತ್ತಿರುತ್ತದೆ. ಆದರೆ ಧನವಂತರಾದ ಕ್ರೂರಿ ಧನಿಕನಿಗೆ ಅವನ ಅಹಂಕಾರವೇ ಅವನ ಮೈ ತುಂಬಾ ವಿಷದಂತೆ ತುಂಬಿ ತುಳುಕುತ್ತಿರುತ್ತದೆ. ಅನೇಕರು ಅವರ ವಿರುದ್ಧ ಹೋರಾಡಲು ಸಾಧ್ಯವಿಲ್ಲದೇ ಕೈ ಕಟ್ಟಿ ಕೆಲಸ ಮಾಡಲು ಸಿದ್ದರಾಗುತ್ತಾರೆ. ಇನ್ನು ಕೆಲವರು ಅವರನ್ನು ಎದುರಿಸಿ ನಿಂತು, ಅದರಲ್ಲಿ ಸೋತು ನಿಗೂಢ ರೀತಿಯಲ್ಲಿ ಮರಣವನ್ನು ಕೊಡುಗೆಯಾಗಿ ಪಡೆಯುತ್ತಾರೆ. ಅಪರೂಪಕ್ಕೆ ಮಾತ್ರವೇ ಅನೇಕ ಅಡಚಣೆಗಳನ್ನು ದಾಟಿ ನಿಂತು ಆ ಧನಿಕನ ಸೊಕ್ಕಿಗೆ ತಕ್ಕ ಶಿಕ್ಷೆಯನ್ನು ನೀಡುತ್ತಾರೆ. ನಮ್ಮ ಶಕ್ತಿಯಂತೆ.
ಗಾಂಧಿಜೀಯವರ ಕಾಲದಿಂದ ಹಿಡಿದು ಇಂದಿನವರೆಗೂ ಉಳ್ಳವರು ಬಡ ಜನರ ಮೇಲೆ ದಬ್ಬಾಳಿಕಯನ್ನು ನಡೆಸುತ್ತಲೇ ಬಂದಿದ್ದಾರೆ. ಹಣ, ಆಸ್ತಿ, ಉನ್ನತ ಜಾತಿಯಲ್ಲಿ ಎಂದೆಲ್ಲಾ ಹೇಳಿ ಬಡ ದಲಿತ ವರ್ಗ ಜನರನ್ನು ಕಾಡುವುದೇ ಅವರ ಹವ್ಯಸವಾಗಿದೆ… ಇಂಥದನ್ನು ವಿರೋಧಿಸುವಂತ ಈ ನಾಟಕ ಅನೇಕ ಜನರ ಮನಸ್ಸನ್ನು ಗೆಲ್ಲುವುದರಲ್ಲಿ ಸಂಶಯವಿಲ್ಲ.
ಈ ನಾಟಕವು ಓದುಗರನ್ನು 1970 ಮತ್ತು 1980ರ ಕಾಲಘಟ್ಟಕ್ಕೆ ಕರೆದ್ಯೊಯ್ಯುವುದರಲ್ಲಿ ಸಂಶಯವಿಲ್ಲ. ಹತ್ತು ರೀತಿಯ ವೇಷಗಳನ್ನು ತೊಟ್ಟರು ತಮ್ಮ ವ್ಯಕ್ತಿತ್ವವನ್ನು ತೆರೆದು ಬಿಸಿಲಿಗೆ ಒಣಗಹಾಕುವ ಪಾತ್ರಗಳು ಸಮಾಜಕ್ಕೆ ಬೇಕಾದ ಪ್ರೇತಕವಾಗುವ ದೃಶ್ಯಾವಳಿಗಳು ಭಾಷೆ-ಹೀಗೆ ನಾಟಕದ ರಚನಾ ಕೌಶಲ್ಯ ಅದ್ಭುತವಾಗಿದೇ ಮತ್ತು ಹೀಗೆ ನಮ್ಮ ಗುರುಗಳಿಂದ ಹತ್ತಾರು ಕೃತಿಗಳು ಬರಲಿ ಎಂದು ಹಾರೈಸುತ್ತನೆ.
ನಾಟಕ ಪುಟ್ಟದಾಗಿದ್ದರೂ ಪಟ ಪಟನೇ ಓದಿ ಮುಗಿಸಬೇಕೆಂದು ಅನಿಸುತ್ತದೆ. ಆದಕ್ಕಾಗಿ ನೀವು ಓದಿ ಇತರರನ್ನು ಓದಿಸಿ ಮತ್ತು ಇಂತ ಒಂದೋಳ್ಳೆ ಕ್ರಾಂತಿಕಾರಿ ಸಾಮಾಜಿಕ ನಾಟಕ
ಪುಸ್ತಕ ಬೇಕಾದವರು 8748021252 ಗೆ ಸಂಪರ್ಕಿಸಿ.