ಲೇಖಕರು: ತಲ್ಹಾ ಇಸ್ಮಾಯಿಲ್ ಬೆಂಗ್ರೆ

ಕರ್ನಾಟಕ’ದ ಹೆಚ್ಚಿನ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ ದೇಶದ ಸುಪ್ರೀಂ ಕೋರ್ಟ್ ಆದೇಶದ ನಂತರವೂ ಚುನಾವಣೆ ನಡೆಯುತ್ತಿಲ್ಲ, ಆದರೂ ಕೂಡ ವಿದ್ಯಾರ್ಥಿ ಸಂಘದ ಚುನಾವಣೆ ಇಂದಾಗ, ಗಲಾಟೆ ಗದ್ದಲವೇ ಜನರಿಗೆ ಕಾಣುತ್ತದೆ, ಆರೀತಿಯ ಒಂದು ವಿಚಿತ್ರವಾದ ಚಿತ್ರಣವನ್ನು ಮಾಧ್ಯಮಗಳು ಸಮಾಜದಲ್ಲಿ ನಿರ್ಮಿಸಿದೆ. ಅದೇನೇ ಇರಲಿ, ಕೆಲವು ದಿನಗಳಿಂದ ದೇಶದ ಕೆಲವು ಪ್ರಮುಖ ವಿದ್ಯಾಲಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯುತ್ತಿದೆ.
ಹೀಗಿರುವಾಗ DUSU (ದೆಹಲಿ ಯೂನಿವರ್ಸಿಟಿ ಸ್ಟೂಡೆಂಟ್ಸ್ ಯೂನಿಯನ್ ) ಎಲೆಕ್ಷನ್’ಗಿಂತ ಮುಂಚಿತವಾಗಿ DUSU’ನ ಪ್ರಮುಖ ವಿದ್ಯಾರ್ಥಿ ಸಂಘಟನೆಯಾದ AISA’ದ ಚುನಾವಣಾ ಪ್ರಣಾಳಿಕೆ ನನ್ನ ಗಮನ ಸೆಳೆಯಿತು.

“ಪ್ರತಿ ವರ್ಷ DUSU ಚುನಾವಣೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಮತ ಚಲಾಯಿಸುತ್ತಾರೆ. ಆದರೆ ಸಾಮಾನ್ಯ ವಿದ್ಯಾರ್ಥಿಗಳ ಮತಗಳ ಪಾವಿತ್ರ್ಯವು ಉಳಿಯುತ್ತದೆಯೇ? ಅಥವಾ ಇಲ್ಲವೇ? ಎಂಬ ಪ್ರಶ್ನೆಯನ್ನು ಎಲ್ಲಾ ವಿದ್ಯಾರ್ಥಿ ಮತದಾರರು ತಾವು ತಮ್ಮಲ್ಲಿಯೇ ಕೇಳಬೇಕಾಗಿದೆ. ಕಳೆದ ವರ್ಷ ಎಬಿವಿಪಿ’ಯು ವಿಶ್ವವಿದ್ಯಾನಿಲಯವು ನಕಲಿ ಪದವಿಯೊಂದಿಗೆ ಬಂದ ಅಧ್ಯಕ್ಷರಿಗೆ ಮತ ಚಲಾಯಿಸುವಂತೆ ಮಾಡಿತು ಮತ್ತು ಫಲಿತಾಂಶದ ಮರುದಿನವೇ ನಕಲಿ ಪದವಿ ಗಮನಕ್ಕೆ ಬಂದ ನಂತರವೂ, ಎಬಿವಿಪಿ’ಯು ಆತನನ್ನು ಉಳಿಸಲು ತನ್ನ ಅತ್ಯುತ್ತಮ ಪ್ರಯತ್ನ ಮಾಡಿತೇ ಹೊರತು, ವಿಶ್ವವಿದ್ಯಾಲಯದಲ್ಲಿ ಮರುಚುನಾವಣೆ ನಡೆಯದಂತೆ ನೋಡಿಕೊಂಡಿತು .ಎಬಿವಿಪಿ ವಿದ್ಯಾರ್ಥಿಗಳ ಆದೇಶಕ್ಕೆ ಏನು ಮಾಡಿದೆ ಎಂದು ಕ್ಷಮೆಯಾಚಿಸಲಿಲ್ಲ. ಈಗ ಮತ್ತೆ ಚುನಾವಣೆ ಬಂದಿದೆ, ಈ ಸಂಧರ್ಭದಲ್ಲಿ ವಿಧ್ಯರ್ಥಿಗಳಾದ ನಾವು ಮೋಸ ಹೋಗುವುದಿಲ್ಲ ಎಂದು ಹೇಗೆ ಖಾತರಿಪಡಿಸಬಹುದು? ಎಬಿವಿಪಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಅದು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಬಾರದು ಎಂದು ನಾವು ನಂಬುತ್ತೇವೆ.
ಏಕೆಂದರೆ ವಿದ್ಯಾರ್ಥಿಗಳ ಆದೇಶದೊಂದಿಗೆ ಇಂತಹ ವಂಚನೆ ಮಾಡಿದ ಎಬಿವಿಪಿ ಈ ಹುದ್ದೆಗೆ ಅರ್ಹವಲ್ಲ.ಚುನಾವಣೆಗೆ ಹೋಗುತ್ತಿದ್ದಂತೆ, ಎಬಿವಿಪಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಅದು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಬಾರದು ಎಂದು ನಾವು ನಂಬುತ್ತೇವೆ. ವಿದ್ಯಾರ್ಥಿಗಳ ಆದೇಶದೊಂದಿಗೆ ಇಂತಹ ವಂಚನೆ ಮಾಡಿದ ಎಬಿವಿಪಿ ಈ ಹುದ್ದೆಗೆ ಅರ್ಹವಲ್ಲ.
ಕಳೆದ ಕೆಲವು ವರ್ಷಗಳಿಂದ, ಎಬಿವಿಪಿ ಕ್ಯಾಂಪಸ್ನಲ್ಲಿ ನಿರಂತರವಾಗಿ ಭಯದ ಹರಡುತ್ತಿದೆ ಮತ್ತು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಹಿಂಸಾಚಾರದಲ್ಲಿ ತೊಡಗಿದೆ. ಪಠ್ಯಕ್ರಮ ತಯಾರಿಕೆ ಸಮಿತಿಯಲ್ಲಿ ಪ್ರಾಧ್ಯಾಪಕರಿಗೆ ಬೆದರಿಕೆ ಹಾಕುವುದರಿಂದ ಹಿಡಿದು ಕಲಾ ವಿಭಾಗದಲ್ಲಿ ಕಾನೂನುಬಾಹಿರವಾಗಿ ಸಾವರ್ಕರ್ ಪ್ರತಿಮೆಗಳನ್ನು ಸ್ಥಾಪಿಸುವವರೆಗೆ, ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಅಭೂತಪೂರ್ವ ಹಿಂಸಾಚಾರವನ್ನು ನಿರಂತರವಾಗಿ ಆಶ್ರಯಿಸಿದೆ.
(ಐಸಾ ಎಂಬ ವಿಧಾರ್ಥಿ ಸಂಘಟನೆಯ ವಿದ್ಯಾರ್ಥಿ DUSU ಎಲೆಕ್ಷನ್ಸ್ ಮ್ಯಾನಿಫೆಸ್ಟೋ 2019ದ ಪ್ರಾರಂಭಿಕ ಭಾಗ)

ದೆಹಲಿ ವಿಶ್ವವಿದ್ಯಾಲದ ವಿದ್ಯಾರ್ಥಿಗಳ ಕೆಲವು ಪ್ರಮುಖ ಸಮಸ್ಯೆಗಳನ್ನು ಮುಂದಿಟ್ಟುಕೊಂಡು, ತನ್ನ ಪ್ರಣಾಳಿಕೆಯನ್ನು ರಚಿಸಿದೆ, ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಮುದಾಯದವನ್ನು ತನ್ನ ವಿದ್ಯಾರ್ಥಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೇಳಿಕೊಂಡಿತು . ನಿನ್ನೆ ಬಂದ ಫಲಿತಾಂಶದ ಪ್ರಕಾರ DUSU ಸೆಂಟ್ರಲ್ ಪ್ಯಾನಲ್’ನಲ್ಲಿ ಎಬಿವಿಪಿ (3) ಮತ್ತು NSUI (1) ಸೀಟುಗಳನ್ನೂ ಬಾಚಿಕೊಂಡಿದೆ .
ಇನ್ನೊಂದು ಕಡೆ ದೇಶದ ಇನ್ನೊಂದು ಪ್ರತಿಷ್ಠಿತ ವಿಶ್ವವಿದ್ಯಾಲಯವದ JNU’ನಲ್ಲಿ ಚುನಾವಣೆ ನಡೆದಿದೆ, ಎಲ್ಲಾ ನಾಲ್ಕು ಪ್ರಮುಖ ಹುದ್ದೆಗಳಿಗೆ ಲೆಫ್ಟ್ ಯುನಿಟಿ’ಯ ಅಭ್ಯರ್ಥಿಗಳು ಕಳೆದ ವರ್ಷದಂತೆ ಈ ವರ್ಷವೂ ಗೆದ್ದಿದ್ದಾರೆ (ಕೋರ್ಟ್ ಈ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಬಾರದೆಂದು ಹೇಳಿದೆ. ಆದರೆ ನಿನ್ನೆಯ ಮತಗಣನೆಯ ಪ್ರಕಾರ) ಆದರೆ ಕಳೆದ ವರ್ಷಕ್ಕಿಂತ ಈ ವರ್ಷವು ಎಬಿವಿಪಿ’ಯ ಬಲವು ಕೊಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ, ಈ ವರ್ಷದ ಚುನಾವಣೆಯಲ್ಲಿ BAPSA ಮತ್ತು ಫ್ಯಾಟೆರ್ನಿಟಿ ಮೂವಮೆಂಟ್’ನ ಅಧ್ಯಕ್ಷೀಯ ಅಭ್ಯರ್ಥಿ’ಯಾಗಿರು ಜಿತೇಂದ್ರ ಸುನ, ಮತ್ತು ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿ’ಯಾಗಿರುವ ವಾಸೀಮ್ ಆರ್ ಎಸ್, ಉತ್ತಮ ಪೈಪೋಟಿಯನ್ನು ನೀಡಿದ್ದಾರೆ, ಅಲಿಘರ್ ಮುಸ್ಲಿಂ ಯೂನಿವರ್ಸಿಟಿ’ಯ ಮಾಜಿ ವಿಮೆನ್ ಕಾಲೇಜು ಪ್ರೆಸಿಡೆಂಟ್ ಅಫ್ರೀನ್ ಫಾತಿಮಾ, ಈ ಬಾರಿಯ ಚುನಾವಣೆ’ಯಲ್ಲಿ ಜಯಗಳಿಸಿದ BAPSA ಮತ್ತು ಫ್ಯಾಟೆರ್ನಿಟಿ ಮೂವಮೆಂಟ್’ನ ಪ್ರಥಮ ಕನ್ಸಿಲರ್ ಎಂದುಕೊಂಡಿದ್ದರೆ. ಈ ಬರಿ BAPSA ಮತ್ತು ಫ್ಯಾಟೆರ್ನಿಟಿ ಮೂವಮೆಂಟ್ JNU’ನ ಶೇ.25% ರಷ್ಟು ಮತ ಪಡೆಯುವಲ್ಲಿ ಸಫಲತೆಯನ್ನು ಕಂಡಿದೆ ಎನ್ನುವುದು ವಿಶೇಷ. ಅದಿರಲಿ ಯೂನಿವೆರ್ಸಿಟಿಯಲ್ಲಿ ಈ ಬಾರಿಯ ಚುನಾವಣೆಯ ”ಇಸ್ಲಾಮೊಫೋಬಿಯಾ ಮತ್ತು ಫ್ಯಾಸಿಸಿಂ” ಎರಡು ಅತೀ ಹೆಚ್ಚು ಚರ್ಚಿತವಾದ ವಿಚಾರಗಳು.

ಫ್ಯಾಸಿಸಮ್:

ದೇಶದಲ್ಲಿ ಆಡಳಿತ ನಡೆಸುತ್ತಿರುವ, ಪಕ್ಷವು ಶಿಕ್ಷಣವನ್ನು ಅತಿಯಾಗಿ ಕಡೆಗಣಿಸುತ್ತಿದೆ, ಸತೀಶ್ ಚಂದ್ರ’ರ (ಸೆಕ್ರೇಟರಿ ಅಭ್ಯರ್ಥಿ LEFT UNITY ) ಪ್ರಕಾರ ” ಈ ವಿಜಯವವನ್ನು ಲೆಫ್ಟ್ ಯುನಿಟಿ’ಯ ವಿಜಯವಲ್ಲ ಬದಲಾಗಿ, ಈ ಚುನಾವಣೆಯು ವಿದ್ಯಾರ್ಥಿ’ಗಳು ಮತ್ತು ಅಡ್ಮಿನ್, ಅಥವಾ ವಿದ್ಯಾರ್ಥಿಗಳು ಮತ್ತು ಸರಕಾರದ ನೀತಿಯ ವಿರುದ್ಧದ ಸಂಘರ್ಷವೆನ್ನಬೇಕು. ಏಕೆಂದರೆ ಜನು ಅಡ್ಮಿನಿಸ್ಟ್ರೇಷನ್ ಅಥವಾಸರಕಾರವು ಶಿಕ್ಷಣದ ಅಧಿಕಾರವನ್ನೇ ಕಸಿದುಕೊಳ್ಳುತ್ತಿದೆ.ಎರಡನೆಯ ವಿಷೆಯವು ಇಲ್ಲಿನ ಅಧಿಕಾರಿಗಳು 515 ಕೋಟಿಯಷ್ಟು ಸಾಲವನ್ನು ಈ ವಿಶ್ವ ವಿದ್ಯಾಯಲದ ಮೇಲೆ ಹೇರಲಾಗುತ್ತಿದೆ, ಅದೇರೀತಿ ಇಲ್ಲಿನ ಫೀಸ್ ಕೇವಲ ೨೮೫ ರೂಪಾಯಿ ಮಾತ್ರವಿರುವುದು, ಇದು ಈ ವಿಶ್ವವಿದ್ಯಾಲದ ಒಂದು ವಿಶೇಷವಾದ ಮಾಡೆಲ್ ಇಲ್ಲಿ ಎಲ್ಲ ರೀತಿಯ ಶಿಕ್ಷಣಕ್ಕೆ ಇಷ್ಟೇ ಫೀಸು . ಆದರೆ ಇದೀಗ ಲಕ್ಷ ಲಕ್ಷ ಫೀಸ್ ಇರುವ MBA ಮತ್ತು ಎಂಜಿನೀರಿಂಗ್ ಕೋರ್ಸುಗಳನ್ನು ಪರಿಚಯಿಸುವ ಮೂಲಕ ಕೇಂದ್ರ ಸರಕಾರ ಮತ್ತು ಅಡ್ಮಿನ್ ಇಬ್ಬರು ಸೇರಿ ಈ ವ್ಯವಸ್ಥೆ’ಯನ್ನು ಇಲ್ಲದಂತೆ ಮಾಡಲು, ತಂತ್ರ ರೂಪಿಸುತ್ತಿದ್ದಾರೆ.” ಎಂದು ಹೇಳಿದರು. ಇನ್ನೂ ಕೇಂದ್ರ ಸರಕಾರದ ಅಸಂವಿಧಾನಿಕ ನಡೆ, ಕಾಶ್ಮೀರದ ಸಮಸ್ಯೆ, RTI, UAPA ಮತ್ತು ಇನ್ನೂ ಹವಾರು ವಿಚಾರಗಳು ಚರ್ಚಿಸಲ್ಪಟ್ಟವು.

ಇಸ್ಲಾಮೊಫೋಬಿಯ:

ಲೆಫ್ಟ್ ಯುನಿಟಿ ಪ್ರೆಸಿಡೆನ್ಸಿಯಲ್ ಕ್ಯಾಂಡಿಡೇಟ್, AISHE GOSH ರ ಪ್ರಕಾರ , ದೇಶದಾದ್ಯಂತ ಮುಸಲ್ಮಾನರ ವಿರುದ್ಧ ನಡೆಯುತ್ತಿರುವ ಗುಂಪು ಹಲ್ಲೆ ಅತಂತ ದುಃಖದಾಯಕವದ ಘಟನೆಗಳಾಗಿವೆ ಅದರ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕಾಗಿದೆ. ಅದೇ ಸಂಧರ್ಭದಲ್ಲಿ BAPSA’ದ ಅಧ್ಯಕ್ಷೀಯ ಅಭ್ಯರ್ಥಿ ಜಿತೇಂದ್ರ ಸುನ’ರ ಪ್ರಕಾರ, JNU’ನ ಲೆಫ್ಟ್ ಯುನಿಟಿ’ಯು ಕೊಡ ಮುಸ್ಲಿಂ ವಿದ್ಯಾರ್ಥಿಯನ್ನು ವೋಟ್ ಬ್ಯಾಂಕ್ ಹಾಗೆ ಕಾಣುತ್ತಿದೆ ಎನ್ನುವುದು ಕಂಡುಬರುತ್ತಿದೆ, ಇಲ್ಲಿ ಯಾವುದಾದರು ಮುಸ್ಲಿಂ ವಿದ್ಯಾರ್ಥಿ ಸಂಘಟನೆಗಳು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾದರೆ ಅವರು ಹೆದರುತ್ತರೆ. ಮುಸ್ಲಿಂ ಸಮುದಾಯದಲ್ಲಿ ನಾಯಕತ್ವವನ್ನು ಅವರು ಹೆದರುತ್ತಾರೆ , ಆದ್ದರಿಂದ ನೈಜ್ಯ ದಮನಿತರಾದ ಮುಸ್ಲಿಂ ಸಮುದಾಯದ ನಾಯಕರೇ ಅವರ ಸಮಸ್ಯೆಗಳನ್ನು ಸಮರ್ಥವಾಗಿ ಪ್ರತಿನಿಧಿಸುವಂತಾಗಬೇಕು. ಅದೇರೀತಿ BAPSA-ಫ್ಯಾಟೆರ್ನಿಟಿ ಕನ್ಸಿಲರ್ ಅಭ್ಯರ್ಥಿ ತನ್ನ ವಿಜಯದ ನಂತರ ” JNU ನಲ್ಲಿ ನನ್ನ ಗೆಲುವೇ ಇಸ್ಲಾಮೊಫೋಬಿಯಾದ ವಿರುದ್ಧದ ಹೋರಾಟದ ಒಂದು ಹಂತ, ಏಕೆಂದರೆ ನನ್ನನ್ನು ನೋಡಿದಾಗಲೇ ನಾನು ಮುಸ್ಲಿಮಳಾಗಿದೆಯೇನೆಂದು ಜನರು ತಿಳಿಯುವರು.
(ಎಂದರೆ ಲೆಫ್ಟ್ ಯುನಿಟಿ’ಯಂತೆ ಕೇವಲ ಮುಸ್ಲಿಂ ಸಮುದಾಯದ ಭದ್ರತೆ ಮಾತ್ರ BAPSA-ಫ್ಯಾಟೆರ್ನಿಟಿ ಚಿಂತನೆಯ ವಿಚಾರವಲ್ಲ ಬದಲಾಗಿ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಹಾಗು ಅವರ ರಾಜ್ಯಕೀಯ ರಂಗದ ಪ್ರತಿನಿಧಿತ್ವ ನೈಜ್ಯ ಚರ್ಚಾ ವಿಷೆಯ. ಬ್ಯಾಪಿಸ-ಫ್ಯಾಟೆರ್ನಿಟಿ’ಯು ದೇಶದ ಎರಡು ಪ್ರಮುಖ ದಮನಿತ ವರ್ಗಗಳ ಒಗ್ಗಟ್ಟನ್ನು JNU’ನಲ್ಲಿ ಪ್ರತಿನಿಧಿಸಲಿದೆ ಎನ್ನುವುದು ಅವರ ಮಾತಿನ ಸರ್ವಸ್ವ)

ಜಾಮಿಯಾ ಮಿಲ್ಲಿಯ ಇಸ್ಲಾಮೀಯ:

ಏಳು ವರ್ಷದ ನಿಷೇಧದ ನಂತರ 2005 ರಲ್ಲಿ ಒಮ್ಮೆ ಮತದಾನ ನಡೆದಿತ್ತು, ಅದು ಕೇವಲ ಕೆಲವೇ ಕೆಲವು ತಿಂಗಳಿಗೆ ಮಾತ್ರ ಸೀಮಿತವಾಗಿತ್ತು, ಯೂನಿವರ್ಸಿಟಿ’ಯು ಅದರಿಂದಾಗಿ ವಿಧ್ಯಾಥಿ ಸಂಗದಕ್ಕಾಗಿ ಕೆಲವರು ಕೋರ್ಟ್ ಮೆಟಲೇರಿದರು, ಕೋರ್ಟ್’ನಲ್ಲಿ ಕೇಸ್ ಇದೆ ಎಂದು ನೆಪ ಹೇಳಿ ಇಂದಿಗೂ ಯೂನಿವರ್ಸಿಟಿ ಆಡಳಿತವು ಅಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸುತ್ತಿಲ್ಲ, ದೇಶದ ಎಲ್ಲಾ ಪ್ರಮುಖ ವಿಶ್ವ ವಿದ್ಯಾಲಯಗಳಲ್ಲಿ ಚುನಾವಣೆ ನಡೆಯುತ್ತಿರುವಾಗ ಜಾಮಿಯಾ ಮಿಲಿಯ ಇಸ್ಲಾಮಿಯಾ’ದಂತಹ ವಿಶ್ವ ವಿದ್ಯಾಲದ ವಿದ್ಯಾರ್ಥಿ ಧ್ವನಿಯು ಕೇಳುತ್ತಿಲ್ಲ ಎನ್ನುವುದೇ ಖೇದನೀಯ ಸಂಗತಿ.

ಕರ್ನಾಟಕದ’ದಲ್ಲಿ :

ಕರ್ನಾಟಕದಲ್ಲಿ, ”ಕರ್ನಾಟಕ ಸ್ಟೇಟ್ ಲಾ ಯೂನಿವರ್ಸಿಟಿ” ಇದೆ, ಅದರ ಅಧೀನದಲ್ಲಿ, ಸುಮಾರು ನೂರಕ್ಕಿಂತಲೂ ಹೆಚ್ಚು ಲಾ ಕಾಲೇಜು’ಗಳಿವೆ. ಆ ಕಾಲೇಜು’ಗಳಲ್ಲಿ ಬಹಳಷ್ಟು ಸಮಸ್ಯೆಗಳು, ಆದರೆ ಸಮರ್ಥ ವಿದ್ಯಾರ್ಥಿ ನಾಯಕತ್ವವು ಆ ಸಮಸ್ಯೆಗಳನ್ನು ಪ್ರತಿನಿಧಿಸುತ್ತಿಲ್ಲ, ಏಕೆಂದರೆ ಸುಪ್ರೀಮ್ ಕೋರ್ಟ್’ನ ಲಿಂಗ್ಡೋ ಸಮತಿಯ ವರದಿಯಂತೆ, ಕಾನೂನು ವಿಶ್ವವಿದ್ಯಾಲಯವೇ ಚುನಾವಣೆ ನಡೆಸುತ್ತಿಲ್ಲ ಎನ್ನುವುದು ವಿಪರ್ಯಾಸ. ಅದಲ್ಲದೆ ರಾಜ್ಯದ ಎಷ್ಟು ಕಾಲೇಜುಗಳು ಮತ್ತು ಯೂನಿವರ್ಸಿಟಿಗಳು ಸುಪ್ರೀಮ್ ಕೋರ್ಟ್’ನ ಈ ಆದೇಶವನ್ನು ಪಾಲಿಸುತ್ತಿದೆ ಎಂದು ಕೇಳಿದರೆ, ಬಹಳ ಕಡಿಮೆ ಎಂದು ನಮಗೆ ಅರ್ಥವಾಗುತ್ತದೆ.ಅದೇನೇ ಇರಲಿ, ವಿದ್ಯಾರ್ಥಿ ಧ್ವನಿಯು ವಿದ್ಯಾರ್ಥಿಗಳ ಸಮಸ್ಯೆಗಳನ್ನು ನಿವಾರಿಸಲು ಅಗತ್ಯವೆಂದು ಸುಪ್ರೀಮ್ ಕೋರ್ಟ್ ಹೇಳುತ್ತಿರುವಾಗ, ದೇಶದ ಪ್ರತಿಷ್ಠಿತ ಯೂನಿವರ್ಸಿಟಿಗಳಲ್ಲಿ ವಿದ್ಯಾರ್ಥಿ ನಾಯಕತ್ವವು ಬೆಳೆಯುವಾಗ ಕನ್ನಡಿಗ ವಿದ್ಯಾರ್ಥಿಗಳಿಗೆ ಇದರಿಂದ ವಂಚಿತರಾಗುವರು ಎನ್ನುವ ಪ್ರಶ್ನೆ ಕನ್ನಡಿಗರನ್ನು ಆಗಾಗ ಕಾಡುತ್ತಿದೆ.ಏನೆ ಇರಲಿ ಕಾಲೇಜು ಕ್ಯಾಂಪಸ್’ಗಳಲ್ಲಿ ಚುನಾವಣೆ ನಡೆಯಬೇಕಿದ್ದರೆ. ವಿದ್ಯಾರ್ಥಿಗಳೇ ಈ ಕುರಿತು ನಿರಂತರ ಹೋರಾಟ ಮಾಡಬೇಕಿದೆ.

LEAVE A REPLY

Please enter your comment!
Please enter your name here