ಭಾಷಾಂತರ : ಶಿಕ್ರಾನ್ ಶರ್ಫುದ್ದೀನ್ ಎಂ.

  1. ನೆರೆಯವನು

ಕೆಲವು ದಿವಸಗಳ ಇತ್ತೀಚಿಗೆ
ನನ್ನ ನೆರೆಮನೆಯಲ್ಲಿ ನಿಶ್ಯಬ್ಧತೆ ಆವರಿಸಿತ್ತು.
ಆಕಾಶವಾಣಿಯು ನಡೆಯುತ್ತಿರಲಿಲ್ಲ…
ಇರುಳಿನಲ್ಲೂ ಅಂಗಣದಲ್ಲಿ ಎಸೆಯಲ್ಪಡುವ ಪಾತ್ರೆ ವಗೈರೆಗಳೂ ಇರಲಿಲ್ಲ…

ಆ ಮನೆಯ ಸಾಕು ನಾಯಿ –
ತುತ್ತು ಅನ್ನಕ್ಕಾಗಿ ದಿವಸವಿಡೀ
ಬರುತಿತ್ತು ನನ್ನ ಮನೆಗೆ;
ಆದರೆ, ನಿಶೆ ಕಳೆಯಲು
ಪುನಃ ಅದೇ ಮನೆಯ ಜಗುಲಿಯ ಮೇಲೆ
ತಲೆಯಿಟ್ಟು ಶಯನಿಸುವನು!!

  1. ಗೆಳೆಯ

ಇಡೀ ದಿವಸ ಕಳೆದು ಹೋಯಿತು
ಒಡನಾಡಿಗಳ ಸುಖೋಷ್ಣತೆಯಿಲ್ಲದೆ,
ನನಗೆ ನಾನೇ ಅಪರಿಚಿತನಾಗಿ,
ಏಕಾಂಗಿಯಾಗಿ, ದುಃಖತಪ್ತನಾಗಿ,
ಕಳೆದುಕೊಂಡೆ ದಿವಸವನ್ನು ಕಡಲ ಕಿನಾರೆಯಲ್ಲಿ.
ಮರಳಿದೆ ಅಲ್ಲಿಯೇ –
ಅದೇ ನಿಶ್ಯಬ್ಧ ಗಲ್ಲಿಯ ನಿರ್ಜನ ನಿವಾಸದಲ್ಲಿ!

ಕದ ತೆರೆಯುತ್ತಿದ್ದಂತೆ, ಮೇಜಿನ ಮೇಲೆ ಇಟ್ಟುಕೊಂಡಿದ್ದ ಗ್ರಂಥವೊಂದು,
ಪಟಪಟಗೊಳ್ಳುತ್ತ ಸೌಮ್ಯವಾಗಿ ಪಿಸುದನಿಯಲ್ಲಿ ಹೇಳಿತು,
‘ಸ್ವಲ್ಪ ತಡವಾಯಿತು, ಗೆಳೆಯ’


  1. ನೆನಪಿದೆಯೇ, ಒಂದು ದಿವಸ –
    ನನ್ನ ಮೇಜಿನ ಬಳಿ ಕುಳಿತುಕೊಂಡು,
    ನೀನು ಪುಟ್ಟ ಸಸಿಯೊಂದನ್ನು
    ಸಿಗರೇಟಿನ ಡಬ್ಬಿಯ ಮೇಲೆ ಬಿಡಿಸಿದ್ದೆ-

ಬಂದು ನೋಡು,
ಆ ಸಸಿಯ ಮೇಲೆ ಮೊಗ್ಗುವೊಂದು
ಅರಳಿದೆ!

4.
ಮಾನವನೊಬ್ಬನು ನಿರ್ಗುಳ್ಳನಾಗಿದ್ದಾನೆ.
ಮತ್ತು ಹರಿಯುವ ಝರಿಯ ಮೇಲ್ಮೈಯಲ್ಲಿ
ಅದು ಒಡಕುತ್ತೆ, ಮುಳುಗುತ್ತೇ,
ಪುನಃ ಉಗಮಿಸುತ್ತೆ, ಪುನಃ ಹರಿಯುತ್ತೆ,
ಶರಧಿಗೂ ಅದನ್ನು ನುಂಗಲು ಸಾಧ್ಯವಾಗಲಿಲ್ಲ,
ಕಾಲಾವಧಿಗೂ ಅದನ್ನು ಮುರಿಯಲು ಸಾಧ್ಯವಾಗಲಿಲ್ಲ;

ಕಾಲದ ಅಲೆಗಳ ಮೇಲೆ ನಿತ್ಯ ಹರಿಯುವ
ಮಾನವನೊಬ್ಬನು ನಿರ್ಗುಳ್ಳನಾಗಿದ್ದಾನೆ


ಗ್ರಂಥಋಣ:

  1. ಗುಲ್ಜಾರ್. Selected Poems.
    ಹರ್ಯಾಣ: Penguin Random House India, 2008
    ISBN : 9780 14341 8214

LEAVE A REPLY

Please enter your comment!
Please enter your name here