-ಗಿರೀಶ್ ಶಹಾನೆ

ಕೃಪೆ: ಸ್ಕ್ರಾಲ್.ಇನ್

ಮೋದಿಯವರ 2014 ವಿಜಯ ಮತ್ತು ಶೇರ್ ಶಾ ಸೂರಿಯು ಹುಮಾಯೂನ್‍ನನ್ನು ಸೋಲಿಸಿದ ವಾರ್ಷಿಕೋತ್ಸವವು ಎರಡು ಆಡಳಿತಗಾರರನ್ನು ಹೋಲಿಸಲು ಅವಕಾಶ ನೀಡಿದೆ.

ಲೋಕಸಭೆಯಲ್ಲಿ ಆರಾಮದಾಯಕ ಬಹುಸಂಖ್ಯೆಯನ್ನು ಪಡೆಯಲು ತಾನು ಪ್ರತಿನಿಧಿಸಿದ ಭಾರತೀಯ ಜನತಾ ಪಾರ್ಟಿ ಮತ್ತು ಮಿತ್ರ ಪಕ್ಷಗಳನ್ನು ಮುನ್ನಡೆಸಿ  2014ರ ಮೇ 16ರಂದು ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಪಟ್ಟಕ್ಕೇರಿದರು. ಕನ್ನೋಜ್ ಯುದ್ಧದಲ್ಲಿ ಮೊಘಲ್ ದೊರೆ ಹುಮಾಯೂನ್‍ನ ವಿರುದ್ಧ ಮೇ 17, 1540ರಲ್ಲಿ ನಿರ್ಣಾಯಕ ಜಯವನ್ನು ಶೇರ್ ಶಾ ಸೂರಿಯು ಪಡೆದನು. ಎರಡು ನಾಯಕರುಗಳ ನಡುವಿನ ಸಮಾಂತರಗಳು ಗಮನಾರ್ಹ. ಮೋದಿಯಂತೆಯೇ ಶೇರ್ ಶಾ ಸೂರಿಯು ಭಾರತದ ಸಣ್ಣ ಪಟ್ಟಣವೊಂದರಲ್ಲಿ ಬೆಳೆದನು ಮತ್ತು ತನ್ನ ಹರೆಯದಲ್ಲಿ ಕುಟುಂಬ ವಿವಾದದಿಂದಾಗಿ ಮನೆ ಬಿಟ್ಟು ಓಡಿ ಹೋದನು. ಆತನ ಪ್ರತಿಭೆ ಮತ್ತು ಮಹತ್ವಾಕಾಂಕ್ಷೆಗೆ ಬೆನ್ನುತಟ್ಟುವ ಮಾರ್ಗದರ್ಶಕರನ್ನು ಕಂಡುಕೊಂಡನು ಮತ್ತು ಭವಿಷ್ಯವನ್ನು ಮುಂದುವರಿಸಿದನು. ಆತನು ಆಡಳಿತದ ಮಾನ್ಯತೆಯನ್ನು ಪಡೆದಿದ್ದ ವಿಶಾಲ ಪ್ರದೇಶವನ್ನು ಆಳಿದನು. ಆತ ಪ್ರಯೋಜನಕ್ಕಾಗಿ ಉತ್ತಮ ಸ್ಥಾನದಲ್ಲಿದ್ದ ಆತ್ಮೀಯರನ್ನು ತನ್ನ ಕುಲದ ನಾಯಕರನ್ನಾಗಿ ಮಾಡಿದ. ಜೀವನದ ಅತ್ಯಂತ ಮಹತ್ವದ ಯುದ್ಧವನ್ನು ಎದುರಿಸುವಾಗ ಆತನು ಮಧ್ಯಮ ವಯಸ್ಸಿನವನಾಗಿದ್ದನು. ಆತನ ಯುವ ವಿರೋಧಿಯು ಏಷ್ಯಾದ ಒಂದು ಪ್ರಸಿದ್ಧ ರಾಜವಂಶದಲ್ಲಿ ಜನಿಸಿದ್ದನು ಮತ್ತು ಆತನು ಉತ್ತಮ ಸ್ವಭಾವ ಹಾಗು ಸದುದ್ದೇಶವನ್ನು ಹೊಂದಿದ್ದನು. ಆದರೆ, ಸ್ವಲ್ಪ ತಿಳಿಗೇಡಿತನ ಮತ್ತು ಆಲಸತೆ ಪೀಡಿತನಾಗಿದ್ದನು. ಈ ಎದುರಾಳಿಗೆ ದೆಹಲಿ ಸಿಂಹಾಸನವನ್ನೇರಲು ಆತನು ವ್ಯಾಪಕವಾದ ಹಿನ್ನಡೆಯನ್ನು ನೀಡಿದ್ದನು.

ನಾಯಕರುಗಳಿಬ್ಬರ ನಡುವೆ ಸಾಮ್ಯತೆಗಳಿದ್ದರೂ ಅವರ ಸಾಧನೆಗಳಲ್ಲಿ ವ್ಯತ್ಯಸ್ಥತೆಯಿರುವುದು ತಟ್ಟನೆಯ ಉಪಶಮನವಾಗಿದೆ. ದೆಹಲಿ ಸುಲ್ತಾನರಲ್ಲಿ ಕಡಿಮೆ ಅವಧಿಯ ಬಾಲಿಕೆಯು ಸೂರಿ ವಂಶದ್ದಾಗಿತ್ತು. ಕನ್ನೋಜ್ ವಿಜಯದ ಕೇವಲ ಐದು ವರ್ಷಗಳಲ್ಲಿ, ಒಂದು ಮುತ್ತಿಗೆಯ ಸಂಧರ್ಭದಲ್ಲಿ ಆಕಸ್ಮಿಕ ಸಿಡಿಮದ್ದು ಸ್ಟೋಟದಿಂದಾಗಿ ಸ್ವತಃ ಶೇರ್ ಷಾ ಮರಣ ಹೊಂದಿದನು. ಆದರೆ, ಆ ಐದು ವರ್ಷಗಳಲ್ಲಿ ಜಗತ್ತಿನ ಯಾವ ಭಾಗದಲ್ಲಿಯೂ ರಾಜರು ಮಾಡಿರದಂತಹ ಕಾರ್ಯವನ್ನು ಮಾಡಿದ್ದನು. ಆತನು ಸ್ಥಾಪಿಸಿದ ಮನಮುಟ್ಟುವಂತಹ ಸುಧಾರಣೆಗಳು ಮುಂದೆ ಶತಮಾನಗಳ ವರೆಗೆ ಭಾರತದ ಆಡಳಿತ ಹಾದಿಯನ್ನು ಬದಲಾಯಿಸಿತು.

2014ರ ವಿಜಯದ ನಂತರದ ಪ್ರಪ್ರಥಮ ಸಾರ್ವಜನಿಕ ಭಾಷಣದಲ್ಲಿ, ನರೇಂದ್ರ ಮೋದಿಯವರು ಭಾರತವನ್ನು ರೂಪಾಂತರಗೊಳಿಸಲು 10 ವರುಷಗಳು ಬೇಕೆಂದಿದ್ದಾರೆ. ಅಂದಿನಿಂದ ಅವರ ಅಭಿಮಾನಿಗಳು ಅದನ್ನು ಗಿಳಿಪಾಠ ಮಾಡಿಕೊಂಡಿದ್ದಾರೆ. 10 ವರ್ಷದ ಅವಧಿಯು ಧೂಮಪರದೆಯಾಗಿದೆ. ಯಾರಾದರು ಅಭಿವೃದ್ಧಿ ಹೊಂದಿದ ದೇಶವಾಗಲು ಭಾರತದ ಪಯಣದ ಬಗ್ಗೆ ಮಾತನಾಡುವುದಾದರೆ, ಒಂದು ಶತಮಾನ ಕೂಡಾ ಸಾಕಾಗುವುದಿಲ್ಲ. ಸಂಯೋಜಿತ ವಾರ್ಷಿಕ ಜಿ.ಡಿ.ಪಿ ಪ್ರಮಾಣ 8%ವನ್ನು ಕೇವಲ ಚೈನಾದ ಪ್ರಸ್ತುತ ವಾರ್ಷಿಕ ತಲಾ ಆದಾಯಕ್ಕೆ ಸಮಾನಾಗಿಸಲು ನಮಗೆ 20 ವರ್ಷಗಳು ಬೇಕಾಗುತ್ತದೆ ಮತ್ತು ಮೋದಿ ಸರಕಾರದ ಅಡಿಯಲ್ಲಿ ನಾವು ಆ 8% ಪ್ರಮಾಣವನ್ನು ಒಮ್ಮೆಯೂ ಮುಟ್ಟಲಿಲ್ಲ. ಇನ್ನೊಂದೆಡೆ ಯಾವನೇ ಒಬ್ಬ ಗಮನಿಸಿದರೆ, ದೀರ್ಘಾವಧಿಯ ಅಭಿವೃದ್ಧಿಗೆ ಅಡಿಪಾಯ ಹಾಕಿದ ದಿಟ್ಟ ನೇತೃತ್ವಗಳು ಮತ್ತು ತಿದ್ದುಪಡಿಯ ಗತಿ, ಎರಡು ಅಥವಾ ಮೂರು ವರ್ಷಗಳ ಪಾರ್ಲಿಮೆಂಟಿನ ಬಹುಸಂಖ್ಯೆಯೂ ಪರಿಕಲ್ಪನೆಗೆ ಸಾಕ್ಷ್ಯಗಳಾಗಿ ಸಾಕಾಗಬಹುದು.

ಅತಿಯಾಗಿ ತಿರಸ್ಕಾರಕ್ಕೆ ಒಳಗಾಗಿರುವ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್(ಯು.ಪಿ.ಎ)ವು ತನ್ನ ಮೊದಲ ವರ್ಷದ ಆಡಳಿತದಲ್ಲಿ ವೇತನ ಯೋಜನೆಗಾಗಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಎಂಬ ಸಮಗ್ರ ಕಾರ್ಯವನ್ನು ಮಾಡಿತು,  ಮತ್ತು ಮಾಹಿತಿ ಹಕ್ಕು ಕಾಯ್ದೆ ಎಂಬ ಮೂಲಭೂತ ಕಾನೂನು ಸರಕಾರದ ಪಾರದರ್ಶಕತೆಗಾಗಿ ಮಾಡಿದಷ್ಟನ್ನು ಗಣರಾಜ್ಯ ಭಾರತದಲ್ಲಿ ಬೇರಾವುದು ಮಾಡಲಿಲ್ಲ. ಮೋದಿಯವರ ಅತಿದೊಡ್ಡ ಸಾಧನೆ ಏನೆಂದರೆ, ಭಾರತದ ಸಂವಿಧಾನಕ್ಕೆ ಮಾಡಿರುವ ನೂರಾ ಒಂದನೇ ತಿದ್ದುಪಡಿ, ಅದು ರಾಷ್ಟ್ರೀಯ ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸಿತು. ಅನೇಕ ತೆರಿಗೆಯ ಆವರಣಗಳೊಂದಿಗೆ ಅದು ಗೊಂದಲ ಹುಟ್ಟಿಸುವಂತಾಗಿದ್ದರೂ, ಅದರ ಮನ್ನಣೆ ಅವರಿಗೆ ಸಲ್ಲಲೇ ಬೇಕು. ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್(ಯು.ಪಿ.ಎ)ವು ಅದನ್ನು ರೂಪಿಸಿದ್ದರೂ, ಗುಜರಾತಿನ ಮಾಜಿ ಮುಖ್ಯಮಂತ್ರಿ ಮೋದಿಯವರ ನೇತೃತ್ವದ ಬಿ.ಜೆ.ಪಿಯ ವಿರೋಧವು ಅದನ್ನು ತಡೆದಿತ್ತು. ಯಾವಾಗ ನಾವು ಮೋದಿಯು ರೂಪಿಸಿದ್ದ ಶಾಸನದ ಬಗ್ಗೆ ಚಿಂತಿಸುತ್ತೇವೆ, ಆ ಹಾದಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಮತ್ತು ಮಾಹಿತಿ ಹಕ್ಕು ಕಾಯ್ದೆಯಂತೆ ಮಿಂಚುವಂತಹದ್ದು ಯಾವುದೂ ಇಲ್ಲ.

2014ರಲ್ಲಿ ಪ್ರಧಾನ ಮಂತ್ರಯಾದ ಬಳಿಕ ಭಾರತವನ್ನು ರೂಪಾಂತರಿಸಲು ನನಗೆ 10 ವರ್ಷಗಳು ಬೇಕು ಎಂದು ನರೇಂದ್ರ ಮೋದಿಯವರು ಹೇಳಿದ್ದಾರೆ. (ಕೃಪೆ: ಅಮಿತ್ ದೇವ್/ ರಾಯ್ಟರ್ಸ್)

ರೈತರು ಮತ್ತು ಭೂ ಸುಧಾರಣೆಗಳು

ರೈತರ ಬಗ್ಗೆ ಕಾಳಜಿ ಮಾಡಿದ ಭಾರತದ ಕೆಲವೇ ರಾಜರುಗಳ ಪೈಕಿ ಶೇರ್ ಷಾ ಕೂಡ ಒಬ್ಬನು. ಆತನ ಸಾಮ್ರಾಜ್ಯದ ಪ್ರತಿಯೊಂದು ರೈತಭೂಮಿಯನ್ನು ನಿಖರವಾಗಿ ಅಳತೆ ಮಾಡಿ ಗುಣಮಟ್ಟದ ಆಧಾರವಾಗಿ ಶ್ರೇಣಿಕರಿಸಲಾಗಿತ್ತು. ರೈತರಿಗೆ ಪಟ್ಟ ಎಂಬ ಹೆಸರಿನಲ್ಲಿ ಕರಾರು ಪತ್ರವನ್ನು ನೀಡಲಾಗುತಿತ್ತು. ಆ ರೀತಿಯಾದಂತಹ ದಾಖಲೆಗಳಿಗೆ ಭಾರತದಲ್ಲಿ ಅಧಿಕೃತವಾಗಿ ಇಂದಿಗೂ ಅದೇ ಪದವನ್ನು ಬಳಸಲಾಗುತ್ತದೆ. ಬದಲಿಯಾಗಿ ಅವರಿಗೆ ಖಬೂಲಿಯತ್ ದೊರೆಯುತಿತ್ತು ಮತ್ತು ಅದು ರಾಜ್ಯಕ್ಕೆ ನೀಡಬೇಕಿರುವ ವಾರ್ಷಿಕ ಮೊತ್ತವನ್ನು ನಿಗದಿ ಮಾಡತಿತ್ತು. ಬಹುಪಾಲು ಪ್ರದೇಶದಲ್ಲಿ ಮೌಲ್ಯಮಾಪನ ಮಾಡಲಾದ ಉತ್ಪಾದನೆಯಲ್ಲಿ 33% ಮತ್ತು ಇತರರಲ್ಲಿ 25% ಆಗಿತ್ತು. ಇದು ಅಗಾಧ ಪ್ರಮಾಣದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಈಸ್ಟ್ ಇಂಡಿಯಾ ಕಂಪೆನಿಯು ಕಿತ್ತುಕೊಳ್ಳುತ್ತಿದ್ದ 50% ಕ್ಕಿಂತ ಬಹಳಷ್ಟು ಕಡಿಮೆಯಾಗಿದೆ(ಕೆಲವು ತಜ್ಞರ ಪ್ರಕಾರ 25%ವು ಪ್ರಮಾಣಿತ ಪ್ರಮಾಣವಾಗಿದೆ). ಕೆಲವು ರೈತರಿಗೆ ಪಟ್ಟ ಮತ್ತು ಖಬೂಲಿಯತ್ ಓದಲು ಸಾಧ್ಯವಿದ್ದುದರಿಂದ, ಕಾರ್ಯವನ್ನು ತುಸು ಸುಲಭಗೊಳಿಸಲು ಶೇರ್ ಷಾ ದಾಖಲೆಗಳನ್ನು ಸ್ಥಳೀಯ ಭಾಷೆಗಳಲ್ಲಿ ಬರೆಸುತ್ತಿದ್ದನು. ಆತನು ಪ್ರತಿಯೊಂದು ಹಳ್ಳಿಯಿಂದ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಮುಖದ್ದಮರು ಮತ್ತು ಪಟ್ವಾರಿಗಳಿಂದ ಹಿಡಿದು ಅಧಿಕಾರಿಗಳನ್ನು ನೇಮಿಸಿದ್ದನು ಮತ್ತು ಕಡೆಯಲ್ಲಿ ನಾಲ್ಕು ಕೇಂದ್ರ ಮಂತ್ರಿಗಳು ನೇರವಾಗಿ ಆತನ ಅಡಿಯಲ್ಲಿ ಕೆಲಸ ಮಾಡುವಂತ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿದ್ದನು.

ಮೂಲಭೂತ ಅಗತ್ಯ ಮತ್ತು ಕೈಗಾರಿಕಾ ಅಗತ್ಯಗಳಿಗೆ ಕೃಷಿಭೂಮಿಯನ್ನು ಲಭ್ಯವಾಗಿಸುವ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‍ಪಾವತಿ ಕಾಯ್ದೆ 2013ರಲ್ಲಿ ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರವನ್ನು ದೊರಕಿಸುವ ಉದ್ದೇಶದಿಂದ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದರು. ಕಾಯ್ದೆಯ ಟೀಕಾಕಾರರು, ಇದು ಏರುಪೇರಾಗಿದ್ದು, ಕೈಗಾರಿಕೆ ಸ್ಥಾಪಿಸುವವರ ವಿರುದ್ಧ ಭೂಮಾಲೀಕರಿಗೆ ಅನುಕೂಲಕರವಾಗಿದೆ ಎಂದು ಪರಿಗಣಿಸುತ್ತಾರೆ. ಯಾವಾಗ ಸರಕಾರವು ನಿರ್ಭಂದಿತವಾಗಿ ಸಾರ್ವಜನಿಕ ಕಾರ್ಯಕ್ಕಾಗಿ ಭೂಮಿ ಖರೀದಿಸುತ್ತದೆ ಅಥವಾ ನಿರ್ಣಾಯಕವಾದ ವ್ಯವಸ್ಥಿತ ಖಾಸಗಿ ಕೈಗಾರಿಕೆಯ ಆರಂಭಕ್ಕಾಗಿ ಮಾಡುತ್ತದೆ ಆಗ ಮಾತ್ರ ಕಾನೂನು ಪಾತ್ರವಹಿಸಬೇಕೆಂದು ನಾನು ನಂಬುತ್ತೇನೆ. ಬೇರೆ ವ್ಯವಹಾರಗಳಲ್ಲಿ, “ಅದು ನಿಮ್ಮ ಜಾಗ, ನಿಮಗೆ ಬೇಕಾದ್ದನ್ನು ಮಾಡಬಹುದು” ಎಂಬ ಪ್ರವೃತ್ತಿಯನ್ನು ಹೊಂದಬೇಕು. ಆ ರೀತಿಯಾದ ನಿಲುವು ಭಾರತದಲ್ಲಿ ಆಸ್ತಿ ಹಕ್ಕನ್ನು ಭದ್ರ ಪಡಿಸುತ್ತದೆ. ಮಹತ್ವಾಕಾಂಕ್ಷೆಯ ಉದ್ಯಮಗಳಿಗೆ ಕೆಲವು ಕಡ್ಡಾಯ ಖರೀದಿಯ ಅಗತ್ಯವಿರುತ್ತದೆ ಮತ್ತು ಭೂ ಸ್ವಾಧೀನ ಪಡಿಸುವಿಕೆಯಲ್ಲಿ ವಿಳಂಬವು ಭಾರತದ ಆರ್ಥಿಕ ಬೆಳವಣಿಗೆಯನ್ನು ಗಂಭೀರವಾಗಿ ಮಂದವಾಗಿಸಿದೆ. ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‍ಪಾವತಿ ಕಾಯ್ದೆ 2013(ಐಂಖಖ) ಯಲ್ಲಿ ವಿವರಿಸಿರುವ ಕಡ್ಡಾಯ ಸ್ವಾಧೀನಕ್ಕಿರುವ ತಡೆಗಳನ್ನು ತೆಗೆದುಹಾಕುವುದರ ಮೂಲಕ ಕೈಗಾರಿಕೀಕರನವನ್ನು ತ್ವರಿತಗೊಳಿಸಲು ಮೋದಿ ಪ್ರಯತ್ನಿಸಿದರು. ಆಸ್ತಿ ಹಕ್ಕನ್ನು ಬಲಪಡಿಸುವ ಬದಲು ಅದನ್ನು ದುರ್ಬಲಗೊಳಿಸಲು ಬಯಸಿದ್ದರು. ಅನಾಶ್ಚರ್ಯವಾಗಿ, ಈ ಆಲೋಚನೆಯಿಂದ ರೈತವರ್ಗಕ್ಕೆ ರೋಮಾಂಚನವಾಗಲಿಲ್ಲ ಮತ್ತು ಬಿ.ಜೆ.ಪಿ ಹಾಗು ಸಂಘ ಪರಿವಾರದ ಒಳಗಿನಿಂದಲೇ ಆಕ್ಷೇಪಗಳು ವ್ಯಕ್ತವಾದ ಹಿನ್ನಲೆಯಲ್ಲಿ ಅವರು ಅದನ್ನು ವರ್ಜಿಸಿದರು. ಅಲ್ಲಿಂದೀಚೆಗೆ ಆಸ್ತಿ ಹಕ್ಕನ್ನು ಗುಟ್ಟಾಗಿ ಮೊಟಕುಗೊಳಿಸಲು ತನ್ನನ್ನು ತಾನು ನಿರ್ಭಂದಿಸಿದ್ದಾರೆ.

ನಾಣ್ಯ ಚಲಾವಣಾ ಪದ್ಧತಿ ಮತ್ತು ಅನಾಣ್ಯೀಕರಣ:

ಹೊಸ ನಾಣ್ಯ ಚಲಾವಣಾ ಪದ್ಧತಿಯನ್ನು ಸೃಷ್ಟಿಸಿದ್ದು ಶೇರ್ ಷಾ ಮಾಡಿದ ಎರಡನೇ ಸ್ಮರಣೀಯ ಸಾಧನೆಯಾಗಿದೆ. 20ನೇ ಶತಮಾನದಲ್ಲಿ ಪ್ರಮಾಣಿತ ತೂಕವನ್ನು ಮೂಲ ರೂಪದಲ್ಲಿ ಉಳಿಸಿಕೊಂಡಿರುವ ಬೆಳ್ಳಿ ರೂಪಾಯಿ ನಾಣ್ಯಗಳನ್ನು ಪರಿಚಯಿಸಿದನು. ನಿಗದಿತ ಅನುಪಾತದಲ್ಲಿ ರೂಪಾಯಿಯೊಂದಿಗೆ ವಿನಿಮಯ ಮಾಡಬಲ್ಲ ಚಿನ್ನದ ಮೊಹರು ಮತ್ತು ತಾಮ್ರದ ಪೈಸಾಗಳನ್ನು ಆತನ ಟಂಕಸಾಲೆಯು ಮುದ್ರಿಸಿತ್ತು. ಆತನ ನಾಣ್ಯಗಳಲ್ಲಿ ಹೆಚ್ಚಿನವು ದೇವನಗರಿಯ ದಂತಕಥೆ ಶ್ರಿ ಶೇರ್ಶಾಹಿ ಜೊತೆಗೆ ಆತನ ಹೆಸರಿನ ಅರೇಬಿಕ್ ಚಿತ್ರಣವು ಹೊಂದಿತ್ತು. ಆತನ ಈ ಹೊಸ ತ್ರಿಲೋಹ ನಾಣ್ಯ ಚಲಾವಣೆಯು ವ್ಯಾಪಾರವನ್ನು ಉತ್ತೇಜಿಸಿತು ಮತ್ತು ಹಿಂದೆ ಕೀಳ್ಮಟ್ಟದ ನಾಣ್ಯಕ್ಕೆ ಹೆಚ್ಚು ತೆರುತ್ತಿದ್ದ ರೈತರಿಗೆ ಸಹಾಯವನ್ನು ಮಾಡಿತು.

ನರೇಂದ್ರ ಮೋದಿಯವರು ಕೂಡ ಕರೆನ್ಸಿ ಸುಧಾರಣೆಗಾಗಿ ಪ್ರಯತ್ನಿದರು, ಅದನ್ನು ಅನಾಣ್ಯೀಕರಣ, ಬ್ಯಾಂಕ್ ನೋಟ್ ನೀಷೇಧ ಮತ್ತು ನೋಟು ವಿನಿಮಯ ಹೀಗೆ ವಿಧ-ವಿಧವಾಗಿ ಬಣ್ಣಿಸಲಾಗಿದೆ. ಅದು ಚೆನ್ನಾಗಿ ಮೂಡಿಬರಲಿಲ್ಲ. ಎಪ್ರಿಲ್‍ನಲ್ಲಿ ಪ್ರಕಟವಾದ ಒಂದು ಲೇಖನದಲ್ಲಿ ನಾನು ಅದನ್ನು “ಗಂಭೀರ ಅರ್ಥಶಾಸ್ತ್ರಜ್ಞರು ವಜಾಮಾಡಿರುವ ಮತ್ತು ಕೇವಲ ಹುಚ್ಚು ಗುಂಪುಗಳಿಂದ ಪ್ರತಿಪಾದಿಸಲ್ಪಟ್ಟಿರುವ ಒಂದು ಮರುಳು ಚಿಂತನೆ” ಎಂದು ವ್ಯಕ್ತಪಡಿಸಿದ್ದೇನೆ. ಕಳೆದ ನಾಲ್ಕು ವರ್ಷದಲ್ಲಿ ಮೋದಿಯವರ ಏಕ ಮಾತ್ರ ಮೂಲ ಆಲೋಚನೆಯು ನೋಟು ವಿನಿಮಯ(ಅಮಾನ್ಯ) ಮಾತ್ರವಾಗಿದ್ದು, ಅವರ ಅಭಿವೃದ್ಧಿ ಏಜೆಂಡಾದ ಹೃದಯದಲ್ಲಿರುವ ಪರಿಕಲ್ಪನೆಯ ಭೀಕರ ಬಡತನವನ್ನು ತೋರಿಸುತ್ತದೆ.

ರಾಹ್-ಎ-ಅಝಮ್ ಮತ್ತು ಬುಲೆಟ್ ರೈಲು:

ಮೋದಿಯವರ ಮೈಲಿಗಲ್ಲು ಮೂಲಭೂತ ನಾವಿನ್ಯತೆಯಾದ, ಬಾಂಬೆ ಮತ್ತು ಅಹ್ಮದಾಬಾದ್ ನಡುವೆ ಬುಲೆಟ್ ರೈಲ್ ದಾರಿಯಾಗಿದ್ದು, ಅದು ಕೂಡಾ ಸ್ಪೂರ್ತಿಯ ಕೊರತೆಗೆ ಸಾಕ್ಷಿಯಾಗಿದೆ. ಶೇರ್ ಷಾ ರವರ ಪ್ರಸಿದ್ಧ ಮೂಲಭೂತ ಯೋಜನೆಯಾದ ಚಿತ್ತಗಾಂಗ್ ನಿಂದ ಕಾಬೂಲ್‍ಗೆ ಕೊಂಡಿ ಬೆಸೆಯುವ ರಾಹ್-ಎ-ಅಝಮ್ ಅಥವಾ ಗ್ರೇಟ್ ರೋಡ್‍ಗೆ ಇದು ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ರಸ್ತೆಯ ಎರಡೂ ಬದಿಗಳಲ್ಲಿ ಮರಗಳನ್ನು ಬೆಳೆಸಲಾಗಿತ್ತು ಮತ್ತು ನಿಯಮಿತ ಮಧ್ಯಂತರಗಳಲ್ಲಿ ಯಾತ್ರಿಕರು, ವ್ಯಾಪಾರಿಗಳು ಮತ್ತು ಅವರ ಪ್ರಾಣಿಗಳಿಗೆ ಆಶ್ರಯ ಮತ್ತು ಪೋಷಣೆಯನ್ನು ಒದಗಿಸುವಂತಹ ತಂಗುದಾಣಗಳನ್ನು ನಿರ್ಮಿಸಲಾಗಿತ್ತು. ಮುಸ್ಲಿಮರು ಮತ್ತು ಹಿಂದೂಗಳಿಗೆ ಸಮಾನವಾಗಿ ತಮ್ಮ ಅಗತ್ಯ ಮತ್ತು ನಿಷೇಧಗಳಿಗೆ ಅನುಗುಣವಾಗಿ ಆಹಾರ ಮತ್ತು ವಸತಿ ಸೌಕರ್ಯವು ದೊರೆಯುತಿತ್ತು.

ಮೊಘಲ್ ದೊರೆ ಅಕ್ಬರ್‍ನು ತನ್ನ ತಂದೆಯನ್ನು ಸೋಲಿಸಿದವನ ಮೇಲೆ ತನ್ನ ಇತಿಹಾಸಕಾರ ಅಬುಲ್ ಫಝಲ್ ತಿರಸ್ಕಾರದ ರಾಶಿಯನ್ನೇ ಹಾಕುವಾಗ, ಶೇರ್ ಷಾನಿಗಿರುವ ಬುದ್ಧಿವಂತಿಕೆಯನ್ನು ಗುರುತಿಸಿದ್ದನು. ಶೇರ್ ಷಾರ ಒಳಗೊಳ್ಳುವಿಕೆಯ, ಬಹುಸಂಸ್ಕøತಿಯ ಆಡಳಿತದ ಸಿದ್ಧಾಂತದಿಂದ ಅಕ್ಬರ್ ಅತ್ಯಾಧುನಿಕ ರಾಜಕೀಯ ಸಿದ್ಧಾಂತವನ್ನು ನಿರ್ಮಿಸಿದ್ದನು, ಆತನ ಭೂ ಆದಾಯ ಮತ್ತು ಕರೆನ್ಸಿ ವ್ಯವಸ್ಥೆಯನ್ನು ಅಳವಡಿಸಿಕೊಂಡನು ಮತ್ತು ಸಂಸ್ಕರಿಸಿದನು. ಅಲ್ಲದೇ, ರಾಹ್-ಎ-ಅಝಮ್ ಅನ್ನು ವಿಸ್ತರಿಸಿದನು. ಮೊಘಲರ ಅನೇಕ ಪದ್ಧತಿಯೊಂದಿಗೆ ಮುಂದುವರಿದ ಬ್ರಿಟೀಷರು ಹೆದ್ದಾರಿಯನ್ನು ಮತ್ತಷ್ಟು ವರ್ಧಿಸಿದರು ಮತ್ತು ಅದನ್ನು ಗ್ರ್ಯಾಂಡ್ ಟ್ರಂಕ್ ರೋಡ್ ಎಂದು ಕರೆದರು. ರುಡ್ಯಾರ್ದ್ ಕಿಪ್ಲಿಂಗ್ ರವರ ಮಾತಿನಂತೆ, “ಒಂದು ಅದ್ಭುತ ಪ್ರದರ್ಶನವಾಗಿದೆ. ಅದು ನೇರವಾಗಿ ಚಲಿಸುತ್ತದೆ, ಇದು ಭಾರತದ ಸಾರಿಗೆಯ ಹದಿನೈದು ಮೈಲು ಜನದಟ್ಟಣೆ ಇಲ್ಲದೆ ಹೊರಲುತ್ತದೆ.- ಇಂತಹ ಒಂದು ಜೀವನ ನದಿಯು ಜಗತ್ತಿನ ಬೇರಾವ ಭಾಗದಲ್ಲಿಯೂ ಅಸ್ತಿತ್ವದಲ್ಲಿಲ್ಲ”.

ಉತ್ತಮ ಯೋಜಕನಾದ ಶೇರ್ ಷಾ ತನ್ನ ಭವ್ಯ ಸಮಾಧಿಯನ್ನು ತವರೂರಾದ ಸಸಾರಾಮ್‍ನಲ್ಲಿ ನಿರ್ಮಿಸಿದ್ದನು. ಕೃತಕ ಸರೋವರ ಒಂದರಲ್ಲಿ ಭವ್ಯ ಸಮಾಧಿಯೂ ಒಂದು ಚದರ ಅಡಿಯಲ್ಲಿ ನಿಂತಿದೆ. ಇಂದು ಅರ್ಧ ಸಸಾರಾಮ್‍ನ ಕೊಳಚೆ ನೀರು ಶುಚಿಗೊಳಿಸದೇ ಆ ಸರೋವರಕ್ಕೆ ಹರಿದು ಬರುತ್ತದೆ. ಹಿಂದೆ ಆ ಸರೋವರದ ನೀರನ್ನು ಆಡುಗೆಗಾಗಿ ಉಪಯೋಗಿಸುತ್ತಿದ್ದು, ಇಂದು ಸ್ನಾನಕ್ಕೂ ಉಪಯೋಗಿಸದಂತಾಗಿದೆ ಎಂದು ಸ್ಥಳೀಯರು ದೂರುತ್ತಾರೆ. ಅದು ಭಾರತವು ಎದುರಿಸುತ್ತಿರುವ ಬಿಕ್ಕಟ್ಟಿನ ಸುಳಿವಾಗಿದೆ. ಜೀವ ನದಿಯೂ ಯಾವುದೇ ಕ್ಷಣದಲ್ಲಿಯೂ ಪ್ರವಾಹವನ್ನು ಉಂಟು ಮಾಡುವ ಬೆದರಿಕೆಯನ್ನು ನೀಡುತ್ತಿದೆ. ಕೇವಲ ಸೌಲಭ್ಯಗಳ ಸರಬರಾಜಿನ ಬೆಳವಣಿಗೆಯಿಂದ ಮಾತ್ರ ತಡೆಹಿಡಿಯಲು ಸಾಧ್ಯ.

ಕಳೆದ ನಾಲ್ಕು ವರ್ಷಗಳು ಭಾರತಕ್ಕೆ ಕೆಟ್ಟದ್ದಲ್ಲ. ಐತಿಹಾಸಿಕ ಮಾನದಂಡಗಳು, ಸಮಂಜಸವಾದ ಹಣದುಬ್ಬರ, ನಿರ್ವಹಣಾ ಕೊರತೆಗಳು ಮತ್ತು ಏರಿಕೆಯಾಗುತ್ತಿರುವ ಸುಧಾರಣೆಗಳು ಸೇರಿಕೊಂಡು ಸುಮಾರು 7% ಬೆಳವಣಿಗೆಯ ದರ ಆರೋಗ್ಯಕರ ವಿಚಾರವಾಗಿದೆ. ಮತ್ತೊಂದೆಡೆ ಉದ್ಯೋಗಗಳ ಅಭಾವ, ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ಅಪರಾಧಗಳ ಒಳಹರಿವು, ಘೋರವಾದ ನಗರ ಮಾಲಿನ್ಯ ಮತ್ತು ನಾವು ಒಂದು ಜಾಗತಿಕ ಬಿಕ್ಕಟ್ಟಿನಿಂದ ಕೆಳಗೆ ಸುರುಳಿಯಾಗುತ್ತಿದ್ದೇವೆ ಎಂಬ ನಿರಂತರವಾದ ಭಯ. ನರೇಂದ್ರ ಮೋದಿಯವರು ಹೆಚ್ಚು ಕಡಿಮೆ ಹಿಂದಿನ ಆಡಳಿತದ ದಾರಿಯಲ್ಲಿಯೇ ಸಾಗುತ್ತಿದ್ದಾರೆ ಎಂದು ಗಮನಿಸಿದ ಅರುಣ್ ಶೌರಿಯವರು ಪ್ರಸ್ತುತ ಸರಕಾರವನ್ನು ಪ್ರಸಿದ್ಧವಾಗಿ “ಕಾಂಗ್ರೆಸ್ ಪ್ಲಸ್ ಗೋವು” ಎಂದು ಕರೆದಿದ್ದಾರೆ. ಆಡಳಿತ ಪಕ್ಷವು ಕೋಮು ದ್ವೇಷವನ್ನು ಕದಡಿತದ ಮಟ್ಟವನ್ನು ಗಮನಿಸಿ, ನಾನು ಆ ಹೇಳಿಕೆಯನ್ನು, “ಬಿ.ಜೆ.ಪಿ ಸಮ(=) ಕಾಂಗ್ರೆಸ್ ಪ್ಲಸ್ ಗೋವು ಮತ್ತು ತ್ರಿಶೂಲ”  ಎಂದು ಮಾರ್ಪಡಿಸ ಬಯಸುತ್ತೇನೆ. ಮೋದಿಯ ಬಗೆಗಿನ ವ್ಯಕ್ತಿಯೊಬ್ಬನ ಮನೋಭಾವವು ಸಂಪೂರ್ಣವಾಗಿ ಆತನು ಗೋವು ಮತ್ತು ತ್ರಿಶೂಲವನ್ನು ಎಷ್ಟು ಪ್ರೀತಿಸುತ್ತಾನೆ ಎಂಬುವುದರ ಮೇಲೆ ಅವಲಂಬಿತವಾಗಿದೆ. ಆಡಳಿತಕ್ಕೆ ಹೊಸ ಚಿಂತನೆಗಳನ್ನು ಮತ್ತು ಭಾರತದ ಅಭಿವೃದ್ಧಿಯಲ್ಲಿ ಮಾದರಿಪೂರ್ಣ ಪಲ್ಲಟವನ್ನು ತರುತ್ತೇನೆ ಎಂಬ ಭರವಸೆಯನ್ನು ಅವರು ಕೊಟ್ಟಿದ್ದರು. ಬಹುಶಃ ಅವರಿಗೆ ಅವರ ಹತ್ತು ವರ್ಷಗಳು ಸಿಗಬಹುದು. ಆದರೆ, ನಾವು ಈಗಾಗಲೇ ಅರ್ಥ ಮಾಡಿದ್ದೇವೆ ಅವರು ಶೇರ್ ಷಾ ಸೂರಿ ಅಲ್ಲ.

LEAVE A REPLY

Please enter your comment!
Please enter your name here