ನೂರುಲ್ ಅಮೀನ್ ಪಕ್ಕಲಡ್ಕ

ಮೌಲ್ಯವಿರಲಿ ಶಿಕ್ಷಣದಿ ಮೌಲ್ಯವಿರಲಿ….

ಲೆಕ್ಕ ಮಾಡು ಬೀಸಾಕುತ್ತೇನೆ….
ಮತ್ತೆಂದೂ ಈ ವಿಷಯದ ಚಕಾರವೆತ್ತಬಾರದು…
ಇನ್ವೆಷ್ಟ್ ಅಂತ ತಿಳ್ಕೋ …
೫ ಪಟ್ಟು ಪಡಕೊಂಡು ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡು…..

ಹ್ರದಯ ಕಲಕುವ ಸಂಗತಿಯನ್ನು ಹಂಚಿದ ಹಿರಿಯ ಜೀವವನ್ನು ಸಾಂತ್ವನ ಗೊಳಿಸಲು ಸಾದ್ಯವಾಗಲಿಲ್ಲ..
ಮಿತ್ರರಲ್ಲಿ ಹಂಚಿದಾಗ ಸಾಮಾನ್ಯವೆಂದುಬಿಟ್ಟರು….
ದಶಕಗಳ ಹಿಂದೆ ಗುಮಾಸ್ತ ಜೀವವೊಂದು ತನ್ನ ಪುತ್ರಿ ವ್ಯೆದ್ಯಕೀಯ ಸೀಟು ಗಳಿಸಿದಾಗ‌ ಸಿಹಿ‌ ಹಂಚಿದ್ದು ಇನ್ನೂ ನೆನಪಿನಾಳದಿಂದ ಮಾಸಲಿಲ್ಲ…
ಸ್ಕಾಲರ್ಶಿಪ್ ಗಾಗಿ ಒಡಾಡಿ ಹಳೆಯ‌ ವಿದ್ಯಾರ್ಥಿಗಳ ಪುಸ್ತಕ ಸಂಗ್ರಹಿಸಿ ಎದೆಯುಬ್ಬಿಸಿ ಹೊತ್ತುಕೊಂಡು ಬರುವಾಗಿನ ಆ ಗತ್ತು ಇನ್ನೂ ಕಣ್ಣಿನಂಚಿನಲ್ಲಿ ಹಾಗೆಯೇ ಉಳಿದಿತ್ತು….
ಎರಡು ಮಕ್ಕಳು ಆರತಿಗೊಬ್ಬಳಾಗಬೇಕಿದ್ದವಳು ಡಾಕ್ಟರ್ ಪದವಿಯೊಂದಿಗೆ ಅಪ್ಪನಿಗರಿವಿಲ್ಲದೇನೆ ಮದುವೆಯಾದಳು…
ಇನ್ನು ಮಗ ಅಕ್ಕಳ ದಾರಿಯನ್ನೇ ಆಯ್ಕೆ ಮಾಡಿದ….
ಮಕ್ಕಳ ಬಳಿ ತಾವು ತಮ್ಮನ್ನು ವಿದ್ಯಾವಂತರನ್ನಾಗಿಸಲು ಪಟ್ಟ ಕಷ್ಟವನ್ನು ಎಳೆಯಾಗಿ ಬಿಡಿಸಲು ವಿವರಿಸಿದಾಗ ಮಾತನ್ನು ಅರ್ದದಲ್ಲೇ ಮೊಟಕು ಗೊಳಿಸಿ ಲೆಕ್ಕಾಚಾರಕ್ಕೆ ಅಣಿಯಾದ ವಿದ್ಯಾವಂತ ಮಕ್ಕಳ ಚಿತ್ರಣವಿದು…..

ಕೌಟುಂಬಿಕ ಛಿದ್ರತೆಯನ್ನು ಇಂದು ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ವಿಚಾರವೆಂದು ಪರಿಗಣಿಸಲಾಗದಿರುವುದು ಹಾಗೂ ಗಳಿಕೆಯಾದರಿತ ಶಿಕ್ಷಣದತ್ತ‌ ಒಲವು ಮಾತಪಿತರೊಂದಿಗೂ ವ್ಯಾಪರೀ ದ್ರಷ್ಟಿಕೋನದೊಂದಿಗೆ ವ್ಯವಹರಿಸುವಂತೆ ಪ್ರೇರೆಪಿಸಿದೆ….

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಯಾಂಕ್ ದಿವಾಳಿತನದ ಸಂದರ್ಭಗಳಲ್ಲಿ ಮತ್ತು ಐಟಿ ಬಿಟಿ ವಿಬಾಗ ನಿರುದ್ಯೋಗದಿಂದ ತತ್ತರಿಸುತ್ತಿದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾವಂತ ಸಮೂಹವು
ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಗಾಗಿತ್ತು…
ಶಿಕ್ಷಣದ ವ್ಯಾಪರಿಕರಣದ ಬಗ್ಗೆ ದ್ವನಿಯೆತ್ತಿದಾಗಲೆಲ್ಲಾ , ಗಳಿಕೆಯೊಂದೆ ಶಿಕ್ಷಣದ ಉದ್ದೇಶವಲ್ಲವೆಂದಾಗಲೆಲ್ಲಾ,
ಶಿಕ್ಷಣದಲ್ಲಿ ಮೌಲ್ಯಗಳನ್ನು ಸೇರಿಸಿರೆಂದು ಪಟ್ಟಹಿಡಿದ ವಿದ್ಯಾರ್ಥಿ ಸಂಘಟನೆಯನ್ನು ಏನೂ ತಿಳಿಯದ ಮುಗ್ದರೆಂಬ ರೀತಿಯಲ್ಲಿ ಪರಿಗಣಿಸಿ ಕರುಣೆಯ ದ್ರಷ್ಟಿ ಹರಿಸಿದ ವ್ಯವಸ್ಥೆ ,ವಿದ್ಯಾವಂತ ಸಮೂಹ ಜುಜುಬಿ ಉದ್ಯೋಗ ಕಳಕೊಂಡ ಮಾತ್ರಕ್ಕೆ ಆತ್ಮಹತ್ಯೆ ಮಾಡುವಾಗ ,ಸಲ್ಲಿಸಿದ ಮನವಿಯನ್ನು ಕೊಡವಿ ಪುಟ ತಿರುಗಿಸಲಾಂಬಿಸಿತು….
ವಿದ್ಯೆಯೆಂದರೆ ಅರ್ಥಶಾಸ್ತ್ರ ಕಾಮಶಾಸ್ತ್ರವೆಂದ ಶಿಕ್ಷಣ ವ್ಯಾಪರಕ್ಕೆ,
ವಿದ್ಯೆಯೆಂದರೆ ವಿದ್ಯೆಯಲ್ಲಿ ಧರ್ಮವೂ ಇದೆ ,
ಮೋಕ್ಷವೂ ಇದೆ ಎಂದು ತಿಳಿಸಿದ ಕೀರ್ತಿ ವಿದ್ಯಾರ್ಥಿ ಸಂಘಟನೆಯದ್ದಾಗಿದೆ….
ಪಾಪ ಪುಣ್ಯಗಳ ಪ್ರಜ್ನೆಯಿಲ್ಲದ, ಅಂಕಿಅಂಶಗಳ ಪ್ರಕಾರ ವಿಜ್ನಾನವನ್ನು ಮಾನದಂಡವನ್ನಾಗಿಸುವಾಗ ,ಆ ವಿಜ್ನಾನಕ್ಕೆ ಮೂಲವಾದ ಜ್ನಾನ ಸಂಪಾದನೆಯನ್ನು ನಿರ್ಲಕ್ಷಿಸಿದ ಪರಿಣಾಮವನ್ನು ಇಂದು ಯುವ ಸಮೂಹ ಸ್ವೇಚ್ಚೆಯ ದಾಸರಾಗಲು ಕಾರಣವೆಂದರೆ ತಪ್ಪಾಗಲಾರದು….
ಹೊಸತಾಗಿ ತಲೆಯೆತ್ತಿರುವ‌ ಹಲವು ಕೋರ್ಸ್‌ ಅನ್ನು ಮಾಡಿದವರಲ್ಲಿ ಮಾತನಾಡಿದಾಗ ಕೇವಲ ಶರೀರ ಪೋಷಣೆಗೆ ಸಂಭದಪಟ್ಟ ಪಠ್ಯಕ್ರಮವಲ್ಲದೆ ಮನಸ್ಸು , ಆತ್ಮದ ಬಗೆಗಿನ ವಿಷಯಗಳೆಲ್ಲಾ ಅಪ್ರಸ್ತುತವೆಂದರು..

ಪರಿಣಾಮ…

ಸಂಪತ್ತಿನ ಅಸಮತೋಲ,
ಮನಶ್ಯಾಂತಿಗೆ ಅಶ್ಲೀಲತೆಯ ಮೊರೆ,
ನಿರ್ಲಜ್ಜೆ ವ್ಯಾಪಕತೆ,
ಇನ್ನೂ ಮುಂದುವರಿದು ಹೇಳುದಾದಲ್ಲಿ ಜಾಗತೀಕರಣ, ಉದಾರೀಕರಣ,
ಬಂಡವಾಳೀಕರಣದ ಜಗತ್ತು ಶಿಕ್ಷಣವನ್ನು ಅಲಿಖಿತವಾಗಿ ಖರೀದಿಸಿತು…

ಕೊಂಡು ಕೊಳ್ಳುವಿಕೆ,ಹಂಚುವಿಕೆ, ಇಲ್ಲದವರ ಶಿಕ್ಷಣದ ಹೊಣೆಗಾರಿಕೆ ಮಾಯವಾಗಿ ಆರ್ಥಿಕ ಸ್ತಿತಿಗನುಸಾರ ಶಾಲಾ ಕಾಲೇಜುಗಳ ನಿರ್ಮಾಣವಾಯಿತು…
ಸರಕಾರಿ ಶಾಲೆಗಳು ಬಡತನದ ರೇಖೆಗಿಂತ ಕೆಳಗಿರುವವರ‌‌ ಸೊತ್ತಾಗುವಂತೆ ಮಾಡುವಲ್ಲಿ‌ ವ್ಯಾಪರೀಕರಣವು‌‌ ಯಶಸ್ವಿಯಾಯಿತು.

ಕಲಿಕಾ ಯಂತ್ರದಂತೆ ಹೆತ್ತವರು ಮಕ್ಕಳನ್ನು ಬೆಳೆಸಿದ ಕಾರಣಕ್ಕೆ ಹೆತ್ತವರನ್ನೇ ಯಂತ್ರವನ್ನಾಗಿಸಿ ವ್ರದ್ದಾಶ್ರಮವೆಂಬ ಕಾರ್ಖಾನೆಗೆ ಸಾಗಹಾಕಿದರು…

ಮೌಲ್ಯವನ್ನು ಕೇವಲ ಅಲಂಕಾರಿಕವಾಗಿ ಮಾಡಿರುವ ಶಿಕ್ಷಣ ವ್ಯವಸ್ಥೆಯು ಮರಳಿ ಮೌಲ್ಯಾದಾರಿತ ಶಿಕ್ಷಣಕ್ಕೆ ಕೂಗು ಹಾಕುವುದು ಭವಿಷ್ಯದ ತಲೆಮಾರಿಗೆ ಆಶಾಕಿರಣವಾದೀತೆಂದು ಆಶಿಸೋಣವೇ……

 

 

 

LEAVE A REPLY

Please enter your comment!
Please enter your name here