ಲೇಖಕರು : ರಿಯಾಝ್ ಅಹ್ಮದ್ ಕೊಪ್ಪಳ

1947ರಲ್ಲಿ ಪಾಕಿಸ್ತಾನದೊಳಗೆ ಅಲ್ಪಸಂಖ್ಯಾತರ ಜನಸಂಖ್ಯೆ ಶೇ.23ರಷ್ಟಿತ್ತು.
ಆದರೆ 2011ರಲ್ಲಿ ಶೇ3.7ಕ್ಕೆ ಇಳಿಯಿತು. 1947ರಲ್ಲಿ ಬಾಂಗ್ಲಾದೇಶದಲ್ಲಿ
ಅಲ್ಪಸಂಖ್ಯಾತರ ಜನಸಂಖ್ಯೆಯು ಶೇ.22ರಷ್ಟು ಇತ್ತು. ಆದರೆ 2011ರಲ್ಲಿ ಅದು
ಶೇ.7.8ರಷ್ಟಾಯಿತು. ಹಾಗಾದರೆ ಜನರೆಲ್ಲ ಎಲ್ಲಿ ಹೋದರು? ಒಂದೋ ಅವರು
ಮತಾಂತರಗೊಂಡರು ಅಥವಾ ಮರಣ ಹೊಂದಿರಬಹುದು ಅಥವಾ
ಬಹಿಷ್ಕಾರಕ್ಕೊಳಗಾಗಿರಬಹುದು. ಇಲ್ಲವಾದರೆ ಭಾರತಕ್ಕೆ ಬಂದಿರಬಹುದು” ಎಂದು
ಸಿಎಎ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತಾ ಅಮಿತ್ ಶಾ ಅವರು ಹೇಳಿಕೆಯನ್ನು
ನೀಡಿದರು.

ಆದರೆ ಈ ಆರೋಪಗಳು ಸತ್ಯವೋ ಸುಳ್ಳೋ… ?

ಇಲ್ಲಿ ಕೆಲವು ನಿಜಾಂಶಗಳಿವೆ.

  1. ಪಾಕಿಸ್ತಾನವು ಭಾರತದಿಂದ ಬೇರ್ಪಟ್ಟ ಕಾರಣ ಯಾವುದೇ ಜನಗಣತಿ
    ಅಂಕಿ ಅಂಶಗಳನ್ನು ಪಾಕಿಸ್ತಾನವು ಹೊಂದಿರಲಿಲ್ಲ.
  2. ಇದು 1947ರಲ್ಲಿ ಪಾಕಿಸ್ತಾನವನ್ನು ಒಂದುಗೂಡಿಸಿತು. ಆದ್ದರಿಂದ ಬಾಂಗ್ಲಾದೇಶದ
    ಬಗ್ಗೆ ಶಾ ಅವರು ನೀಡಿದ ಮಾಹಿತಿಯು ಸುಳ್ಳಾಗಿದೆ.
  3. ಪಾಕಿಸ್ತಾನದಲ್ಲಿ ನಿಜವಾಗಿಯೂ ಜನಗಣತಿ ನಡೆದಿರುವುದು 1951ರಲ್ಲಿಯಾಗಿತ್ತು.
    ಅಂದರೆ ಅವಿಭಾಜಿತ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ ಸೇರಿದಂತೆ)
  4. 1951ರ ಜನಗಣತಿಯ ಪ್ರಕಾರ, ಪಾಕಿಸ್ತಾನದ ಒಟ್ಟಾರೆ ಜನಸಂಖ್ಯೆಯಲ್ಲಿ
    ಮುಸ್ಲಿಮರ ಪಾಲು ಶೇ.85.80 ಆಗಿದ್ದರೆ, ಮುಸ್ಲಿಮೇತರರ ಪಾಲು ಶೇ. 14.20.
    (ಅವಿಭಾಜಿತ ಪಾಕಿಸ್ತಾನ)
  5. ಪಾಕಿಸ್ತಾನವನ್ನು ಆಗ ಪಶ್ಚಿಮ ಪಾಕಿಸ್ತಾನ(ಈಗಿನ ಪಾಕಿಸ್ತಾನ) ಮತ್ತು ಪೂರ್ವ
    ಪಾಕಿಸ್ತಾನ (ಈಗಿನ ಬಾಂಗ್ಲದೇಶ) ಎಂದು ಕರೆಯಲಾಗುತ್ತಿತ್ತು.
  6. ಪಶ್ಚಿಮ ಪಾಕಿಸ್ತಾನದಲ್ಲಿ, ಮುಸ್ಲಿಮೇತರ ಜನಸಂಖ್ಯೆ ಕೇವಲ ಶೇ.
    3.44ರಷ್ಟಿದ್ದರೆ, ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲದೇಶ) ಅವರು ಶೇ.
    23.30%ರಷ್ಟು ಜನಸಂಖ್ಯೆಯನ್ನು ಒಳಗೊಂಡಿರುವ ಗಮನಾರ್ಹ ಪಾಲನ್ನು
    ಹೊಂದಿದ್ದಾರೆ.
  7. ನಂತರ ಪಾಕಿಸ್ತಾನದಲ್ಲಿ ಮುಂದಿನ ಜನಗಣತಿಯನ್ನು 1961ರಲ್ಲಿ
    ನಡೆಸಲಾಯಿತು ಪಶ್ಚಿಮ ಪಾಕಿಸ್ತಾನದ ಒಟ್ಟು ಜನಸಂಖ್ಯೆಯನ್ನು
    ಮುಸ್ಲಿಮೇತರರ ಜನಸಂಖ್ಯೆಯು ಶೇ.24 ಇಳಿದರೆ, ಪೂರ್ವ ಪಾಕಿಸ್ತಾನದಲ್ಲಿ
    ಮುಸ್ಲಿಮೇತರರ ಜನಸಂಖ್ಯೆಯು ಶೇ.19.57ಕ್ಕೆ ಇಳಿಯಿತು ಎಂದು ಜನಗಣತಿ
    ತಿಳಿಸಿಕೊಡುತ್ತದೆ.
  8. 1972ರ ಹೊತ್ತಿಗೆ ಪಾಕಿಸ್ತಾನ ತನ್ನ ಮೂರನೇ ಜನಗಣತಿಯನ್ನು
    ನಡೆಸಿದಾಗ, 1947ರಲ್ಲಿ ಪೂರ್ವ ಪಾಕಿಸ್ತಾನವನ್ನು ಸ್ವಾತಂತ್ರ್ಯಗೊಳಿಸಲಾಗಿತ್ತು
    ಮತ್ತು ಈಗ ಅದನ್ನು ಬಾಂಗ್ಲಾದೇಶ ಎಂದು ಕರೆಯಲಾಗುತ್ತದೆ.
  9. 1974ರಲ್ಲಿ ಬಾಂಗ್ಲಾದೇಶದಲ್ಲಿ ಮುಸ್ಲಿಮೇತರರ ಜನಸಂಖ್ಯೆಯ ಪಾಲು
    ಶೇ.14.60ಕ್ಕೆ ಇಳಿಯಿತು ಮತ್ತು
    1981ರಿಂದ ಶೆ.13.40ರಷ್ಟಾಯಿತು.
    1991ರಲ್ಲಿ ಶೇ. 11.70 ಮತ್ತು 2001ರಲ್ಲಿ ಶೇ. 10.40.
  10. ಬಾಂಗ್ಲಾದೇಶದಲ್ಲಿ (ಹಿಂದೆ ಪೂರ್ವ ಪಾಕಿಸ್ತಾನ ಎಂದು ಕರೆಯಲ್ಪಡುತ್ತಿತ್ತು)
    1951 ಮತ್ತು 2011ರ ನಡುವೆ ಮುಸ್ಲಿಮೇತರರ ಜನಸಂಖ್ಯೆಯ ಪಾಲು
    ಕುಸಿದಿದೆ. ಹೀಗಾಗಿ 1951 ಮತ್ತು 2011ರ ನಡುವೆ ಮುಸ್ಲಿಮೇತರರ
    ಜನಸಂಖ್ಯೆಯು ಶೇ. 23.20ರಿಂದ ಶೇ.19.40ಕ್ಕೆ ಇಳಿದಿದೆ.
  11. ಪಶ್ಚಿಮ ಪಾಕಿಸ್ತಾನದಲ್ಲಿ (ಈಗಿನ ಪಾಕಿಸ್ತಾನ) ಜನಗಣತಿಯ ಪ್ರಕಾರ
    ಮುಸ್ಲಿಮೇತರರ ಪಾಲು
    1951: 3.44%
    1961: 2.80%
    1972: 3.25%
    1981: 3.33%
    1998: 3.70%

    ಆದ್ದರಿಂದ ಗೃಹ ಸಚಿವರು ಹೇಳಿದ ಎಲ್ಲಾ ಅಂಕಿಅಂಶಗಳು ಮತ್ತು
    ದಾಖಲೆಗಳು ಸುಳ್ಳು.

LEAVE A REPLY

Please enter your comment!
Please enter your name here