ಲೇಖಕರು : ಅಡ್ವಕೇಟ್ ನಬೀಲಾ ಹಸನ್

ಫೆಬ್ರವರಿ 10ರಂದು ಜಾಮಿಯಾದಲ್ಲಿ ನಡೆದ ಘಟನೆಯ ಬಗ್ಗೆ ವಕೀಲೆಯ ಬರಹ

ನಿರ್ಧಯ ಕಾನೂನಾದ ಸಿಎಎ ಮತ್ತು ಎನ್.ಆರ್.ಸಿ ವಿರುದ್ಧ ಪ್ರತಿಭಟಿಸಿದಾಗ ಪೋಲಿಸ್ ಸಿಬ್ಬಂದಿಗಳಿಂದ ಕೊಲ್ಲಲ್ಪಟ್ಟ ಸಂತ್ರಸ್ತರ ಕುಟುಂಬಗಳೊಂದಿಗಿನ ಒಗ್ಗಟ್ಟನ್ನು ಬಿಂಬಿಸಲು, 10-2-2020ರಂದು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ಸಂಸತ್ತಿನ ವರೆಗೆ ಮೆರವಣಿಗೆ ಹೊರಡಲು ನಿರ್ಧರಿಸಿದ್ದರು. ಪುರುಷರು ಮತ್ತು ಮಹಿಳೆಯರನ್ನೊಳಗೊಂಡ ನೂರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಹೊರಗೆ ಬೀದಿಗಳಲ್ಲಿ ಸೇರಿದ್ದರು. ಶಾಂತಿಯುತ ಪ್ರತಿಭಟನಾಕರರು ಸಂಸತ್ತಿಗೆ ಶಾಂತಿಯುತವಾಗಿ ಮೆರವಣಿಗೆ ನಡೆಸುವ ತಮ್ಮ ಪ್ರಜಾಪ್ರಭುತ್ವ ಹಕ್ಕನ್ನು ಚಲಾಯಿಸುವುದನ್ನು ತಡೆಯುವ ಸಲುವಾಗಿ ರಸ್ತೆಯ ಎರಡು ಬೀದಿಗಳನ್ನು ಸಶಸ್ತ್ರ ಪೋಲಿಸ್ ಪಡೆಗಳಿದ್ದವು.ಎನ್‍ಆರ್‍ಸಿ ಮತ್ತು ಸಿಎಎ ವಿರುದ್ಧವಾದ ಪ್ರತಿಭಟನೆಗಳನ್ನು ಮುನ್ನಡೆಸುತ್ತಿರುವವರೆಲ್ಲ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂಬುದು ದೇಶಕ್ಕೆ ಒಂದು ಸುದ್ಧಿಯೇ ಅಲ್ಲ. ಅನುಚಿತವಾಗಿ ಮತ್ತು ಕರುಣೆ ಇಲ್ಲದೆ ಅವರನ್ನು ದೆಹಲಿ ಪೋಲಿಸರು (ಯಾವುದೇ ಪ್ರಾಧಿಕಾರ) ಅವರನ್ನು ಗುರಿಯಾಗಿಸಿಕೊಂಡರು. ಸಾರ್ವಜನಿಕರನ್ನು ರಕ್ಷಿಸಬೇಕಾದ ಪೋಲಿಸರು, ಪ್ರತಿಭಟನಾಕರರನ್ನು ತೆರವುಗೊಳಿಸುವುದಕ್ಕಾಗಿ ಮುಂಭಾಗದಲ್ಲಿ ನಿಂತಿದ್ದ ಜನರ ಮೇಲೆಯೇ ಹಲ್ಲೆ ಎಸಗುವಂತಹ ಭೀಕರ ಅಪರಾಧಗಳಿಗೆ ಕೈ ಹಾಕಿದರು. ಆಕ್ರಮಣಕಾರಿ ಪೋಲಿಸರು ಪ್ರತಿಭಟನಾಕಾರರ ಖಾಸಗಿ ಭಾಗಗಳಿಗೆ ಹೊಡೆದರು. ಮುಖ್ಯವಾಗಿ ಮಹಿಳೆಯರನ್ನೇ ಗುರಿಯಾಗಿರಿಸಿಕೊಂಡರು. ಪ್ರತಿಭಟನೆಯನ್ನು ಮುಂದುವರಿಸುವುದನ್ನು ತಡೆಯಲು ಮತ್ತು ಪ್ರತೀ ವ್ಯಕ್ತಿಗಳ ಲೈಂಗಿಕ ಘನತೆಯನ್ನು ಉಲ್ಲಂಘಿಸುವ ಸಲುವಾಗಿ ಈ ಲೈಂಗಿಕ ಕಿರುಕುಳ ಮತ್ತು ಹಲ್ಲೆಯನ್ನು ನಡೆಸಲಾಯಿತು.ಪೋಲಿಸ್ ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸುವಾಗ ಮತ್ತು ಬ್ಯಾರಿಕೇಡ್‍ಗಳನ್ನು ದಾಟುವಾಗ ಶಾಹೀನ್ ಮತ್ತು ಇಜಾರ್ ಎಂಬ ವಿದ್ಯಾರ್ಥಿಗಳನ್ನು ಪೋಲಿಸ್ ಸಿಬ್ಬಂದಿಯೊಬ್ಬರು ಬಲವಂತವಾಗಿ ಬಸ್‍ಗೆ ಎಳೆದೊಯ್ದು ಬಂಧಿಸಿದರು. ಪೋಲಿಸರು ಅವರನ್ನು ಹಿಂಸಿಸಿದರು. ಹಾಗೆಯೇ ಬಸ್ಸಿನಲ್ಲಿ ಬಂಧನಕ್ಕೊಳಗಾದಗ, ಪೋಲಿಸರು ಅವರನ್ನು ಲಾಠಿಗಳಿಂದ ಕ್ರೂರವಾಗಿ ಹೊಡೆದರು ಅವರ ದೇಹವನ್ನು ಬೂಟುಗಳಿಂದ ಮತ್ತು ಕೈಗಳಿಂದ ಒದೆಯುತ್ತಾರೆ. ಅದರಲ್ಲೂ ಮುಖ್ಯವಾಗಿ ಖಾಸಗಿ ಭಾಗಗಳಿಗೆ ಒದೆಯುತ್ತಾರೆ. ಈ ಅಮಾನವೀಯ ಕೃತ್ಯ ಅಂದರೆ ಚಿತ್ರಹಿಂಸೆ ಒಂದು ಗಂಟೆಯ ವರೆಗೆ ನಡೆದಿತ್ತು ಎಂಬುವುದನ್ನು ಅವರೇ ಒಪ್ಪಿಕೊಂಡರು.ಅದು ಸುಮಾರು 4:30ರ ಸಮಯ ಆಗಿತ್ತು, ಮರುದಿನ ಪಟ್ಟಿ ಮಾಡಲಾದ ಪ್ರಕರಣದ ತಯಾರಿಗಾಗಿ ಕಛೇರಿಯಲ್ಲಿದ್ದೆ. ಪೋಲಿಸರ ಹಿಂಸಾಚಾರಕ್ಕೆ ಒಳಗಾಗಿ, ವಿದ್ಯಾರ್ಥಿಗಳು ಕ್ರೂರವಾಗಿ ಗಾಯಗೊಂಡಿರುವ ಛಾಯಾಚಿತ್ರಗಳು ಮತ್ತು ವೀಡಿಯೋಗಳಿಂದ ನನ್ನ ಫೋನ್ ಪ್ರವಾಹಕ್ಕೀಡಾಗಿತ್ತು. ಅನ್ಸಾರಿ ಆಸ್ಪತ್ರೆಗೆ ತಕ್ಷಣ ತಲುಪಲೆಂದು ವಿದ್ಯಾರ್ಥಿಗಳು ನನಗೆ ಕರೆ ಮಾಡುತ್ತಿದ್ದರು. ಈ ದೂರವಾಣಿ ಸಂಭಾಷಣೆಗಳು ನನ್ನನ್ನು 15 ಡಿಸೆಂಬರ್ 2019ರ ದುರದೃಷ್ಟಕರ ರಾತ್ರಿಗೆ ಕರೆದೊಯ್ಯಿತು. ನಾನು ಆಟೋ ರಿಕ್ಷಾದ ಮೂಲಕ ವಿಶ್ವವಿದ್ಯಾಲಯಕ್ಕೆ ಧಾವಿಸಿದೆ. ನಾನು ತೆರಳಬೇಕಾದ ನಿರ್ಧಿಷ್ಟ ಸ್ಥಳಕ್ಕೆ ತಲುಪಲು ಆಟೋ ಚಾಲಕ ನಿರಾಕರಿಸಿದನು ಮತ್ತು ನಾನು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಅನ್ಸಾರಿ ಆಸ್ಪತ್ರೆಗೆ ತಲುಪಲು ಇನ್ನೂ ನಡೆಯಬೇಕಾಗಿ ಬಂತು. ಆದರೆ ಜಾಮಿಯಾ ಮಿಲಿಯಾ ಇಸ್ಲಾಮಿಯ ವಿಶ್ವವಿದ್ಯಾಲಯಕ್ಕೆ ಹೋಗುವ ದಾರಿಯನ್ನು ನೂರಾರು ಪೋಲಿಸರು ತಡೆಯುತ್ತಿದ್ದರು. ಎಲ್ಲೆಡೆಯೂ ಭೀತಿ ಆವರಿಸಿದಂತಹ ಚಿತ್ರಣ. ಎಲ್ಲರೂ ತಮ್ಮ ಜೀವ ರಕ್ಷಿಸಿಕೊಳ್ಳಲು ಓಡುತ್ತಿದ್ದರು. ನಾನು ಆ ಸ್ಥಳದಲ್ಲೇ ಹೆಪ್ಪುಗಟ್ಟಿದಂತಿದ್ದೆ, ಆ ಕೆಲವು ಸೆಕೆಂಡುಗಳು ನನಗೆ ಗಂಟೆಗಳಂತೆ ಭಾಸವಾಯಿತು. ನಾನೇ ನನ್ನನ್ನು ಅಲ್ಲಿಂದ ಎಳೆದುಬಿಟ್ಟೆ. (ಅದು ಆ ಸಮಯದ ಅಗತ್ಯವಾಗಿತ್ತು.)ಎಲ್ಲಾ ಗಾಯಗೊಂಡ ವಿದ್ಯಾರ್ಥಿಗಳು ಅಲ್ ಶಿಫಾ ಆಸ್ಪತ್ರೆಗೆ ಕೊಂಡೊಯ್ದರಿಂದ ನನ್ನ ಗೆಳೆಯ ಕರೆಮಾಡಿ ಅಲ್ಲಿಗೆ ತೆರಳುವಂತೆ ತಿಳಿಸಿದ. ನಾನು ಅಲ್ಲಿಗೆ ತೆರಲುವ  ದಾರಿಯಲ್ಲಿದ್ದಾಗ ನನ್ನ ಮನದಲ್ಲಿ ಹಲವು ಪ್ರಶ್ನೆಗಳು ಪ್ರತಿಧ್ವನಿಸಿದವು. ನಾವು ಮಾಡಿದ ತಪ್ಪಾದರೂ ಏನು? ಅಲ್ಪಸಂಖ್ಯಾತರಾಗಿರುವುದು ಅಪರಾಧವೇ? ಮುಸ್ಲಿಮನಾಗಿ ಜನಿಸಿರುವುದೇ ಪಾಪವೇ? ಯಾವುದು ನ್ಯಾಯ?ಆದರೆ ನಿಜವಾಗಿಯೂ, ನಾನು ಮುಸ್ಲಿಮ್ ಎಂಬ ಬಗ್ಗೆ ಇವತ್ತು ಹೆಮ್ಮೆ ಪಟ್ಟಷ್ಟು ಯಾವತ್ತೂ ಪಟ್ಟಿರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ನಾನು ನನ್ನ ಸಮುದಾಯದ ಮತ್ತು ಅದರ ಹೊರಗಿನ ಜನರ ಪ್ರೀತಿಗೆ ಬಿದ್ದಿರುವೆ. ನನ್ನ ಜನರು, ನನ್ನ ಸಮುದಾಯ ಮತ್ತು ನನ್ನ ದೇಶವನ್ನು ರಕ್ಷಿಸಬಹುದೆಂಬ ಕೆಲವು ಮಾಂತ್ರಿಕ ದಂಡವನ್ನು ನಾನು ಹೊಂದಿದ್ದೇನೆ ಎಂದು ಬಯಸುತ್ತೇನೆ. ಈ ಎಲ್ಲಾ ಆಲೋಚನೆಗಳೊಂದಿಗೆ ನಾನು ಅಲ್-ಶಿಫಾ ಆಸ್ಪತ್ರೆ ತಲುಪಿದೆ. ಆಸ್ಪತ್ರೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಅವರ ಕುಟುಂಬಸ್ಥರು, ಸ್ನೇಹಿತರು ಮತ್ತು ಮಾಧ್ಯಮಗಳು ತುಂಬಿದ್ದವು. ಅವ್ಯವಸ್ಥೆ ಎಲ್ಲೆಡೆಯೂ ಆವರಿಸಿತ್ತು ಮತ್ತು ಅದನ್ನು ಎಲ್ಲರೂ ಅನುಭವಿಸುತ್ತಿದ್ದರು.ನಾನು ಆಸ್ಪತ್ರೆಗೆ ತಲುಪಿದಾಗ 20 ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ರಾತ್ರಿಯಾಗುವಷ್ಟರಲ್ಲಿ ಅದು 30ಕ್ಕೆ ತಲುಪಿತು. ಶಾಹೀನ್ ಮತ್ತು ಇಜಾರ್ ವಿವರಿಸಿದ ಘಟನೆಗಳಂತೂ, ನನ್ನ ದೇಹವನ್ನು ಶೀತಲಮಯವನ್ನಾಗಿಸಿತು. ಶಾಹೀನ್ ಕಾರಾಗೃಹದಲ್ಲಿದ್ದ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಯೋರ್ವರು ಅಪಹಾಸ್ಯಮಾಡಿ, “ಕಾಶ್ಮೀರದಂತೆ ನಿಮಗೂ ಆಝಾದಿ ಬೇಕೆ ನಾವು ಅಲ್ಲಿ ಮಾಡಿದಂತೆಯೇ ಮಾಡುವೆವು” ಎಂದು ಹೇಳಿದರು. “ನಮಗೆ ನೋವಾಗುತ್ತಿಲ್ಲ ಅದೆಂದೂ ನಮಗೆ ಆಗಿರಲಿಲ್ಲ. ಬದಲಾಗಿ ಅವಮಾನ, ದಬ್ಭಾಳಿಕೆ, ತಾರತಮ್ಯ ಮತ್ತು ಅಮಾನವೀಯತೆಯಾಗಿದೆ. ನಮಗೆ ನಿಜವಾಗಿಯೂ ನೋವನ್ನುಂಟು ಮಾಡುವುದು. ಆದರೆ ನಾವು ನಮ್ಮ ಘನತೆ ಮತ್ತು ನಮ್ಮ ಹಕ್ಕುಗಳನ್ನು ಪುನರುಜ್ಜೀವನಗೊಳಿಸುವವರೆಗೂ, ಹಿಂತಿರುಗಿ ಹೋರಾಟ ನಡೆಸುತ್ತಲೇ ಇರುತ್ತೇವೆ. ಘನತೆ ಇಲ್ಲದೇ ಜೀವನ ನಡೆಯುವುದರಲ್ಲಿ ನಾನೆಂದೂ ನಂಬಿಕೆ ಇಡುವುದಿಲ್ಲ. ನಮ್ಮ ಅಸಹಾಯಕತೆಯಿಂದ ನಾವು ಹಲವು ವಾರ ಸತ್ತಿದ್ದೇವೆ. ಆದರೆ ಅದಕ್ಕೂ ಒಂದು ಮಿತಿಯಿದೆ” ಎಂದು ಶಾಹೀನ್ ಹೇಳುತ್ತಾನೆ.“ಇದು ನನ್ನ ಕೊನೆಯ ದಿನ ಎಂದು ನಾನು ಭಾವಿಸಿದೆ. ನಮ್ಮನ್ನು ಕೊಲ್ಲಲೇಬೇಕೆಂಬಂತೆ ಪೋಲಿಸರು ನಮಗೆ ಹೊಡೆಯುತ್ತಿದ್ದರು. ಅವರು ಭಾರವಾದ ಬೂಟುಗಳಿಂದ ಒದೆಯುತ್ತಿದ್ದರು. ಅವರು ನಮ್ಮ ಜಾತಿಯನ್ನು ಅವಮಾನಿಸಿದರು. ಬಹುಸಂಖ್ಯಾತರ ರಾಜ್ಯದಲ್ಲಿ ಅಲ್ಪಸಂಖ್ಯಾತರ ಉದ್ಗಾರವು ಕೇಳಿಬಂತ್ತಾದರೂ, ಈ ಭಯಾನಕ ಕಾರಾಗೃಹದ ಹಿಂಸಾಚಾರವನ್ನು ಕೇಳುತ್ತಾ ಮುಗುಳ್ನಕ್ಕರು” ಎಂದು ಹೇಳುತ್ತಾನೆ.ಪೋಲಿಸರು ಯಾವ ರೀತಿ ಹೆಂಗಸಿನ ಖಾಸಗಿ ಭಾಗಗಳಿಗೆ ಮತ್ತು ಹೊಟ್ಟೆಗೆ ಹೊಡೆಯುತ್ತಿದ್ದರು ಎಂಬ ಭಯಾನಕ ವಿಷಯಗಳನ್ನು ಮಹಿಳೆಯರು ಹೇಳುತ್ತಿದ್ದರು. ಪ್ರತಿಭಟನಾಕಾರಳಾಗಿದ್ದ ಚಂದಾಳನ್ನು ಪೋಲಿಸರು ಆಕೆಯ ಕುರ್ತಾವನ್ನು ಎಳೆಯುವುದರ ಮೂಲಕ ಹಲ್ಲೆ ನಡೆಸಿ ಹಲವಾರು ಬಾರಿ ಕಪಾಳಮೋಕ್ಷ ಮಾಡಿದರು ಎಂದು ಆಕೆಯು ಹೇಳಿದಳು. ನಂತರ ಆಕೆಯನ್ನು ಬಾದರ್‍ಪುರ್ ಪೋಲಿಸ್ ಠಾಣೆಗೆ ಕರೆದೊಯ್ದು ಬಂಧಿಸಿದರು.ಹಂಜಾಲನ ಸಹೋದರಿಯರು ಮತ್ತು 56 ವಯಸ್ಸಿನ ತಾಯಿ ಕೂಡ ಪೋಲಿಸ್ ಹಿಂಸಾಚಾರದ ಸಂತ್ರಸ್ತೆಯರಾಗಿದ್ದರು.ಈ ಪ್ರತಿಭಟನಾಕಾರರಾದ ರಾಫಿಯಾರವರ ಸ್ಥಿತಿಯು ಗಂಭೀರವಾದ ಕಾರಣ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ಪೋಲಿಸರು ಗಾಳಿಯಲ್ಲಿ ಏನನ್ನು ಸಿಂಪಡಿಸುತ್ತಿದ್ದರು. ಅದು ನಮ್ಮನ್ನು ಉಸಿರುಗಟ್ಟುವಂತೆ ಮಾಡಿತು ಎಂದು ನನಗೆ ಹೇಳಿದರು. “ಮಹಿಳಾ ಪೋಲಿಸರು ನನ್ನನ್ನು ಬ್ಯಾರಿಕೇಡ್‍ನಿಂದ  ನೆಲಕ್ಕೆ ತಳ್ಳಿದರು ಮತ್ತು ಪೋಲಿಸರು ನನ್ನ ಖಾಸಗಿ ಭಾಗಗಳಿಗೆ ಮತ್ತು ನನ್ನ ಎದೆಯ ಮೇಲೆ ಬೂಟ್‍ನಿಂದ ಹೊಡೆದಿದ್ದರು” ಎಂದು ರಾಫೀಯಾ ಹೇಳಿದರು. ಇನ್ನೊಬ್ಬ ಪ್ರತಿಭಟನಾಕಾರರಾದ ಇಮಾನ್‍ರವರ ಖಾಸಗಿ ಭಾಗಗಳಿಗೆ ಪೋಲಿಸರು ಕ್ರೂರವಾಗಿ ಹಲ್ಲೆ ಮಾಡಿದ್ದಾರೆ ಮತ್ತು ಅದರಿಂದ ಅವರಿಗೆ ಆಂತರಿಕ ಗಾಯಗಳಾಗಿದೆ. ಎದೆ ಮತ್ತು ಖಾಸಗಿ ಭಾಗಗಳಿಗೆ ಆದ ಗಾಯಗಳು ಮಹಿಳೆಯರಿಗಾದ ಸಾಮಾನ್ಯ ಗಾಯಗಳಾಗಿದೆ.ಇದು ಸಾರ್ವಜನಿಕರ ಬಗ್ಗೆ ಎಲ್ಲಾ ಹಂತದ ಸೂಕ್ಷ್ಮತೆಯನ್ನು ದಾಟಿದ ಪೋಲಿಸರ ಸಾಹಸವನ್ನು ಬಹಿರಂಗ ಪಡಿಸುತ್ತದೆ. ಈ ಘಟನೆಗಳು ನಗರದ ಆಡಳಿತದ ಮೇಲೆ ಅವಮಾನಕರವಾಗಿದೆ ಮತ್ತು ದೆಹಲಿ ಪೋಲಿಸರು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಕಾನೂನು ಮತ್ತು ನ್ಯಾಯವನ್ನು ಕಾರ್ಯಗತಗೊಳಿಸುವಲ್ಲಿ ರಾಜ್ಯವು ಉದ್ದೇಶಪೂರ್ವಕವಾಗಿ ಹೇಗೆ ವಿಫಲವಾಗಿದೆ ಎಂಬುವುದನ್ನು ಈ ಅನುಭವಗಳು ಎತ್ತಿ ತೋರಿಸುತ್ತದೆ.ಪೋಲಿಸರ ಈ ಅಮಾನವೀಯ ಮತ್ತು ಕಾನೂನು ಬಾಹಿರ ಕೃತ್ಯಗಳು ಪ್ರತಿಭಟನಾಕಾರರಿಗೆ ಹಾನಿ ಮಾಡುವಲ್ಲಿ ಮತ್ತು ಪ್ರಜಾಪ್ರಭುತ್ವದ ಮೂಲ ತತ್ವಕ್ಕೆ ವಿರುದ್ಧವಾದುದಾಗಿದೆ. ಇದು ವಿದ್ಯಾರ್ಥಿಗಳ ಮೇಲೆ ಪೋಲಿಸ್ ದೌರ್ಜನ್ಯ ಮತ್ತು ಪ್ರಜಾಪ್ರಭುತ್ವವನ್ನು ಕೊಲ್ಲುವ ಮತ್ತೊಂದು ದಿನವಾಗಿ ಮಾರ್ಪಟ್ಟಿದೆ. ಇದು ಎನ್‍ಆರ್‍ಸಿ ಮತ್ತು ಸಿಎಎ ವಿರುದ್ಧದ ಆಂದೋಲನವನ್ನು ಬೇಧಿಸುವ ಒಂದು ಸಾಹಸವಾಗಿದೆ. ಏಕತೆಯನ್ನು ನಾಶಮಾಡಲು ತಮ್ಮ ಗೂಂಡಾಗಳನ್ನು ಸಮವಸ್ತ್ರದಲ್ಲಿ ಕಳುಹಿಸುವ ಉನ್ನತ ಅಧಿಕಾರದ ಮತ್ತೊಂದ ವಿಫಲ ಪ್ರಯತ್ನವಾಗಿ ಇದು ಉಳಿದಿದೆ. ಇದು ಪ್ರತಿಭಟನಾಕಾರರಲ್ಲಿ ಮತ್ತೊಂದು ತರಂಗದ ಅಲೆಯನ್ನು ತರುತ್ತದೆ. ಮಹಿಳೆಯರು ದೀರ್ಘಕಾಲ ಬದುಕಲಿ ಜಾಮಿಯಾ ಧೀರ್ಘಕಾಲ ಬದುಕಲಿ.

ಕೃಪೆ : ದಿ ಕಂಪನಿಯನ್ ಅನುವಾದ :ಸುಹಾನ ಸಫರ್

LEAVE A REPLY

Please enter your comment!
Please enter your name here