ಪುಸ್ತಕ ವಿಮರ್ಶೆ

ಪ್ರೋ. ತೈಮೂತಿ ಸ್ನೈಡರ್

ಉಪನ್ಯಾಸಕರು, ಇತಿಹಾಸ ವಿಭಾಗ, ಯಾಲೆ ವಿಶ್ವವಿದ್ಯಾಲಯ

 

ನಾಝಿಗಳ ಬೆಳವಣಿಗೆ ಕರಿತು ನಾವು ಕೇಳಿರುವುದಕ್ಕೂ, ನಾವು ಆಲೋಚಿಸುವುದರ ನಡುವೆ ಆಗಾಧವಾದ ವ್ಯತ್ಯಾಸವಿದೆ. 1930ರ ಜರ್ಮನ್ನರು ನಮ್ಮಿಂದ ವ್ಯತ್ಯಸ್ಥವಾಗಿದ್ದರು ಮತ್ತು ಅವರ ತಪ್ಪುಗಳನ್ನು ನಾವು ಪರಿಗಣಿಸುವುದು ಮಾತ್ರ ನಮ್ಮನ್ನು ಶ್ರೇಷ್ಠರನ್ನಾಗಿ ದೃಢಪಡಿಸುತ್ತದೆ ಎಂಬುವುದನ್ನು ನಾವು ಲಘುವಾಗಿ ಪರಿಗಣಿಸಿದ್ದೇವೆ. ಆದರೆ, ವಿಚಾರವು ತದ್ವಿರುದ್ಧವಾಗಿದೆ. “ಡೆಥ್ ಆಫ್ ಡೆಮಾಕ್ರಸಿ”ಯಲ್ಲಿ ಬೆನ್ಜಮಿನ್ ಹಟ್ ರವರು ಅಂದಿನ ಜರ್ಮನಿ ಮತ್ತು ಇಂದಿನ ಅಮೇರಿಕಾ ಸಂಯುಕ್ತ ಸಂಸ್ಥಾನದ ನಡುವೆ ಹೋಲಿಕೆ ಮಾಡುತ್ತಿಲ್ಲ. ಆತನದ್ದು ಜರ್ಮನಿಯಲ್ಲಿನ ಸಾಂವಿಧಾನಿಕ ಆಡಳಿತದ ಅಂತ್ಯದ ಬಗೆಗಿನ ಅತ್ಯಂತ ಉತ್ತಮವಾದ ಅಧ್ಯಯನವಾಗಿದ್ದು, ಅದು ಆರಾಮದಾಯವಾದ ಊಹೆಗಳನ್ನು ಕರಗಿಸುತ್ತದೆ. ಜರ್ಮನ್ನರು ವೈರಿಗಳಾಗಿದ್ದ ಯುದ್ಧದ ಕುರಿತೋ ಅಥವಾ ಅವರು ಎಂದಿಗೂ ಮಾಡಬಾರದು ಎಂಬ ದೌರ್ಜನ್ಯದ ಚಿತ್ರಣ ಬಗೆಗೋ ಆತನು ಚರ್ಚಿಸುತ್ತಿಲ್ಲ. ಬದಲಾಗಿ, ಅಸಮರ್ಪಕ ಉಪಕರಣ ಮತ್ತು ದೋಷಪೂರಿತ ನಾಯಕರೊಂದಿಗೆ ಜಾಗತೀಕರಣದ ಸಂದಿಗ್ಧತೆಯನ್ನು ಎದುರಿಸುವ ಗಣರಾಜ್ಯದ ಕುಸಿತದ ಅಂಶವಾಗಿ ಹಿಟ್ಲರ್‍ನ ಬೆಳವಣಿಗೆಯನ್ನು ಆತನು ವ್ಯಕ್ತಪಡಿಸುತ್ತಾನೆ. ಎಚ್ಚರಿಕೆಯ ವಾಕ್ಯಗಳು ಮತ್ತು ಉತ್ತಮವಾದ ಸ್ಕಾಲರ್ಶಿಪ್‍ಗಳಿಂದ, ವ್ಯಕ್ತಿಗಳ ಉತ್ತಮವಾದ ರೇಖಾಚಿತ್ರಗಳು ಹಾಗು ಅರ್ಥಶಾಸ್ತ್ರ ಮತ್ತು ಸಂಸ್ಥೆಗಳ ಮೇಲಿನ ಸಂಕ್ಷಿಪ್ತ ಚರ್ಚೆಗಳಿಂದ ಈ ಘಟನೆಗಳು ಓದುಗರಿಗೆ ಇನ್ನಷ್ಟು ಹತ್ತಿರವಾಗುತ್ತದೆ.

ಹೆಟ್‍ನ ಪ್ರಕಾರವಾಗಿ ನಾಝಿಗಳು ಎಲ್ಲದಕ್ಕಿಂತಲೂ ಹೆಚ್ಚಾಗಿ, “ಜಾಗತೀಕರಣದ ವಿರುದ್ಧದ ರಾಷ್ಟ್ರೀಯವಾದಿ ಪ್ರತಿಭಟನಾ ಚಳುವಳಿ”. ಗ್ರೇಟ್ ಡಿಪ್ರೆಶನ್ ಜರ್ಮನಿಗೆ ಬೃಹತ್ ನಿರುದ್ಯೋಗವನ್ನು ತಂದುದಕ್ಕೂ ಮುಂಚೆಯೇ ಜಾಗತಿಕ ಆರ್ಥಿಕತೆಯ ಚಾಂಚಲ್ಯವು ಸರಳ ಉತ್ತರಗಳನ್ನು ಹೊಂದಿದ್ದ ರಾಜಕಾರಣಿಗಳಿಗೆ ಅವಕಾಶವನ್ನು ನೀಡಿತ್ತು. 1920ರ ತಮ್ಮ ಕಾರ್ಯಕ್ರಮದಲ್ಲಿ, “ವಿದೇಶಿ ರಾಷ್ಟ್ರಗಳ ಸದಸ್ಯರು(ನಾನ್ ಸಿಟಿಜನ್ಸ್) ಜರ್ಮನಿಯಿಂದ ಹೊರಹಾಕಬೇಕು” ಎಂದು ನಾಝಿಗಳು ಘೋಷಿಸಿದರು. ಮುಂದೆ ಸ್ವದೇಶವು ಪೂರ್ಣಗೊಳ್ಳಲಿದೆ: ಜರ್ಮನ್ನರು ತಮಗೆ ಸ್ವಾವಲಂಭಿಗಳಾಗಲು ಬೇಕಾಗಿರುವ ಪ್ರದೇಶವನ್ನು ವಶಪಡಿಸಿಕೊಳ್ಳುತ್ತಾರೆ ಮತ್ತು ನಂತರದಲ್ಲಿ ಪ್ರಪಂಚದ ಇತರ ಭಾಗಗಳಿಂದ ಪ್ರತ್ಯೇಕವಾದ ತಮ್ಮ ಸ್ವಂತ ಆರ್ಥಿಕತೆಯನ್ನು ಸೃಷ್ಟಿಸುತ್ತಾರೆ. ಗೋಬೆಲ್ಸ್ ಹೇಳಿದಂತೆ, “ನಾವು ಒಂದು ಗೋಡೆಯನ್ನು, ರಕ್ಷಣಾತ್ಮಕ ಗೋಡೆಯನ್ನು ನಿರ್ಮಿಸಲು ಬಯಸುತ್ತೇವೆ”. ಹಿಟ್ಲರ್‍ನು ಜಾಗತೀಕರಣದ ವಿಕಸಿತತೆಗಳು ಆರ್ಥಿಕ ಶಕ್ತಿಗಳ ಪರಿಣಾಮವಾಗಿ ಅಲ್ಲವೆಂದೂ, ಆದರೆ ಯಹೂದಿಯರ ಅಂತರಾಷ್ಟ್ರೀಯ ಪಿತೂರಿಯೆಂದೂ ಹೇಳಿದನು.

ಹಂಟರ್ ಕಾಲೇಜು ಮತ್ತು ನ್ಯೂಯಾರ್ಕ್ ನಗರ ವಿಶ್ವವಿದ್ಯಾನಿಲಯದ ಗ್ರಾಜ್ಯುಯೇಟ್ ಸೆಂಟರ್‍ನಲ್ಲಿ ಇತಿಹಾಸದ ಪ್ರಾಧ್ಯಾಪಕರಾದ ಹೆಟ್, ನೈತಿಕ ದುರಂತಕ್ಕೆ ಮುಂಚಿನ ನೈತಿಕ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಜರ್ಮನಿಯಲ್ಲಿ ನಡೆದುದಕ್ಕೆ ಯಹೂದಿಗಳು ಜವಾಬ್ದಾರರಾಗಿದ್ದರೆ, ನಂತರದಲ್ಲಿ ಜರ್ಮನ್ನರು ಬಲಿಯಾದರು ಮತ್ತು ಅವರ ಕಾರ್ಯಗಳು ಯಾವತ್ತೂ ರಕ್ಷಣಾತ್ಮಕವಾಗಿದ್ದವು. ರಾಜಕೀಯ ಬೆಜವಾಬ್ದಾರಿಯು ಅಧ್ಯಕ್ಷ ಪೌಲ್ ವಾನ್ ಹಿಂಡೆನ್‍ಬರ್ಗ್‍ರ ದುರದೃಷ್ಟಕರವಾದ ಉದಾಹರಣೆಯಿಂದ ಹರಿಯುತ್ತದೆ. ಒಂದನೇ ವಿಶ್ವ ಮಹಾಯುದ್ಧದ ಈಸ್ಟರ್ನ್ ಫ್ರಂಟ್‍ನ ಯುದ್ಧದಲ್ಲಿ ವಿಜಯಶಾಲಿಯಾಗಿ ಅವರು ಪ್ರಸಿದ್ಧರಾದರು. ಈ ಅಭಿನಂದನೆಗೆ ಅವರು ಪೂರ್ತಿಯಾಗಿ ಅರ್ಹರಾಗಿಯೂ ಇರಲಿಲ್ಲ. ಹಿಂಡೆನ್‍ಬರ್ಗ್ 1918ರಲ್ಲಿ ವೆಸ್ಟರ್ನ್ ಫ್ರಂಟ್‍ನಲ್ಲಿ ಸೋಲಿನ ವಾಸ್ತವಿಕತೆಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಯಹೂದಿಗಳು ಮತ್ತು ಸಮಾಜವಾದಿಗಲು ಜರ್ಮನಿಯ ಸೈನ್ಯವನು “ಹಿಂದಿನಂದ ಚುಚ್ಚಿದರು” ಎಂದು ಸುಳ್ಳು ಹರಡಿದನು. ಒಬ್ಬ ಮನುಷ್ಯನ ಈ ನೈತಿಕ ದೌರ್ಬಲ್ಯವು ಹೊರವಲಯದಲ್ಲಿ ಹೊಮ್ಮಿತು. 1925ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಂಡೆನ್‍ಬರ್ಗ್ ಗೆದ್ದ ನಂತರ, ಜರ್ಮನಿಯ ಪರಿಶೀಲನೆಗೆ ತಡೆದುಕೊಳ್ಳದೆ ಇರುವ ಖ್ಯಾತಿಗೆ ಸಂಬಂಧಿಸಿದಂತೆ ಅವರ ಆವರ್ತನದಿಂದ ಸಿಲುಕಿಕೊಂಡಿತು. ತಾನು ಮಾತ್ರ ಜರ್ಮನ್ ಅನ್ನು ಉಳಿಸಬಹುದೆಂದು ಆತನು ನಂಬಿದ್ದನು, ಆದರೆ ತನ್ನ ಇಮೇಜ್‍ಗೆ ಹಾನಿಗೊಳಿಸುವುದರ ಭಯದಿಂದ ಸ್ವತಃ ಕಾರ್ಯಪ್ರವೃತ್ತನಾಗಲಿಲ್ಲ. ಹಿಂಡೆನ್‍ಬರ್ಗ್‍ನ ಸ್ಥಾಪಿತ ಕಲ್ಪನೆ ಮತ್ತು ವಿಚಿತ್ರ ಭಂಗಿಗಳಿಲ್ಲದೆಯೇ, ಹಿಟ್ಲರ್ ಅಧಿಕಾರಕ್ಕೆ ಬಂದಿದ್ದಾರೆ ಎಂಬುವುದು ಅಸಂಭವವಾಗಿದೆ.

ಹೆಟ್ ಸಮರ್ಥವಾಗಿ ತೋರಿಸಿದಂತೆ, ಬಲಿಪಶು ಕಾಲ್ಪನಿಕತೆಯ ಪ್ರಸಿದ್ಧ ಕಲಾವಿದರು ನಾಝಿಗಳಾಗಿದ್ದಾರೆ. ಯುದ್ಧದಲ್ಲಿ ಜರ್ಮನ್ ಯಹೂದಿಗಳೊಂದಿಗೆ ಸೇವೆ ಸಲ್ಲಿಸಿದ್ದ ಹಿಟ್ಲರ್, ಯಹೂದಿಗಳು ನಮ್ಮೊಳಗಿನ ಶತ್ರುಗಳಾಗಿದ್ದಾರೆ ಎಂಬ ಆಲೋಚನೆಯನ್ನು ಹಬ್ಬಿಸಿದನು. ಅವರಲ್ಲಿ ಕೆಲವರನ್ನು ಕೊಂದರೆ ಜರ್ಮನ್ ಸೈನ್ಯವು ಗೆಲ್ಲುವ ಸಾಧ್ಯತೆ ಇತ್ತು ಎಂದು ಪ್ರಸ್ತಾಪಿಸಿದನು. ನಾಝಿ ಚಂಡಮಾರುತವು ಎಡಪಂಥೀಯರನ್ನು ನಿಖರವಾಗಿ ಆಕ್ರಮಣ ಮಾಡುತ್ತದೆ ಎಂದು ಗೋಬೆಲ್ಸ್ ನಿಖರವಾಗಿ ಹೇಳಿದ್ದಾನೆ. ಆದ್ದರಿಂದ ನಾಝಿಗಳು ಕಮ್ಯುನಿಷ್ಟ್ ಹಿಂಸಾಚಾರಕ್ಕೆ ಬಲಿಯಾದರು ಎಂದು ಹೇಳಿಕೊಳ್ಳಬಹುದಾಗಿತ್ತು. ವಿಶ್ವಾಸಾರ್ಹತೆಯ ಸ್ವಲ್ಪ ಪ್ರಮಾಣವನ್ನು ಉಳಸಿ ಸುಳ್ಳು ಹೇಳುವುದರಲ್ಲಿ ಹಿಟ್ಲರನು ನಂಬಿಕೆ ಇಟ್ಟಿದ್ದನು. ಪತ್ರಿಕೆಗಳು ವರದಿ ಮಾಡುವುದಕ್ಕಿಂತಲೂ “ಸಾಮಾನ್ಯ ಒಳಿತು”ಗಳನ್ನು ಭಿತ್ತರಿಸಬೇಕೆಂದು ನಾಝಿ ಕಾರ್ಯಕ್ರಮವು ಮುಂಚಿತವಾಗಿಯೇ ಸೂಚಿಸಿತ್ತು ಮತ್ತು ಅವರು ಬಯಸದ ಸುದ್ಧಿಯನ್ನು ಹರಡುವವರ ವಿರುದ್ಧ “ಕಾನೂನು ಯುದ್ಧ”ದ ಬೆದರಿಕೆಯನ್ನು ನೀಡಿದರು. ವಾಸ್ತವಿಕತೆಯ ಆಧಾರದಲ್ಲಿ “ವ್ಯವಸ್ಥೆ” ಎಂದು ಕರೆಯಲ್ಪಡುವುದನ್ನು ಅವರು ತಿರಸ್ಕರಿಸಿದರು. ಜರ್ಮನ್ನರು ಹಿತಾಸಕ್ತಿಗಳೊಂದಿಗೆ ತರ್ಕಬದ್ಧವಲ್ಲದ ವ್ಯಕ್ತಿಗಳಾಗಿದ್ದರು, ತರ್ಕಬದ್ಧತೆಯು ಇಲ್ಲವಾಯಿತು. ಆದರೆ, ಒಂದು ಬುಡಕಟ್ಟಿನ ಸದಸ್ಯರು(ಫ್ಹೂರೇರ್) ಒಬ್ಬ ನಾಯಕನನ್ನು ಅನುಸರಿಸಲು ಬಯಸಿದ್ದರು.

ಇವುಗಳಲ್ಲಿ ಹೆಚ್ಚಿನವು ಇಟಾಲಿಯನ್ ಫ್ಯಾಶಿಸಮ್‍ನಿಂದ ಪರಿಚಿತವಾಗಿದ್ದವು. ಆದರೆ, ಮುಸೊಲಿನಿಯ ರೋಮ್ ಮಾರ್ಚ್‍ನ್ನು ಅನುಕರಿಸುವ ಹಿಟ್ಲರ್‍ನ ಪ್ರಯತ್ನವು ವಿಫಲವಾಯಿತು. ಹಿಟ್ಲರ್ 1923ರಲ್ಲಿ ಒಂದು ದಂಗೆಯನ್ನು ಪ್ರಯತ್ನಿಸಿದಾಗ, ಅವನು ಮತ್ತು ನಾಝಿಗಳು ಸುಲಭವಾಗಿ ಸೋಲಿಸಲ್ಪಟ್ಟರು ಮತ್ತು ಅವರನ್ನು ಸೆರೆಮನೆಯ ಶಿಕ್ಷೆಗೆ ಒಳಪಡಿಸಲಾಯಿತು. ಆತನು ಅಲ್ಲಿ “ಮೈನ್ ಕಾಂಫ್” ಪುಸ್ತಕವನ್ನು ಬರೆದನು. ಹೆಟ್‍ನ ಪ್ರಕಾರವಾಗಿ 1920ರ ಉತ್ತರಾರ್ಧದಲ್ಲಿ ಮತ್ತು 1930ರ ದಶಕದ ಆರಂಭದಲ್ಲಿ ನಾಝಿಗಳು ಚುನಾವಣೆಯಲ್ಲಿ ಏರಿರುವುದು ಆತನ ವ್ಯಕ್ತಿಗತ ಚಿಂತನೆಗಳಿಂದ ಪ್ರಭಾವಿತವಾಗಿಯಲ್ಲ. ಬದಲಾಗಿ, ರಾಜಕೀಯ ಸ್ಪೆಕ್ಟ್ರಮ್‍ಗೆ ತೆರೆದುಕೊಂಡಿದ್ದರಿಂದಾಗಿತ್ತು. ಸೆಂಟರ್ ಪಾರ್ಟಿಯ ಕ್ಯಾಥೋಲಿಕ್ ಮತದಾರರು ಮತ್ತು ಸಮಾಜವಾದಿ ಅಥವಾ ಕಮ್ಯುನಿಷ್ಟಿರಿಗೆ ಮತಚಲಾಯಿಸುವ ಕಾರ್ಮಿಕ ವರ್ಗದ ನಡುವೆ ನಾಝಿಗಳು ಶೂನ್ಯತೆಯನ್ನು ತುಂಬಿದರು. ಹೆಟ್ ಸೂಚಿಸುವಂತೆ ಅವರ ಪ್ರಮುಖ ಕ್ಷೇತ್ರಗಳು ತಮ್ಮನ್ನು ತಾವೇ ಜಾಗತೀಕರಣದ ಬಲಿಪಶುಗಳು ಎಂದು ಭಾವಿಸಿಕೊಂಡಿರುವ ಗ್ರಾಮೀಣ ಅಥವಾ ಸಣ್ಣ ಪಟ್ಟಣಗಳ ಪ್ರೊಟೆಸ್ಟೆಂಟರಾಗಿದ್ದರು.

ಪ್ರಜಾಪ್ರಭುತ್ವದ ಚುನಾವಣೆಯ ಮೂಲಕ ನಾಝಿಗಳು ಅಧಿಕಾರಕ್ಕೆ ಬಂದಿರುವರೇ? ಬೇರೆಲ್ಲೆಡೆಯಂತೆ 1930ರಲ್ಲಿ ಜರ್ಮನಿಯಲ್ಲೂ ಅದರ ಅರ್ಥ ಕಳೆದುಕೊಂಡಿದ್ದರೂ ಚುನಾವಣೆ ನಡೆಯಿತು. ನಾಝಿಗಳು ಇತರರನ್ನು ಹೆದರಿಸಲು ಹಿಂಸೆಯನ್ನು ಬಳಸುತ್ತಿದ್ದರು ಅರ್ಥಾತ್ ಚುನಾವಣೆಯು ಸಾಮಾನ್ಯ ಅರ್ಥದಲ್ಲಿ ಮುಕ್ತವಾಗಿರಲಿಲ್ಲ. ಪ್ರಜಾಪ್ರಭುತ್ವಕ್ಕೆ ಮತ್ತು ಪ್ರಜಾಪ್ರಭುತ್ವವಾದಿಗಳಿಗೆ ಯಾವುದೇ ಉಪಯೋಗವಿಲ್ಲದ ಜನರಿಂದಾಗಿ ವ್ಯವಸ್ಥೆಯು ಅವರ ಪರವಾಗಿ ಸಜ್ಜುಗೊಂಡಿತ್ತು. ನಾಝಿಗಳು ಯಾವುದೇ ರೀತಿಯಲ್ಲೂ ಜರ್ಮನಿಯ ಮಿಲಿಟರಿ ಮತ್ತು ಉದ್ಯಮದ ಸಹಾಯಕರಾಗಿದ್ದರು. ಆದರೆ, 1920ರ ದಶಕದ ಉತ್ತರಾರ್ಧದಲ್ಲಿ ಉದ್ಯಮಿಗಳು ಮತ್ತು ಅಧಿಕಾರಿಗಳು ಲಾಬಿಗಳನ್ನು ರೂಪಿಸಿದ್ದರು ಮತ್ತು ಅದು ಗಣರಾಜ್ಯ ಹಾಗು ಅದರ ಭಧ್ರಕೋಟೆಯಾದ ಸಾಮಾಜಿಕ ಪ್ರಜಾಪ್ರಭುತ್ವತೆಯನ್ನು ಕೆಡವುವ ಗುರಿಯನ್ನು ಹೊಂದಿತ್ತು ಎಂದು ಹೆಟ್ ವಾದಿಸುತ್ತಾರೆ. ಜರ್ಮನ್ ದೇಶ ಪೂರ್ತಿಯಾಗಿ ಅವರು ಮಿಲಿಟರಿ ಖರ್ಚುಗಳನ್ನು ವೃದ್ಧಿಸಿ ಮತ್ತು ನಿರ್ದಿಷ್ಟ ಹಿತಾಸಕಿಗಳನ್ನು ಕಡಿಮೆ ವೇತನದಲ್ಲಿ ಗೊಂದಲವನ್ನು ಉಂಟುಮಾಡಲು ಒಲವು ತೋರಿದ್ದರು. ಇದು ಸಾಮಾಜಿಕ ಪ್ರಜಾಪ್ರಭುತ್ವವಾದಿಗಳನ್ನು ವಿದೇಶಿಯರು ಮತ್ತು ವಿರೋಧಿಗಳು ಎಂದು ಸುಲಭವಾಗಿ ಬಿಂಬಿಸಲು ಸಹಕರಿಸುತ್ತದೆ.

ಇದೇ ರೀತಿಯಾದ ಹೆಸರಿರುವ ಇನ್ನೊಂದು ಪುಸ್ತಕ “ಹೌ ಡೆಮಾಕ್ರಸಿ ಡೈ” ರಾಜಕೀಯ ವಿಜ್ಞಾನಿಗಳಾದ ಡೇನಿಯಲ್ ಜಬ್ಲಾಟ್ ಮತ್ತು ಸ್ಟೀವನ್ ಲವಿಟ್ಸ್‍ಕಿ ರವರು ಇತ್ತೀಚೆಗೆ ಪ್ರಜಾಪ್ರಭುತ್ವದ ಕೊಲೆಗಾರರು ಕಾನೂನನ್ನು ಅದರ ವಿರುದ್ಧವೇ ಬಳಸುವುದರ ಮೂಲಕ ಆರಂಭಿಸುತ್ತಾರೆಂದು ವಾದಿಸಿದ್ದರು. ದುಷ್ಟತೆಯಿಂದ ಪ್ರೇರೇಪಿತರಾದ ನಾಯಕರು ಉದ್ದೇಶಪೂರ್ವಕವಾಗಿ ತಮ್ಮ ದುರ್ಬಲತೆಯನ್ನು ಬಹಿರಂಗಗೊಳಿಸಿದಾಗ ಸಂವಿಧಾನಗಳು ಮುರಿಯುತ್ತವೆ. ನಿಸ್ಸಂಶಯವಾಗಿಯೂ 1930ರಲ್ಲಿ ಜರ್ಮನಿಯಲ್ಲಿ ಇದುವೆ ಸಂಭವಿಸಿತು. ಅಧ್ಯಕ್ಷ ಹಿಂಡನ್‍ಬರ್ಗ್‍ನು ರೀಚ್ಸಾಟ್ಯಾಗ್ ರನ್ನು ವಿಸರ್ಜಿಸಲು ತಾಂತ್ರಿಕವಾಗಿ ತನ್ನ ಹಕ್ಕುಗಳೊಳಗೆ ಹೊಸ ಚಾನ್ಸೆಲರ್ ಹೆಸರನ್ನು ಸೂಚಿಸುತ್ತಾನೆ ಮತ್ತು ಕಟ್ಟಳೆ ಮೂಲಕ ಆಡಳಿತ ನಡೆಸುತ್ತಾನೆ. ಆಡಳಿತಕ್ಕೆ ಅಪವಾದಾತ್ಮಕ ಪರಿಸ್ಥಿತಿಯ ಮೂಲಕ ಅವರು ಜರ್ಮನ್ ಸರ್ಕಾರವನ್ನು ಸಮಾಜದಿಂದ ಬೇರ್ಪಟ್ಟ ವೈರತ್ವದ ಕೂಟವಾಗಿ ಬದಲಾಯಿಸಿದರು. ಮಹಾ ಆರ್ಥಿಕ ಕುಸಿತದ ಹೊರತಾಗಿಯೂ, ನೀತಿಗಳ ಬಗ್ಗೆ ಸೃಜನಾತ್ಮಕವಾಗಿ ಯೋಚಿಸಲು ಅಧ್ಯಕ್ಷರಿಗೆ ಅವಲಂಭಿತವಾಗಿರುವ ಸರ್ಕಾರಗಳು ಯಾವುದೇ ಕಾರಣವನ್ನು ಹೊಂದಿರಲಿಲ್ಲ. ಮತದಾರರು ಎರಡು ವಿಪರೀತಗಳಾದ ಕಮ್ಯುನಿಷ್ಟ್ ಮತ್ತು ನಾಝಿಗಳಲ್ಲಿ ಇನ್ನಷ್ಟು ಹರಿದು ಹೋದರು. ನಾಝಿಗಳು ಗಣರಾಜ್ಯವನ್ನು ಹಾಳುಮಾಡಬಹುದಾದ ಜನರಿಂದ ಸೃಷ್ಟಿಯಾದ ಅವಕಾಶವನ್ನು ಮುಂದೇನು ಬರುತ್ತದೆ ಎಂದು ಕಲ್ಪಿಸಿಕೊಳ್ಳುವ ಸಾಮಥ್ರ್ಯವನ್ನು ಕಳೆದು ಪ್ರಯೋಜನವನ್ನು ಪಡೆದರು.

1932ರಲ್ಲಿ ಚುನಾವಣೆಯು ಘೋಷಣೆಯಾದಾಗ ಪ್ರಜಾಪ್ರಭುತ್ವವನ್ನು ಉಳಿಸುವುದರ ಬದಲಾಗಿ ರಿಪಬ್ಲಿಕ್ ಅನ್ನು ಉರುಳಿಸುವುದು ಅದರ ಉದ್ದೇಶವಾಗಿತ್ತು. ಹಿಂಡನ್‍ಬರ್ಗ್ ಮತ್ತು ಅವರ ಸಲಹೆಗಾರರು ನಾಝಿಯನ್ನು ಬಹುಮತ ಸೃಷ್ಟಿಸುವ ಸಾಮಥ್ರ್ಯ ಹೊಂದಿದ ಗುಂಪು ಎಂದಾಗಿ ಕಂಡರು.  ಹೆಟ್ ಹೇಳುವಂತೆ, “ಈ ರಾಜಕೀಯವು ಬಲಪಂಥೀಯರಿಂದ ತಯಾರಿಸಲ್ಪಟ್ಟಿದೆ ಮತ್ತು ಅದು ರಾಜಕೀಯ ಪ್ರಾತಿನಿಧ್ಯದಿಂದ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಜನರನ್ನು ಹೊರಗಿಟ್ಟಿತು ಹಾಗು ಸೌಮ್ಯವಾದ ಹೊಂದಾಣಿಕೆ ಸಹ ನಿರಾಕರಿಸಿತು”. ಚುನಾವಣೆಗಳು ನಕಲಿ ಬಿಕ್ಕಟ್ಟಿನ ‘ಪರಿಹಾರ’ ವಾಗಿದ್ದವು. ಇದು ಅಧ್ಯಕ್ಷರ ಶಿಬಿರಕ್ಕೆ ಸಂಭವಿಸಲಿಲ್ಲ ನಾಝಿಗಳು ಅವರು ಮಾಡಿದಂತೆ ಮಾಡುತ್ತಾರೆ ಅಥವಾ ಅವರ ನಾಯಕ ತಮ್ಮ ನಿಯಂತ್ರಣದಿಂದ ತಪ್ಪಿಸಿಕೊಳ್ಳುತ್ತಾರೆ. ಹಾಗಾಗಿ ಸಂಪ್ರದಾಯವಾದಿಗಳ ದುರ್ಬಲ ಯೋಜನೆಗಳು ನಾಝಿಯವರ ಹಿಂಸಾತ್ಮಕ ಕನಸುಗಳನ್ನು ನನಸಾಗಿಸಿತು. ಜುಲೈ ತಿಂಗಳಿನಲ್ಲಿ ನಾಝಿಗಳು 37 ಶೇಕಡಾ ಮತಗಳನ್ನು ಗೆದ್ದರು ಮತ್ತು ನವೆಂಬರ್‍ನಲ್ಲಿ 33 ಶೇಕಡಾ ಮತಗಳನ್ನು ಪಡೆದು, 1933ರ ಜನವರಿಯಲ್ಲಿ ಹಿಟ್ಲರ್ ಚಾನ್ಸೆಲರ್ ಆಗಿ ಹೊರಹೊಮ್ಮಿದನು. ಕೆಲವು ವಾರಗಳ ನಂತರ ರಿಚ್‍ಸ್ಟ್ಯಾಗ್‍ನ ಅಗ್ನಿಸ್ಪರ್ಶದ ನೆಪಹೇಳಿ ತಂದಂತಹ ಕಾನೂನೊಂದು ಸಂವಿಧಾನ ಬದಲಾಯಿಸಲು ಪರಿಣಾಮ ಬೀರಿತು.

ಜರ್ಮನಿ ಮತ್ತು ತನ್ನ ಖ್ಯಾತಿಯನ್ನು ತಾನು ಉಳಿಸಿಕೊಂಡಿದ್ದೇನೆಂದು ನಂಬಿ ಹಿಂಡನ್‍ಬರ್ಗ್ 1934ರಲ್ಲಿ ಮರಣವನ್ನಪ್ಪಿದನು. ವಾಸ್ತವದಲ್ಲಿ ಆತನು ಆಧುನಿಕ ಕಾಲದ ಭಯಾನಕತೆಯ ಪರಿಸ್ಥಿತಿಯನ್ನು ಉಂಟು ಮಾಡಿದ್ದನು. ಹೆಟ್‍ನ ಪುಸ್ತಕವು ಸೂಚ್ಯವಾಗಿ ಸಂಪ್ರದಾಯವಾದಿಗಳನ್ನು ಅಭಿಸಂಬೋಧಿಸುತ್ತದೆ. ಹಿಟ್ಲರ್‍ನನ್ನು ಎಡರಂಗವು ಹೇಗೆ ತಡೆಯಬಹುದಿತ್ತೆಂದು ಕೇಳುವ ಬದಲಾಗಿ, ಹಿಟ್ಲರ್‍ನ ಏಳಿಗೆಗೆ ನೆರವಾದ ಜರ್ಮನ್ ಸಂಪ್ರದಾಯವಾದಿಗಳು, ನಂತರದಲ್ಲಿ ತಮ್ಮ ಆಲೋಚನೆ ಬದಲಾಯಿಸಿ ಆತನ ವಿರುದ್ಧ ತಿರುಗಿಬಿದ್ದಲ್ಲಿಗೆ ಪುಸ್ತಕವನ್ನು ಮುಗಿಸಿದ್ದಾರೆ. ರೈನರ್ ಆರ್ಥ್‍ರ ಇತ್ತೀಚಿಗಿನ ಪುಸ್ತಕ ‘ನೈಟ್ ಆಫ್ ಲಾಂಗ್ ನೈಫ್ಸ್’ ಅನ್ನು ಉಲ್ಲೇಖಿಸುತ್ತಾ ಹೆಟ್ ಹೇಳುತ್ತಾರೆ, 1934 ರಕ್ತ ಶುದ್ಧೀಕರಣವು ಮುಖ್ಯವಾಗಿ ಈ ಬಲಪಂಥೀಯ ವಿರೋಧಿಗಳ ವಿರುದ್ಧ ನಿರ್ದೇಶಿಸಲಾಗಿತ್ತು.

ಇಂದಿನ ಸಂಪ್ರದಾಯವಾದಿಗಳಿಗೆ ಇದು ಸ್ಪಷ್ಟವಾದ ತೀರ್ಮಾನವನ್ನು ದೊರಕಿಸುತ್ತದೆ: ಒಂದು ಗಣರಾಜ್ಯವನ್ನು ಒಗ್ಗೂಡಿಸುವ ನಿಯಮಗಳನ್ನು ಮುರಿಯಬೇಡಿ. ಏಕೆಂದರೆ ಒಂದು ದಿನ ನಿಮಗೆ ಆದೇಶ ಬೇಕಾಗುತ್ತದೆ ಮತ್ತು ಆ ನಿಯಮಗಳನ್ನು ಗೌರವಿಸುವ ವಿರೋಧಿಗಳನ್ನು ನಾಶಮಾಡಬೇಡಿರಿ. ಏಕೆಂದರೆ ಒಂದು ದಿನವು ನೀವು ಅವರನ್ನು ಕಳೆದುಕೊಳ್ಳುತ್ತೀರಿ.

ಕೃಪೆ: ನ್ಯೂಯಾರ್ಕ್ ಟೈಮ್ಸ್

 

 

ಪುಸ್ತಕ: ದಿ ಡೆಥ್ ಆಫ್ ಡೆಮಾಕ್ರಸಿ

ಹಿಟ್ಲರ್ಸ್ ರೈಸ್ ಟು ಪವರ್ ಆ್ಯಂಡ್ ದಿ ಡೌನ್‍ಫಾಲ್ ಆಫ್ ವೀಮರ್ ರಿಪಬ್ಲಿಕ್

ಗ್ರಂಥಕರ್ತೃ: ಬೆನ್ಜಮಿಮ್ ಕಾರ್ಟರ್ ಹೆಟ್

 

 

 

 

 

LEAVE A REPLY

Please enter your comment!
Please enter your name here