ಕವನ : ಪಿಎಂಎ

ಅನುವಾದ: ಏ ಎಸ್ ದೇರಳಕಟ್ಟೆ

ಅಪ್ಪ ಮತ್ತು ಮಗ ಗಾರೆ ಕೆಲಸಗಾರರು
ದೊಡ್ಡದಾದ ಮನೆಗೆ ಅಡಿಪಾಯ ಹಾಕುತ್ತಿದ್ದಾರೆ
ಸಮಯ ಸಂಜೆಗೆ ಕಾಲಿಡುತ್ತಿದೆ..

ಜೊತೆಗಿರುವ ಕೆಲಸಗಾರರು ಆಯಾಸದಿಂದ ಬಳಲಿದ್ದಾರೆ
ಎಲ್ಲರಿಗೂ ಕೆಲಸ ನಿಲ್ಲಿಸುವ ತವಕ
ಒಂದು ಕಲ್ಲು ಮಾತ್ರ ಬಾಕಿ ಇದೆ
ಅದು ಮುಗಿಸಿ ಹೋಗಬಹುದೆಂದು ಅಪ್ಪ
ಸಿಮೆಂಟ್ ತರಲು ಮಗನೊಂದಿಗೆ ಹೇಳಿದ..

ಹೊಸದಾಗಿ ಸಿಮೆಂಟ್ ಮಾಡಬೇಕೇ ಅಪ್ಪಾ
ಇಲ್ಲಿ ಅಲ್ಲಲ್ಲಿ ಒಂದಿಷ್ಟು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ ಅದು ಸಾಕಾಗಲ್ವೇ
ಬೇಡ ಮಗ ಅದಕ್ಕೆ ಅಷ್ಟು ಫಲ ಸಿಗದು, ಹೊಸತೇ ಬೇಕು
ಏನಪ್ಪಾ ಬಲವಿಲ್ಲದ ಸಿಮೆಂಟಿನಿಂದ ಇಷ್ಟು ದೊಡ್ಡ ಅಡಿಪಾಯಕ್ಕೆ
ಒಂದು ಕಲ್ಲು ಇಟ್ಟರೆ ಯಾರಿಗೆ ಗೊತ್ತಾಗುತ್ತೆ
ಹಲವಾರು ವರ್ಷಗಳ ನಂತರ ಇದನ್ನು ಯಾರು ಸ್ಮರಿಸುತ್ತಾರೆ

ಸ್ಮರಿತ್ತಾರೆ ಮಗಾ.. ! ಎರಡು ಮಂದಿ
ಅಂದು ಅವರ ಮುಖ ತಪ್ಪಿತಸ್ಥರಂತೆ ತಲೆ ಬಾಗುವುದು
ಪರಿಹಾರವಿಲ್ಲದೆ ಸಂಕಟದೊಂದಿಗೆ ಅವರಿಗೆ ಮರಣ ಬರುವುದು
ಎರಡು ಮಂದಿ, ಅವರ್ಯಾರು?
ನಾನು ಮತ್ತು ನೀನು…!

ಅಪ್ಪ ಹೇಳಿದ ಈ ಮಾತು ಆಧ್ಯಾತ್ಮಿಕತೆಯ ಅಂತರಾಳದ ಸತ್ವ
ಅಂತರಾಳದ ಸತ್ಯಕ್ಕೆ ಸಾಕ್ಷಿ ನಿಲ್ಲುವ ಅನುಭವವಾಗಿದೆ ಅದು
ದೊಡ್ಡ ಸದ್ದು ಗದ್ದಲವಿಲ್ಲದ ಕರ್ಮಗಳಾಗಿವೆ ಅದರ ತಿರುಳು
ಆ ಕರ್ಮಗಳೆಲ್ಲವೂ ಶಾಂತ ಮತ್ತು ಸೌಮ್ಯವಾದ ಸ್ಮರಣೆಯ ಹೂಡಿಕೆಗಳಾಗಿವೆ

ಕುಟುಂಬದಲ್ಲಿ, ನೆರೆಕರೆಯಲ್ಲಿ, ಪರಿಸರದಲ್ಲಿ ಮತ್ತು ಸಮಾಜದಲ್ಲಿ ಅಚ್ಚಳಿಯುವ ಸೌಹಾರ್ಧದ ಹೂಡಿಕೆ
ಅವೆಲ್ಲವೂ ಹೊಸ ಪೈರುಗಳಾಗಿ ಮತ್ತೂ ಬೆಳೆಯುವುದು
ಬೀಜವನ್ನು ಮಣ್ಣಿನೊಂದಿಗೆ ಮುಚ್ಚಿದರೆ ಅದು ಮಣ್ಣಾಗಲಾರದು
ಅದು ಗಿಡ ಮತ್ತು ಮರವಾಗಿ ಬೆಳೆಯುವುದು
ಸತ್ಯವಾದ ಬದುಕು ಅದು ಹಾಗೆಯೇ ಉಳಿಯುತ್ತೆ
ಸುಂದರವಾದ ಒಂದು ಸ್ಮರಣೆಯಾಗುತ್ತೆ

ಕಟ್ಟಡವನ್ನು ನಿರ್ಮಿಸುವ ಗಾರೆ ಕೆಲಸಗಾರ ಮತ್ತು
ಬದುಕನ್ನು ಕಟ್ಟುವ ನಮಗೆ ಇರುವ ವ್ಯತ್ಯಾಸವಾದರೂ ಏನು?
ಇಲ್ಲ.. ಯಾವುದೇ ವ್ಯತ್ಯಾಸವೂ ಇಲ್ಲ
ಆ ನಂತರ ಖೇದವಿಲ್ಲದೆ ಕೆಲಸ ಮುಗಿಸಿ ಮರಳಿ ಹೋಗಬೇಕಾದವರು
ಮಧ್ಯಂತರ ಅವಧಿ ಯಾವುದನ್ನೂ ಒಂದಿಷ್ಟು ಸ್ಪೂರ್ತಿದಾಯಕಗೊಳಿಸುತ್ತೆ

ರಮಝಾನ್ ಮತ್ತು ಕೊರೊನ ಕಾಲದಲ್ಲಿ ಹೊರ ಹೋಗಿ ಯಾರನ್ನೂ ನೋಡಲು ಸಾಧ್ಯವಾಗದಿದ್ದರೂ
ಒಳ ಹೋಗಿ ಅವನವನ ಅಂತರಾಳಕ್ಕೆ ನೋಡಲು ಖಂಡಿತ ಸಾಧ್ಯ
ಮಾತು, ಕೃತಿ, ಮನೆ, ಮನಸ್ಸು, ಸಂಬಂಧಗಳು ಮತ್ತು ಅಭ್ಯಾಸಗಳೆಲ್ಲವನ್ನೂ ಪ್ರೀತಿಪೂರ್ವಕವಾಗಿ
ಎಡಿಟ್ ಮಾಡುವ ಅಪರೂಪದ ಅವಕಾಶವನ್ನಾಗಿ ಬಳಸಬಹುದು
ಮಧ್ಯಂತರ ಅವಧಿಗೆ ಇಂಗ್ಲೀಷ್ ನಲ್ಲಿ ಇಂಟರ್ ಮಿಷನ್ ಎಂದು ಹೇಳಲಾಗುತ್ತೆ
ದೊಡ್ಡ ಲಕ್ಷ್ಯಕ್ಕೆ ಮಿಷನ್ ಎಂದೂ ಕರೆಯಲಾಗುತ್ತೆ
ಮಿಷನ್ ಇರುವ ಒಂದು ಇಂಟರ್ ಮಿಷನ್ ನಿಂದ ಬದುಕನ್ನು ಪುನರ್ ನಿರ್ಮಿಸಲು ಸಾಧ್ಯವಾಗದೇ?

LEAVE A REPLY

Please enter your comment!
Please enter your name here