ಲೇಖಕರು: ಮೌಲಾನಾ ವಹಿದುದ್ದೀನ್ ಖಾನ್

ಅನುವಾದ:ತಲ್ಹಾ ಕೆ.ಪಿ

ಚಾರ್ಲ್ಸ್ ರೀಚ್ಟ್ರ್ ಎಂಬ ಅಮೇರಿಕಾದ ವಿಜ್ಞಾನಿಯನ್ನು ಭೂಕಂಪಗಳತಜ್ಞನೆನ್ನುತ್ತಾರೆ. ಅವರು ಒಂದು ವಿಶಿಷ್ಟವಾದ ಇಂತಹ ಭೂಮಾಪನವನ್ನು ರಚಿಸಿದನು ಅದು ಇಂದು ಭೂಮಿಯಲ್ಲಿ ಸಂಭವಿಸುವ ಎಲ್ಲಾ ಭೂಕಂಪಗಳ  ಶಕ್ತಿಯಅಳತೆ ಮಾಡಲು ಉಪಯೋಗಿಸುತ್ತಾರೆ.  ಇದನ್ನು ”ರೀಚ್ಟ್ರ್ಸ್ಕೇಲ್” ಎನ್ನುತ್ತಾರೆ .

ಚಾರ್ಲ್ಸ್ ರೀಚ್ಟ್ರ್ ಕ್ಯಾಲಿಫೋರ್ನಿಯಾಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ  ಸುಮಾರು ಅರ್ಧ ಶತಮಾನಗಳ ಕಾಲ ಭೂಕಂಪಗಳ ಕುರಿತು ಅಧ್ಯಾಯನ ನಡೆಸಿದರು. ಅವರು ಹೇಳುವ ಪ್ರಕಾರ ಅವರನ್ನು ಹೆಚ್ಚಿನ ಸಂಧರ್ಭಗಳಲ್ಲಿ ಕೇಳಲಾಗುತ್ತಿದ್ದ ಪ್ರಶ್ನೆಯು ”ಭೂಕಂಪದ ಅಪಾಯದಿಂದ ರಕ್ಷಣೆ ಹೊಂದಲು ಯಾವ ದಿಕ್ಕಿಗೆ ಓಡಬೇಕು” ಆದರೆ ಕ್ಯಾಲಿಫೋರ್ನಿಯಾದಲ್ಲಿ ಇದರ ಉತ್ತರ ಬಹಳ ಸರಳ ಅದೇನೆಂದರೆ ”ಯಾವ ದಿಕ್ಕಿಗೂ ಓಡಬಾರದು”. ಅಮೆರಿಕಾದ 48 ರಾಜ್ಯಗಳ ಪೈಕಿ ಫ್ಲೋರಿಡಾ ಮತ್ತು ಸಮುದ್ರಕಿನಾರೆಯದ ಟೆಚ್ಸಸ್’ನಲ್ಲಿ ಭೂಕಂಪದ ಅಪಾಯವು ಬಹಳ ಕಡಿಮೆ. ಅದೇಅವರನ್ನು ಚೆಂಡ ಮಾರುತದ ಕುರಿತು ಕೇಳಿದರೆ ಏನೆನ್ನುವರು ? ವಾಸ್ತವದಲ್ಲಿ ಎಲ್ಲಾ ಭೂಭಾಗದಲ್ಲಿ ಒಂದಲ್ಲ ಒಂದು ಅಪಾಯವಿರುತ್ತದೆ . ಅದರಿಂದಾಗಿಮಾನವನು ಕೆಲವು ಅಪಾಯಗಳಿಂದ ರಕ್ಷಣೆ ಹೊಂದುವ ಒಂದೇ ಒಂದು ಉಪಾಯವೇನೆಂದರೆ, ಒಂದು ಕಡೆಯಿಂದ ಪಲಾಯನಗೈದು ಇನ್ನೊಂದು ಕಡೆ ಇರುವ ಬೇರೆ ಕೆಲವು ಅಪಾಯಗಳನ್ನು ಸಹಿಸಬೇಕಾಗುತ್ತದೆ .          (ಹಿಂದೂಸ್ತಾನ್ ಟೈಮ್ಸ್ 7 \9 \1980 )

ಮಾನವನ ಸ್ವಭಾವವು ತನಗೆ ದೊರೆಯುತ್ತಿರುವ ವಸ್ತುಗಳಿಂದ ಆತ ಸಂತುಷ್ಟನಾಗುವುದಿಲ್ಲ ಬದಲಾಗಿ ಆತನಿಗೆ ದೊರೆಯದ ವಸ್ತುಗಳ ಹಿಂದೆ ಓಡುತ್ತಾನೆ. ಇದೆ ಸ್ವಾಭಾವದ ಫಲವಾಗಿ ಮಾನವನು ಅಸಂತುಷ್ಟ ಜೀವನ ನಡೆಸುತ್ತಾನೆ. ಸಮಾಜದಲ್ಲಿ ಭಾಗ್ಯಶಾಲಿ ಎಂದುಭಾವಿಸಲ್ಪಡುವವನೊ ಕೂಡ ತನ್ನಅಂತರಂಗದಲ್ಲಿ ಅಷ್ಟೇ ಅಸಂತುಷ್ಟ ಜೀವನವನ್ನು ನಡೆಸುತ್ತಾನೆ. ಯಾರ ಮನಸ್ಸಿನಲ್ಲಿ ಕೃತಜ್ಞತಾ ಭಾವನೆ ಇರುವುದಿಲ್ಲವೋ ಅವನು ತನಗೆ ಲಭಿಸದ ವಸ್ತುವಿನ ಕಡೆಗೆ ಗಮನಹರಿಸುತ್ತಾನೆ. ಮತ್ತು ಯಾವಾಗಲೂ ತನ್ನ ಬಳಿಯಲ್ಲಿರುವ ಅನುಗ್ರಹವನ್ನು ಕೀಳಾಗಿ ಭಾವಿಸುತ್ತಾನೆ. ಇಂತಹ ವ್ಯಕ್ತಿಯಲ್ಲಿ ಸೃಷ್ಟಿಕರ್ತನಿಗೆ ಕೃತಜ್ಞತಾ ಭಾವನೆಯು ಉಂಟಾಗುವುದಿಲ್ಲ. ಅದರಿಂದ ಆತ ತನ್ನ ಅಂತರಾಳದಲ್ಲಿಟ್ಟು ಪೋಷಿಸಬೇಕಾಗಿದ್ದ ವಸ್ತುವಿನಿಂದಲೇ ವಂಚಿತನಾಗುತ್ತಾನೆ.

 ಸಂಪೂರ್ಣ ಸುಖವು ಯಾರಿಗೂ ಲಭಿಸದ ರೀತಿಯಲ್ಲಿ  ದೇವನು ಇಹಲೋಕವನ್ನು ಮಾಡಿದ್ದಾನೆ. ವ್ಯಕ್ತಿಯು ತಾನಿರುವ ಭೂಭಾಗದ ಸಮಸ್ಯೆಗಳಿಗೆ ಹೆದರಿ ಇನ್ನೊಂದು, ಭೂಭಾಗಕ್ಕೆ ಪಲಾಯನ ಮಾಡಿದರೆ ಅಲ್ಲಿಯೂ ಸಮಸ್ಯೆಗಳಿವೆ ಎಂದು ಮಾನವರಿಕೆಯಾಗಬಹುದು .

ಕಡಿಮೆ ಆದಾಯ ಇರುವವನಿಗೆ ಸಮಸ್ಯೆ ಇದ್ದಂತೆಯೇ ಹೆಚ್ಚು ಆದಾಯ ಇರುವವನಿಗೂ ಸಮಸ್ಯೆ ಇದೆ. ಬಡವನಿಗೆ ಸಮಸ್ಯೆ ಇದ್ದಂತೆಯೇ ಶ್ರೀಮಂತಾನಿಗೂ ಸಮಸ್ಯೆ ಇದೆ. ಪರೀಕ್ಷಿಸಲ್ಪಡುವ  ಈ ಭೂಮಿಯಲ್ಲಿ ಯಾರಿಗೂ ಸಮಸ್ಯೆಯಿಂದ ಮುಕ್ತಿ ಇಲ್ಲ. ಆದರಿಂದ ಮಾನವನು ತಾನಾಗಿರುವ ಸಮಸ್ಯೆಗಳನ್ನುಎದುರಿಸಿಕೊಂಡು ತನ್ನ ಜೀವನವನ್ನು ಮುಂದುವರಿಸಬೇಕಾಗಿದೆ. ಅವನ ಜೀವನದ ಉದ್ದೇಶವು ದೇವನ ಸಂಪ್ರೀತಿಯನ್ನುಗಳಿಸುವದೇ ಹೊರತು ಸಮಸ್ಯೆ ಮುಕ್ತ ಜೀವನವಲ್ಲ ಏಕೆಂದರೆ ಅದು ಪರಲೋಕದಲ್ಲಾಲದೆ ಬೇರೆಲ್ಲೂ ಸಾಧ್ಯವಿಲ್ಲ .

LEAVE A REPLY

Please enter your comment!
Please enter your name here