• ನಸೀಬ ಗಡಿಯಾರ್

ಕವನ : ಅರ್ಪಣೆ

ಭೂಲೋಕ ರಾಕ್ಷಸರ ಬೀಡಾಯ್ತೇ,?
ಹೆಣ್ತನದ ಗೌರವ ಕಾಣೆಯಾಯ್ತೆ?
ಹೇಳು…
ಹೆಣ್ಣಾಗಿ ಹುಟ್ಟಿದ್ದು ಅವಳ ತಪ್ಪೇ?….

ಭೀಮ ಬಲ ಹೊಂದಿದ ನಿನ್ನ ತೊಳ್ಗಳು
ಈಗಷ್ಟೇ ನಡೆಯಲು ಕಲಿತ ಅವಳ ಪುಟ್ಟ ಕಾಲ್ಗಳು
ಈ ನಿನ್ನ ದೇಹವು ಮೇಲೇರಿ ಕಚ್ಚಾಡಲು
ಆ ಕಂದಮ್ಮಳು ತಾಳಲಾಗದೆ ಬಿಕ್ಕಳಿಸಿ ಕಿರಿಚಾಡಲು
ಆ ಕ್ಷಣ ನಿನ್ನ ಮನವು ಕಲ್ಲಾಗಿತ್ತೇ..?
ಹೇಳಿ ಬಿಡು…
ಹೆಣ್ಣಾಗಿ ಹುಟ್ಟಿದ್ದು ಅವಳ ತಪ್ಪೇ.?

ಜೀವನವನ್ನೇ ಅರಿಯದ ಆ ಜೀವಕೆ
ಜೀವನ ಪರಿಯಂತ ಜೀರ್ಣಿಸಿಕೊಳ್ಳಲಾಗದ ಶಿಕ್ಷೆ
ನಿನಗೇನು ದ್ರೋಹ ಬಗೆದಳು ಆಕೆ…
ಹೇಳು. ..
ಹೆಣ್ಣಾಗಿ ಹುಟ್ಟಿದ್ದು ಅವಳ ತಪ್ಪೇ..?

ಈ ನಿನ್ನ ಕಾಮದಾಟಕ್ಕೆ
ಆ ಬಾಲೆಯ ಬಲಿಪಶು ಮಾಡುವೆ ಏತಕೆ?
ಓ ರಾಕ್ಷಸನೇ
ಒಮ್ಮೆಯಾದರೂ ಕೇಳಿದೆಯ ಕಂದಮ್ಮಗಳ ಬೇಡಿಕೆ?
ಸತ್ತು ಹೋಗಿತ್ತೇ ನಿನ್ನಲ್ಲಿ ಮನುಷ್ಯತ್ವವೆಂಬ ಶೀರ್ಷಿಕೆ
ಹೇಳು..ಹೆಣ್ಣಾಗಿ ಹುಟ್ಟಿದ್ದು ಅವಳ ತಪ್ಪೇ..?

ಕೈ ತುತ್ತು ನೀಡುವ ಹೆತ್ತವ್ವ ಹೆಣ್ಣಲ್ಲವೇ
ಬೆಳ್ಳಂಬೆಳಗ್ಗೆ ಜಗಳಕ್ಕಿಳಿದ ತಂಗಿ ಹೆಣ್ಣಲ್ಲವೇ
ಬೈದು ಬುದ್ಧಿಹೇಳುವ ಅಕ್ಕ ಹೆಣ್ಣಲ್ಲವೇ
ಆದರೆ ಆ ಪುಟ್ಟ ಕಂದಮ್ಮಳು ನಿನಗೆ ಕಲ್ಲಂತೆ ಕಂಡಳೇ?…
ಹೇಳು ಹೆಣ್ಣಾಗಿ ಹುಟ್ಟಿದ್ದು ಅವಳ ತಪ್ಪೇ?

ಚಿತ್ರಹಿಂಸೆ ಸಾಲದಕ್ಕೆ
ಆ ಪುಟ್ಟ ನಾಲಗೆಯ ಕತ್ತರಿಸಿದೆ?

ಆದರೆ….ಪಾಪ ,

ಆಕೆಯ ಮಾತು ಮೌನವಾಯ್ತು..
ಮನದ ಕೂಗು ಮುಗಿಲು ಮುಟ್ಟಿತು
ಹೇಳು……. ನೀಚ,
ನಿನ್ನ ಈ ಕ್ರೂರ ಕೃತ್ಯಕ್ಕೆ ಯಾವ ಹೆಸರಿಡಲಿ?
ನಿಮ್ಮಂತ ನರಭಕ್ಷಕರಿಗೆ ಸೃಷ್ಟಿಕರ್ತನೇ ಅಂತ್ಯಹಾಡಲಿ

ಕ್ಷಮಿಸಿ ಬಿಡು….ಮಗು
ಮೌನವಾಯ್ತು..

ಅಸಿಫಾ ,ಸೌಜನ್ಯಳಂತ ಇನ್ನಿತರ ಮುಗ್ಧ ಕೂಗು………

LEAVE A REPLY

Please enter your comment!
Please enter your name here