• ರವಿ ನವಲಹಳ್ಳಿ

ಪುಸ್ತಕ ವಿಮರ್ಶೆ

ಸಾಮಾಜಿಕ ಬರಹಗಾರರಾದ ಆತ್ಮೀಯ ಗುರುಗಳು ಮದನ್ ಪಟೇಲರ ತಮಟೆ ಕಾದಂಬರಿಯಲ್ಲಿ 199 ಪುಟಗಳನ್ನು ಒಳಗೊಂಡಿದೆ. ಪ್ರಸ್ತುತ 18 ಅಧ್ಯಾಯಗಳಲ್ಲಿ ಹಂಚಿಕೆಯಾಗಿದೆ. ಸಮಕಾಲೀನ ರಾಜಕೀಯದ ಚಿತ್ರಣ, ಸಮಾಜದ ದೀನದಲಿತರ ತೊಳಲಾಟದ ನೈಜ ಚಿತ್ರಣ ಈ ಕಾದಂಬರಿಯಲ್ಲಿ ಹಾಸು ಹೊಕ್ಕಿದೆ. ರಾಜಕೀಯದ ಕುಟೀಲತೆ, ರೌಡಿಗಳ, ತಲೆಹಿಡುಕರ, ಸಮಯಸಾಧಕತನ, ಪೊಲೀಸರ ಭ್ರಷ್ಟತೆ, ಸರಕಾರಿ ಅಧಿಕಾರಿಗಳ ದಕ್ಷತೆ – ಅದಕ್ಷತೆಗಳ ನಡುವೆ ಬಡವರ ಬದುಕಿನ ಬವಣೆ – ದಲಿತರ ಕುಲವಾಡಿಕೆ, ಅಸಹಾಯಕತೆ ಮುಂತಾದವು ಮನಸ್ಸನ್ನು ತೇವಗೊಳಿಸುತ್ತವೆ.

ಇಲ್ಲಿ ಬರುವ ಜಾತಿ ಆಧಾರಿತ ರಾಜಕಾರಣ ಪಾತ್ರಗಳು, ಪಕ್ಷ -ಪಕ್ಷಗಳ ನಡುವೆ ನಡೆಯುವ ಸಂಚು, ಕಾಲೆಳತ, ಹಗ್ಗಜಗ್ಗಾಟಗಳು ಪ್ರಸ್ತುತ ರಾಜಕೀಯ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಕಥಾನಾಯಕ ಮುನಿಯ ಒಬ್ಬ ಬಡ ದಲಿತ ತಮಟೆ ವಾದಕ. ತಾತನಿಂದ ಬಂದಂತ ಕುಲಕಸುಬಿಗೆ ಅತ ತೋರುವ ಭಕ್ತಿ , ಗೌರವ ಕಂಡು ಬೆರಗಾದೆ. ಕಡು ಬಡತನದಲ್ಲೂ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ತನ್ನ ಕಸುಬಿಗೆ ಗೌರವ ನೀಡುವ ಆತನ ವ್ಯಕ್ತಿತ್ವ, ರಾಜಕೀಯ ದೊಂಬರಾಟದಲ್ಲಿ ಸಿಕ್ಕಿ ನಲುಗಿ, ನರಳಿ, ತೊಳಲಾಡಿ , ಹೆಣಗಾಡುವ ಆತನ ಸ್ಥಿತಿ ನನ್ನ ಕಣ್ಣಳಲ್ಲಿ ನೀರು ತರಿಸಿತ್ತು .

‘ತಮಟೆ’ ಎಂದರೆ ತಳಸಮುದಾಯಗಳ ಕಲಾ ಪ್ರೌಡಿಮೆಯ ಸಂಕೇತವಾದರೂ ಅದರ ಬಳಕೆ ಮಾತ್ರ ರಸವಿಲ್ಲದ ರಾಜಕಾರಣ ಸಭೆ ಮತ್ತು ಸಮಾರಂಭಗಳಲ್ಲಿ ರಂಜಿಸುವುದಕ್ಕೆ ಡಿ.ಸಿ.ಗೌರಿ ನಾರಾಯಣ ರಂತಹ ದಕ್ಷ ಮಹಿಳಾ ಅಧಿಕಾರಿಯು ಕೂಡ ತನ್ನ ನಿರಂತರ ವರ್ಗಾವಣೆಗಳಿಂದ ತಪ್ಪಿಸಿಕೊಳ್ಳಲು ಕಾಲಕ್ಕೆ ತಕ್ಕಂತೆ ನಡೆದುಕೊಳ್ಳಬೇಕೆಂಬ ಯೋಚನೆ ಸಮಕಾಲೀನ ಸಂದರ್ಭ ಕ್ಕೊಂದು ಉದಾಹರಣೆಯಾಗಿದೆ .ಸಿಂಗನೂರು ಜಿಲ್ಲೆಯ ರಾಂಪುರದಲ್ಲಿ ನಡೆಯುವ ಶ್ರೀ ಚೌಡೇಶ್ವರಿ ಅಮ್ಮನ ಜಾತ್ರೆ ಅಂದ್ರೆ ಸಡಗರ ಸಂಭ್ರಮದಿಂದ ವಿವಿಧ ಕಲಾ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು ರಾಂಪುರದಲ್ಲಿ ಪ್ರತಿ ಜಾತಿಗೊಂದು ಸಂಘ, ಕೇರಿಗೊಂದು ಸಂಘಗಳಿದ್ದವು. ಒಂದು ಓಣಿಯಲ್ಲಿ ವಾದ್ಯಗೋಷ್ಠಿ, ಮತ್ತೊಂದು ಓಣಿಯಲ್ಲಿ ನೃತ್ಯ ತಂಡ ಮಗದೊಂದು ಕೇರಿಯಲ್ಲಿ ನಾಟಕ ಮುಂತಾದ ಜನಪ್ರಿಯ ಕಾರ್ಯ ಕ್ರಮಗಳನ್ನು ಏರ್ಪಡಿಸುತ್ತಿದ್ದರು . ಪ್ರತಿ ವರ್ಷವೂ ತಪ್ಪದೆ ಮುನಿಯನ ತಮಟೆ ತಂಡವನ್ನು ಕರೆಸಲು ಕಾರಣ ಚೌಡೇಶ್ವರಿ ಅಮ್ಮ ಎಷ್ಟೋ ವರ್ಷಗಳ ಹಿಂದೆ ಮೈಮೇಲೆ ಬಂದು ಅಪ್ಪಣೆ ಕೊಟ್ಟಿದ್ದಂತೆ ದೊಡ್ಡಮುನಿಯನಿಂದ ತಮಟೆ ಸೇವೆ ಮಾಡಿಸಬೇಕು ಎಂದು ಆದ್ದರಿಂದ ದೇವಸ್ಥಾನದ ಟ್ರಸ್ಟಿಗಳು ಇಂದಿಗೂ ಸಹ ಅದನ್ನೆ ಪಾಲಿಸುತ್ತಿದ್ದಾರೆ. ದೆ ಖನಿಂಯನ ನಂತರ, ಚಿಕ್ಕಮುನಿಯ, ಈಗ ಆತನ ಮಗ ಮುನಿಯ. ಇಲ್ಲಿ ತಮಟೆ ಕಾದಂಬರಿಯಲ್ಲಿ ಮೂಡಿಬಂದಿರುವ ಮುನಿಯನ ಪಾತ್ರ ಮಾಸಿ ಹೋಗದ ಪಾತ್ರವಾಗಿದೆ ಏಕೆಂದರೆ ತಲತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ಜಾತಿ ವ್ಯವಸ್ಥೆಯನ್ನು ತಮಟೆ ಕಾದಂಬರಿಯಲ್ಲಿ ಕಾಣಬಹುದು.

LEAVE A REPLY

Please enter your comment!
Please enter your name here