• ರವಿ ನವಲಹಳ್ಳಿ ರಾಯಚೂರು. (ಯುವ ಸಾಹಿತಿ ಕಲಾವಿದ)

ಪುಸ್ತಕ ವಿಮರ್ಶೆ

“ಪುರಾಣ ಮತ್ತು ವಾಸ್ತವ ಡಿ.ಡಿ.ಕೊಸಾಂಬಿಯವರ ಕಾಲಾತೀತ ಪರಿಶ್ರಮದ ಕೃತಿ. ಇದನ್ನು ಕನ್ನಡದಲ್ಲಿ ಪಡಿಯಚ್ಚು ಹಾಕಿದ್ದಾರೆ ಟಿ.ಎಸ್‌ ವೇಣುಗೋಪಾಲ್ ಮತ್ತು ಶೈಲಜಾ ಮೇಡಂ ಅವರು.
ಪ್ರಸ್ತುತ ಸಾಹಿತ್ಯವನ್ನು ಒಂದು ಹೊಸ ಬಗೆಯ ‘ವೈಜ್ಞಾನಿಕ ಇತಿಹಾಸ’ ಎಂದು ಕರೆಯಬಹುದು. ತಮ್ಮ ಸದ್ಯದ ಈ ಕಾಯಕದಲ್ಲಿ ಪ್ರಾಕೃತಿಕ ಮತ್ತು ಸಮಾಜ ವಿಜ್ಞಾನದ ಪರಿಣಾಮವು ವಾಸ್ತವದ ಮೇಲೆ ಹೇಗೆ ಬೀರುತ್ತದೆ ಎಂದು ತಿಳಿಸುತ್ತಾರೆ. ತಮ್ಮ ವೈಚಾರಿಕತೆಯಿಂದ ಚಾರಿತ್ರಿಕ ಭೌತವಾದದ ಪರಿಧಿಯನ್ನು ವಿಸ್ತರಿಸಿದ್ದಾರೆ.

ದಾಮೋದರ ದರ್ಮಾನಂದ ಕೊಸಾಂಬಿ ಎಂಬ ಇತಿಹಾಸಕಾರನಲ್ಲದ ಇತಿಹಾಸಕಾರ ಭಾರತದ ಇತಿಹಾಸ ರಚನೆಗೆ ಹೊಸ ಬೆಳಕನ್ನೆ ಹರಿಸಿದ ಕಥೆ ಹಳೆಯದು. ಭಾರತದ ಕಾವ್ಯ, ಪುರಾಣಗಳಿಂದ ಇತಿಹಾಸವನ್ನು ಹಿಂಡಿ, ಸೋಸಿ ಶಾಸನಗಳು , ಭೂಮಿಯನ್ನು ಅಗೆದು ಶೋಧಿಸುವ ಪುರಾತತ್ವ ಶಾಸ್ತ್ರಗಳ ಜೊತೆಗೆ ಇವುಗಳನ್ನು ಬಳಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಕಣ್ಣೋಟವನ್ನು ನೀಡಿದರು., ಗಣಿತ , ಸಂಖ್ಯಾ ಶಾಸ್ತ್ರವನ್ನು ಬಳಸಿ ನಾಣ್ಯ ಶಾಸ್ತ್ರವನ್ನು ಬೆಳೆಸಿದರು. ವಿವಿಧ ಕಾಲಘಟ್ಟದ ಹೆದ್ದಾರಿಗಳು , ಜಾನಪದ ದೇವ ದೇವಿಯರು , ಅವರ ಹಬ್ಬಗಳು , ಜಾತ್ರೆಗಳು , ಆಚರಣೆಗಳು ಇವುಗಳನ್ನೆಲ್ಲಾ ಇತಿಹಾಸದ ಆಕರಗಳನ್ನಾಗಿ ಬಳಸಿದರು . ಅವರ ಅನೇಕ ಕೃತಿಗಳಲ್ಲಿ ಇತಿಹಾಸದ ಆಸಕ್ತರೆಲ್ಲರ ನಡುವೆ ಬಹಳ ಜನಪ್ರಿಯವಾದದ್ದು. ” ಪುರಾಣ ಮತ್ತು ವಾಸ್ತವ ”ಕೃತಿಯಂತೆ

ಭಾರತೀಯ ಪುರಾಣವ ಇತಿಹಾಸವನ್ನು ಇತರ ಅನೇಕ ಇತಿಹಾಸಕಾರರಂತೆ ಕೇವಲ ಐರೋಪ್ಯ ಓರಿಯಂಟಲ್ ರಿಸರ್ಚ್ ಮಾಡದೆ , ತಮ್ಮ ‘ಸಂಯೋಜಿತ ವಿಧಾನಗಳ’ ಮೂಲಕ ಅನ್ವೇಷಣೆ ಮಾಡಿದ್ದಾರೆ. ಅವರ ‘ಊರ್ವಶಿ ಮತ್ತು ಪುರೂರವ’ ಎಂಬ ಪ್ರಬಂಧವು ಒಂದು ಆಳವಾದ ಮತ್ತು ವಿಸ್ತಾರವಾದ ಅಂತರ-ಶಿಸ್ತೀಯ ಜ್ಞಾನವನ್ನು ಹೊರಗೆಡಹುವ ಸಾಂದರ್ಭಿಕ ಎಂದೆನಿಸುವ ಹೇಳಿಕೆಗಳಲ್ಲಿ ಜೋಡಿಸಿಡಲಾಗಿದೆ.

ಪುರಾಣ ಮತ್ತು ವಾಸ್ತವ ‘ ದಲ್ಲಿ ಶಿವನ ಕುಟುಂಬ , ಊರ್ವಶಿ , ಅಪ್ಸರೆಯರು , ಭಗವದ್ಗೀತೆ , ಮತ್ತನೇಕ ವಿಷಯಗಳ ಬಗ್ಗೆ , ಬೆಂಗಳೂರಿನ ಕರಗದ ಬಗ್ಗೆ ಮಾಡಿರುವ ವಿಶ್ಲೇಷಣೆ ಅನೇಕ ಒಳ ನೋಟಗಳನ್ನು ನೀಡುತ್ತದೆ. ಇಂತೀ ಇವರು ಬೆಂಗಳೂರಿನ ಟಾಟಾ ವಿಜ್ಞಾನ ಸಂಸ್ಥೆ , ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ ಮುಂತಾದ ಪ್ರಸಿದ್ಧ ಸಂಸ್ಥೆಗಳಲ್ಲಿ ಗಣಿತ ಸಂಶೋಧನೆ ಮಾಡಿ ಹೆಸರು ಗಳಿಸಿದವರು .ಅವರು ತೋರಿಸಿದ ಹಾದಿ ಕರ್ನಾಟಕದ ಅನೇಕ ದೇವ ದೇವಿಯರ ಬಗ್ಗೆ ಸಂಶೋಧನೆ ಮಾಡಲು , ಭಾರತದ ಇಡೀ ದೇವ ಸಂಕುಲದ ಹುಟ್ಟಿನ ಗುಟ್ಟನ್ನರಿಯಲು ಕೆಲವರಿಗಂತು ಅಪರಿಮಿತವಾದ ಸಹಾಯ ಮಾಡಿರುತ್ತದೆ ಅದಕ್ಕಾಗಿ ನೀವು ಒಮ್ಮೆ ಓದಿ ಇತರರನ್ನು ಓದಿಸಿ.

LEAVE A REPLY

Please enter your comment!
Please enter your name here