• ಶಾರೂಕ್ ತೀರ್ಥಹಳ್ಳಿ

ಕಾಸರಗೋಡು ಸಮೀಪದ ಮೇಲ್ಪರಂಬು ಶಮೀಮ್ ಮಂಝೀಲ್ ನಿವಾಸಿ ಅಬ್ದುಲ್ಲ ಮತ್ತು ಖದೀಜ ಎಂಬ ಮುಸ್ಲಿಂ ದಂಪತಿಗಳು ಹಿಂದೂ ಯುವತಿ ರಾಜೇಶ್ವರಿಯನ್ನು ಹಿಂದೂ ಸಂಪ್ರದಾಯದಂತೆ ಕನ್ಯಾದಾನ ಮಾಡಿ ಹಿರಿಮೆ ಮೆರೆದ ವಿಷಯಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅದರ ಹಿಂದೆಯೇ ದೆಹಲಿಯಲ್ಲಿ ಕೋಮು ಹಿಂಸಾಚಾರದ ಸಮಾಚಾರಗಳು ನಿರಂತರ ಬಿತ್ತರಿಸಲು ಪ್ರಾರಂಭವಾದವು. ಈ ಕೋಮು ಗಲಭೆಯಿಂದಾಗಿ ಪರಸ್ಪರ ಸಹೋದರರಂತೆ ಬಾಳಿ ಬದುಕುತ್ತಿದ್ದ ಸೌಹಾರ್ದಯುತ ಮನಸ್ಸುಗಳಿಗೆ ಇನ್ನಷ್ಟು ಘಾಸಿಯಾಗಲು ಕಾರಣವಾದವು. ಅದರೆ ಆ ಕೋಮುಗಲಭೆ ಮುಂದುವರೆಯಲು ದೆಹಲಿಯ ಸೌಹಾರ್ದ ಪ್ರೇಮಿಗಳು ಅಡ್ಡಗಾಲು ಹಾಕಿದರು. ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾದ ಈಶಾನ್ಯ ದಿಲ್ಲಿಯ ಅಶೋಕ್ ನಗರ್ ಪ್ರದೇಶದಲ್ಲಿ ತಮ್ಮ ಮನೆ ಮಠ ಕಳೆದುಕೊಂಡ ಸುಮಾರು ನಲವತ್ತು ಮುಸ್ಲಿಂ ಕುಟುಂಬಗಳು ತಮ್ಮ ಹಿಂದು ನೆರೆಹೊರೆಯವರ ಮನೆಗಳಲ್ಲಿ ಆಶ್ರಯ ಪಡೆದರು. ಉದ್ರಿಕ್ತ ಗುಂಪೊಂದು ಆ ಪ್ರದೇಶದಲ್ಲಿನ ಹಲವು ಮನೆಗಳು ಹಾಗೂ ಅಂಗಡಿಗಳಿಗೆ ಬೆಂಕಿಯಿಕ್ಕಿದಾಗ ಸಂತ್ರಸ್ತರಿಗೆ ಅವರ ಹಿಂದು ನೆರೆಹೊರೆಯವರೇ ಆಶ್ರಯ ನೀಡಿ ಮಾನವೀಯತೆ ಮೆರೆದರು. ಮದುವೆಗೆ ಸಿದ್ದರಾಗಿ ಮುದುವೆಯ ತಯಾರಿಯಲ್ಲಿದ್ದ ಹಿಂದು ಜೋಡಿಯ ಮದುವೆಯನ್ನು ಪಕ್ಕದ ಮನೆಯ ಮುಸ್ಲಿಮ್ ಬಾಂಧವರ ಮನೆಯಲ್ಲಿ ನೆರೆವೇರಿಸಿದ ಘಟನೆಗಳು ದೆಹಲಿ ಗಲಭೆಯಲ್ಲಿ ಸಾಕ್ಷ್ಯ ಎಂಬಂತೆ ಹಿಂದು ಸಹೋದರರು ಮುಸ್ಲಿಮ್ ಸಹೋದರರಿಗೆ. ಮುಸ್ಲಿಮ್ ಸಹೋದರರು ಹಿಂದು ಸಹೋದರಿಗೆ ತನ್ನ ಕೈಲಾದ ಸಹಾಯ ಮಾಡಿ ಕೋಮು ಗಲಭೆಯಿಂದ ಪಾರುಗೊಳಿಸಿದ ಮಾನವೀಯ ಮೌಲ್ಯಗಳನ್ನು ಕಾಣಲು ಸಾಧ್ಯವಾಯಿತು. ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿರುವ ಸೌಹಾರ್ದಯುತ ದೇಶ, ಇಲ್ಲಿನ ಜನರು ಶತ ಶತಮಾನದಿಂದಲೂ ಈ ನಾಡಿನಲ್ಲಿ ಶಾಂತಿ ಸೌಹಾರ್ದತೆಯಿಂದ ಜೀವಿಸಿಕೊಂಡು ಬರುತ್ತಿದ್ದಾರೆ. ಕೆಲವೊಂದು ಕೋಮು ಹಿತಾಸಕ್ತಿಯನ್ನು ಬಳಸಿ ನಮ್ಮ ಸೌಹಾರ್ದತೆಯನ್ನು ಒಡೆಯಲು ಯಾವ ಶಕ್ತಿಯಿಂದಲೂ ಆಗುವುದಿಲ್ಲ ಎಂಬುದನ್ನು ಇಲ್ಲಿನ ನಾಗರೀಕರು ಪದೇ ಪದೇ ಎಚ್ಚರಿಸುತ್ತಲೇ ಬಂದಿದ್ದಾರೆ. ದೆಹಲಿಯಲ್ಲಿ ಮಸೀದಿ ಮೇಲೆ ಹತ್ತಿ ಭಾವುಟವನ್ನು ಹಾರಿಸಿದರು ನಂತರದಲ್ಲಿ ಭಾವುಟ ಹಾರಿಸಿದವರೇ ಅದನ್ನು ಕೆಳಗಿಳಿಸಿದರು. ಯಾರದೋ ದ್ವೇಷದ ಭಾಷಣದಿಂದಲೂ ಇನ್ನರಾದ್ದೋ ಕುತಂತ್ರದಿಂದಲೂ ಈ ರೀತಿ ಮಾಡಿರಬಹುದು, ಐಸಿಐಎಸ್ ಎನ್ನುವ ಮುಸ್ಲೀಮ್ ಹೆಸರಿನ ಭಯೋತ್ಪಾದಕರು ಹಲವು ಬಾರಿ ಈ ದೇಶದಲ್ಲಿ ಭಯೋತ್ಪಾದನೆಯನ್ನು ಮಾಡಿ ಇಡೀ ಮುಸ್ಲೀಮ್ ಸಮುದಾಯವನ್ನೇ ಭಯೋತ್ಪಾಧಕರನ್ನಾಗಿ ಬಿಂಬಿಸಿ ಕೋಮುಗಲಭೆಯನ್ನು ಸೃಷ್ಟಿಸಲು ಪ್ರಯತ್ನಿಸಿದ್ದರು ಆದರು ಕೂಡ ಇಲ್ಲಿನ ಜನರು ತಕ್ಕ ಪಾಠವನ್ನೇ ಕಲಿಸಿಕೊಟ್ಟರು.
ಹೌದು ಈ ದೇಶದಲ್ಲಿ ಯಾರು ಕೂಡ ಕೋಮು ಹಿಂಸೆಯನ್ನು ಬೆಂಬಲಿಸುವುದಿಲ್ಲ, ತಾನು ತನ್ನವರು ಎಂಬ ಕಾರಣಕ್ಕಾಗಿ, ಅಥವಾ ತನ್ನ ಧರ್ಮದವನು ಎಂಬ ಕಾರಣಕ್ಕಾಗಿ ಆತ ಕೆಡುಕು ಮಾಡಿದ್ದರು ಅದನ್ನು ಬೆಂಬಲಿಸುವುದೇ ಕೋಮುವಾದಕ್ಕೆ ಮುಖ್ಯ ಕಾರಣ ಎಂದು ಹೇಳಬಹುದು ಯಾವ ಧರ್ಮವು ಕೋಮುವಾದವನ್ನು ಕಲಿಸಿಕೊಡುವುದಿಲ್ಲ, ಕೋಮು ಕೋಮುಗಳ ಮಧ್ಯೆ ಪರಸ್ಪರ ಸೌಹಾರ್ದತೆ ಇದ್ದರೆ ಮಾತ್ರ ಈ ದೇಶ ಕೋಮುವಾದದಿಂದ ಮುಕ್ತವಾಗಲು ಸಾಧ್ಯ. ಧರ್ಮಗಳ ಮೌಲ್ಯಗಳು, ಧರ್ಮಗ್ರಂಥಗಳ ಸಂದೇಶಗಳು ಎಲ್ಲರೂ ಅರಿತು ಅದರಂತೆ ಜೀವನ ಸಾಗಿಸಿದಾಗ ಮಾತ್ರ ಧರ್ಮ ಧರ್ಮಗಳ ನಡುವೆ ಇರುವ ಕಂದಕವನ್ನು ಒಡೆದು ಹಾಕಲು ಸಹಕಾರಿಯಾಗುತ್ತದೆ. ಎಲ್ಲಾ ಧರ್ಮಗಳು ಮಾನವೀಯ ಗುಣಗಳನ್ನೆ ಕಲಿಸಿಕೊಡುತ್ತದೆ, ಮಾನವೀಯತೆ ಇಲ್ಲದ ಧರ್ಮ ಯಾವುದಯ್ಯ ಎಂದು ಹತ್ತೊಂಬತ್ತನೇ ಶತಮಾನದಲ್ಲಿ ಬಸವಣ್ಣನವರೇ ಹೇಳಿದ್ದಾರೆ. ರಾಜಕೀಯ ಪಕ್ಷಗಳು ಕೆಲವೊಂದು ಕಾಯ್ದೆ ಕಾನೂನನ್ನು ಜಾರಿಗೊಳಿಸಿದರೆ ಅದಕ್ಕೆ ಪರ ವಿರೋಧ ಇರುವುದು ಸರ್ವೆ ಸಾಮಾನ್ಯ ಅದನ್ನು ರಾಜಕೀಯವಾಗಿ ನೋಡ ಬೇಕೆ ಹೊರತು, ಧರ್ಮಾಧಂತೆಯಿಂದ ಯಾರು ಕೂಡ ನೋಡ ಬಾರದು, ಬಹು ಸಂಸ್ಕೃತಿಯ ಈ ಸಮಾಜದಲ್ಲಿ ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವನ ಸಾಗಿಸಬೇಕು ಅದು ಬಿಟ್ಟು ಇತರ ಧರ್ಮದೊಂದಿಗೆ ವ್ಯಾಪಾರ ಮಾಡಬೇಡಿ, ಮಾತುಕಥೆ ನಡೆಸಬೇಡಿ, ಎಂದು ಹಿಂದುಗಳು ಮುಸ್ಲಿಮರಿಗೆ, ಮುಸ್ಲಿಮರು ಹಿಂದುಗಳಿಗೆ ಷರತ್ತುಗಳನ್ನು ಹಾಕಿ ವ್ಯಾಪಾರ ವ್ಯವಹಾರದಲ್ಲಿ ಸೌಹಾರ್ದತೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವರ ನಡುವೆ ಮಾನವೀಯ ಮೌಲ್ಯಗಳು ಇರಬೇಕೇ ಹೊರತು ಕೋಮುವಾದದ ಲಕ್ಷಣಗಳು ಇರಬಾರದು. ಈ ಜಗತ್ತಿನಲ್ಲಿ ವಿವಿಧ ಭಾಷೆ, ಧರ್ಮ, ಜಾತಿ, ಸಂಸ್ಕೃತಿಗಳು ಇದ್ದರೂ ಎಲ್ಲ ಮಾನವರು ಸಮಾನರು ಎನ್ನುವ ಪ್ರಜ್ಞೆ ನಮ್ಮಲ್ಲಿರಬೇಕು. ಈ ದೇಶ ಸೌಹಾರ್ದ ಪರಂಪರೆಯನ್ನು ಹೊಂದಿರುವ ದೇಶ ಇಲ್ಲಿ ಹಿಂದು ಮುಸ್ಲಿಮ್ ಕ್ರೈಸ್ತರು ಏಕೋದರ ಸಹೋದರರು ಎನ್ನುವ ಭಾವನೆ ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿ ಹಚ್ಚು ಹಾಕಿದಂತಿರಬೇಕು.  ಮಲೆನಾಡಿನ ತೀರ್ಥಹಳ್ಳಿಯು ಕೂಡ ಸೌಹಾರ್ದತೆಯ ಬೀಡು ಎಂದೆ ಕರೆಯಬಹುದು ಹಿಂದು ಮುಸ್ಲೀಮರ ನಡುವೆ ಇರುವ ಸೌಹಾರ್ದತೆಯ ಬೇರೆಲ್ಲೂ ಕಾಣಸಿಗಲಾರದು. ಎಲ್ಲಾ ಧಾರ್ಮಿಕ ಹಬ್ಬಗಳಲ್ಲೂ ಸೌಹಾರ್ದತೆಯನ್ನು ಸಾರುವಂತಹ ಊರು ಎಂದೇ ಹೇಳಬಹುದು. ಅದರಲ್ಲೂ ಮುಖ್ಯವಾಗಿ ತೀರ್ಥಹಳ್ಳಿಯ ಪುರಾಣ ಪ್ರಸಿದ್ದ ಎಳ್ಳಮ್ಯಾಸೆ ಜಾತ್ರೆಯಲ್ಲಿ ಎಲ್ಲಾ ಧರ್ಮದವರು ಭಾಗವಹಿಸುತ್ತಾರೆ. ಅಷ್ಟೇ ಯಾಕೆ ಮೊನ್ನೆ ನಡೆದ ಶಿವಾಜಿ ಜಯಂತಿ ಸಂಭ್ರಮದಲ್ಲೂ ಮುಸ್ಲಿಂ ವ್ಯಕ್ತಿಯೊಬ್ಬ ಶಾಸಕ ಆರಗ ಜ್ಞಾನೇಂದ್ರ ಸೇರಿ ಎಲ್ಲರಿಗೂ ಪೇಟ ಧರಿಸುವ ಪೋಟೊ ನೋಡಿದರೆ ತೀರ್ಥಹಳ್ಳಿಯ ಸೌಹಾರ್ದ ಪರಂಪರೆ ಬಗ್ಗೆ ಇನ್ನಷ್ಟು ವಿವರಿಸುವ ಅಗತ್ಯವೇ ಇಲ್ಲ ಎಂದು ಅನಿಸುತ್ತದೆ. ಈ ಸೌಹಾರ್ದ ಪರಂಪರೆ ಜಗತ್ತಿನುದ್ದಕ್ಕೂ ವ್ಯಾಪಿಸಲಿ ಎನ್ನುವ ಹಾರೈಕೆ ಸದಾ ನಮ್ಮೆಲ್ಲರಲ್ಲಿರಲಿ.

LEAVE A REPLY

Please enter your comment!
Please enter your name here