ಸೈಯದ್ ಕಾಝಿಮ್, (ಉಪನ್ಯಾಸಕರು ಬೆಂಗಳೂರು)

ಪ್ರೇಮಿಗಳ ದಿನ(ವ್ಯಾಲಂಟೈನ್ಸ್ ಡೇ)ವನ್ನು ಸಾಮಾನ್ಯವಾಗಿ ಜನರು ಬೇರೆ-ಬೇರೆ ಕಾರಣಗಳಿಗಾಗಿ ವಿರೋಧಿಸುತ್ತಾರೆ. ಅದು ಮದುವೆಯ ಚೌಕಟ್ಟಿನ ಹೊರಗಿನ ಪ್ರೇಮ, ಅದು ಭಾರತೀಯ ಸಂಸ್ಕøತಿಗೆ ವಿರುದ್ಧವಾಗಿದೆ, ಅದು ಪ್ರೇಮವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಪ್ರೇರೇಪಿಸುತ್ತದೆ, ಅದು ಪ್ರೇಮವನ್ನು ಕೇವಲ ಒಂದು ದಿನದ ಮಟ್ಟಿಗೆ ಸೀಮಿತಗೊಳಿಸುತ್ತದೆ, ಅದು ಧಾರ್ಮಿಕ ಹಬ್ಬಗಳಿಗಿಂತ ಪ್ರಸಿದ್ಧಿಯನ್ನು ಪಡೆದಿದೆ ಹೀಗೆ ಅನೇಕ ಕಾರಣಗಳು ಇರಬಹುದು. ಆದರೆ, ಪೀತಿಯನ್ನು ನಿಮ್ಮ ಖರೀದಿಯಿಂದ ಅಳತೆ ಮಾಡಬಾರದು. ಪ್ರೀತಿಯ ಕ್ರಿಯೆಯನ್ನು ವ್ಯಾಪಾರೀಕರಣ ಮಾಡಿರುವುದರಿಂದ, ಅದು ಪ್ರೇಮದ(ಪ್ರೀತಿಯು ಕಾರ್ಡ್, ಚಾಕೋಲೆಟ್ ಮತ್ತು ಹೂವಿಗಿಂತ ಆಚಿನದ್ದಾಗಿದೆ.) ಬಗೆಗೆ ಉಂಟಾಗಿರುವ ತಪ್ಪು ಪರಿಕಲ್ಪನೆಯಾಗಿದೆ. ಈ ಲೇಖನವು ಮುಖ್ಯವಾಗಿ ಹೇಗೆ ಬೇರೆ-ಬೇರೆ ಉದ್ಯಮಗಳು ಈ ದಿನವನ್ನು ತಮ್ಮ ಲಾಭಗಳಿಕೆಗೆ ಬಳಸಿಕೊಳ್ಳುತ್ತದೆ ಎಂಬುವುದರೆಡೆಗೆ ಗಮನಹರಿಸುತ್ತದೆ.

ಜಾಗತೀಕರಣದ ನೇರ ಫಲಿತಾಂಶವು ಪ್ರೇಮಿಗಳ ದಿನದ ವ್ಯಾಪಾರೀಕರಣವಾಗಿದೆ. ಜಾಗತೀಕರಣವು ತನ್ನೊಂದಿಗೆ ಜಗತ್ತಿನ ವಿವಿಧ ಸಂಸ್ಥೆಗಳ ನಡುವೆ ನಿಕಟ ಕೊಂಡಿಯನ್ನು ಹೊತ್ತುತಂದಿತು. ಉದಾರೀಕರಣದ ನಂತರದಲ್ಲಿ, ಒಂದು ಭಾರತೀಯ ವ್ಯವಹಾರ ಸಂಸ್ಥೆಯು ಗ್ರೀಟಿಂಗ್ ಕಾರ್ಡುಗಳ ವ್ಯಾಪಾರ ಹೊಂದಿದ್ದರೆ, ನೇರವಾಗಿ ಯು.ಎಸ್.ಎ(ಅಮೇರಿಕಾ)ಯ ಹೂಗುಚ್ಛಗಳ ಕಂಪೆನಿಯೊಂದಿಗೆ ಸಂವಹನ ನಡೆಸಲು ಸಾಧ್ಯವಿದೆ. ಎರಡೂ ಸಂಸ್ಥೆಗಳು ಪರಸ್ಪರರ ವ್ಯವಹಾರಗಳಿಗೆ ಸಹಕಾರವನ್ನು ನೀಡಿತು. ಈಗ ಯು.ಎಸ್.ಎ ಸಂಸ್ಥೆಯ ಸಾಗರೋತ್ತರ ವ್ಯವಹಾರಗಳ ವಿಭಾಗವನ್ನು ಭಾರತದ ಪ್ರತಿನಿಧಿಯು ನೋಡಿಕೊಳ್ಳುತ್ತದೆ ಮತ್ತು ಅದೇ ರೀತಿಯಾಗಿ ಭಾರತದ ಸಂಸ್ಥೆಯೂ ಕೂಡ. ಒಟ್ಟಾರೆಯಾಗಿ ಇವುಗಳೆಲ್ಲವು `ಪ್ರೇಮಿಗಳ ದಿನ’ದ ವ್ಯಾಪಾರೀಕರಣದ ಅವಕಾಶವನ್ನು ವಿಸ್ತರಿಸುತ್ತದೆ. ಅದು ಯು.ಎಸ್.ಎ ಯು ಗಳಿಸಿದ ಯಶಸ್ಸನ್ನು ಯಾಕೆ ನಾವು ಗಳಿಸಲು ಸಾಧ್ಯವಿಲ್ಲ ಎಂಬ ಭಾರತೀಯರ ವಿಶ್ವಾಸವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿತು.

ಭಾರತದಲ್ಲಿ ಸಾಮಾನ್ಯವಾಗಿ ಶಿಕ್ಷಕರ ದಿನ, ಮಕ್ಕಳ ದಿನ, ತಾಯಂದಿನ ದಿನ, ತಂದೆಯ ದಿನ, ಮಾಲಕನ ದಿನ, ಅಂತಾರಾಷ್ಟ್ರೀಯ ಮಹಿಳಾ ದಿನ, ವಿಶ್ವ ಪರಿಸರ ದಿನ, ವಿಶ್ವ ಹೃದಯ ದಿನ ಮತ್ತು ಪ್ರೇಮಿಗಳ ದಿನ ಹೀಗೆ ಹಲವಾರು ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ. ಆದರೆ, ಈ ಎಲ್ಲಾ ದಿನಗಳಲ್ಲಿ ಪ್ರೇಮಿಗಳ ದಿನವು ಹೆಚ್ಚಿನ ಆಕರ್ಷಣೆಯನ್ನು ಗಳಿಸುತ್ತದೆ. ಯಾಕೆಂದರೆ ಈ ದಿನವನ್ನು ಬೃಹತ್ ಪ್ರಮಾಣದಲ್ಲಿ ಪ್ರಚಾರ ಪಡಿಸಲಾಗುತ್ತದೆ ಮತ್ತು ಆಚರಿಸಲಾಗುತ್ತದೆ. ಅಲ್ಲದೆ, ಈ ದಿನದೊಂದಿಗೆ ಪ್ರೇಮ ಹಾಗೂ ಲೈಂಗಿಕತೆ ಸೇರಿಕೊಂಡಿದೆ ಮತ್ತು ಅದು ವ್ಯಾಪಾರಗೊಳ್ಳುತ್ತದೆ.

ಕಳೆದ ಹತ್ತು ವರ್ಷಗಳಿಂದ ಪ್ರೇಮಿಗಳ ದಿನದ ವ್ಯಾಪಾರೀಕರಣವು ಏರಿಕೆಯಾಗುತ್ತಲೇ ಇದೆ. ಟಿ.ವಿ ಮತ್ತು ಪತ್ರಿಕೆಗಳು, ದೇಹದಲ್ಲಿ ಯಾವುದೇ ಕುಂದಿಲ್ಲದ ಮತ್ತು ಅಂದವಾದ ಹಲ್ಲುಗಳಿರುವ ಮಾಡೆಲ್‍ಗಳು ಪರಸ್ಪರ ಚಾಕೋಲೆಟ್, ಆಭರಣಗಳನ್ನು ನೀಡುವ ಜಾಹೀರಾತುಗಳನ್ನು ಪ್ರಕಟಿಸುತ್ತದೆ. ಈ ಮೂಲಕ ತಿಳಿಸುವುದೇನೆಂದರೆ, “ನಿಮ್ಮ ಪ್ರೇಮವು ನಿಮ್ಮ ಖರೀದಿಯಿಂದ ಅಳತೆ ಮಾಡಲಾಗುವುದು.” ಪ್ರೀತಿ ಎಂದರೆ ವಾಸ್ತವದಲ್ಲಿ ಇದಲ್ಲ. ಪ್ರೇಮವು ಚಾಕೋಲೇಟ್ ಮತ್ತು ಹೂವುಗಳಿಗಿಂತ ಸಂಕೀರ್ಣವಾದುದು. ಕಳೆದ ನಾಲ್ಕು ದಶಕಗಳಿಂದ ಸಾಮಾಜಿಕ ಮನಃಶಾಸ್ತ್ರಜ್ಞರು, ಪರಸ್ಪರ ಆಕರ್ಷಣೆ ಮತ್ತು ಪ್ರೇಮದ ಕುರಿತು ಅಧ್ಯಯನ ನಡೆಸುತ್ತಿದ್ದಾರೆ ಮತ್ತು ಇನ್ನೂ ಅವರು ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ. ಪ್ರೇಮದ ಸಂಬಂಧಕ್ಕೆ ಹಲವು ಆಯಾಮಗಳಿವೆ ಎಂಬವುದು ತಿಳಿದಿರುವಂತಹ ವಿಚಾರವಾಗಿದೆ. ಲೈಂಗಿಕ ಆಕರ್ಷಣೆ ಅಥವಾ ಕೆಲವರು ಹೇಳುವಂತೆ ಕೆಮೆಸ್ಟ್ರಿಯು ಪ್ರೇಮ ಸಂಬಂಧದ ಕೇವಲ ಒಂದು ಅಂಶವಾಗಿದೆ ಮತ್ತು ಅತ್ಯಂತ ಅಗತ್ಯವಾದಂತಹದ್ದೇನಲ್ಲ.

ಅಮೇರಿಕಾದ ಜನರಿಂದ ಕಂಪೆನಿಗಳು ಹಣ ಗಳಿಸಲು ಪ್ರೇಮಿಗಳ ದಿನವು ಇನ್ನೊಂದು ಮಾರ್ಗವಾಗಿ ಮಾರ್ಪಟ್ಟಿದೆ. ಯಾಕೆಂದರೆ, ವಿಶೇಷವಾಗಿ ನಮ್ಮ ಆರ್ಥಿಕ ಸ್ಥಿತಿಯಿಂದಾಗಿಯಾಗಿದೆ. ಹಲವು ಕಂಪೆನಿಗಳು ಈ ಮುಂತಾದ ರಜೆಗಳನ್ನು ಆರ್ಥಿಕ ಲಾಭ ಗಳಿಸಲು ಬಳಸಿಕೊಳ್ಳುತ್ತದೆ. ಉದಾಹರಣೆಗೆ, ಹಿಸ್ಟರಿ.ಕಾಂ ನ ಮಾಹಿತಿಯಂತೆ ಕ್ರಿಸ್‍ಮಸ್‍ನ ನಂತರದಲ್ಲಿ ಅತ್ಯಂತ ಹೆಚ್ಚು ‘ಕಾರ್ಡುಗಳು ಕೊಳ್ಳಲ್ಪಡುವ’ ರಜಾದಿನ, ಪ್ರೇಮಿಗಳ ದಿನವಾಗಿದೆ. ಇದು ಅಮೇರಿಕಾದ ಆರ್ಥಿಕತೆಗೆ ಹೇಗೆ ಪ್ರೇಮಿಗಳ ದಿನವು ಬೃಹತ್ ಆಸ್ತಿಯಾಗಿದೆ ಎಂಬುವುದರ ಪುರಾವೆಯಾಗಿದೆ. ಈ ಸಾರ್ವಕಾಲಿಕ ಆವರ್ತನೆಯ ವಿನೋದದಲ್ಲಿ ಖರ್ಚು ಮಾಡಲು ಭಾಗವಹಿಸುವಂತೆ ಜನರನ್ನು ಪ್ರೇರೇಪಿಸಲಾಗುತ್ತದೆ.

2010 ರಲ್ಲಿ ಅಮೇರಿಕಾದ ಹೂವು ಬೆಳೆಗಾರರ ಸಮಾಜದ ಲೆಕ್ಕಾಚಾರದಂತೆ 198 ದಶಲಕ್ಷ ಗುಲಾಬಿ ಹೂವುಗಳನ್ನು ಪ್ರೇಮಿಗಳ ರಜಾದಿನಕ್ಕಾಗಿ ತರಲಾಗಿದೆ. ಅಂದರೆ, ಅಮೇರಿಕಾದ ಪ್ರಸ್ತುತ ಜನಸಂಖ್ಯೆಯ 60%ರಷ್ಟು ಸಂಖ್ಯೆಯಲ್ಲಿ ನಾವು ಗುಲಾಬಿ  ಖರೀದಿ(ಕೊಂಡುಕೊಂಡವರು ಒಂದಕ್ಕಿಂತ ಹೆಚ್ಚು ಖರೀದಿಸಿರಲೂಬಹುದು) ಮಾಡಿದ್ದೇವೆ. ರಜಾದಿನಗಳ ವ್ಯಾಪಾರಿ ಅಂಶಗಳು ಯಾವತ್ತೂ ಅಳಿದು ಹೋಗುವುದಿಲ್ಲ. ಯಾಕೆಂದರೆ ಇದು ಬಿಲಿಯನ್‍ಗಟ್ಟಲೆ ಡಾಲರನ್ನು ಅಮೇರಿಕಾದ ಆರ್ಥಿಕತೆಗೆ ತಂದೊದಗಿಸುತ್ತದೆ. ಸ್ಟಾಟಿಸ್ಟಿಕ್ ಬ್ರೈನ್.ಕಾಂ ನ ವರದಿಯಂತೆ 13.19 ಬಿಲಿಯನ್ ಡಾಲರನ್ನು 2013ರ ಪ್ರೇಮಿಗಳ ದಿನದಂದು ವ್ಯಯಿಸಲಾಗಿದೆ. ಈ ಅಗಾಧ ಪ್ರಮಾಣದ ಮೊತ್ತವು ಈ ರಜೆಯು ಎಷ್ಟೊಂದು ವ್ಯಾಪಾರೀಕರಣಗೊಂಡಿದೆ ಎಂಬುದನ್ನು ತೋರಿಸುತ್ತದೆ.

ಯು.ಎಸ್ ಗ್ರೀಟಿಂಗ್ ಕಾರ್ಡ್ ಅಸೋಸಿಯೇಶನ್‍ನ ಪ್ರಕಾರವಾಗಿ ಪ್ರತಿ ವರ್ಷ 1 ಬಿಲಿಯನ್ ಕಾರ್ಡುಗಳನ್ನು ಜಗತ್ತಿನಾದ್ಯಂತ ರವಾನಿಸಲಾಗುತ್ತದೆ. ವಿಶೇಷವಾಗಿ ಅಮೇರಿಕಾದಲ್ಲಿ ಪ್ರೇಮಿಗಳ ದಿನದ ವ್ಯಾಪಾರಿ ಸಾಧ್ಯತೆಯನ್ನು ಬೃಹತ್ ಪ್ರಮಾಣದಲ್ಲಿ ಶೋಷಿಸುವುದಕ್ಕೆ ಅಭಿನಂದನೆಗಳು. ಪ್ರಸಿದ್ಧ ಪತ್ರಿಕೆಯಾದ ನ್ಯೂಯಾರ್ಕ್ ಟೈಮ್ಸ್ ಕೂಡ ಪ್ರೇಮಿಗಳ ದಿನದಂದು ಏನೆಲ್ಲಾ ಮಾಡಬೇಕು, ಏನೇನು ಖರೀದಿಸಬೇಕು, ಯಾವುದನ್ನೆಲ್ಲಾ ತಿನ್ನಬೇಕು ಮತ್ತು ಹೇಗೆಲ್ಲಾ ವರ್ತಿಸಬೇಕು ಎಂಬುವುದರ ಕುರಿತು ಡಜನ್‍ಗಟ್ಟಲೆ ಬರಹಗಳನ್ನು ಮುದ್ರಿಸುತ್ತದೆ. ಅಲ್ಲದೆ, ಭಾರತೀಯರು ಪಶ್ಚಿಮವನ್ನು ಅತ್ಯುತ್ತಮವಾಗಿ ಅನುಕರಿಸುವವರು; ಆದ್ದರಿಂದ, ದೇಶವು ಲಾಭವನ್ನು ಗಳಿಸಲು ಅದೇ ವಿಧಾನ ಮತ್ತು ಸ್ಟ್ರಾಟಜಿಯನ್ನು ಬಳಸುತ್ತಾರೆ.

ನ್ಯೂಯಾರ್ಕ್ ಟೈಮ್ಸಿನ ಒಂದು ಲೇಖನದ ತಲೆಬರಹವು, “ಕ್ಯಾಂಡಲ್ ಲೈಟ್‍ನಲ್ಲಿ ಬಡಿಸಲು ವಯಾಗ್ರ ಪರ್ಯಾಯವಾಗಿದೆ”(ಂ ಗಿiಚಿgಡಿಚಿ ಚಿಟಣeಡಿಟಿಚಿಣive ಣo seಡಿve bಥಿ ಛಿಚಿಟಿಜಟe ಟighಣ) ಎಂದಿತ್ತು. ಇದು ಕಾಮೋತ್ತೇಜಕ ಗುಣದ ಆಹಾರ(ಸೇವಿಸಿದಾಗ ಲೈಂಗಿಕ ಆಸಕ್ತಿಯನ್ನು ವೃದ್ಧಿಸುವ ಪದಾರ್ಥ)ದ ಕುರಿತಾಗಿತ್ತು. ಅದು “ಪ್ರೇಮಿಗಳ ದಿನದ ರಾತ್ರಿ ಊಟವನ್ನು ತೃಪ್ತಿದಾಯಕವಾದ ಕೊನೆಯನ್ನು ಕಾಣಿಸಲಿಕ್ಕಾಗಿದೆ.” ಆ ಬರಹವು ತನ್ನ ಕಂಡುಕೊಳ್ಳುವಿಕೆಯನ್ನು ಬಲಪಡಿಸಲು ವೈಜ್ಞಾನಿಕ ಸಂಶೋಧನೆಯೊಂದನ್ನು ಉಲ್ಲೇಖಿಸಿತ್ತು ಮತ್ತು ಅದು ಕೂಡ ಸಂಪೂರ್ಣವಾಗಿ ಸಮ್ಮತಿಸುತ್ತಿರಲಿಲ್ಲ. ಉದಾಹರಣೆಗೆ, ಯಾರಾದರೊಬ್ಬರು 25 ಪೌಂಡ್ ಚಾಕೊಲೇಟನ್ನು ಒಂದೇ ಸೇವನೆಯಲ್ಲಿ ತಿಂದರೆ, ಅದರ ಕಾಮೋತ್ತೇಜಕ ಗುಣವು ಪರಿಣಾಮ ಬೀರಬಹುದು ಮತ್ತು ಡೊನಟ್ಸ್(ಹಿಟ್ಟಿನ ಒಂದು ತೆರನಾದ ಚಕ್ರಾಕಾರದ ಕೇಕ್)ನ ಪರಿಮಳವು ಪುರುಷನ ಲೈಂಗಿಕ ಪ್ರತಿಕ್ರಿಯೆಯನ್ನು ವೃದ್ಧಿಸಬಲ್ಲದು. ಅಲ್ಲದೆ, ಇದರ ಜೊತೆಗೆ ಮದ್ಯದ ವಾಸನೆಯು ಬೆರೆಯಬೇಕು. ಈ ರೀತಿಯಾಗಿ ಒಟ್ಟಿನಲ್ಲಿ ಇಡೀ ದಿನವನ್ನು ಲೈಂಗಿಕತೆಯೊಂದಿಗೆ ಜೋಡಿಸಲು ಶ್ರಮಿಸಲಾಗುತ್ತದೆ.

ಪ್ರೇಮಿಗಳ ದಿನದ ವ್ಯಾಪಾರೀಕರಣದ ಸಂದರ್ಭದಲ್ಲಿ ಅದು ಪ್ರೇಮದ ಬಗೆಗಿನ ತಪ್ಪು ಸಂದೇಶವನ್ನು ನೀಡುವುದು ಅತಿ ದೊಡ್ಡ ಸಮಸ್ಯೆಯಾಗಿದೆ. ಅದು ಶ್ರೀಮಂತಿಕೆ ಮತ್ತು ದೈಹಿಕ ಆಕರ್ಷಣೆಯನ್ನು ಅವಲಂಬಿತವಾದ ಪ್ರೀತಿ ಸಂಬಂಧದೊಂದಿಗೆ ಸಂವಹನ ನಡೆಸುತ್ತದೆ. ಆದರೆ, ಇತ್ತೀಚೆಗೆ ನಡೆದ ಮಧ್ಯಮ ವಯಸ್ಸಿನ ಕಾಲೇಜು ಪದವೀಧರರ ಮೇಲಿನ ಅಧ್ಯಯನವು ಹೇಳುತ್ತದೆ, ಅತ್ಯಾಕರ್ಷಕ ದೇಹ ಸೌಂದರ್ಯವನ್ನು ಹೊಂದಿದ ಸರಾಸರಿ ಜನರು ತಮ್ಮ  ಮದುವೆ ಅಥವಾ ಜೀವನದ ಬಗ್ಗೆ, ಸರಳ ಜನರಷ್ಟು ತೃಪ್ತರಲ್ಲ.

ಜನರು ಆಲೋಚಿಸುವ ಶೈಲಿಯನ್ನು ಬದಲಾಯಿಸಲು ಟಿ.ವಿ ಜಾಹೀರಾತುಗಳು ಗಮನಾರ್ಹ ಸಾಧನವಾಗಿದೆ. ಇವತ್ತಿನ ಜಾಹೀರಾತುಗಳು ವಸ್ತುಗಳಿಗಿಂತ ಹೆಚ್ಚಾಗಿ ಆಲೋಚನೆಗಳನ್ನು ಮಾರಾಟ ಮಾಡುತ್ತದೆ. ಭಾರತದಲ್ಲಿ ಹಲವು ಕಂಪೆನಿಗಳು ಪ್ರೇಮಿಗಳ ದಿನದ ಸಂದರ್ಭವನ್ನು ಉಪಯೋಗಿಸಿ ಗ್ರಾಹಕರನ್ನು ಶೋಷಿಸುತ್ತದೆ. ಉದಾಹರಣೆಗೆ, ಈಬೇ(ebay) ಕಂಪೆನಿಯ ಜಾಹೀರಾತೊಂದರಲ್ಲಿ, ಉದ್ಯೋಗಿಯೋರ್ವ ಕಂಪೆನಿಗಿ ತೆರಳಿದಾಗ ಆವತ್ತು ಫೆಬ್ರವರಿ 14ಕ್ಕೆಂದು ನೆನಪಾಗುತ್ತದೆ ಮತ್ತು ಆನ್‍ಲೈನ್ ಮೂಲಕ ಈಬೇಯಿಂದ ವಸ್ತುಗಳನ್ನು ಖರೀದಿಸಲು ಆರಂಭಿಸುತ್ತಾನೆ. ಕಡೆಗೆ ಈಬೇಯಲ್ಲಿ ಜಗತ್ತು ಅಸೂಯೆ ಪಡೆಯುವಂತೆ ಖರೀದಿಸಲು ವೀಕ್ಷಕರಲ್ಲಿ ಹೇಳಿ ಜಾಹೀರಾತು ಕೊನೆಯಾಗುತ್ತದೆ. ಕಂಪೆನಿಯು ಈ ಅವಕಾಶವನ್ನು ಕೊಳ್ಳುಬಾಕತನಕ್ಕಾಗಿ ಪ್ರೇರೇಪಿಸಲು ಉಪಯೋಗಿಸಿತು. ಲೆನೋವೊ(lenovo) ಕಂಪೆನಿಯ ಒಂದು ಜಾಹೀರಾತಿನಲ್ಲಿ ರಣ್ಬೀರ್ ಕಪೂರ್ ಮೂವರು ಹುಡುಗಿಯರಿಗೆ ಲೆನೋವೊ ಟಾಬ್ಲೆಟನ್ನು ಕೊಡುಗೆ ನೀಡಿ ಆನ್‍ಲೈನ್ ಚಾಟಿಂಗ್ ಮೂಲಕ ಚಕ್ಕಂದವಾಡುತ್ತಾನೆ. ಕಡೆಯದಾಗಿ, ಆತನ ಮನೆಗೆ ಭೇಟಿ ನೀಡುವ ಇನ್ನೊಂದು ಹುಡುಗಿಯ ಕೈಯಲ್ಲಿ ಸಿಕ್ಕಿ ಬೀಳುತ್ತಾನೆ. ಕಂಪೆನಿಯು ಈ ಅವಕಾಶವನ್ನು ಕೇವಲ ಅವರ ವಸ್ತುವಿನ ಪ್ರಚಾರಕ್ಕೆ ಮಾತ್ರವಲ್ಲ. ಬದಲಾಗಿ, ಚಕ್ಕಂದವನ್ನು ಮತ್ತು ಒಂದೇ ಸಮಯದಲ್ಲಿ ಅನೇಕ ಹುಡುಗಿಯರೊಂದಿಗೆ ಸಂಬಂಧವಿರಿಸುವುದನ್ನು ಪ್ರಚಾರ ಮಾಡುತ್ತದೆ. ವೊಡಾಫೋನ್ ಕಂಪೆನಿಯ ಒಂದು ಜಾಹೀರಾತಿನಲ್ಲಿ ತಾನು ಏನನ್ನು ಪ್ರೀತಿಸುವುದು ಎಂದು ಅದು ತಿಳಿಸುತ್ತದೆ. ಹುಡುಗಿಯೊಬ್ಬಳಿಗೆ ಪತ್ರಗಳ ರಾಶಿಯನ್ನು ರವಾನಿಸುವುದು, ಆಕೆಯನ್ನು ಎಲ್ಲಾ ಕಡೆಯಲ್ಲಿ ಹಿಂಬಾಲಿಸುವುದು, ಪರಸ್ಪರಿಗೆ ಸರಿಯಾಗಿ ಕಾಣುವುದು ಮತ್ತು ಕಡೆಯಲ್ಲಿ ಉಡುಗೊರೆಯನ್ನು ಕೊಡುವುದು.

ಪ್ರೀತಿ ಮತ್ತು ಲೈಂಗಿಕತೆಯನ್ನು ಪ್ರಚಾರ ಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಬಾಲಿವುಡ್ ಚಿತ್ರೋದ್ಯಮವನ್ನು ಈ ಹಿನ್ನೆಲೆಯಲ್ಲಿ ಹಿಂದೆ ಉಳಿಸಲು ಸಾಧ್ಯವಿಲ್ಲ. ಅದು ಈ ಅವಕಾಶವನ್ನು ಫೆಬ್ರವರಿ 14ರ ಮೊದಲು ಅಥವಾ ನಂತರದಲ್ಲಿ ಪ್ರೇಮ ಮತ್ತು ಲೈಂಗಿಕತೆಯನ್ನು ತೋರಿಸುವ ಚಿತ್ರವನ್ನು ಬಿಡುಗಡೆಮಾಡಲು ಉಪಯೋಗಿಸುತ್ತದೆ. 2012ರ ಫೆಬ್ರವರಿ 9ರಂದು ‘ಏಕ್ ಮೈ ಔರ್ ಏಕ್ ತು’ ಮತ್ತು 2012ರ ಫೆಬ್ರವರಿ 10ರಂದು ‘ವ್ಯಾಲಂಟೈನ್ ನೈಟ್’ ಚಿತ್ರಗಳು ಬಿಡುಗಡೆಗೊಂಡವು. 2013ರ ಫೆಬ್ರವರಿ 15ರಂದು ‘ಮರ್ಡರ್3’ ಮತ್ತು ‘ಜಯಂತ ಬಾಬಿ ಕಿ ಲವ್ ಸ್ಟೋರಿ” ಬಿಡುಗಡೆಗೊಂಡವು. 2014ರ ಫೆಬ್ರವರಿ 14ರಂದು ‘ಗುಂಡೇ’ ಮತ್ತು ಫೆಬ್ರವರಿ 28ರಂದು ‘ಶಾದಿ ಕೆ ಸೈಡ್ ಎಫೆಕ್ಟ್ಸ್’ ಬಿಡುಗಡೆಗೊಂಡವು. 2015ರ ಫೆಬ್ರವರಿಯಲ್ಲಿ ‘ರಾಯ್’ ಮತ್ತು ‘ಬದ್ಲಾಪುರ್’ ಹೀಗೆ ಹಲವು ಚಿತ್ರಗಳು ಬಿಡುಗಡೆಗೊಂಡವು. ಈ ಎಲ್ಲಾ ಸಿನೆಮಾಗಳು ಪ್ರೀತಿಗೆ ಸಂಬಂಧಿಸಿದ ವಿಚಾರವನ್ನೇ ವ್ಯಕ್ತಪಡಿಸುತ್ತದೆ.

ಪ್ರೇಮಿಗಳ ದಿನದ ಮೂಲವನ್ನು ಅರಿಯದೆ, ಅದರ ವ್ಯಾಪಾರೀಕರಣದ ಸ್ಟ್ರಾಟಜಿಯನ್ನು ತಿಳಿಯದೆ, ಪರಿಣಾಮವನ್ನು ಅರಿಯದೆ ಜನರು ಆಚರಿಸುತ್ತಿರುವುದು ದುರಂತವಾಗಿದೆ ಮತ್ತು ಏನನ್ನು ನೋಡುತ್ತಿದ್ದಾರೋ ಅದರೊಂದಿಗೆ ಸಾಗುತ್ತಿದ್ದಾರೆ. ನಿಶ್ಚಯವಾಗಿಯೂ ಮನುಷ್ಯನು ದುರಾಸೆ ಸ್ವಭಾವದವನಾಗಿದ್ದಾನೆ; ಯಾವ ರೀತಿಯಿಂದ ಅವನು ಸಂಪತ್ತು ಶೇಖರಿಸುತ್ತಿದ್ದಾನೆ ಎನ್ನುವುದರ ಬಗ್ಗೆ ಯಾವುದೇ ಚಿಂತೆ ಅವನಿಗಿಲ್ಲ ಮತ್ತು ಲಾಭ ಗಳಿಸುವ ಯಾವುದೇ ಅವಕಾಶವನ್ನು ಅವನು ಬಿಟ್ಟು ಕೊಡುವುದಿಲ್ಲ. ಫೆಬ್ರವರಿ ತಿಂಗಳಿನ ಒಂದು ಜಾಹೀರಾತಿನಲ್ಲಿ ‘ವಜ್ರಗಳು ಶಾಶ್ವತ’ ಎಂದು ಓದಿದ್ದೇನೆ. ವಾಸ್ತವದಲ್ಲಿ ಅದು ಶಾಶ್ವತವಲ್ಲ. ಬದಲಾಗಿ ಅವುಗಳನ್ನು ಕೆತ್ತಬಹುದು, ನುಚ್ಚುನೂರು ಮಾಡಬಹುದು ಮತ್ತು ಹೊತ್ತಿಸಿ ಬೂದಿಯನ್ನಾಗಿಯೂ ಮಾಡಬಹುದು. ಆದರೆ, ಪ್ರೀತಿಯು ಶಾಶ್ವತ ಮತ್ತು ಅದನ್ನು ಶಾಶ್ವತಗೊಳಿಸಲು ಒಂದು ಮಾರ್ಗವೇನೆಂದರೆ ಪ್ರತಿದಿನ ಪ್ರೀತಿ ತೋರುವುದು. ಅಲ್ಲದೆ, ಕೇವಲ ‘ವ್ಯಾಲಂಟೈನ್ ಡೇ’ ಗೆ ಸೀಮಿತಗೊಳಿಸುವುದಲ್ಲ. ಪ್ರೀತಿ ಎಂಬುವುದು ಒಂದು ದಿನದ ವ್ಯವಹಾರವಲ್ಲ. ಬದಲಾಗಿ ಅದು 364 ದಿನಗಳು ತನ್ನ ಸಂಗಾತಿಯೊಂದಿಗೆ ತೋರಿಸಬೇಕಾದ ಪ್ರೀತಿ ಮತ್ತು ಪರಿಗಣನೆಯಾಗಿದೆ.

 

ಕೃಪೆ: ದಿ ಕಂಪಾನಿಯನ್

LEAVE A REPLY

Please enter your comment!
Please enter your name here