ಕ್ಯಾಂಪಸ್ ವರದಿ: ಯಾಸೀನ್ ಕೋಡಿಬೆಂಗ್ರೆ.

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯಕ್ಕೆ ಉಪ ಕುಲಪತಿಯವರನ್ನು ನೇಮಿಸಲು ಕಾರ್ಯಕಾರಿಣಿ ಸಮಿತಿಯೊಂದನ್ನು ರಚಿಸಲಾಗಿತ್ತು. ಆ ಸಮಿತಿಯಲ್ಲಿ 19 ಮಂದಿ ಸದಸ್ಯರಿದ್ದರು. ಈ ಸದಸ್ಯರಲ್ಲಿ 3 ಮಂದಿ ಸರ್ವೊಚ್ಚ ನ್ಯಾಯಾಲಯದ ನ್ಯಾಯಧೀಶರಿದ್ದು,ಏಳು ಮಂದಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರು, ಒರ್ವರು ಸರ್ವೊಚ್ಚ ನ್ಯಾಯಾಲಯದ ನಿಕಟಪೂರ್ವ ನ್ಯಾಯಾಧೀಶರು ಸೇರಿದಂತೆ ರಾಜ್ಯ ಸರಕಾರದ ಇಬ್ಬರು ಪ್ರತಿನಿಧಿಗಳು, ರಾಜ್ಯ ಬಾರ್ ಕೌನ್ಸಿಲ್ ನ ಚೆಯರ್ ಮ್ಯಾನ್ ಸೇರಿದಂತೆ ಐದು ಮಂದಿ ವಿಶ್ವವಿದ್ಯಾಲಯದ ಪ್ರತಿನಿಧಿಗಳಿದ್ದರು.
ಈ ಸಮಿತಿಗೆ NLSIU ಕಾಯಿದೆ ಪ್ರಕಾರ ಉಪ ಕುಲಪತಿಯವರನ್ನು ನೇಮಿಸುವ ಮತ್ತು ಸಿಬ್ಬಂದಿಗಳನ್ನು ನೇಮಿಸುವ ಸಂಪೂರ್ಣ ಅಧಿಕಾರವಿರುತ್ತದೆ.

ಈ ಅಧಿಕಾರದಂತೆ ಈ ಸಮಿತಿಯು ಸರ್ವೊಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಶರದ್ ಅರವಿಂದ್ ಬೋಬ್ಡೆಯವರ ನೇತೃತ್ವದಲ್ಲಿ ಆಂತರಿಕ ಸಮಿತಿ ರಚಿಸಿ ಕಮಿಟಿಯಲ್ಲಿ ಸರ್ವೊಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ್ ಎಮ್ ಶಾಂತಗೌಡ, ಜಸ್ಟೀಸ್ ಗೋಪಾಲ್ ಗೌಡ ಮತ್ತು NLSI ನ ವಿ.ಎಸ್ ಎಲಿಜಬೇತ್ ಸೇರಿಸಿ ಉಪ ಕುಲಪತಿಯ ನೇಮಕಾತಿಯ ಶಿಫಾರಸ್ಸಿಗೆ ಅಧಿಕಾರ ನೀಡಲಾಗಿತ್ತು.
ಅದರಂತೆ ಪ್ರೊ. ಸುಧೀರ್ ಕೃಷ್ಣ ಸ್ವಾಮಿಯವರನ್ನು ಉಪ ಕುಲಪತಿಯನ್ನಾಗಿ ನೇಮಿಸುವುದೆಂದು ಚರ್ಚಿಸಿ, ಅಂತಿಮಗೊಳಿಸಲಾಗಿತ್ತು.

ಆದರೆ ಇದೀಗ ತುರ್ತಾಗಿ ‘ನೇಮಕ ಕಾರ್ಯಕಾರಿಣಿ ಸಭೆಯನ್ನು’ ಸೆ.28 ರಂದು ಕರೆಯಲಾಗಿದ್ದು ಇದರಲ್ಲಿ ಮೂವರು ಸರ್ವೊಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಕೈಬಿಟ್ಟಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೆ.20 ರಂದು ಪ್ರತಿಭಟನೆ ನಡೆಸಿ ಶೀಘ್ರವಾಗಿ ಪ್ರೊ.ಸುಧೀರ್ ಕೃಷ್ಣ ಸ್ವಾಮಿಯವರನ್ನು ನೇಮಕ ಸಮಿತಿಯ ಆದೇಶದಂತೆ ನೇಮಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಇದುವರೆಗೆ ಸರಿಯಾದ ಪ್ರತಿಕ್ರಿಯೆ ಯಾವುದೇ ವಿಶ್ವವಿದ್ಯಾಲಯದ ಅಧಿಕೃತ ಅಧಿಕಾರಿಗಳಿಂದ ಬಂದಿಲ್ಲ.

ಹಾಗಾದರೆ ನೇಮಕ ಸಮಿತಿ ಪ್ರೊ. ಸುಧೀರ್ ಕೃಷ್ಣ ಸ್ವಾಮಿಯನ್ನು ಎಲ್ಲರ ಸಲಹೆಯ ಮೇರೆಗೆ ನೇಮಿಸಿದ್ದರೂ ನೇಮಕ ಪ್ರಕ್ರಿಯೆ ನಡೆಸದೆ ನೇರವಾಗಿ ಸೆಪ್ಟೆಂಬರ್ 28 ರಂದು ಮೂವರು ವಿಶೇಷ ಆಹ್ವಾನಿತ ನ್ಯಾಯಾಧೀಶರನ್ನು ಹೊರಗಿಟ್ಟು ಸಭೆಯನ್ನು ನಡೆಸಲು ಹೊರಟಿದ್ದರಲ್ಲದೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪ್ರತಿನಿಧಿಯನ್ನು 7 ರಿಂದ 8 ಕ್ಕೆ ಎರಿಸಿರುವ ಬಗ್ಗೆ ಕ್ಯಾಂಪಸ್ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಇದರಿಂದ ಈ ಮುಂಚೆ ನೇಮಕ ಸಮಿತಿ ಕೈಗೊಂಡ ಪ್ರೊ.ಸುಧೀರ್ ಕೃಷ್ಣ ಸ್ವಾಮಿಯವರ ನೇಮಕವನ್ನು ಬದಲಾಯಿಸುವ ಹುನ್ನಾರ ನಡೆಯುತ್ತಿದೆಯೇ? ಇದರ ಹಿಂದೆ ರಾಜಕೀಯ ಕೈವಾಡವಿದೆಯೇ ಎಂಬ ಅನುಮಾನ ದಟ್ಟವಾಗುತ್ತಿದೆ.

ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಕೆಲವೊಂದು ಪ್ರಶ್ನೆಗಳನ್ನು ನೇಮಕ ಸಮಿತಿಯ ಮುಂದೆ ಇಟ್ಟಿದ್ದು ಇಡೀ ವಿದ್ಯಾರ್ಥಿ ಸಮೂಹಕ್ಕೆ ಈ ಕೆಳಗಿನ ಪ್ರಶ್ನೆಗಳಿಗೆ ನೇಮಕ ಸಮಿತಿ(EC) ಉತ್ತರಿಸಬೇಕಾಗಿದೆ.

1. ಪ್ರೊ. ನಂದಿಮಥ್ ಕೂಡ ಉಪ ಕುಲಪತಿಯಾಗಿ ನೇಮಕವಾಗಲು ಉತ್ಸುಕರಾಗಿರುವುದರಿಂದ ಈ ಬೆಳವಣಿಗೆ ನಡೆಯುತ್ತಿದೆಯೇ?

2. ಪ್ರೊ. ಸುಧೀರ್ ಕೃಷ್ಣ ಮೂರ್ತಿಯವರನ್ನು ಅಂತರಿಕ ಸಮಿತಿ ಉಪಕುಲಪತಿಗಳಾಗಿ ಆಯ್ಕೆ ಮಾಡಿದ್ದರೂ ನೇಮಿಸಲು ಹಿಂದಿರುವ ಕಾರಣಗಳೇನು?

3. ಪ್ರೊ.ನಂದಿಮಥ್ ಅವರ ಹೆಸರು ನೇಮಕ ಸಮಿತಿಯ ಕಾರ್ಯದರ್ಶಿ ಸ್ಥಾನಕ್ಕೆ ಬಂದಾಗ ಅದನ್ನು ಅಂಗೀಕರಿಸಿಲ್ಲವೇಕೆ?

4. ನೇಮಕ ಸಮಿತಿಯನ್ನು ಬದಲಾಯಿಸಲಾಗಿದೆಯೇ?

5. ಕಳೆದ 49 ದಿನಗಳಿಂದ ನೇಮಕ ಸಮಿತಿ ಅಂಗೀಕಾರ ಮಾಡಿದ್ದರೂ ಪ್ರೊ.ಸುಧೀರ್ ಕೃಷ್ಣ ಸ್ವಾಮಿಯವರ ನೇಮಕಾತಿ ತಡವಾಗಲು ಕಾರಣವೇನು? ನೇಮಕದಲ್ಲದ ತಾಂತ್ರಿಕ ದೋಷಗಳನ್ನೇಕೆ ಸ್ಪಷ್ಟಪಡಿಸುತ್ತಿಲ್ಲ?

ಈ ಮೇಲಿನ ಪ್ರಶ್ನೆಗಳು ಪ್ರೊ.ಸುಧೀರ್ ಕೃಷ್ಣ ಸ್ವಾಮಿಯವರ ನೇಮಕಾತಿ ವಿಳಂಬದ ಹಿಂದೆ ಸುತ್ತುತ್ತಿದ್ದು ಪ್ರಬಲ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆಯೇ ಎಂಬ ಅನುಮಾನ ಕಾಡುತ್ತಿದ್ದು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಆದಷ್ಟು ಬೇಗ ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯಲ್ಲಿ ನೇಮಕ ಸಮಿತಿಯ ಶಿಫಾರಸಿನಂತೆ ಪ್ರೊ. ಸುಧೀರ್ ಕೃಷ್ಣ ಸ್ವಾಮಿಯವರನ್ನು ನೇಮಿಸಬೇಕಾಗಿದೆ.

LEAVE A REPLY

Please enter your comment!
Please enter your name here