ಪುಸ್ತಕ ವಿಮರ್ಶೆ

  • ಜೈಬ ಅಂಬೇಡ್ಕರ್ , ನಾಗಸಮುದ್ರ

ಪ್ರೊ.ಅರಿವಿಂದ ಮಾಲಗತ್ತಿಯವರು ಸಾಮಾಜಿಕ ಕಾಳಜಿ ಇರುವ ಸಮಾನತೆಯ ಕನಸು ಹೊತ್ತು ಅದರತ್ತೆ ತಮ್ಮ ಬರವಣಿಗೆ, ಸಾಮಾಜಿಕ ಅಸ್ಮಿತೆಗಾಗಿ ಬರಹಗಳ ಮೂಲಕ ಸಾಹಿತ್ಯಲೋಕದದಲ್ಲಿ ಅವರದೇ ಅದ ಹೆಸರು ಪಡೆದುಕೊಂಡು ಲೇಖಕ.
ತನ್ನದೇ ಅದ ಅಸ್ತಿತ್ವವನ್ನು ಜನರ ಪ್ರೀತಿಯನ್ನುಗಳಿಸಿ ನಮ್ಮಂತ ಯುವ ಜನರಿಗೆ ಸಾಮಾಜಿಕ ಪ್ರಜ್ಞೆ ಮೂಡಿಸುವ ಬರವಣಿಗೆಗೆ ಸಲಹೆ ನೀಡಿ ಪ್ರೋತ್ಸಾಹ ನೀಡುವವರು. ಅವರ ಬಾಲ್ಯ ಜೀವನ ಅವರು ಕಂಡ ಜಾತಿ ಪದ್ಧತಿ, ಶೋಷಣೆ, ಬಡತನದ, ಕಷ್ಟ, ಶಿಕ್ಷಣ ಪಡೆಯಲು ಅವರ ಒದ್ದಾಟ ಬಾಲ್ಯದಿಂದಲೇ ಹೋರಾಟ ಹಸಿವಿನ ಕೊಗು ಇತ್ಯಾದಿ ವಿಷಯಗಳು ಅವರ ಆತ್ಮ ಕಥನವಾದ “ಗೌರ್ಮೆಂಟ್ ಬ್ರಾಹ್ಮಣ” ದಲ್ಲಿ ವಿವರಿಸಿದ್ದಾರೆ. ಹಾಗೂ ದಲಿತ, ಶೋಷಿತ ಸಮುದಾಯದ ಪ್ರತಿಯೊಂದು ನೋವು ನಲಿವು ಸಮಗ್ರ ಚಿತ್ರಣ ಈ ಆತ್ಮ ಕಥನದಲ್ಲಿ ನಾವು ಕಾಣಬಹುದು.

ದಲಿತರ ಕಷ್ಟ, ಬ್ರಾಹ್ಮಣ ಕುಲ ಅವರನ್ನ ನೋಡುವ ಅಮಾನವೀಯ ದೃಷ್ಟಿ ಎಲ್ಲ ಕಡೆಯೂ ಕಾಣಬಹುದು. ಹಾಗೆ, ಮಾಲಗತ್ತಿ ಹಳ್ಳಿಯಲ್ಲೋ ಸಹ ದಲಿತರ ಜೀವನ ಶೈಲಿ ಸಹ ಶೋಷಣೆಗೆ ಬಲಿಯಾಗಿದೆ. ಜಾತಿ ವ್ಯವಸ್ಥೆಯಿಂದ ದಲಿತ ಸಮುದಾಯಕ್ಕೆ ನೀಡುವ ಕಷ್ಟ ಅಷ್ಟಿಷ್ಟಲ್ಲ. ಅವರು ಪ್ರತಿಯೊಂದಕ್ಕೋ ಹೋರಾಟ ಮಾಡಬೇಕಾದ ಪರಿಸ್ಥಿತಿ ಇತ್ತು ಹಸಿವುಗಾಗಿ, ಸಾಮಾಜಿಕ ಸ್ಥಾನಮಾನಕ್ಕಾಗಿ, ಶಿಕ್ಷಣ ಪಡೆಯಲು ಇತ್ಯಾದಿ.

ಬ್ರಾಹ್ಮಣ ಅಗ್ರಹಾರದಲ್ಲಿ ಉನ್ನತ ಜಾತಿ ಇರುವ ಕೇರಿಗಳ್ಳಲ್ಲಿ ಹಬ್ಬ, ಸಡಗರ, ಏನಾದರು ವಿಶೇಷ ಭೋಜನ ಏರ್ಪಡಿಸಿದಾದ ಊರಲ್ಲಿ ಎಲ್ಲರ ಊಟದ ಕೊನೆಯ ಪಂಕ್ತಿಯಲ್ಲಿ ದಲಿತ ಸಮುದಾಯ ಕಾದು ಊಟ ಮಾಡುವರು. ಅವರ ಹಸಿವು ಅದೆಷ್ಟು ಶತಮಾನದ ಹಸಿವಿನಂತಾಗಿರುತ್ತೆ ಪಂಕ್ತಿಯಲ್ಲಿ ಕುಳಿತು 3 ದಿನಕ್ಕೋ ಆಗುವಷ್ಟು ಊಟ ಮಾಡುವಾಗ 3ದಿನದ ಹಸಿವುಗಾಗಿ ಪಡುವ ಕಷ್ಟ ಹೋಗಲಾಡಿಸಬಹುದು ಎಂಬ ಅವರ ವಿಷಾದ ನಿಜಕ್ಕೂ ಕಣ್ಣೀರು ಬರಿಸುತ್ತದೆ. ಅವರ ಬಡತನ ಮೇಲ್ವರ್ಗದ ಜಾತಿಯಿಂದ ಆಗುವ ಅವಮಾನ, ತುಳಿತದಿಂದಾಗಿ ಸಮುದಾಯದ ಎದುರಿಸಿದ ನೋವನ್ನು ವಿವರಿಸಲು ಪದಗಳೇ ಇಲ್ಲ. ಇಂದಿಗೂ ಸಮಾನತೆ ಕಾಣಬೇಕು ಎಂದು ಸಂವಿಧಾನ ಕಾನೂನು ಇದ್ದರು ಸಹ ನ್ಯಾಯಕ್ಕಾಗಿ ಇಂದಿಗೂ ಹೋರಾಟ ಮಾಡುತ್ತ ಬಂದಿದ್ದೇವೆ.

ಇನ್ನೂ ದಲಿತ ಮಕ್ಕಳ ಶಾಲೆ ವ್ಯವಸ್ಥೆ ಹೇಳಕ್ಕೆ ಆಗದು ಶಾಲೆಯಲ್ಲಿ ಹುಡುಗ /ಹುಡುಗಿ ದಲಿತ ಜಾತಿ ಎಂದು ನಿಂದಿಸಿ ಗೇಲಿ ಮಾಡುವುದು ಹೊಡೆಯುವುದು ಅವರೊಂದಿಗೆ ದೂರ ಸರಿಯುವುದು ಅಸ್ಪೃಶ್ಯತೆಯ ಬೇಧ ಭಾವ ಮಕ್ಕಳಿದ್ದಾಗ ನಿಂದಲೇ ಅವರಿಗೆ ಅನುಭವವಾಗುತ್ತೆ. ಶಿಕ್ಷಕರು ಸಹ ದಲಿತ ಎನ್ನುವ ಕಾರಣಕ್ಕೆ ಕೂಡುವ ಶಿಕ್ಷೆ ಅವಮಾನ. ನಿಜಕ್ಕೂ, ಇಂತಹ ಅನಿಷ್ಟ ಪದ್ಧತಿಯನ್ನು ತಿದ್ದುವ ಶಕ್ತಿ ಸಮರ್ಥ ಇರುವ ಶಿಕ್ಷಕರು ಸಹ ಜಾತಿ ತಾರಾತಮ್ಯ ಮಾಡುವುದು ಶಿಕ್ಷಣ ರಂಗಕ್ಕೆ ಅದೆಷ್ಟು ಶೋಭೆ ತರುತ್ತದೆ ಎಂದು ಅರಿವಾಗಬೇಕಿದೆ.

ಹಾಗೆಯೇ, ಹಿಂದಿನ ಕಾಲದಲ್ಲಿ ಹಸು ಕೋಣ ಇದ್ದವ್ರು ಬಹಳ ಶ್ರೀಮಂತ ಮನೆಗಳು ಎಂದು ಭಾಸವಾಗುತ್ತೆ. ಎಮ್ಮೆ ಕೋಣದ ಪ್ರೀತಿ ವಿರಹದ ಕುರಿತು ಹಾಸ್ಯವಾಗಿ ಬರೆದಿರುತ್ತಾರೆ ಲೇಖಕರು. ವಿರಹ ವೇದನೆಯ ಬೆದೆಗೆ ಬಂದ ಎಮ್ಮೆಗೆ ಕೋಣ ಏರಿಸಲು ದೇಸಾಯಿ ಮತ್ತು ಮಾಲಗಿತ್ತಿ ಯಲ್ಲವ್ವನ ನಡುವಿನ ಸಂಭಾಷಣೆ ನವಿರಾದ ಹಾಸ್ಯ ಬಲು ನಗು ತರಿಸುತ್ತದೆ. ಮತ್ತು ಎಮ್ಮೆ – ಕೋಣಗಳ ನಡುವೆ ಪ್ರೀತಿ ಹಚ್ಚಿ ಪ್ರೀತಿಯ ಗಾಳಿ ಬೀಸುತಿದೆ ಹಟ್ಟಿ ಮೊಹಲ್ಲಾಗಳ ನಡುವೆ ಅಂತ ಎಲ್ಲವ್ವ ಹಾಡಕತ್ತಿದ್ಲು. ಅಂದ್ರೆ ಇಲ್ಲಿ ಯೋಚನಾರಹಿತ ಪ್ರಾಣಿಗಳ ಮೂಲಕ ಯೋಚನೆ ಮಾಡುವ ಮನುಷ್ಯ ಪ್ರಾಣಿಯ ನಡುವೆ ಜಾತಿ, ಮತ, ಧರ್ಮವನ್ನು ಹೊಡೆದೋಡಿಸಿ ಪ್ರೀತಿ ಸ್ನೇಹ ಬೆಸೆಯುವ ಪ್ರಯತ್ನ ಲೇಖಕರು ಮಾಡಿದ್ದಾರೆ.
ಮಾಲಗತ್ತಿಯರವರು ವಾಸವಿರುವ ಅಲ್ಲಿನ ಊರ ಹೆಂಗಸರು, ಸೂಳೆ ಕೇರಿ ಹೆಂಗಸರನ್ನು ಈ ಮೇಲ್ವರ್ಗದ, ದಣಿಗಳು, ಧನಿಕರು ಅಲ್ಲಿನ ದಲಿತ ಹೆಣ್ಣುಮಕ್ಕಳನ್ನು ಅನುಭವಿಸಿ ಅವರೊಂದಿಗೆ ನಡೆಸುಕೊಳ್ಳುವ ಕೃತ್ಯ ಅವರ ಅಸಹಾಯಕದ ದುರುಪಯೋಗ ಪಡೆಯೋತ್ತಾರೆ ದಲಿತ ಹೆಣ್ಣು ಮಗಳ ಅಸಹಾಯಕ ಸ್ಥಿತಿ ನಮಗೆ ಚಿಂತೆಮಾಡಿಸುತ್ತೇ ಇಂದಿಗೂ ನಾವು ಅಂಥ ಕೃತ್ಯಗಳನ್ನು ಅಸಹಾಯಕ ಸ್ಥಿತಿಯಿಂದ ಕಾಣುತ್ತಿರುವುದು ನೋವಿನ ಸಂಗತಿ ನಿಜಕ್ಕೂ ಮನುಷ್ಯ ಬದಲಾಗಬೇಕಿದೆ ಸಮ ಸಮಾಜದ ತಾರತಮ್ಯವಿಲ್ಲದೆ ಬದುಕಬೇಕು ಎಂಬ ಆಶಯ ಲೇಖಕರು ತಿಳಿಸುತ್ತಾರೆ

ಹೀಗೆ ಮಕ್ಕಳು, ಹೆಂಗಸರು, ಹಿರಿಯನಾಗರೀಕರು ದಲಿತ ಸಮುದಾಯ ಎಂದು ಮೇಲ್ವರ್ಗದ ಬ್ರಾಹ್ಮಣ ಮನುಕುಲದ ವೆಕ್ತಿಗಳು ಶೋಷಣೆ ಮಾಡುವ ಅವಮಾನ ಮಾಡುವ ನಾಚ್ಕೆಗೇಡು ಕೆಲಸ ನಿಲ್ಲಬೇಕು. ಅವರು ಮನುಷ್ಯರಾಗಿ ಬದಲಾಗಿ ಎಲ್ಲರನ್ನೂ ಗೌರವಿಸಿ ಸಾಮಾಜಿಕ ಸ್ಥಾನಮಾನ ಎಲ್ಲರಿಗೂ ಸಿಗುವಂತೆ ಆಗಬೇಕು ಎನ್ನುವ ಸಾರಾಂಶ ಉದ್ದೇಶ ಈ ಪುಸ್ತಕದ ಮುಖ್ಯ ಸಾರವಾಗಿದೆ.

ಗೌರ್ಮೆಂಟ್ ಬ್ರಾಹ್ಮಣ ಆತ್ಮಕಥನ ಓದಿ ಅಲ್ಲಿನ ದಲಿತ ಸಮುದಾಯದ ಶೋಷಣೆ, ದಲಿರ ಕುರಿತಾಗಿ ಅವರು ಪಡೆದ ಕಷ್ಟ ನೋವು ಮೋಡನಂಬಿಕೆ, ಜಾತಿ ತಾರತಮ್ಯ ಕುರಿತಾಗಿ ಮನ ತಟ್ಟುವಂತೆ ವಿವರಿಸಲಾಗಿದೆ

ಧನ್ಯವಾದಗಳು…

LEAVE A REPLY

Please enter your comment!
Please enter your name here